Posts

Showing posts from September, 2017

ಲಲಿತಾ ತ್ರಿಶತೀ - 19 ಓಂ ಕಾರಯಿತ್ರ್ಯೈ ನಮಃ

Image
ಸ್ರಷ್ಟವ್ಯ ವಸ್ತುವಿನ ಸೃಷ್ಟಿ ವ್ಯಾಪಾರವು ಹುಟ್ಟಲು ಕಾರಣವಾದ ಪೂರ್ವ ಕರ್ಮೋದ್ಬೋಧಕವಾದ ವಿಧಿಪ್ರತ್ಯಯ ರೂಪವಾದ ಶಬ್ದ ಧರ್ಮ ಅಥವಾ ಶಾಸ್ತ್ರ ಸಂಕೇತದಂತೆ ವಿಧಿ ಭಾವನೆಯು ಕಾರ್ಯವನ್ನು ಮಾಡಿಸುವುದು. ಆದರೆ ಅಚೇತನ ಶಬ್ದಗಳಿಎ ಅಜ್ಞಾಪಕತ್ವ ಧರ್ಮವು ಅಸಂಗತವಾದ್ದರಿಂದ ಶಬ್ದಧಿಷ್ಟಾನ ಚೈತನ್ಯ ರೂಪದಿಂದ ವೇದಗಳಿಗೆ ಕಾರಯಿತೃತ್ವವು ಬರುವುದು. "ಸರ್ವೇ ವೇದ ಯತ್ರೈಕಂ ಭವಂತಿ" ಎಂಬ ಶ್ರುತಿ ಪ್ರಮಾಣದಿಂದ ವೇದಗಳು ಆತ್ಮ ಸ್ವರೂಪವಾಗಿವೆ. ಆದ್ದರಿಂದ ಸ್ವಪ್ರಕಾಶಗಳಾದ ವೇದಗಳು ತಮ್ಮ ಅರ್ಥವನ್ನೂ ಮತ್ತು ತನ್ನ ಅರ್ಥಜ್ಞಾನದಲ್ಲಿ ಪ್ರಾಮಾಣ್ಯವನ್ನೂ ಪ್ರಕಾಶಪಡಿಸಿ ಚೈತನ್ಯ ರೂಪದಿಂದ ಪ್ರೇರಕವಾಗಿ ಕರ್ಮಗಳನ್ನು ಮಾಡಿಸುತ್ತವೆ. ಅಂತಹ ಪ್ರೇರಕವಾದ ವೇದ ಶಬ್ದಗಳಿಗೆ ಚೈತನ್ಯ ರೂಪವನ್ನು ಕೊಟ್ಟವಳು.

ಪಿತೃಪಕ್ಷ

Image
    ಭಾದ್ರಪದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುತ್ತಾರೆ. ಈ ಪಕ್ಷದಲ್ಲಿ ಶ್ರಾದ್ಧವನ್ನು ಮಾಡುವದೂ ಪಿತೃತರ್ಪಣವನ್ನು ಅನುಷ್ಠಿಸುವದೂ ಪಿತೃಗಳಿಗೆ ತೃಪ್ತಿಯನ್ನುಂಟುಮಾಡುತ್ತದೆ ಎಂದು ಹಿಂದುಗಳ ನಂಬಿಕೆ.     ವೇದಗಳಲ್ಲಿ ದೇವಯಾನ, ಪಿತೃಯಾನ ಎಂಬ ಎರಡು ಕರ್ಮಗತಿಗಳನ್ನು ವರ್ಣಿಸಿರುತ್ತದೆ. ಉಪಾಸಕರಾದವರು ದೇವಲೋಕಗಳಿಗೆ ಹೋಗಿ ಅಲ್ಲಿ ದೇವತೆಗಳ ಸಾಮಿಪ್ಯ, ಸಾಲೋಕ್ಯ, ಸಾಯುಜ್ಯ - ಎಂಬ ಫಲಗಳನ್ನು ಅನುಭವಿಸುತ್ತಾರೆ. ಕರ್ಮಿಗಳಾದವರು ಪಿತೃಲೋಕಕ್ಕೆ ಹೋಗಿ ಅಲ್ಲಿ ತಮ್ಮ ತಮ್ಮ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಅನುಭವಿಸುತ್ತಾರೆ - ಹೀಗೆಂಬುದು ಶಾಸ್ತ್ರಕಾರರ ಹೇಳಿಕೆ.     ಪಿತೃಗಳಿಗೆ ತೃಪ್ತಿಯಾಗಲೆಂದು ಶ್ರದ್ಧೆಯಿಂದ ಮಾಡುವ ನಿಯತಕಾಲಿಕ ಕರ್ಮವನ್ನು ಶ್ರಾದ್ಧವೆಂದು ಕರೆಯುತ್ತಾರೆ; ಎಳ್ಳುನೀರುಗಳನ್ನು ಪಿತೃತೃಪ್ತ್ಯರ್ಥವಾಗಿ ಬಿಡುವ ಕರ್ಮವನ್ನು ತರ್ಪಣವೆನ್ನುತ್ತಾರೆ. ಶಕ್ತನಾದವನು ಪಿತೃಪಕ್ಷದಲ್ಲಿ ಪ್ರತಿದಿನವೂ ಶ್ರಾದ್ಧವನ್ನು ಮಾಡಿ ತರ್ಪಣವನ್ನು ಕೊಡಬೇಕು; ಅಶಕ್ತರಾದವರು ಗೊತ್ತಾದ ಒಂದು ದಿನವಾದರೂ ಈ ಕರ್ಮವನ್ನು ಮಾಡಬೇಕು. ಈ ಶ್ರಾದ್ಧಕ್ಕೆ ಮಹಾಲಯವೆಂಬ ಹೆಸರು ಬಂದಿರುತ್ತದೆ. ಈ ಪಕ್ಷವನ್ನು ಮಹಾಲಯ ಪಕ್ಷವೆಂದು ಕರೆಯುವ ವಾಡಿಕೆಯೂ ಇದೆ.     ಪಿತೃಗಳಿಗೆಂದು ಶ್ರಾದ್ಧವನ್ನು ಮಾಡಿದರೆ, ತರ್ಪಣವನ್ನು ಕೊಟ್ಟರೆ ಅವರಿಗೆ ಅದು ತೃಪ್ತಿಯನ್ನು ಹೇಗೆ ಮಾಡುತ್ತ...

ಲಲಿತಾ ತ್ರಿಶತೀ - 18 ಓಂ ಕರ್ಮಾದಿಸಾಕ್ಷಿಣ್ಯೈ ನಮಃ

Image
ಕರ್ಮವು ಆದಿಯಾಗಿರುವ ಉಪಾಸನಾ, ಯೋಗ, ಶ್ರವಣ, ಮನನ, ನಿದಿಧ್ಯಾಸನ ಮುಂತಾದವುಗಳಿಗೆ ಸಾಕ್ಷಿ ರೂಪಳು. ಈ ಅರ್ಥದಲ್ಲಿ "ಸಾಕ್ಷೀ ಚೇತಾ" ಎಂಬ ಶ್ರುತಿಯು ಪ್ರಮಾಣವು ಅಥವಾ ಸೃಷ್ಟಿ ಮಾಡುವ ಜಗತ್ತಿಗೆ ಕಾರಣವಾದ ಜೀವಾತ್ಮನಲ್ಲಿರುವ ಕರ್ಮಾದಿಗಳು ಅಕರ್ಮಾತ್ಮ ದರ್ಶನಕ್ಕೆ ಸಾಧನಗಳಾದ್ದರಿಂದ ಸಾಕ್ಷಿಗಳುಳ್ಳವಳು. ಕರ್ಮ ಆದಿರ್ಯೇಷಾಂತಾನಿ, ತೇಷಾಂ ಸಾಕ್ಷಿಣೀ, ಕರ್ಮಾದಯಃ ಸಾಕ್ಷಿ ಭೂತಾಃ ಯಸ್ಯಾಸ್ಸಾ ಎಂದು ವಿಗ್ರಹವು.