Posts

Showing posts with the label ಫಲಂ

ನಕ್ಷತ್ರ ಫಲಂ ಜ್ಯೋತಿಷ್ಯ

Image
ಪ್ರಿಯ ಭೂಷಣಸ್ಸು ರೂಪಃ | ಸುಭಗೋದಕ್ಷೋಶ್ವಿನೀಷು ಮತಿಮಾಂಶ್ಚ || ಕೃತ ನಿಶ್ಚಯ ಸತ್ಯಾರು | ಗ್ದಕ್ಷಸ್ಸುಖಿತಶ್ಚ ಭರಣೀಷು || ಅಶ್ವಿನೀ ನಕ್ಷತ್ರದಲ್ಲಿ ಹುಟ್ಟಿದವನು ಅಲಂಕಾರ ಪ್ರಿಯನೂ ಸುಂದರನೂ ಮನೋಹರನೂ ಸಮರ್ಥನೂ ಬುದ್ಧವಂತನೂ ಆಗುತ್ತಾನೆ. ಭರಣಿ ನಕ್ಷತ್ರದಲ್ಲಿ ಹುಟ್ಟಿದವನು ಧೃಡಸಂಕಲ್ಪವುಳ್ಳವನೂ ಸತ್ಯವಂತನೂ ರೋಗವರ್ಜಿತನೂ ದಕ್ಷನೂ ಚಾತುರ್ಯವುಳ್ಳವನೂ ಸುಖವಂತನೂ ಆಗುತ್ತಾನೆ. ಬಹುಭುಕ್ಪರದಾರರತ | ಸ್ತೇಜಸ್ವೀ ಕೃತ್ತಿಕಾಸು ವಿಖ್ಯಾತಃ || ರೋಹಿಣ್ಯಾಂ ಸತ್ಯಶುಚಿಃ ಪ್ರಿಯಂ ವದಸ್ಥಿರಮತಿಸ್ಸು ರೂಪಶ್ಚ || ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದವನು, ಹೆಚ್ಚು ಊಟ ಮಾಡುವವನೂ ಪರದಾರರತನೂ ತೇಜಸ್ವಿಯೂ ಪ್ರಸಿದ್ಧನೂ ಆಗುತ್ತಾನೆ. ರೋಹಿಣಿಯಲ್ಲಿ ಹುಟ್ಟಿದವನು ಸತ್ಯವಂತನೂ ಶುಚಿಯೂ ಪ್ರಿಯವಾದ ಮಾತುಗಳನ್ನಾಡುವವನೂ ದೃಡಮತಿಯೂ ಸುಂದರನೂ ಆಗುತ್ತಾನೆ. ಚಪಲ ಶ್ಚತುರೋಭೀರುಃ | ಪಟುರುತ್ಸಾಹೀ ಧನೀಮೃಗೇ ಭೋಗೀ || ಶಠಗರ್ವಿತೋ ಕೃತಘ್ನೋ | ಹಿಂಸ್ರಃ ಪಾಪಶ್ಚ ರೌದ್ರರ್ಕ್ಷೇ || ಮೃಗಶಿರ ನಕ್ಷತ್ರದಲ್ಲಿ ಹುಟ್ಟಿದವನು ಚಪಲನೂ ಚತುರನೂ ಭಯಶೀಲನೂ ಚಟುವಟಿಕೆಯುಳ್ಳವನೂ ಉತ್ಸಾಹವುಳ್ಳವನೂ ಧನವಂತನೂ ಭೋಗಿಯು ಆಗುತ್ತಾನೆ. ಆರ್ದ್ರ ನಕ್ಷತ್ರದಲ್ಲಿ ಹುಟ್ಟಿದವನು ಶರನೂ ಗರ್ವಿತನೂ ಮಾಡಿದ ಉಪಕಾರವನ್ನು ಸ್ಮರಿಸದವನೂ ಹಿಂಸಾಶೀಲನೂ ಪಾಪಿಯೂ ಆಗುತ್ತಾನೆ. ದಾಂತಃ ಸುಖೀ ಸುಶೀಲೋ | ದುರ್ಮೇಧಾ ರೋಗಭಾ ಕ್ಪಿಪಾಸುಶ್ಚ || ಅಲ್ಪೇನ ಚ ಸಂತುಷ್ಟಃ ಪುನರ್ವಸೌ | ಜಾಯತೇ ಮನುಜ...