Posts

Showing posts with the label ಕಥೆ

ಕಪಿಲಾ ನದಿಯ ಪೌರಾಣಿಕ ಹಿನ್ನೆಲೆ ಮತ್ತು ಉಗಮ

Image
    ಕಪಿಲಾ ನದಿಯು ಕೇರಳದ ವೈನಾಡಿನ ಪಶ್ಚಿಮ ಘಟ್ಟಗಳಲ್ಲಿ ಜನ್ಮತಾಳುತ್ತದೆ. ಮಾನಂದವಾಡಿ ಮತ್ತು ಪಾನಮ್ರಪುಳಾ ಎಂಬ ಸ್ಥಳದಲ್ಲಿ ಎರಡು ಭಾಗವಾಗಿದೆ. ನಂತರ ಸಂಗಮವಾಗಿ ಕಾಕನಕೋಟೆಯ ನುಗು ನದಿಯನ್ನು, ನಂಜನಗೂಡಿನ ಬಳಿ(ಹುಲ್ಲಹಳ್ಳಿ) ಗುಂಡ್ಲುಹೊಳೆಯನ್ನು ಸೇರಿಕೊಳ್ಳುತ್ತದೆ. ಪುರಾಣ ಪ್ರಸಿದ್ಧವೂ, ಐತಿಹಾಸಿಕ ಹಿನ್ನೆಲೆಗಳಿಂದ ಕೂಡಿದ ನಂಜನಗೂಡು (ಗರಳಪುರಿ)ನಲ್ಲಿ ನಂಜುಂಡೇಶ್ವರ ಸನಿಹದಲ್ಲಿರುವ ಪರಮ ಪಾವನವಾದ ಮಣಿಕರ್ಣಿಕಾ ಸರೋವರದಿಂದ ಕೂಡಿ, ಮಾತೃವಧೆಯಿಂದ ಖಿನ್ನಗೊಂಡ ಭಾರ್ಗವನನ್ನು ಸಂತೈಸಿ, ಗೌತಮ ಮುನಿಯ ಆಶ್ರಮವನ್ನು ಸಂದರ್ಶಿಸಿ, ಮುಂದೆ ತಿರುಮಕೂಡಲಿನಲ್ಲಿ ಕಾವೇರಿಯಲ್ಲಿ ಸಂಗಮವಾಗುತ್ತದೆ. ಸಂಗಮದ ಪೂರ್ವಕ್ಕೆ ಸುತ್ತೂರು (ಪ್ರದಕ್ಷಿಣಪುರ)ವೆಂಬ ಸುಪ್ರಸಿದ್ಧ ಕ್ಷೇತ್ರವಿದೆ. ಇಲ್ಲಿ ರಾಜೇಂದ್ರ ಚೋಳರಿಂದ ಪ್ರತಿಷ್ಠಾಪಿಸಿಲ್ಪಟ್ಟ ಸೋಮೇಶ್ವರ ದೇವಾಲಯವಿದೆ. ಇಲ್ಲಿ ಮಹಾಮಹಿಮರೂ, ಪರಂಜ್ಯೋತಿಸ್ವರೂಪರೂ ಆದ ಶಿವರಾತ್ರೀಶ್ವರರು ಕಪಿಲಾ ನದಿಯ ಮಧ್ಯಭಾಗದಲ್ಲಿ ಬಂಡೆಯಲ್ಲಿ ಕುಳಿತು ತಪಗೈಯುತ್ತಿದ್ದರು. ಆಕಸ್ಮಿಕ ಪ್ರವಾಹ ಬಂದರೂ ಯತಿಗಳು ತಪೋಮಗ್ನರಾಗಿದ್ದರು. ಇವರ ತಪಸ್ಸಿನ ಪ್ರಭಾವಕ್ಕೆ ಕಪಿಲೆಯೇ ದೂರ ಸರಿದು ತಪಸ್ಸಿಗೆ ಭಂಗ ಬರದಂತೆ ಗಂಭೀರವಾಗಿ ಮುಂದೆ ಸಾಗಿತು. ಮಹಾಮಹಿಮರು ತಪಸ್ಸು ಮಾಡುತ್ತಿದ್ದ ಬಂಡೆ ಇಂದಿಗೂ "ಶಿವರಾತ್ರೀಶ್ವರಬಂಡೆ" ಎಂದೇ ಪ್ರಸಿದ್ಧವಾಗಿದೆ. ಯತಿಶ್ರೇಷ್ಠ್ರ ಗದ್ದಿಗೆಯು ನದಿಯ ಹತ್ತಿರದಲ್ಲೇ ಪ್ರವಿರಾಜ...