ಶಬರಿಮಲೆಯ ಆ 18 ಮೆಟ್ಟಿಲುಗಳ ವಿಶೇಷತೆಗಳು

1. ಕಾಮವೆಂಬ ಮೊದಲನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಪೂರ್ವಜನ್ಮದ ಪುಣ್ಯ ಕರ್ಮದ ಜ್ಞಾನ ದೊರೆತು ಮನುಷ್ಯ ಮಾನಸಿಕವಾಗಿ ಶುದ್ಧಿ ಆಗುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಗೀತಾದೇವಿ. 2. ಕ್ರೋಧವೆಂಬ ಎರಡನೇ ಮೆಟ್ಟಿಲುನ್ನು ಸ್ಪರ್ಶಿಸುವುದರಿಂದ ತನ್ನ ಕೋಪವೇ ತಾನೇ ಶತ್ರು ಎಂಬ ಸತ್ಯವೂ ತನ್ನ ಅರಿವಿಗೆ ಬರುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಗಂಗಾದೇವಿ. 3. ಲೋಭವೆಂಬ ಮೂರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ತನ್ನೊಳಗಿನ ಪಿಶಾಚತ್ವ ನಾಶವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಗಾಯತ್ರಿ ದೇವಿ 4. ಮೋಹವೆಂಬ ನಾಲ್ಕನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಜ್ಞಾನ ಯೋಗ ತನ್ನದಾಗಿಸಿಕೊಳ್ಳುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಸೀತಾದೇವಿ. 5. ಮದವೆಂಬ ಐದನೇ ಮೆಟ್ಟಿಲು ಕರ್ಮ ಸನ್ಯಾಸ ಯೋಗದ ಪ್ರತೀಕವಾಗಿದೆ. ಈ ಮೆಟ್ಟಿಲಿನ ಅಧಿದೇವತೆ ಸತ್ಯವತಿ ದೇವಿ. 6. ಮಾತ್ಸರ್ಯವೆಂಬ ಆರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದಾನ ಫಲ ದೊರೆಯುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಸರಸ್ವತಿ ದೇವಿ. 7. ದಂಬವೆಂಬ ಏಳನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ವಿಜ್ಞಾನ ಯೋಗದ ಫಲ ದೊರೆತು ಪುನರ್ಜನ್ಮ ಇರುವುದಿಲ್ಲ. ಈ ಮೆಟ್ಟಿಲಿನ ಅಧಿದೇವತೆ ಬ್ರಹ್ಮ ವಿದ್ಯಾ ದೇವಿ. 8. ಅಹಂಕಾರವೆಂಬ ಎಂಟನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಸ್ವಾರ್ಥ ರಾಕ್ಷಸತ್ವ ನಾಶವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಬ್ರಹ್ಮವಲ್ಲಿ ದೇವಿ. 9. ನೇತ್ರವೆಂಬ ಒಂಬತ್ತನೇ ಮೆಟ್ಟಿಲನ್ನು ಸ್ಪರ್...