ಶಬರಿಮಲೆಯ ಆ 18 ಮೆಟ್ಟಿಲುಗಳ ವಿಶೇಷತೆಗಳು


1. ಕಾಮವೆಂಬ ಮೊದಲನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಪೂರ್ವಜನ್ಮದ ಪುಣ್ಯ ಕರ್ಮದ ಜ್ಞಾನ ದೊರೆತು ಮನುಷ್ಯ ಮಾನಸಿಕವಾಗಿ ಶುದ್ಧಿ ಆಗುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಗೀತಾದೇವಿ.

2. ಕ್ರೋಧವೆಂಬ ಎರಡನೇ ಮೆಟ್ಟಿಲುನ್ನು ಸ್ಪರ್ಶಿಸುವುದರಿಂದ ತನ್ನ ಕೋಪವೇ ತಾನೇ ಶತ್ರು ಎಂಬ ಸತ್ಯವೂ ತನ್ನ ಅರಿವಿಗೆ ಬರುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಗಂಗಾದೇವಿ.

3. ಲೋಭವೆಂಬ ಮೂರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ತನ್ನೊಳಗಿನ ಪಿಶಾಚತ್ವ ನಾಶವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಗಾಯತ್ರಿ ದೇವಿ

4. ಮೋಹವೆಂಬ ನಾಲ್ಕನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಜ್ಞಾನ ಯೋಗ ತನ್ನದಾಗಿಸಿಕೊಳ್ಳುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಸೀತಾದೇವಿ.

5. ಮದವೆಂಬ ಐದನೇ ಮೆಟ್ಟಿಲು ಕರ್ಮ ಸನ್ಯಾಸ ಯೋಗದ ಪ್ರತೀಕವಾಗಿದೆ. ಈ ಮೆಟ್ಟಿಲಿನ ಅಧಿದೇವತೆ ಸತ್ಯವತಿ ದೇವಿ.

6. ಮಾತ್ಸರ್ಯವೆಂಬ ಆರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದಾನ ಫಲ ದೊರೆಯುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಸರಸ್ವತಿ ದೇವಿ.

7. ದಂಬವೆಂಬ ಏಳನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ವಿಜ್ಞಾನ ಯೋಗದ ಫಲ ದೊರೆತು ಪುನರ್ಜನ್ಮ ಇರುವುದಿಲ್ಲ. ಈ ಮೆಟ್ಟಿಲಿನ ಅಧಿದೇವತೆ ಬ್ರಹ್ಮ ವಿದ್ಯಾ ದೇವಿ.

8. ಅಹಂಕಾರವೆಂಬ ಎಂಟನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಸ್ವಾರ್ಥ ರಾಕ್ಷಸತ್ವ ನಾಶವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಬ್ರಹ್ಮವಲ್ಲಿ ದೇವಿ.

9. ನೇತ್ರವೆಂಬ ಒಂಬತ್ತನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಸಾಲ ಪಡೆದಾಗ ಬಂದಿರುವ ಪಾಪಗಳು ದೂರವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ತ್ರಿಸಂಧ್ಯಾದೇವಿ.

10. ಕಿವಿಯೆಂಬ ಹತ್ತನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಆಶ್ರಮ ಧರ್ಮದ ಪುಣ್ಯ ಫಲ ದೊರೆಯುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಮಂಜರಿ ದೇವಿ

11. ಮೂಗು ಎಂಬ ಹನ್ನೊಂದನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಅಕಾಲ ಮೃತ್ಯು ಭಯ ಇರುವುದಿಲ್ಲ. ಈ ಮೆಟ್ಟಿಲಿನ ಅಧಿದೇವತೆ ಅರ್ಥಮಾತ್ರ ದೇವಿ.

12. ನಾಲಿಗೆ ಎಂಬ ಹನ್ನೆರಡನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಇಷ್ಟದೇವತಾ ದರ್ಶನ ಲಭಿಸುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಚಿದಾನಂದ ದೇವಿ.

13. ಸ್ಪರ್ಶವೆಂಬ ಹದಿಮೂರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದುರಭ್ಯಾಸಗಳು ದೂರವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಭವಗ್ನಿ ದೇವಿ.

14. ಸತ್ವವೆಂಬ ಹದಿನಾಲ್ಕನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಸ್ತ್ರೀಯರ ಮೇಲೆ ಗೌರವ ಹೆಚ್ಚಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಭಯನಾಶಿನಿ ದೇವಿ.

15. ತಮಸ್ಸು ಎಂಬ ಹದಿನೈದನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಆಹಾರ ಶುದ್ಧಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ವೇದತ್ರಯದೇವಿ.

16. ರಜಸ್ಸು ಎಂಬ ಹದಿನಾರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದೇಹಬಲ ದೊರೆಯುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಪರಾ ದೇವಿ.

17. ವಿದ್ಯೆ ಎಂಬ ಹದಿನೇಳನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದೀರ್ಘವಾದ ಕಾಯಿಲೆ ನಾಶವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಅನಂತಾ ದೇವಿ.

18. ಅವಿದ್ಯೆ ಎಂಬ ಹದಿನೆಂಟನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಯಜ್ಞದಿಂದ ಮಾಡಿದ ಪುಣ್ಯಫಲ, ಆರ್ಥಿಕ ಸ್ಥಿರತೆ ದೊರೆಯುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಲಕ್ಷ್ಮೀ ದೇವಿ.



Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ