ಮನೆಗೆ ಬಾರೋ ವಿಘ್ನರಾಜಾ
ಮನೆಗೆ ಬಾರೋ ವಿಘ್ನರಾಜಾ
ಉಮಾಪುತ್ರ ಗಜಮುಖನೇ ವಿಘ್ನಹರನೇ
ಏಕವಿಂಶತಿ ಮೋದಕ ಪ್ರೀಯನೇ, ಏಕದಂತನೆ
ಮನೆಗೆ ಬಾರೋ ವಿಘ್ನರಾಜಾ......
ಜ್ಞಾನದಾಯಕ ವರ ವಿನಾಯಕನೇ, ಗಣನಾಥನೇ,
ಷಡಾನನನ ಗೆಲಿದ ಲಂಬೋದರನೇ, ಶೂರ್ಪಕರ್ಣನೇ,
ಮನೆಗೆ ಬಾರೋ ವಿಘ್ನರಾಜಾ.....
ನಾಗಭೂಷಣ ಪ್ರಿಯನು ನೀನೇ, ಗಣಾಧ್ಯಕ್ಷನೇ
ಭಾದ್ರಪದ ಚೌತಿಲಿ ಪೂಜೆಗೊಂಬನೇ, ವಿಶ್ವಂಭರನೇ,
ಮನೆಗೆ ಬಾರೋ ವಿಘ್ನರಾಜಾ....
ದುಷ್ಟರಿಗೆ ವಿಘ್ನಕರ್ತನೇ, ಹೇರಂಬನೇ,
ಶಿಷ್ಟರಿಗೆ ವಿಘ್ನಹರ್ತನೇ, ಶಿವಪ್ರಿಯನೇ,
ಮನೆಗೆ ಬಾರೋ ವಿಘ್ನರಾಜಾ.....
ರಕ್ತಾಂಬರ, ಪಾಶ ಅಂಕುಶಧಾರನೇ, ಅಂಬರಾಧಿಪನೇ,
ವ್ಯಾಸರಚಿತ ಭಾರತದ ಬರೆದಿಹನೇ, ಶಂಭುನಂದನನೇ,
ಮನೆಗೆ ಬಾರೋ ವಿಘ್ನರಾಜಾ.....
ಉಮಾಪುತ್ರ ಗಜಮುಖನೇ ವಿಘ್ನಹರನೇ
ಏಕವಿಂಶತಿ ಮೋದಕ ಪ್ರೀಯನೇ, ಏಕದಂತನೆ
ಮನೆಗೆ ಬಾರೋ ವಿಘ್ನರಾಜಾ......
ಜ್ಞಾನದಾಯಕ ವರ ವಿನಾಯಕನೇ, ಗಣನಾಥನೇ,
ಷಡಾನನನ ಗೆಲಿದ ಲಂಬೋದರನೇ, ಶೂರ್ಪಕರ್ಣನೇ,
ಮನೆಗೆ ಬಾರೋ ವಿಘ್ನರಾಜಾ.....
ನಾಗಭೂಷಣ ಪ್ರಿಯನು ನೀನೇ, ಗಣಾಧ್ಯಕ್ಷನೇ
ಭಾದ್ರಪದ ಚೌತಿಲಿ ಪೂಜೆಗೊಂಬನೇ, ವಿಶ್ವಂಭರನೇ,
ಮನೆಗೆ ಬಾರೋ ವಿಘ್ನರಾಜಾ....
ದುಷ್ಟರಿಗೆ ವಿಘ್ನಕರ್ತನೇ, ಹೇರಂಬನೇ,
ಶಿಷ್ಟರಿಗೆ ವಿಘ್ನಹರ್ತನೇ, ಶಿವಪ್ರಿಯನೇ,
ಮನೆಗೆ ಬಾರೋ ವಿಘ್ನರಾಜಾ.....
ರಕ್ತಾಂಬರ, ಪಾಶ ಅಂಕುಶಧಾರನೇ, ಅಂಬರಾಧಿಪನೇ,
ವ್ಯಾಸರಚಿತ ಭಾರತದ ಬರೆದಿಹನೇ, ಶಂಭುನಂದನನೇ,
ಮನೆಗೆ ಬಾರೋ ವಿಘ್ನರಾಜಾ.....
Comments
Post a Comment