Posts

Showing posts from May, 2018

ಮುದುಕಿಯ ಸೂಜಿ

    ಒಬ್ಬ ಮುದುಕಿಯು ಒಂದು ದಿನ ಸಂಜೆಯಲ್ಲಿ ತನ್ನದೊಂದು ಚಿಕ್ಕ ಸೂಜಿಯನ್ನು ಮನೆಯಲ್ಲಿ ಎಲ್ಲಿಯೋ ಕೆಡವಿಕೊಂಡಳು. ಆಕೆಯು ಅದನ್ನು ಹುಡುಕುವದಕ್ಕೆ ಮೊದಲುಮಾಡಿ ಹೊರಕ್ಕೆ ಬಂದು ರಾತ್ರಿಯಾಗುತ್ತಲೂ ಬೀದಿಯಲ್ಲೆಲ್ಲ ಹುಡುಕುವದಕ್ಕೆ ಹೋದಳು.     ಆಗ ದಾರಿಹೋಕನೊಬ್ಬನು "ಏನು ಕಳೆದುಕೊಂಡಿದ್ದೀಯಮ್ಮ?" ಎಂದು ಕೇಳಿದನು. ಆಕೆಯು 'ಅಯ್ಯ, ಒಂದು ಸಣ್ಣ ಸೂಜಿ ಕಳೆದು ಹೋಗಿದೆ; ಎಷ್ಟೋ ಹೊತ್ತಿನಿಂದ ಹುಡುಕಿತ್ತಿದ್ದೇನೆ, ಸಿಕ್ಕಿಲ್ಲ. ನೀನಾದರೂ ಹುಡುಕಿ ಕೊಡಪ್ಪ' ಎಂದಳು. ಆತನು ತುಂಬ ಕನಿಕರದಿಂದ 'ಅಮ್ಮ, ಇದು ರಾತ್ರಿಯ ವೇಳೆ, ಕಳೆದುಕೊಂಡಿರುವದು ಸೂಜಿ. ಹೀಗಿರುವದರಿಂದ ಅದನ್ನು ಎಲ್ಲೆಂದು ಹುಡುಕುವದು? ಇದಿರಲಿ, ನಿನ್ನ ಸೂಜಿಯನ್ನು ಯಾವಾಗ, ಎಲ್ಲಿ ಕೆಡವಿಕೊಂಡೆ? ಹೇಳು' ಎಂದು ಕೇಳಿದನು. ಮುದುಕಿಯು 'ಸ್ವಲ್ಪ ಹೊತ್ತಿನ ಹಿಂದೆ ಚಿಕ್ಕಮನೆಯಲ್ಲಿ ಕೆಡವಿಕೊಂಡೆ' ಎಂದು ಹೇಳಿದಳೂ. ಆಗ ದಾರಿಹೊಕನು ಫಕಾರನೆ ನಕ್ಕು 'ಸರಿ ಯಾಯಿತು, ಒಳಗೆ ಕಳೆದುಕೊಂಡು ಹೊರಗೆ ಹುಡುಕುವದೆ? ಮನೆಯಲ್ಲಿಯೇ ಏತಕ್ಕೆ ಹುಡುಕಲಿಲ್ಲ ?" ಎಂದು ಕೇಳಲು, ಆ ಬೆಪ್ಪಳು "ಅಯ್ಯ, ಮನೆಯಲ್ಲಿ ದೀಪವಿಲ್ಲ. ಇಲ್ಲಿ ಊರ ದೀಪವಿದೆ. ಬೆಳಕಿದ್ದ ಕಡೆ ಹುಡುಕದೆ ಕತ್ತಲೆಯಲ್ಲಿ ಹುಡುಕಿ ಫಲವೇನು?" ಎಂದು ಉತ್ತರ ಕೊಟ್ಟಳಂತೆ !     ನಿಜವಾಗಿ ಜನರು ಪ್ರಪಂಚದ ತತ್ತ್ವವನ್ನು ಹುಡುಕುವದಕ್ಕೆ ಮುದುಕಿಯ ಹಾದಿಯನ್ನೇ ಹಿಡಿಯುತ್ತಿರುವರು. ಏ

ಶಂಖ

    ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜನೀಯ ವಸ್ತು ಶಂಖ ಮಹಾತ್ಮರು ರಾಜರು ದೇವದೇವತೆಗಳ ಜನನವನ್ನು ಹಿಂದೆ ಶಂಖನಾದದ ಮೂಲಕವೇ ಷೋಷಿಸುತ್ತಿದ್ದರು ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮವನ್ನು ಸೂಚಿಸಲೂ ಶಂಖವನ್ನು ಬಳಸಲಾಗುತ್ತಿತ್ತು ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮಯಾತ್ರೆಯ ಸಮಯದಲ್ಲೂ ಶಂಖನಾದ ಮಾಡುವ ಪದ್ದತಿಯುಂಟು.     ತಂತಿವಾದ್ಯ, ಶಂಖ, ನಾದಸ್ವರ, ಕೊಂಬು ಹಾಗೂ ತಾಳ ಇವುಗಳಿಂದ ಹೊರಡುವ ಶಬ್ಧಗಳನ್ನು ಪಂಚಮಹಾಶಬ್ಧಗಳೆನ್ನುತ್ತಾರೆ ಮೂರರಿಂದ ಆರನೇ ಶತಮಾನದವರೆವಿಗೂ ಕೆಲವು ಚಕ್ರವರ್ತಿಗಳು ಪಂಚಮಹಾಶಬ್ದ ಎಂಬ ಬಿರುದುಗಳನ್ನುಗಳಿಸುತ್ತಿದ್ದರು ಕೆಲವು ರಾಜ್ರು ತಮ್ಮ ಕೈಕೆಳಗಿನ ಮಹಾವೀರರೂ ಅನುಯಾಯಿಗಳೂ ಆದವರಿಗೆ ಈ ಹೆಸರಿನ ಬಿರುದುಗಳನ್ನು ಕೊಡುತ್ತಿದ್ದರೆಂದು ಪ್ರಾಚೀನ ಬರಹಗಳಿಂದ ತಿಳಿದುಬರುತ್ತದೆ ಹಿಂದೂ ಪುರಾಣಗಳ ಪ್ರಕಾರ ಹದಿನೆಂಟುವಾದ್ಯಗಳಲ್ಲಿ ಶಂಖವಾದ್ಯವೂ ಒಂದು ಆದ್ದರಿಮದಲೇ ಇದನ್ನು ಊದುವುದಲ್ಲದೆ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ. ಶಂಖಂ ಚಂದ್ರಾರ್ಕ ದೈವತ್ವಂ ಮಧ್ಯೇ ವರುಣದೈವತವೃಷ್ಟೇ ಪ್ರಜಾವತೆ ನತ್ಪಂ ಏತತ್ ಶಂಖಂ ವ್ರವೂಜಯೇತ್ ಎಂಬ ಶಂಖವನ್ನು ಪೂಜಿಸುವ ಶ್ಲೋಕ ಪೂಜೆಯಲ್ಲಿ ಶಂಖದ ಮಹತ್ವವನ್ನು ಸಾರುತ್ತದೆ.     ಶಂಖಗಳಲ್ಲಿ ವಾಲಂಪುರಿ, ಇದಾಂಪುರಿ, ಚಾಲಂಕಾಲಮ್ ಹಾಗೂ ಪಾಂಚಜನ್ಯಂ ಎಂಬುದಾಗಿ ನಾಲ್ಕು ವಿಧಗಳಿವೆ ತಮಿಳುನಾಡಿದನ

ಗುಂಪು - ಮೂಲೆಗುಂಪು

Image
    ಈಗ್ಗೆ ಗುಂಪುಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಒಂದೊಂದು ಗುಂಪೂ ಮತ್ತೆ ಮತ್ತೆ ಕಾರಣಾಂತರಗಳಿಂದ ಒಡೆದುಕೊಂಡು ಮತ್ತಷ್ಟು ಸಂಖ್ಯೆಯನ್ನು ಬೆಳೆಸುತ್ತಿವೆ. ಕೆಲವಂತೂ ಭೀಮನಿಂದ ಸೀಳಲ್ಪಟ್ಟ ಜರಾಸಂಧನಂತೆ ಒಡೆದುಕೊಂಡು ಆತ್ಮನಾಶವನ್ನೇ ತಂದುಕೊಳ್ಳುತ್ತಿವೆ. ಗುಂಪು ಒಡೆದಾಗಲೆಲ್ಲ ಅದರಲ್ಲಿರುವ ಜನರಿಗೆ ಗಾಬರಿಯಾಗಿದ್ದು ಯಾವ ಕಡೆಗೆ ಸೇರಬೇಕೆಂಬುದು ತಿಳಿಯದೆ ಅಲೆದಾಡಿ ಕೊನೆಗೆ ಯಾವದೋ ಗುಂಪಿಗೆ ಸೇರಿ ಅಲ್ಲಿಂದಲೂ ಪಕ್ಷಾಂತರಮಾಡಿ ಕೊನೆಗೆ ಮೂಲೆಗುಂಪಾಗುತ್ತಿದಾರೆ. ಈ ನಾಟಕವನ್ನು ನೋಡುವವರಿಗೆ ತಮಾಷೆಯಾಗಿ ಕಾಣುತ್ತಿದೆ, ನಗುವು ಬರುತ್ತಿದೆ. ವ್ಯಂಗಚಿತ್ರಕಾರ್ರ ಲೇಖನಿಗೂ ತುತ್ತಾಗುತ್ತಿದೆ. ಆದರೆ ಆಯಾ ಗುಂಪಿಗೇ ಸೇರಿರುವವರಿಗೆ ಉಂಟಾಗಿರುವ ನಷ್ಟವು ಮನೋವ್ಯಥೆಯೂ ಅಷ್ಟಿಷ್ಟಲ್ಲ. ಆದರೂ ಗುಂಪು ಹೀಗೆ ಒಡೆಯುವದಕ್ಕೂ ತಾನು ಪ್ರದಾಡುವದಕ್ಕೂ ಕಾರಣವೇನು? ಇದರಲ್ಲಿ ತನ್ನ ಪಾತ್ರವೇನು? ಎಂದು ಆತ್ಮಶೋಧನೆಮಾಡಿಕೊಳ್ಳುವವರು ಮಾತ್ರ ತುಂಬಾ ವಿರಳ.     'ಸಂಘೇ ಶಕ್ತಿಃ ಕಲೌ ಯುಗೇ' ಎಂಬ ನಾಣ್ನುಡಿಯೊಂದುಂಟು. ಕಲಿಯುಗದಲ್ಲಿ ಗುಂಪಿನಲ್ಲಿಯೇ ಶಕ್ತಿಯಿರುವದು - ಎಂಬುದು ನಿಜವಾದರೂ 'ಸಂಘ'ವೆಂದರೇನು? ಅದರ ಉದ್ದೇಶವೇನು? ಎಂಬಿದರ ಮೇಲೆ ಮೇಲಿನ ನಾಣ್ನುಡಿಯನ್ನು ಅನ್ವಯಿಸಿಕೊಳ್ಳಬೇಕು. ಒಬ್ಬೊಬ್ಬನೇ ಮಾಡಲಾಗದ ಕೆಲಸವನ್ನು ಹತ್ತಾರು ಜನರು ಸೇರಿ ಮಾಡಬಹುದು - ಎಂಬುದು ಸಾಮಾನ್ಯವಾದ ಅಭಿಪ್ರಾಯ. ಉದಾಹರಣೆಗೆ ಒಂದು ದೊಡ್ಡ ರಥವನ್ನು ಒಬ್ಬನ