Posts

Showing posts with the label ಅದ್ವೈತ

ಮಾನವತೆಗೆ ಅದ್ವೈತದ ಕೊಡುಗೆ

Image
    ನಮ್ಮ ಭರತಖಂಡದ ಸಂಸ್ಕೃತಿಯ ಗನಿಗಳಾದ ವೇದ-ಪುರಾಣ ಇತಿಹಾಸಗಳಲ್ಲಿ ಮಾನವನೆಂದರೆ ಯಾರು? ಎಂಬಿದನ್ನು ಚೆನ್ನಾಗಿ ವಿವೇಚಿಸಿ ತಿಳಿಸಿದ್ದಾರೆ. ಪ್ರತ್ಯಕ್ಷಪ್ರಮಾಣದಿಂದ ಕಂಡುಬರುವ, ಮನುಷ್ಯಶರೀರಧಾರಿಯಾದ ವ್ಯಕ್ತಿಯೇ ಮಾನವನು - ಎಂಬಿಷ್ಟನ್ನೇ ಶಾಸ್ತ್ರಗಳು ಒಪ್ಪಿರುವದಿಲ್ಲ. ಶರೀರದ ಜೊತೆಗೆ ಅಂತಃಕರಣವೂ, ಅದಕ್ಕೆ ಹೊಂದಿಕೊಂಡಂತೆ ದೈವೀಗುಣಗಳೂ ಇರುವವನನ್ನೇ ಮಾನವ, ಪುರುಷ - ಎಂದು ಅಲ್ಲಿ ಕರೆದಿರುತ್ತದೆ. ಮಾನವನ ಸೃಷ್ಟಿಯ ವಿಷಯಕ್ಕೆ ಉಪನಿಷತ್ತಿನಲ್ಲಿ ಈ ವರ್ಣನೆಯಿದೆ : "ಆತ್ಮನಿಂದ ಆಕಾಶವು ಹುಟ್ಟಿತು, ಆಕಾಶದಿಂದ ಕ್ರಮವಾಗಿ ವಾಯು, ತೇಜಸ್ಸು, ಜಲ, ಪೃಥ್ವಿಗಳೂ ಅನಂತರ ಪೈರುಗಳೂ ಅನ್ನವೂ ಅನ್ನದಿಂದ ಪುರುಷನೂ ಹುಟ್ಟಿರುತ್ತಾನೆ." ಈ ವಿವರಣೆಯು ತೈತ್ತಿರೀಯೋಪನಿಷತ್ತಿನಲ್ಲಿದೆ. ಅಲ್ಲಿ ಶ್ರೀ ಶಂಕರಾಚಾರ್ಯರು ವ್ಯಾಖ್ಯಾನಮಾಡಿರುವದು ಹೇಗೆಂದರೆ : "ಎಲ್ಲಾ ಚೇತನಾಚೇತನವಸ್ತುಗಳೂ ಬ್ರಹ್ಮದಿಂದಲೇ ಹುಟ್ಟಿ ಬಂದು ಬ್ರಹ್ಮವಂಶಕ್ಕೇ ಸೇರಿದ್ದರೂ ಶ್ರುತಿಯು ಪುರುಷನನ್ನೇ ಏಕೆ ಗ್ರಹಿಸಿದೆ? ಎಂದರೆ ಬ್ರಹ್ಮದ ಆವಿರ್ಭಾವವು ಮನುಷ್ಯನಲ್ಲಿ ಪೂರ್ಣವಾಗಿರುವದರಿಂದ - ಎಂದು ತಿಳಿಯಬೇಕು. ಪುರುಷನು ತಿಳಿವಳಿಕೆಯಿಂದ ಕೂಡಿದವನಾಗಿದ್ದು ಮಾತನಾಡುವದು, ನೋಡುವದು, ಕೇಳುವದು - ಮುಂತಾದ ವ್ಯವಹಾರಗಳ ಜೊತೆಗೆ, ನಾಳೆಗೇನು? ವಯಸ್ಸಾದ ಮೇಲೆ ಹೇಗೆ? ಈ ಶರೀರವನ್ನು ಬಿಟ್ಟ ಅನಂತವೂ ಜನ್ಮಾಂತರಲೋಕಾಂತರಗಳಲ್ಲಿಯೂ ಸುಖವಾಗಿರುವದು ಹೇಗೆ? ಮುಂತಾದ ರೀ...

ವಿಜ್ಞಾನನೌಕಾಸ್ತುತಿ - (ಶ್ರೀಶಂಕರಾಚಾರ್ಯರವರ ಕೃತಿ)

Image
ತಪೋಯಜ್ಞದಾನಾದಿಭಿಃ ಶುದ್ಧ ಬುದ್ಧಿ- ರ್ವಿರಕ್ತೋ ನೃಪಾದೌ ಪದೇ ತುಚ್ಛಬುದ್ಧ್ಯಾ | ಪರಿತ್ಯಜ್ಯ ಸರ್ವಂ ಯದಾಪ್ನೋತಿ ತತ್ತ್ವಂ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||1|| ತಪಸ್ಸು, ಯಜ್ಞ, ದಾನ- ಮುಂತಾದವುಗಳಿಂದ ಚಿತ್ತಶುದ್ಧಿಯನ್ನು ಪಡೆದು ದೊರೆತನವೇ ಮುಂತಾದ ಪದವಿಯಲ್ಲಿ ಕೂಡ ತುಚ್ಛಬುದ್ಧಿಯುಳ್ಳವರಾಗಿ ವೈರಾಗ್ಯದಿಂದ ಎಲ್ಲವನ್ನೂ ಬಿಟ್ಟು ಯಾವ ತತ್ತ್ವವನ್ನು ಪಡೆಯುವರೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು. ದಯಾಲುಂ ಗುರುಂ ಬ್ರಹ್ಮನಿಷ್ಠಂ ಪ್ರಶಾನ್ತಂ ಸಮಾರಾಧ್ಯ ಮತ್ಯಾ ವಿಚಾರ್ಯ ಸ್ವರೂಪಮ್ | ಯದಾಪ್ನೋತಿ ತತ್ತ್ವಂ ನಿದಿಧ್ಯಾಸ್ಯ ವಿದ್ವಾನ್ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||2|| ಕರುಣಾಳುವೂ ಪರಮಶಾಂತಿಯುಳ್ಳಾತನೂ ಆಗಿರುವ ಬ್ರಹ್ಮನಿಷ್ಠನಾದ ಗುರುವನ್ನು ಸೇವಿಸಿ ಮಾಡಿದ ಮನನದಿಂದ ತನ್ನ ಸ್ವರೂಪವನ್ನು ಕುರಿತು ವಿಚಾರಮಾಡಿ ನಿದಿಧ್ಯಾಸನದಿಂದ ಜ್ಞಾನಿಯಾಗಿ ಯಾವ ತತ್ತ್ವವನ್ನು ಪಡೆದುಕೊಳ್ಳುತ್ತಾನೋ ಆ ನಿತ್ಯವಾದ ಪರಬ್ರಹ್ಮನೇ ನಾನಾಗಿರುವೆನು. ಯದಾನನ್ದರೂಪಂ ಪ್ರಕಾಶಸ್ವರೂಪಂ ನಿರಸ್ತಪ್ರಪಞ್ಚಂ ಪರಿಚ್ಛೇದಶೂನ್ಯಮ್ | ಅಹಂಬ್ರಹ್ಮವೃತ್ತ್ಯೈಕಗಮ್ಯಂ ತುರೀಯಂ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||3|| ಯಾವದು ಅನಂದಸ್ವರೂಪವಾಗಿಯೂ ಪ್ರಕಾಶರೂಪವಾಗಿಯೂ ಪ್ರಪಂಚರಹಿತವಾಗಿ ಯಾವ ಎಲ್ಲೆಕಟ್ಟೂ ಇಲ್ಲದೆ 'ನಾನು ಬ್ರಹ್ಮವು' ಎಂಬ ವ್ಯಕ್ತಿಯಿಂದಲೇ ಅರಿಯುವದಕ್ಕೆ ತಕ್ಕದ್ದಾಗಿರುವದೋ ಅವಸ್ಥಾತ್ರಯವನ್ನು ಮಿರಿದ ನ...

ಕಲಿಗಾಲ ಕಂಡ್ಯಾ

ಕೃಷ್ಣ ಕೃಷ್ಣಯೆಂದು ಕಾಮಿನಿ ಕರೆಯಲು ಅಕ್ಷಯ ವಸನಾಗಿ ಒದಗಿಯೊ ಅಂದು ||ಪ|| ದುಷ್ಟ ದುಶ್ಯಾಸನರ ಹಿಂಡುಹಿಂಡೇ ಇಂದು ಶಿಷ್ಟ ಮಾನಿನಿಯರ ಮಾನಗಳೆಯುತಿಹುದು ||ಅ.ಪ|| ಕಣ್ಮುಚ್ಚಿ ಬಾಯ್ಬಿಗಿದು ಹಾವಿನ್ಹಾಸಿನಲಿ ತಣ್ಣಗೆ ಕೈಕಟ್ಟಿ ಕುಳಿತಿಹೆಯಲ್ಲೋ ಬಣ್ಣನೆಯ ಮಾತಾಯೋ ಕಾಮಿಕೀಚಕರ ನಿಜ ಬಣ್ಣವನು ಬಯಲು ಮಾಡದೆ ನೀನು ||1|| ಗದ್ದೆ ಬಯಲು ಶಾಲೆ ಕಾಲೇಜುಗಳು ಶುದ್ಧ ಹಸುಮಗುವಿನ ಮೊದಲ ಶಾಲೆ ಹದ್ದುಮೀರಿದೆ ಅಲ್ಲೂ ಕಾಮುಕರ ಕಾಟ ನಿದ್ದೆ ಬಂದಿದೆಯೆ ನಿನಗೆ ಎದ್ದು ಬಾರದಷ್ಟು ||2|| ಬೇಡಿದರೆ ಕಾಡಿದರೆ ಬರುವನಲ್ಲ ನೀನು ನೋಡುತಿರು ಎಬ್ಬಟ್ಟಿ ಎಳೆತರುವೆ ನಾನು ಆಡುವೆಯ ಆಟಗಳ ನರಸಿಂಹಾವತಾರಿ ಮಾಡುವೆನು ತಕ್ಕುದು ಕಲಿಗಾಲ ಕಂಡ್ಯಾ ||3||

ಏಳೇಳು ಆತ್ಮನೇ

ಏಳೇಳು ಆತ್ಮನೇ, ನಿನ್ನ ನಿದ್ರೆಯ ಮುಗಿಸಿ, ಎದ್ದೇಳು ಆತ್ಮನೇ || ನೀ ಸರ್ವಾತೃ, ನೀ ಪರಮಾತ್ಮ, ನೀನೆ ಸರ್ವರ ಅಂತರಾತ್ಮ ನಿನ್ನನು ನೀನೇ ಮರೆತಿಹೆ ಏಕೆ? || ನೀ ಸರ್ವಜ್ಞ, ನೀನೇ ಪೂರ್ಣ, ಎಚ್ಚರಗೊಳ್ಳೊ ನೀನೇ ದೇವ ನಿನ್ನನ್ನು ನೀನೆ ಮರೆತಿಹೆ ಏಕೆ? ನೀನೇ ದೇವ, ನೀ ದೇವನುದೇವ, ನಿನ್ನಯ ಇಂದ್ರಿಯ ನಿನ್ನಯ ದಾಸರು | ಇದ ನೀನೇಕೆ ಮರೆತಿಹೆಯಲ್ಲ? ಇಂದ್ರಿಯಗಳಿಗೆ ಪ್ರಭುವಾಗಿ ಮೆರೆ ಮೂರು ಗುಣಗಳ ಅಧಿಪತಿಯಾಗಿರೆ ನಿನ್ನನ್ನು ನೀನು ಅರಿತುಕೊಂಡರೆ ನೀನೇ ಎಲ್ಲರ ಅಂತರಾತ್ಮನು.

ಶ್ರೀರಾಮಕರ್ಣಾಮೃತಮ್ (ಶ್ರೀಶಂಕರಾಚಾರ್ಯಕೃತ)

ಶ್ರೀರಾಮಃ ಸಕಲೇಶ್ವರೋ ಮಮ ಪಿತಾ ಮಾತಾ ಚ ಸೀತಾ ಮಮ ಭ್ರಾತಾ ಬ್ರಹ್ಮ ಸಖಾ ಪ್ರಭಂಜನಸುತಃ ಪತ್ನೀ ವಿರಕ್ತಿಃ ಪ್ರಿಯಾ | ವಿಶ್ವಾಮಿತ್ರವಿಭೀಷಣಾದಿವಶಗಾ ಮಿತ್ರಾಣಿ ಬೋಧಸ್ಸುತೋ ಭಕ್ತಿಃ ಶ್ರೀಹರಿಸಂಗತಾ ರತಿಸುಖಂ ವೈಕುಂಠಮಸ್ಮತ್ಪದಮ್ ||1||     ಎಲ್ಲರಿಗೂ ಒಡೆಯನಾದ ಶ್ರೀರಾಮನು ತನ್ನ ತಂದೆ, ಸೀತೆಯು ನನ್ನ ತಾಯಿ. ಬ್ರಹ್ಮನು ಸೋದರನು. ವಾಯುಪುತ್ರನಾದ(ಹನುಮಂತನು) ಸ್ನೇಹಿತನು. ವೈರಾಗ್ಯಳೆಂಬುವಳೇ ಪ್ರಿಯಳಾದ ಹೆಂತಿಯು. ವಿಶ್ವಾಮಿತ್ರ, ವಿಭೀಷಣರೇ ಮುಂತಾದ ಅನುಯಾಯಿಗಳೇ ನನ್ನ ಮಿತ್ರರು. ಜ್ಞಾನವೇ ಪುತ್ರನು. ಶ್ರೀಹರಿಯಲ್ಲಿ ಅನುರಕ್ತವಾದ ಭಕ್ತಿಯೇ ರತಿಸುಖವು, ವೈಕುಂಠವೇ ನಮ್ಮ ಊರು. ರಾಮಂ ಶ್ಯಾಮಾಭಿರಾಮಂ ರವಿಶಶಿನಯನಂ ಕೋಟಿಸೂರ್ಯಪ್ರಕಾಶಂ ದಿವ್ಯಂ ದಿವ್ಯಾಸ್ತ್ರಪಾಣಿಂ ಶರಮುಖಶರಧಿಂ ಚಾರುಕೋದಂಡಹಸ್ತಮ್ | ಕಾಲಂ ಕಾಲಾಗ್ನಿರುದ್ರಂ ರಿಪುಕುಲದಹನಂ ವಿಘ್ನವಿಚ್ಛೇದದಕ್ಷಂ ಭೀಮಂ ಭೀಮಾಟ್ಟಹಾಸಂ ಸಕಲಭಯಹರಂ ರಾಮಚಂದ್ರಂ ಭಜೇಹಮ್ ||2||         ಕಪ್ಪಾದ ದೇಹಕಾಂತಿಯುಳ್ಳ, ಸೂರ್ಯಚಂದ್ರರೇ ಕಣ್ಣಾಗಿ ಉಳ್ಳ, ಕೋಟಿ ಸೂರ್ಯರಂತೆ ಹೊಳೆಯುವ, ಪ್ರಕಾಶರೂಪನಾದ, ದಿವ್ಯವಾದ ಅಸ್ತ್ರಗಳನ್ನು ಹಿಡಿದಿರುವ, ಸಮುದ್ರದೋಪಾದಿಯ ಬಾಣಸಮೂಹವುಳ್ಳ, ಬಿಲ್ಲನ್ನು ಹಿಡಿದ ಸುಂದರವಾದ ಕೈಯುಳ್ಳ, (ರಾಕ್ಷಸರಿಗೆ) ಮೃತ್ಯುರೂಪನಾದ, ಕಾಲಾಗ್ನಿಯಂತೆ ಭಯಂಕರನಾದ, ಶತ್ರುಗಳ ಗುಂಪನ್ನು ಸುಡುವ, ಅಡ್ಡಿಗಳನ್ನು ತುಂಡುಮಾಡುವದರ...

Kalyana Vrushti Sthavam - ಕಲ್ಯಾಣವೃಷ್ಟಿಸ್ತವಃ - Sri Adi Shankaracharya

ಕಲ್ಯಾಣವೃಷ್ಟಿಭಿರಿವಾಮೃತಪೂರಿತಾ ಭಿ | ರ್ಲಕ್ಷ್ಮೀಸ್ವಯಂವರಣಮಂಗಲದೀಪಿಕಾಭಿಃ || ಸೇವಾಭಿರಂಬ ತವ ಪಾದಸರೋಜ ಮೂಲೇ | ನಾಕಾರಿ ಕಿಂ ಮನಸಿ ಭಾಗ್ಯವತಾಂ ಜನಾನಾಮ್ ||1|| *** ಅಮೃತ ಗುಣ ಸಂಪನ್ನಳಾದ, ಮಂಗಳಕಾರಿಣಿ ವಿಷ್ಣು ಪತ್ನಿ ಲಕ್ಷ್ಮಿಯೇ, ನಿನ್ನ ಪಾದ ಕಮಲದ ಸೇವೆ ಮಾಡುವುದು ಜನರ ಎಂತಹ ಭಾಗ್ಯವು ||1|| *** Kalyana vrushtibi rivamrutha poorithaabhi, Lakshmi swayam varana mangala deepikabhi, Sevabhirambha, thava pada saroja moole, Naakari kim manasi bhagyavatham jananaam.             1 *** Hey mother, Which wishes in their mind, Are not fulfilled of those lucky people, Who are able to serve near your lotus like feet, Which are the rains of luck full of nectar, And which are like the lamps lit during, The marriage of Goddess Lakshmi. ************ ಏತಾವದೇವ ಜನನಿ ಸ್ಪೃಹಣೇಯಮಾಸ್ತೇ | ತ್ವದ್ವಂದನೇಷು ಸಲಿಲಸ್ಥಗಿತೇ ಚ ನೇತ್ರೇ || ಸಾನ್ನಿಧ್ಯಮುದ್ಯದರುಣಾಯುತ ಸೋದರಸ್ಯ | ತ್ವದ್ವಿಗ್ರಹಸ್ಯ ಪರಯಾ ಸುಧಯಾ ಪ್ಲುತಸ್ಯ  ||2|| *** ಜಗದೇಕಮಾತೆ, ಅರ್ಶುಪೂರಿತ ನಯನಗಳಿಂದ ಸ್ಮರಣೀಯಳಾದ, ಅರುಣ ಪ್ರಭೆಯುಳ್ಳ ನಿನ್ನ ಸ್ವರೂಪದಿಂದ ನನಗೆ ಅಮೃತ ಸಿಂಚನವ...

ಶ್ರೀರಾಮಕರ್ಣಾಮೃತಮ್ (ಶ್ರೀಶಂಕರಾಚಾರ್ಯಕೃತ)

ಶ್ರೀರಾಮಃ ಸಕಲೇಶ್ವರೋ ಮಮ ಪಿತಾ ಮಾತಾ ಚ ಸೀತಾ ಮಮ ಭ್ರಾತಾ ಬ್ರಹ್ಮ ಸಖಾ ಪ್ರಭಂಜನಸುತಃ ಪತ್ನೀ ವಿರಕ್ತಿಃ ಪ್ರಿಯಾ | ವಿಶ್ವಾಮಿತ್ರವಿಭೀಷಣಾದಿವಶಗಾ ಮಿತ್ರಾಣಿ ಬೋಧಸ್ಸುತೋ ಭಕ್ತಿಃ ಶ್ರೀಹರಿಸಂಗತಾ ರತಿಸುಖಂ ವೈಕುಂಠಮಸ್ಮತ್ಪದಮ್ ||1||     ಎಲ್ಲರಿಗೂ ಒಡೆಯನಾದ ಶ್ರೀರಾಮನು ತನ್ನ ತಂದೆ, ಸೀತೆಯು ನನ್ನ ತಾಯಿ. ಬ್ರಹ್ಮನು ಸೋದರನು. ವಾಯುಪುತ್ರನಾದ(ಹನುಮಂತನು) ಸ್ನೇಹಿತನು. ವೈರಾಗ್ಯಳೆಂಬುವಳೇ ಪ್ರಿಯಳಾದ ಹೆಂತಿಯು. ವಿಶ್ವಾಮಿತ್ರ, ವಿಭೀಷಣರೇ ಮುಂತಾದ ಅನುಯಾಯಿಗಳೇ ನನ್ನ ಮಿತ್ರರು. ಜ್ಞಾನವೇ ಪುತ್ರನು. ಶ್ರೀಹರಿಯಲ್ಲಿ ಅನುರಕ್ತವಾದ ಭಕ್ತಿಯೇ ರತಿಸುಖವು, ವೈಕುಂಠವೇ ನಮ್ಮ ಊರು. ರಾಮಂ ಶ್ಯಾಮಾಭಿರಾಮಂ ರವಿಶಶಿನಯನಂ ಕೋಟಿಸೂರ್ಯಪ್ರಕಾಶಂ ದಿವ್ಯಂ ದಿವ್ಯಾಸ್ತ್ರಪಾಣಿಂ ಶರಮುಖಶರಧಿಂ ಚಾರುಕೋದಂಡಹಸ್ತಮ್ | ಕಾಲಂ ಕಾಲಾಗ್ನಿರುದ್ರಂ ರಿಪುಕುಲದಹನಂ ವಿಘ್ನವಿಚ್ಛೇದದಕ್ಷಂ ಭೀಮಂ ಭೀಮಾಟ್ಟಹಾಸಂ ಸಕಲಭಯಹರಂ ರಾಮಚಂದ್ರಂ ಭಜೇಹಮ್ ||2||         ಕಪ್ಪಾದ ದೇಹಕಾಂತಿಯುಳ್ಳ, ಸೂರ್ಯಚಂದ್ರರೇ ಕಣ್ಣಾಗಿ ಉಳ್ಳ, ಕೋಟಿ ಸೂರ್ಯರಂತೆ ಹೊಳೆಯುವ, ಪ್ರಕಾಶರೂಪನಾದ, ದಿವ್ಯವಾದ ಅಸ್ತ್ರಗಳನ್ನು ಹಿಡಿದಿರುವ, ಸಮುದ್ರದೋಪಾದಿಯ ಬಾಣಸಮೂಹವುಳ್ಳ, ಬಿಲ್ಲನ್ನು ಹಿಡಿದ ಸುಂದರವಾದ ಕೈಯುಳ್ಳ, (ರಾಕ್ಷಸರಿಗೆ) ಮೃತ್ಯುರೂಪನಾದ, ಕಾಲಾಗ್ನಿಯಂತೆ ಭಯಂಕರನಾದ, ಶತ್ರುಗಳ ಗುಂಪನ್ನು ಸುಡುವ, ಅಡ್ಡಿಗಳನ್ನು ತ...