ಶ್ರೀರಾಮಕರ್ಣಾಮೃತಮ್ (ಶ್ರೀಶಂಕರಾಚಾರ್ಯಕೃತ)

ಶ್ರೀರಾಮಃ ಸಕಲೇಶ್ವರೋ ಮಮ ಪಿತಾ ಮಾತಾ ಚ ಸೀತಾ ಮಮ
ಭ್ರಾತಾ ಬ್ರಹ್ಮ ಸಖಾ ಪ್ರಭಂಜನಸುತಃ ಪತ್ನೀ ವಿರಕ್ತಿಃ ಪ್ರಿಯಾ |
ವಿಶ್ವಾಮಿತ್ರವಿಭೀಷಣಾದಿವಶಗಾ ಮಿತ್ರಾಣಿ ಬೋಧಸ್ಸುತೋ
ಭಕ್ತಿಃ ಶ್ರೀಹರಿಸಂಗತಾ ರತಿಸುಖಂ ವೈಕುಂಠಮಸ್ಮತ್ಪದಮ್ ||1||

    ಎಲ್ಲರಿಗೂ ಒಡೆಯನಾದ ಶ್ರೀರಾಮನು ತನ್ನ ತಂದೆ, ಸೀತೆಯು ನನ್ನ ತಾಯಿ. ಬ್ರಹ್ಮನು ಸೋದರನು. ವಾಯುಪುತ್ರನಾದ(ಹನುಮಂತನು) ಸ್ನೇಹಿತನು. ವೈರಾಗ್ಯಳೆಂಬುವಳೇ ಪ್ರಿಯಳಾದ ಹೆಂತಿಯು. ವಿಶ್ವಾಮಿತ್ರ, ವಿಭೀಷಣರೇ ಮುಂತಾದ ಅನುಯಾಯಿಗಳೇ ನನ್ನ ಮಿತ್ರರು. ಜ್ಞಾನವೇ ಪುತ್ರನು. ಶ್ರೀಹರಿಯಲ್ಲಿ ಅನುರಕ್ತವಾದ ಭಕ್ತಿಯೇ ರತಿಸುಖವು, ವೈಕುಂಠವೇ ನಮ್ಮ ಊರು.

ರಾಮಂ ಶ್ಯಾಮಾಭಿರಾಮಂ ರವಿಶಶಿನಯನಂ ಕೋಟಿಸೂರ್ಯಪ್ರಕಾಶಂ
ದಿವ್ಯಂ ದಿವ್ಯಾಸ್ತ್ರಪಾಣಿಂ ಶರಮುಖಶರಧಿಂ ಚಾರುಕೋದಂಡಹಸ್ತಮ್ |
ಕಾಲಂ ಕಾಲಾಗ್ನಿರುದ್ರಂ ರಿಪುಕುಲದಹನಂ ವಿಘ್ನವಿಚ್ಛೇದದಕ್ಷಂ
ಭೀಮಂ ಭೀಮಾಟ್ಟಹಾಸಂ ಸಕಲಭಯಹರಂ ರಾಮಚಂದ್ರಂ ಭಜೇಹಮ್ ||2||
   
    ಕಪ್ಪಾದ ದೇಹಕಾಂತಿಯುಳ್ಳ, ಸೂರ್ಯಚಂದ್ರರೇ ಕಣ್ಣಾಗಿ ಉಳ್ಳ, ಕೋಟಿ ಸೂರ್ಯರಂತೆ ಹೊಳೆಯುವ, ಪ್ರಕಾಶರೂಪನಾದ, ದಿವ್ಯವಾದ ಅಸ್ತ್ರಗಳನ್ನು ಹಿಡಿದಿರುವ, ಸಮುದ್ರದೋಪಾದಿಯ ಬಾಣಸಮೂಹವುಳ್ಳ, ಬಿಲ್ಲನ್ನು ಹಿಡಿದ ಸುಂದರವಾದ ಕೈಯುಳ್ಳ, (ರಾಕ್ಷಸರಿಗೆ) ಮೃತ್ಯುರೂಪನಾದ, ಕಾಲಾಗ್ನಿಯಂತೆ ಭಯಂಕರನಾದ, ಶತ್ರುಗಳ ಗುಂಪನ್ನು ಸುಡುವ, ಅಡ್ಡಿಗಳನ್ನು ತುಂಡುಮಾಡುವದರಲ್ಲಿ ಸಮರ್ಥನಾದ, ಭೀಮನೂ, ಅಂಜಿಕೆಯುಂಟುಮಾಡುವ ಭಾರಿಯ ನಗೆಯುಳ್ಳವನೂ ಸಕಲಭಯಗಳನ್ನೂ ಪರಿಹರಿಸುವವನೂ ಆದ ಶ್ರೀರಾಮನನ್ನು ಭಜಿಸುವೆನು.

ರಾಮೋ ಮತ್ಕುಲದೈವತಂ ಸಕರುಣಂ ರಾಮಂ ಭಜೇ ಸಾದರಂ
ರಾಮೇಣಾಖಿಲಘೋರಪಾಪನಿಹತೀ ರಾಮಾಯ ತಸ್ಮೈ ನಮಃ |
ರಾಮಾನ್ನಾಸ್ತಿ ಜಗತ್ತ್ರಯೈಕಸುಲಭೋ ರಾಮಸ್ಯ ದಾಸೋಸ್ಮ್ಯಹಂ
ರಾಮೇ ಪ್ರೀತಿರತೀವ ಮೇ ಕುಲಗುರೋ ಶ್ರೀರಾಮ ರಕ್ಷಸ್ವ ಮಾಮ್ ||3||

    ರಾಮನು ನನ್ನ ಕುಲದೇವರು. ದಯಾಪೂರ್ಣನಾದ ರಾಮನನ್ನು ಅದರದಿಂದ ಭಜಿಸುವೆನು. ಘೋರವಾದ ಪಾಪಗಳ ನಾಶವೆಲ್ಲವೂ ರಾಮನಿಂದಲೇ ರಾಮನಿಗೆ ನಮಸ್ಕಾರ. ಮೂರು ಲೋಕಗಳಿಗೂ ರಾಮನಷ್ಟು ಸುಲಭನಾದ ಬೇರೊಬ್ಬ ದೇವರಿಲ್ಲ ನಾನು ಶ್ರೀರಾಮನ ಸೇವಕನು ನನಗೆ ರಾಮನಲ್ಲಿಯೇ ಅತಿಯಾದ ಪ್ರೇಮವು ಕುಲಗುರುವಾದ ಶ್ರೀರಾಮನೆ ನನ್ನನ್ನು ಕಾಪಾಡು

ವಂದಾಮಹೇ ಮಹೇಶಾನಚಂಡಕೋದಂಡಖಂಡನಮ್ |
ಜಾನಕೀಹೃದಯಾನಂಚಂದನಂ ರಘುನಂದನಮ್ ||4||

    ಪರಮೇಶ್ವರನ ದುಸ್ಸಹವಾದ ಬಿಲ್ಲನ್ನು ತುಂಡುಮಾಡಿದ, ಜಾನಕೀ ದೇವಿಯ ಹೃದಯಕ್ಕೆ ಆನಂದವುಂಟುಮಾಡುವ ಚಂದನದಂತೆ ಇರುವ, ರಘನಂದನನಾದ ರಾಮನನ್ನು ನಮಸ್ಕರಿಸುತ್ತೇವೆ.

ಜಾನಾತಿ ರಾಮ ತವ ನಾಮರುಚಿಂ ಮಹೇಶಃ
ಜಾನತಿ ಗೌತಮಸತೀ ಚರಣಪ್ರಭಾವಮ್ |
ಜಾನತಿ ದೋರ್ಬಲಪರಾಕ್ರಮಮಿಶಚಾಪಃ
ಜಾನಾತ್ಯಮೋಘಪಟುಬಾಣಗತಿಂ ಪಯೋಧಿಃ ||5||

    ಎಲೈ ರಾಮನೆ, ನಿನ್ನ ನಾಮದ ರುಚಿಯನ್ನು ಪರಮೇಶ್ವರನು ಬಲ್ಲನು. ಗೌತಮನ ಹೆಂಡತಿಯಾದ ಅಹಲ್ಯೆಯು ನಿನ್ನ ಪಾದಗಳ ಮಹಿಮೆಯನ್ನು ಬಲ್ಲಳು. ನಿನ್ನ ಬಾಹುಗಳ ಪರಾಕ್ರಮವನ್ನು ಈಶ್ವರನ ಧನಸ್ಸು ಬಲ್ಲದು ವ್ಯರ್ಥವಾಗದ ತೀಕ್ಷ್ಣವಾದ ನಿನ್ನ ಬಾಣಗಳ ಸಂಚಾರವನ್ನು ಸಮುದ್ರ(ರಾಜನು) ಬಲ್ಲನು.

ಸಕಲಭುವನರತ್ನಂ ಸಚ್ಚಿದಾನಂದರತ್ನಂ
ಸಕಲಹೃದಯರತ್ನಂ ಸೂರ್ಯಬಿಂಬಾಂತರತ್ನಮ್ |
ವಿಮಲಸುಕೃತರತ್ನಂ ವೇದವೇದಾಂತರತ್ನಂ
ಪುರಹರಜಪರತ್ನಂ ಪಾತು ಮಾಂ ರಾಮರತ್ನಮ್ ||6||

    ಎಲ್ಲಾ ಲೋಕಗಳ ರತ್ನವಾದ, ಸಚ್ಚಿದಾನಂದತತ್ತ್ವವಾದ, ಎಲ್ಲರ ಹೃದಯದೊಳಗಿರುವ ಹಾಗೂ ಸೂರ್ಯಬಿಂಬದೊಳಗಿನ ರತ್ನವಾದ, ಪರಿಶುದ್ಧವಾದ ಪುಣ್ಯದ ಸಾರವಾದ, ವೇದವೇದಾಂತಗಳ ತಿರುಳಾದ. ಮಹೇಶ್ವರನು ನಿತ್ಯವೂ ಜಪಿಸುವ ರತ್ನವಾದ ರಾಮನೆಂಬ (ದಿವ್ಯ)ರತ್ನವು ನನ್ನನ್ನು ಕಾಪಾಡಲಿ!

ಸಕಲಸುಕೃತರತ್ನಂ ಸತ್ಯವಾಕ್ಯಾರ್ಥರತ್ನಂ
ಶಮದಮಗುಣರತ್ನಂ ಮುಖ್ಯವೈಕುಂಠರತ್ನಮ್ |
ಪ್ರಣವನಿಲಯರತ್ನಂ ನೀರಜಾಂತಸ್ಥರತ್ನಂ
ಮುನಿಜನಜಪರತ್ನಂ ಪಾತು ಮಾಂ ರಾಮರತ್ನಮ್ ||7||

    ಎಲ್ಲಾ ಪುಣ್ಯಗಳ ಸಾರವಾದ, ಸತ್ಯವಾಕ್ಯದ ಅರ್ಥವೆಂಬ ರತ್ನವಾದ, ಶಮ, ದಮೆ - ಮುಂತಾದ ಗುಣಗಳ ಸಾರವಾದ, ವೈಕುಂಠಲೋಕದ ಮುಖ್ಯವಸ್ತುವಾದ ಓಂಕಾರವೆಂಬ ನಿಲಯದ ರತ್ನವಾದ, (ಹೃದಯವೆಂಬ) ಕಮಲದೊಳಗಿನ ರತ್ನವಾದ, ಮುನಿಜನರು ಜಪಿಸುವ ರತ್ನವಾದ ರಾಮನೆಂಬ ರತ್ನವು ನನ್ನನ್ನು ಕಾಪಾಡಲಿ!

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ