ಗುರುಕೃಪಾಸಂಪಾದನೆ

    ಶ್ರೀ ಶೇಷಾಚಲಸಾಧುಗಳಿಗೆ ಶ್ರೀ ಶೃಂಗೇರಿಜಗದ್ಗುರುಗಳವರು ಅನುಗ್ರಹ ಮಾಡಿದ ವಿಚಾರವು 'ಆನಂದವನ' ಮಹಾಸಂಪುಟದಲ್ಲಿನ ಒಂದು ಲೇಖನದಲ್ಲಿ ವಿಸ್ತಾರವಾಗಿ ನಿರೂಪಿಸಲ್ಪಟ್ಟಿದೆ. ಅದರ ಸಾರಾಂಶವು ಹೀಗಿದೆ :-

    ಶ್ರೀ ಶೇಷಾಚಲಸದ್ಗುರುಗಳು ಒಬ್ಬ ಯೋಗ್ಯಗುರುಗಳನ್ನು ಹುಡುಕುತ್ತಿದ್ದರು. ಗುರೂಪದೇಶವಿಲ್ಲದೆ ಜ್ಞಾನಸಂಪಾದನೆಯಿಲ್ಲ-ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿತ್ತು. ಶ್ರೀ ಶಂಕರಭಗವತ್ಪಾದರಿಗಿಂತಲೂ ಜ್ಞಾನೋಪದೇಶಕ್ಕೆ ಅರ್ಹರಾದ ಗುರುಗಳು ಮತ್ತೆ ಇನ್ನು ಯಾರಿದ್ದಾರು? ಎಂದು ಭಾವಿಸಿ ಶೃಂಗೇರಿ ಕ್ಷೇತ್ರಕ್ಕೆ ಪ್ರವಾಸವನ್ನು ಕೈಗೊಂಡು ಬಂದು ಜಗದ್ಗುರುಗಳನ್ನು ದರ್ಶನಮಾಡಿ ಕೆಲವು ಕಾಲ ಅವರ ಕೃಪಾನುಗ್ರಹಕಾಂಕ್ಷಿಗಳಾಗಿ ಅಲ್ಲಿಯೇ ನಿಂತರು. ತಮ್ಮ ನಿಯಮದಂತೆ ಮಧುಕರಿಭಿಕ್ಷಾನ್ನವನ್ನೇ ಕೈಗೊಂಡಿದ್ದರು. ಮಠದಲ್ಲಿ ಊಟ ಮಾಡುತ್ತಿರಲಿಲ್ಲ ಆದರೆ ಗುರುಗಳು ಭಿಕ್ಷೆಯನ್ನು ಸ್ವೀಕರಿಸಿ ಕೈತೊಳೆಯಲು ಹೊರಗೆ ಬರುವ ಸಮಯವನ್ನೇ ಕಾಯುತ್ತಿದ್ದು ಅವರು ಕೈಕಾಲುಗಳನ್ನು ತೊಳೆದುಕೊಂಡು ಒಳಕ್ಕೆ ಹೋದ ಅನಂತರ ಆ ನೀರನ್ನು ತಲೆ-ಮೈಗೆಲ್ಲ ಪ್ರತಿದಿನವೂ ಸವರಿಕೊಳ್ಳುತ್ತಿದ್ದರು. ಮೂರು ತಿಂಗಳ ಕಾಲ ಹೀಗೆ ಮಾಡಿದರೂ ಇನ್ನೂ ಗುರುಕರಪೆಯಾಗಲಿಲ್ಲವಲ್ಲ ಎಂದು ಯೋಚಿಸುತ್ತಿರುವಷ್ಟರಲ್ಲಿ ಸರ್ವಜ್ಞರಾದ ಗುರುಗಳು ಇದನ್ನರಿತುಕೊಂಡು ಒಂದು ದಿನ ಅರ್ಧಗಂಟೆ ಮುಂಚೆಯೇ ಕಾಲುತೊಳೆಯಲು ಹೊರಬಂದವರು ಸಾಧುಗಳನ್ನು ಕಂಡು "ಈ ದಿನ ನೀನು ನಮ್ಮೊಡನೆ ಸಹಪಂಕ್ತಿ ಭೋಜನಕ್ಕೆ ಬರಬೇಕು" ಎಂದಪ್ಪಣೆಮಾಡಿದರು. ಅನಂತರ ತಮ್ಮ ಎಲೆಗೆ ಬಡಿಸಿದ್ದ ಪಂಚಭಕ್ಷ್ಯಪರಮಾನ್ನದಲ್ಲಿ ಮೂರು ತುತ್ತುಗಳನ್ನು ಎತ್ತಿಕೊಂಡು ಸಾಧುಗಳ ಎಲೆಗೆ ಬಡಿಸಿ ಭೋಜನಮಾಡಲು ಹೇಳಿದರು. ಸಾಧುಗಳ ದೃಷ್ಟಿಯಲ್ಲಿ ಆ ಮೂರು ತುತ್ತುಗಳು ವೈರಾಗ್ಯ, ಭಕ್ತಿ, ಜ್ಞಾನ ಗಳಾಗಿದ್ದವು ಭೋಜನಾನಂತರ ಸಾಧುಗಳನ್ನು ಹತ್ತಿರ ಕೂರಿಸಿಕೊಂಡು ಅವರ ಸಾಧನೆಯನ್ನೆಲ್ಲ ಕೇಳಿ ಹರಸಿ ತಮ್ಮ ಅಮೃತಹಸ್ತವನ್ನು ಮಸ್ತಕದಮೇಲಿಟ್ಟು ಈ ಕೆಳಗಿನ ಶ್ಲೋಕವನ್ನು ಕಿವಿಯಲ್ಲಿ ಉಪದೇಶಿಸಿದರು.
ಶುದ್ಧಬ್ರಹ್ಮವಿಚಾರಸಾರಪರಮಾಮಾದ್ಯಾಂ ಜಗದ್ವ್ಯಾಪಿನೀಮ್
ವೀಣಾಪುಸ್ತಕಧಾರಿಣೀಮಭಯದಾಂ ಜಾಡ್ಯಾಂಧಕಾರಾಪಹಾಮ್ |
ಹಸ್ತೈಃ ಸ್ಫಾಟಿಕಮಾಲಿಕಾಂ ಚ ದಧತೀಂ ಪದಾಸ್ಮನೇ ಸಂಸ್ಥಿತಾಮ್
ವಂದೇ ತಾಂ ಜಗದೀಶ್ವರೀಂ ಭಗವತೀಂ ಬುದ್ಧಿಪ್ರದಾಂ ಶಾರದಾಮ್ ||
ಗುರುಕೃಪೆಗಿಂಗ ಮಿಗಿಲಾದುದು ಈ ಜಗತ್ತಿನಲ್ಲಿ ಮತ್ತೇನಿದ್ದೀತು?

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ