Kalyana Vrushti Sthavam - ಕಲ್ಯಾಣವೃಷ್ಟಿಸ್ತವಃ - Sri Adi Shankaracharya

ಕಲ್ಯಾಣವೃಷ್ಟಿಭಿರಿವಾಮೃತಪೂರಿತಾ ಭಿ |
ರ್ಲಕ್ಷ್ಮೀಸ್ವಯಂವರಣಮಂಗಲದೀಪಿಕಾಭಿಃ ||
ಸೇವಾಭಿರಂಬ ತವ ಪಾದಸರೋಜ ಮೂಲೇ |
ನಾಕಾರಿ ಕಿಂ ಮನಸಿ ಭಾಗ್ಯವತಾಂ ಜನಾನಾಮ್ ||1||
***
ಅಮೃತ ಗುಣ ಸಂಪನ್ನಳಾದ, ಮಂಗಳಕಾರಿಣಿ ವಿಷ್ಣು ಪತ್ನಿ ಲಕ್ಷ್ಮಿಯೇ, ನಿನ್ನ ಪಾದ ಕಮಲದ ಸೇವೆ ಮಾಡುವುದು ಜನರ ಎಂತಹ ಭಾಗ್ಯವು ||1||
***
Kalyana vrushtibi rivamrutha poorithaabhi,
Lakshmi swayam varana mangala deepikabhi,
Sevabhirambha, thava pada saroja moole,
Naakari kim manasi bhagyavatham jananaam.             1
***
Hey mother, Which wishes in their mind, Are not fulfilled of those lucky people, Who are able to serve near your lotus like feet, Which are the rains of luck full of nectar, And which are like the lamps lit during, The marriage of Goddess Lakshmi.
************
ಏತಾವದೇವ ಜನನಿ ಸ್ಪೃಹಣೇಯಮಾಸ್ತೇ |
ತ್ವದ್ವಂದನೇಷು ಸಲಿಲಸ್ಥಗಿತೇ ಚ ನೇತ್ರೇ ||
ಸಾನ್ನಿಧ್ಯಮುದ್ಯದರುಣಾಯುತ ಸೋದರಸ್ಯ |
ತ್ವದ್ವಿಗ್ರಹಸ್ಯ ಪರಯಾ ಸುಧಯಾ ಪ್ಲುತಸ್ಯ  ||2||
***
ಜಗದೇಕಮಾತೆ, ಅರ್ಶುಪೂರಿತ ನಯನಗಳಿಂದ ಸ್ಮರಣೀಯಳಾದ, ಅರುಣ ಪ್ರಭೆಯುಳ್ಳ ನಿನ್ನ ಸ್ವರೂಪದಿಂದ ನನಗೆ ಅಮೃತ ಸಿಂಚನವಾಗಿದೆ ||2||
***
Ethavadeva janani spruhaneeyamasthe,
Twath vandane cha  salila sthagidhe cha nethre,
Sannidhya Madhya tharunambuja sodharasya,
Twad vigrahasya parayaa sudhayapluthasya.                 2
***
Oh Mother, while I salute you, My eyes hidden by the tears of joy, And Your form as pretty as fully opened lotus, Drenched with the great joy of nectar, Comes before the devotee, And  both these are greatly desirable.
******************************

ಈಶತ್ವನಾಮಕಲುಷಾಃ ಕತಿ ವಾ ನ ಸಂತಿ |
ಬ್ರಹ್ಮಾದಯಃ ಪ್ರತಿಭವಂ ಪ್ರಲಯಾಭಿಭೂತಾಃ ||
ಏಕಃ ಸ ಏವ ಜನನಿ ಸ್ಥಿರಸಿದ್ಧಿ ರಾಸ್ತೇ |
ಯಃ ಪಾದ ಯೋಸ್ತವ ಸಕೃತ್ಪ್ರಣತಿಂ ಕರೋತಿ ||3||
***
ಈಶತ್ವನಾಮವು ಎಂದಿಗೂ ಕಲ್ಮಷವಾಗುವುದಿಲ್ಲ. ಬ್ರಹ್ಮಾದಿಗಳಿಂದ ಪ್ರಳಯದಿಂದ ಮತ್ತೆ ಜಗತ್ತು ಸೃಷ್ಟಿಯಾದರೂ, ಆಗಲೂ ನೀನೇ ತಾಯಿಯು. ಇದು ಸಿದ್ಧಿಯಾಗಿರುತ್ತದೆ. ಅಂತಃ ನಿನ್ನ ಪಾದಗಳಿಗೆ ನಾನು ನಮಸ್ಕರಿಸುವೆನು ||3||
********
Ishathwanama kalusha kathina masanthi,
Brahmadaya prathibhavam pralayabhi bhootha,
Ekassa eva jagathi sthira samsthyasthe,
Ya padayosthava sakruth pranathim karothi.                   3
***
There are many so called Gods in the world, For even Brahma and others are attacked by deluge always, But the one who falls  at your feet even once, Stays on permanently without destruction.
******************************

ಲಬ್ಧ್ವಾ ಸಕ್ತ್ರೃಪುರಸುಂದರ ತಾವಕೀನಂ |
ಕಾರುಣ್ಯಕಂದಲಿತಕಾಂತಿ ಭರಂ ಕಟಾಕ್ಷಮ್ ||
ಕಂದರ್ಪ ಕೋಟಿ ಸುಭಾಗಸ್ತ್ವಯಿ ಭಕ್ತಿ ಭಾಜಃ |
ಸಂಮೋಹಯಂತಿ ತರುಣೀರ್ಭುವನತ್ರಯೇಪಿ ||4||
****
ನೀನು ತ್ರಿಪುರಸುಂದರಿಯು, ನಿನ್ನ ನೋಟದಲ್ಲಿ ಕಾರುಣ್ಯ, ಕಾಂತಿಗಳೆಲ್ಲವೂ ತುಂಬಿದೆ. ಕಂದರ್ಪಕೋಟಿ ಭಕ್ತರೆಲ್ಲರೂ ನಿನ್ನ ಭಕ್ತಿಗೆ ಪಾತ್ರರಾಗಿರುತ್ತಾರೆ, ನೀನು ಮುರು ಲೋಕಗಳನ್ನೂ ಸಂಮೋಹಗೊಳಿಸಿರುವೆ ||4||
***
Labdhwa sakruth Tripurasundari, thawkeenam,
Karunya kandalitha kanthi bharam kadaksham,
Kandarpa bhava subhaga khlu bhakthi bhaja,
Sammohayanthi tharuneer bhuvana thrayepi.                         4
****
Oh beauty of the three cities, if your side long glance, Drenched in the enhanced light of your mercy,
Falls on one devotee even once, They would be as lucky as the god of love, And they easily attract all lasses of the three worlds.
******************************

ಹ್ರೀಂಕಾರಮೇವ ತವ ನಾಮ ಗೃಣಂತಿ ವೇದಾ |
ಮಾತಸ್ತ್ರೀಕೋಣ ನಿಲಯೇ ತ್ರಿಪುರೇ ತ್ರಿನೇತ್ರೇ ||
ತ್ವತ್ಸಂಸ್ಮೃತೌ ಯಮಭಟಾಭಿಭವಂ ವಿಹಾಯ |
ದೀವ್ಯಂತಿ ನಂದನವನೇ ಸಹ ಲೋಕಪಾಲೈಃ ||5||
***
ವೇದದಲ್ಲಿ ನಿನ್ನ ನಾಮವನ್ನು ಹ್ರೀಂ ಕಾರವೆಂದು ಗ್ರಹಿಸಲ್ಪಟ್ಟಿದೆ. ಮಾತೃ ತ್ರಿಕೋಣ ನಿಲಯದಲ್ಲಿರುವ ತ್ರಿಪುರೆ, ತ್ರೀನೇತ್ರೆ, ತ್ರಿನೇತ್ರೆ ನಿನ್ನನ್ನು ನೆನೆಯುವುದರಿಂದ ಯಮ ಭಟರೂ ಕೂಡ ತ್ಯಜಿಸಿ, ನಿನ್ನ ನಂದನವನ ಲೋಕದಲ್ಲಿ ಪಾಲಿಸಲ್ಪಡುತ್ತಾರೆ ||5||
***
Hreengarameva thava nama gunanthi Veda,
Mathasthrikona nilye, Thripure, Thrinethre,
Thwath samsmruthou yama bhatadhi bhayam vihaya,
Divyanthi nandanavane saha loka palai.                                     5
***
Oh mother who lives in the triangle, Who lives in the three cities of micro, macro and causal body, Who has three eyes, The Vedas tell that your name is the sound “Hreem”, And thine perennial devotees , do not have , The fear from the soldiers of death, And they enjoy their stay in the holy garden , With those who take care of the world.
******************************

ಹಂತುಃ ಪುರಾಮಧಿಲಂ ಪರಿಪೀಯಮಾನಃ |
ಕ್ರೂರಃ ಕಥಂ ನ ಭವತಾ ಗರಲಸ್ಯ ವೇಗಃ ||
ನಾಶ್ವಾಸನಾಯ ಯದಿ ಮಾತರಿದಂ ತವಾರ್ಧಂ |
ದೇಹಸ್ಯ ಶತ್ವದಮೃತಾಪ್ಲುತ ಶೀತಲಸ್ಯ ||6||
***
ಕುಡಿಯಲ್ಪಟ್ಟ ಕ್ರೂರವಾದ ವಿಷದ ತಾಪವು ಎಲ್ಲಿ ಉಂಟಾಗುತ್ತದೆ? ಈಶ್ವರನ ಅಧಾಂಗಿಯಾದ ತಾಯಿ ನಿನ್ನ ಆಶ್ವಾಸನೆಯಿಂದ ವಿಷದ ಜ್ವಾಲೆಯು ಶೀತಲವಾಗುತ್ತದೆ.
****
Hanthu puraamathgi galam paripeeya mana,
Kroora kadham na bhavitha garalasys vega,
Naaswasanaya yadhi matharitham tha vardham,
Dehasya saswadhamruthaaplutha seethalasya.                             6
****
Oh mother, the spread of the poison drunk by Lord Shiva, Would not have stopped at his  neck but for  your. Body which is always cold due to the ever drenching nectar, Always occupying half of His body.
******************************

ಸರ್ವಜ್ಞತಾಂ ಸದಸಿ ವಾಕ್ಪಟುತಾಂ ಪ್ರಸುತೇ |
ದೇವಿ ತ್ವದಂಘ್ರಿ ಸರಸೀರುಹಯೋಃ ಪ್ರಣಾಮಃ ||
ಕಿಂ ಚ ಸ್ಫುರನ್ಮಕುಟಮುಜ್ಜ್ವಲಮಾತ ಪತ್ರಂ |
ದ್ವೇ ಚಾಮರೇ ಚ ಮಹತೀಂ ವಸುದಾಂ ದದಾತಿ ||7||
***
ತಾಯಿ, ನಿನ್ನ ಪಾದಕಮಲಗಳಲ್ಲಿ ನಮಿಸುವುದರಿಂದ ಸರ್ವಜ್ಞತೆಯುಂಟಾಗುತ್ತದೆ. ನಿನ್ನ ಕಿರೀಟ, ಚಾಮರದ ಸೊಲ್ಪ ಉಜ್ವಲ ಪ್ರಕಾಶದಿಂದ ಭಾಗ್ಯ ಲಭಿಸುತ್ತದೆ ||7||
***
Saragnaanam sadasi vakpatuthaam prasoothe,
Devi, thwadangri sarasiruhayo pranama,
Kim cha sphuran makuta mujwala matha pathram,
Dhwe chamare cha mahatheem vasudham dadahathi.                       7
***
Hey Goddess, a salute at thine lotus like feet, Makes one all knowing in an assembly, Creates in him mastery over words,
And not only that gives him a glittering crown, Two fans at his side and very broad country to rule.
******************************

ಕಲ್ಪದ್ರುಮೈರಭಿಮತ ಪ್ರತಿಪಾದನೇಷು |
ಕಾರುಣ್ಯ ವಾರಿಧಿಭಿರಂಬ ಭವತ್ಕಟಾಕ್ಷೈಃ ||
ಆಲೋಕಯ ತ್ರಿಪುರಸುಂದರಿ ಮಾಮನಾಥಂ |
ತ್ವಯ್ಯೇವ ಭಕ್ತಿ ಭರಿತಂ ತ್ವಯಿ ಬದ್ಧತೃಷ್ಣಮ್ ||8||
***
ತ್ರಿಪುರಸುಂದರೀ, ನಿನ್ನ ಕರುಣ್ಯ ಭವತ್ಕಟಾಕ್ಷದಿಂದ ನನ್ನನ್ನು ನೋಡು. ಕಲ್ಪಧೃಮವೂ ಇದನ್ನು ಪ್ರತಿಪಾದಿಸುತ್ತದೆ. ನಿನ್ನ ಭಕ್ತಿ ಹಂಬಲದಿಂದ ನಿನ್ನಲ್ಲಿ ಭಕ್ತಿ ನಿರತನಾದ ನನ್ನನ್ನು ನೋಡು ||8||
***
Kalpadhrumai  rabhimatha pradhi padhaneshu,
Karunya varidhirambha , bhavath kadakshai,
Aalokaya Tripura sundari , mama nadham,
Thwaiyeva bhakthi baritham thwayi bhaddha thrushnam.                   8
****
Hey mother, Who is the beauty of the three worlds, You who have side long glances ,which are the sea of mercy, And the wish giving tree in fulfilling one’s wishes, Please see  with those divine eyes, Me who is an orphan and full of devotion to you, And also tied to you  with ecstasic love towards you.
******************************

ಹಂತೇತರೇಷ್ವಪಿ ಮನಾಂಸಿ ನಿಧಾಯ ಚಾನ್ಯೆ |
ಭಕ್ತಿಂ ವಹಂತಿ ಕಿಲ ಪಾಮರದೈವ ತೇಷು ||
ತ್ವಾಮೇವ ದೇವಿ ಮನಸಾ ಸಮನುಸ್ಮರಾಮಿ |
ತ್ವಾಮೇವ ನೌಮಿ ಶರಣಂ ಜನನಿ ತ್ವಮೇವ ||9||
***
ಎಲ್ಲರೂ ನಿನ್ನಲ್ಲಿ ಭಕ್ತಿಯನ್ನು ತೋರುತ್ತಾರೆ. ನಿನ್ನನ್ನು ನಾನು ಮನಸಾ ಅನುಸರಿಸುತ್ತೇನೆ. ತಾಯಿ, ನಿನ್ನಲ್ಲಿ ಶರಣು ಹೋಗುತ್ತೇನೆ ||9||
***
Handhe thareshwapi manamsi nidhayachaya,
Bhakthir vahanthi kila pamara daivatheshu,
Thwameva devi manasa samanusmaramai,
Thwamva naumi saranam janani thwameva.                                       9
***
Oh mother, alas the ordinary people keep their mind Towards very ordinary gods, And carry devotion to them with them, But I always meditate on you only, And fall at your feet, And you become my only source of protection.
******************************

ಲಕ್ಷ್ಮೇಷು ಸತ್ಸ್ವಪಿ ಕಟಾಕ್ಷ ನಿರೀಕ್ಷಣಾನಾ |
ಮಾಲೋಕಯ ತ್ರಿಪುರಸುಂದರಿ ಮಾಂ ಕದಾಚಿತ್ ||
ನೂನಂ ಮಯಾ ತು ಸದೃಶಃ ಕರುಣೈ ಕಪಾತ್ರಂ |
ಜಾತೋ ಜನಿಷ್ಯತಿ ಜನೋನ ಚ ಜಾಯತೇ ವಾ ||10||
***
ದೇವಿ, ನಿನ್ನ ಕರುಣಾಕಟಾಕ್ಷಕ್ಕಾಗಿ ನಿರೀಕ್ಷೆಯಲ್ಲಿರುವ ನನ್ನಲ್ಲಿ ಸ್ವಲ್ಪವಾದರೂ ಲಕ್ಷ್ಯವಿಟ್ಟು ನನ್ನನ್ನು ನೋಡು. ನನಗೆ ನೀನೇ ಕರುಣಾಪಾತ್ರಳು, ನೀನಲ್ಲದೆ ಬೇರೆಯಾರೂ ಗತಿ ಇರುವುದಿಲ್ಲ.
****
Lakshyeshu sathswapi ktaksha nireekshanana,
Maalokaya tripurasundari, Maamkadachit,
Noonam maya thu sadrusa karunaika pathram,
Jatho janishyathi jano na cha  jayathe cah.                                       10
***
Hey ,beauty of the three cities, You would come across, Many people to see ,using  your side long glances, But at least once please make me an object of your sight, For a suitable one like me  for such a blessing was not there, Is not there and will not be there.
******************************

ಹ್ರೀಂ ಹ್ರಿಮತಿ ಪ್ರತಿದಿನಂ ಜಪತಾಂ ತವಾಖ್ಯಾಂ |
ಕಿಂ ನಾಮ ದುರ್ಲಭಮಿಹ ತ್ರಿಪುರಾಧಿವಾಸೇ ||
ಮಾಲಾಕಿರೀಟ ಮದವಾರಣ ಮಾನನೀಯಾ |
ತಾನ್ಸೇವತೇ ವಸುಮತೀ ಸ್ವಯಮೇವ ಲಕ್ಷ್ಮೀಃ ||11||
***
ಹ್ರೀ ಹ್ರೀ ಎಂದು ನಿನ್ನನ್ನು ಪ್ರತಿನಿತ್ಯವೂ ಜಪಿಸುತ್ತೇನೆ, ನಿನ್ನ ನಾಮವು ಎಲ್ಲಿ ಲಭ್ಯವಿರುವುದಿಲ್ಲ? ಮಾಲೆ, ಕಿರೀಟ ಧರಿಸಿ ಮದಿಸಿದ ಆನೆಯಂತೆ ಇರುವ ನಿನ್ನನ್ನು ಸ್ವತಃ ವಸುಮತಿ ಲಕ್ಷ್ಮಿಯೇ ಸೇವಿಸುತ್ತಾಳೆ ||11||
***
Hreemhreemithiprathi dinam japatham thavakhyam,
Kim nama  durlabha miha  tripuradhi vase,
Mala kireeta  madha varana mananeeyaam,
Sthaan sevathe vasumathi swayameva Lakshmi                               11
***
Hey, Goddess who lives in Tripura, to those, Who chant daily “Hreem, “Hreem” What is there which cannot be attained? They who should be  presented with Garlands, Crowns , respectability and vigorous elephants, Would be served by Goddess of earth and Goddess of wealth.
******************************

ಸಂಪತ್ಕರಾಣಿ ಸಕಲೇಂದ್ರಿಯನಂದನಾನಿ |
ಸಾಮ್ರಾಜ್ಯದಾನನಿರತಾನಿ ಸರೋರುಹಾಕ್ಷಿ ||
ತ್ವದ್ವಂದನಾನಿ ದುರಿತಾಹರಣೋದ್ಯತಾನಿ |
ಮಾಮೇವ ಮಾತುರನಿಶಂ ಕಲಯಂತು ನಾನ್ಯಮ್ ||12||
***
ಸಂಪತ್ತನ್ನು ನೀಡುವ, ಆನಂದ ನೀಡುವ, ಸಾಮ್ರಾಜ್ಯ ದಾಯಕಿ, ಕಮಲನೇತ್ರೆಯಾದ ದುರಿತಗಳನ್ನು ನಿವಾರಿಸುವವಳಾದ ನೀನು ವಂದನೀಯಳು. ನೀನೇ ತಾಯಿಯೆಂದು ಸದಾ ತಿಳಿದಿರುತ್ತೇನೆ
***
Sampadkarini, sakalendriya nandanani,
Samrajya dhana nirathani saroruhakshi,
Thwad vandanani duritha haranodhyathani,
Maam devi . matharanisam kalayanthu danyam.                                    12
***
Hey,  goddess with eyes like the petals of lotus, Salutations to you is capable of giving all wealth, Giving  happiness to all sense organs , Giving as gift  Countries to rule, And giving solace from difficulties, And so  my mother, For ever make me blessed.
******************************

ಕಲ್ಪೋಪಸಂಹೃತಿಷು ಕಲ್ಪಿತತಾಂಡವಸ್ಯ |
ದೇವಸ್ಯ ಖಂಡಪರಶೋಃ ಪರಭೈರವಸ್ಯ ||
ಪಾಶಾಂಕುಶೈಕ್ಷ ವಶರಾಸನ ಪುಷ್ಪಾ ಬಾಣಾ |
ಸಾ ಸಾಕ್ಷಿಣೀ ವಿಜಯತೇ ತವ ಮೂರ್ತಿರೇಖಾ ||13||
***
ತಾಂಡವದಿಂದ ಕಲ್ಪಸೃಷ್ಟಿಸುವ ದೈವ ಭೈರವನಿಗೆ ಪಾಶ, ಅಂಕುಶ ಪುಷ್ಪಬಾಣಪಿಡಿದು ಸಾಕ್ಷಿಯಾಗಿರುವ ನಿನ್ನ ರೂಪಕ್ಕೆ ವಿಜಯವಾಗಲಿ.
****
Kalpopa samhruthishu , kalpitha thandavasya,
Devasya ganda parsao para bhiravasya,
Pasungasaikshava  sarasana pushpa bana,
Saa saakshini vijayathe thava moorthy rekha.                                13
***
Victory to her who is armed with goad, Rope, bow made of sugarcane, And arrows made of flowers and who  witnessed, The vigorous manly dance of Shiva. At the time of final deluge, And also seen him as armed with axe , And as a very angry furious Bhairava ,
******************************

ಲಗ್ನಂ ಸದಾ ಭವತು ಮಾತರಿದಂ ತವಾರ್ಧಂ |
ತೇಜಃ ಪರಂ ಬಹುಲಕುಂಕುಮಪಂಕಶೋಣಮ್ ||
ಭಾಸ್ವತ್ಕಿರೀಟಮಮೃತಾಂಶುಕಲಾವತಂಸಂ |
ಮಧ್ಯೇ ತ್ರಿಕೋಣನಿಲಯಂ ಪರಮಾಮೃತಾರ್ದ್ರಮ್ ||14||
***
ಶಿವನ ಅರ್ಧಾಂಗಿಯಾದ ತಾಯಿ, ಕುಂಕುಮಲೇಪಿತಳಾಗಿ, ತೇಜಸ್ಸಿನಿಂದ ಶೋಭಿಸುವ, ಕಿರೀಟ ಗಿಣಿಗಳಿಂದ ಶೋಭಿತಳಾದ, ತ್ರಿಕೋಣ ಮಧ್ಯದಲ್ಲಿ ವಾಸಿಸುವ ತಾಯಿ ಕಷ್ಟದಲ್ಲಿರುವವರಿಗೆ ಸದಾ ಶುಭ ಅಮೃತ ಪ್ರಾಯಳು.
****
Lagnam sada bhavathu matharidham thavardham,
Theja param bahula kumkuma panka sonam,
Bhaswath kireeta mamruthamsu kala vathamsam,
Madhye trikona nilayam paramruthardhram.                                      14
****
Oh, mother, my mind should always , Be filled with the half that is you, Which shines  reddish like the bahula flowers and large mixture of saffron,
Which wears the crown s well as the nectar like crescent on its head Which resides in the middle of the triangle, And which is drenched with mercy of eternal joy.
******************************

ಹ್ರೀಂಕಾರಮೇವ ತವ ನಾಮ ತದೇವ ರೂಪಂ |
ತ್ವನ್ನಾಮ ದುರ್ಲಭಮಿಹ ತ್ರಿಪುರೇ ಗೃಣಂತಿ ||
ತ್ವತ್ತೇಜಸಾ ಪರಿಣತಂ ವಿಯದಾದಿಭೂತಂ |
ಸೌಖ್ಯಂ ತನೋತಿ ಸರಸೀರುಹಸಂಭವಾದೇಃ ||15||
***
ಹ್ರೀಂ ಕಾರವೇ ನಿನ್ನ ನಾಮ, ಅದೇ ನಿನ್ನ ರೂಪವು. ನಿನ್ನ ನಾಮವು ಮೂರು ಲೋಕಗಳಲ್ಲೂ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಅನಾದಿಕಾಲದಿಂದಲೂ ನೀನೇ ತೇಜಸ್ವಿನಿ. ಬ್ರಹ್ಮಾದಿಗಳೂ ನಿನ್ನಿಂದ ಸೌಖ್ಯ ಪಡೆದಿರುತ್ತಾರೆ
***
Hreengarameva thava nama tha deva roopam,
Thwannada durlabha miha Tripure , gunanthi,
Thwathejasa parinatham viyathathi bhootham,
Soukhyam thanothi sarasi ruha sambhavadyai.                                        15
***
Hey Goddess of the three cities, your name, Is “Hreem” and that is your holy  appearance, And your devotees always chant your name, Which is very difficult to obtain, And the five bhoothas* which are made out of your power, Grant a trouble free existence to that god who was born out of a lotus.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ