ಗೋದಾಸ್ತುತಿಃ (ಸಂಗ್ರಹ) - 29
ಇತಿ ವಿಕಸಿತಭಕ್ತೇಃ ಉತ್ಥಿತಾಂ ವೆಂಕಟೇಶಾತ್ ಬಹುಗುಣರಮಣೀಯಾಂ ವಕ್ತಿಗೋದಾಸ್ತುತಿಂ ಯಃ | ಸ ಭವತಿ ಬಹುಮಾನ್ಯಃ ಶ್ರೀಮತೋ ರಂಗಭರ್ತ್ತುಃ ಚರಣಕಮಲಸೇವಾಂ ಶಾಶ್ವತೀಮಭ್ಯುಷ್ಯನ್ ||29|| ವಿಕಸಿತಭಕ್ತೀಃ = ಅರಳಿದ ಭಕ್ತಿಯುಳ್ಳ, ವೇಂಕಟೀಶಾತ್ = ವೇಂಕಟನಾಥನೆಂಬ ಕವಿಯಿಂದ, ಇತಿ = ಈ ಮೇಲೆ ಹೇಳಿರುವ (ರೀತಿಯಲ್ಲಿ) 28 ಶ್ಲೋಕಗಳಲ್ಲಿ, ಉತ್ಥಿತಾಂ = ಹೊರ ಹೊಮ್ಮಿದ, ಬಹುಗುಣರಮಣೀಯಾಂ = ಗೋದಾದೇವಿಯ ಅನೇಕ ವಿಧವಾದ ಕಲ್ಯಾಣಗುಣಗಳಿಂದ ಕೂಡಿ ಸುಂದರವಾಗಿರುವ, ಗೋದಾಸ್ತುತಿಂ = ಗೋದಾಸ್ತುತಿಂ - ಹೆಸರುಳ್ಳ ಈ ಗೋದಾಸ್ತೋತ್ರವನ್ನು, ಯಃ = ಯಾವನು, ವಕ್ತಿ=ಹೇಳುತ್ತಾನೆಯೊ, ಸ್ತಃ = ಅವನು, ಶ್ರೀಮತಃ = ಶ್ರಿಯಃಪತಿಯಾದ, ರಂಗಭರ್ತುಃ = ರಂಗನಾಥನ, ಶಾಶ್ವತೀಂ = ಎಂದೆಂದಿಗೂ ಶಾಶ್ವತವಾದ, ಚರಣಕಮಲಸೇವಾಂ = ಆಡಿದಾವರೆಗಳ ಕೈಂಕರ್ಯವನ್ನು, ಅಭ್ಯುಪೈಷ್ಯನ್ = ಹೊಂದಿದವನಾಗಿ, ಬಹುಮಾನ್ಯಃ = ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿ, ಭವತಿ = ಆಗುತ್ತಾನೆ. ವಿಕಾಸಗೊಂಡ ಭಕ್ತಿಯುಳ್ಳ ವೆಂಕಟನಾಥರಿಂದ, ಈ ಮೇಲೆ ಹೇಳಿರುವ 28 ಪದ್ಯಗಳಲ್ಲಿ ಹೊರಹೊಮ್ಮಿದ, ಗೋದಾದೇವಿಯ ಅನೇಕ ವಿಧವಾದ ಕಲ್ಯಾಣ ಗುಣಗಳಿಂದ ಕೂಡಿ ಸುಂದರವಾಗಿರುವ ಈ ಗೋದಾಸ್ತುತಿಯನ್ನು ಯಾರು ಹೇಳುತ್ತಾರೆಯೋ ಅವರು ಶ್ರಿಯಃಪತಿಯಾದ ಶ್ರೀರಂಗನಾಥನ ಅಡಿದಾವರೆಗಳ ಕೈಂಕರ್ಯವನ್ನು ಎಂದೆಂದಿಗೂ ಶಾಶ್ವತವಾಗಿ ಹೊಂದಿ, ಭಗವಂತನ ಕೃಪೆಗೆ ಪಾತ್ರನಾಗಿ, ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿರುತ್ತಾನೆ....