Posts

Showing posts with the label ರುದ್ರ

ರುದ್ರಾಭಿಷೇಕಸ್ತೋತ್ರಮ್ ಮಹಾಭಾರತಾನ್ತರ್ಗತಮ್

Image
ಕೃಷ್ಣಾರ್ಜುನಾವೂಚತುಃ । ನಮೋ ಭವಾಯ ಶರ್ವಾಯ ರುದ್ರಾಯ ವರದಾಯ ಚ । ಪಶೂನಾಂ ಪತಯೇ ನಿತ್ಯಮುಗ್ರಾಯ ಚ ಕಪರ್ದಿನೇ ॥ 5.80.55॥ ಮಹಾದೇವಾಯ ಭೀಮಾಯ ತ್ರ್ಯಮ್ಬಕಾಯ ಚ ಶಾನ್ತಯೇ । ಈಶಾನಾಯ ಮಖಘ್ನಾಯ ನಮೋsಸ್ತ್ವನ್ಧಕಘಾತಿನೇ ॥ 5.80.56॥ ಕುಮಾರಗುರವೇ ತುಭ್ಯಂ ನೀಲಗ್ರೀವಾಯ ವೇಧಸೇ । ಪಿನಾಕಿನೇ ಹವಿಷ್ಯಾಯ ಸತ್ಯಾಯ ವಿಭವೇ ಸದಾ ॥ 5.80.57॥ ವಿಲೋಹಿತಾಯ ಧ್ರೂಮ್ರಾಯ ವ್ಯಾಧಾಯಾನಪರಾಜಿತೇ । ನಿತ್ಯಂ ನೀಲಶಿಖಂಡಾಯ ಶೂಲಿನೇ ದಿವ್ಯಚಕ್ಷುಷೇ ॥ 5.80.58॥ ಹೋತ್ರೇ ಪೋತ್ರೇ ತ್ರಿನೇತ್ರಾಯ ವ್ಯಾಧಾಯ ವಸುರೇತಸೇ । ಅಚಿನ್ತ್ಯಾಯಾಮ್ಬಿಕಾಭರ್ತ್ರೇ ಸರ್ವದೇವಸ್ತುತಾಯ ಚ ॥ 5.80.59॥ ವೃಷಧ್ವಜಾಯ ಮುಂಡಾಯ ಜಟಿನೇ ಬ್ರಹ್ಮಚಾರಿಣೇ । ತಪ್ಯಮಾನಾಯ ಸಲಿಲೇ ಬ್ರಹ್ಮಣ್ಯಾಯಾಜಿತಾಯ ಚ ॥ 5.80.60॥ ವಿಶ್ವಾತ್ಮನೇ ವಿಶ್ವಸೃಜೇ ವಿಶ್ವಮಾವೃತ್ಯ ತಿಷ್ಠತೇ । ನಮೋನಮಸ್ತೇ ಸೇವ್ಯಾಯ ಭೂತಾನಾಂ ಪ್ರಭವೇ ಸದಾ ॥ 5.80.61॥ ಬ್ರಹ್ಮವಕ್ತ್ರಾಯ ಸರ್ವಾಯ ಶಂಕರಾಯ ಶಿವಾಯ ಚ । ನಮೋಸ್ತು ವಾಚಸ್ಪತಯೇ ಪ್ರಜಾನಾಂ ಪತಯೇ ನಮಃ ॥ 5.80.62॥ ಅಭಿಗಮ್ಯಾಯ ಕಾಮ್ಯಾಯ ಸ್ತುತ್ಯಾಯಾರ್ಯಾಯ ಸರ್ವದಾ । ನಮೋsಸ್ತು ದೇವದೇವಾಯ ಮಹಾಭೂತಧರಾಯ ಚ । ನಮೋ ವಿಶ್ವಸ್ಯ ಪತಯೇ ಪತ್ತೀನಾಂ ಪತಯೇ ನಮಃ ॥ 5.80.63॥ ನಮೋ ವಿಶ್ವಸ್ಯ ಪತಯೇ ಮಹತಾಂ ಪತಯೇ ನಮಃ । ನಮಃ ಸಹಸ್ರಶಿರಸೇ ಸಹಸ್ರಭುಜಮೃತ್ಯವೇ॥ ಸಹಸ್ರನೇತ್ರಪಾದಾಯ ನಮೋsಸಂಖ್ಯೇಯಕರ್ಮಣೇ । 5.80.64॥ ನಮೋ ಹಿರಣ್ಯವರ್ಣಾಯ ಹಿರಣ್ಯಕವಚಾಯ ಚ । ಭಕ್ತಾನುಕಮ...

ರುದ್ರಭಾಷ್ಯಪ್ರಕಾಶ - 8ನೇ ಅನುವಾಕ (ಸಂಪೂರ್ಣ)

ರುದ್ರಾಧ್ಯಾಯದ ಎಂಟನೆಯ ಅನುವಾಕವನ್ನು ಈಗ ವಿಚಾರಮಾಡ ಬೇಕಾಗಿದೆ. ಹಿಂದಿನ ಅನುವಾಕದಲ್ಲಿ ಸರ್ವಾತ್ಮಕನೂ ಸರ್ವಾಂತರ್ಯಾಮಿಯೂ ಆದ ಭಗವಂತನನ್ನು ಸ್ತುತಿಸಲಾಯಿತು. ಈಗ ಎಲ್ಲಾ ಲೋಕದ ಜನರಿಂದಲೂ ಉಪಾಸ್ಯನಾದವನೂ ಸಂಸಾರಬಂಧವನ್ನು ಕಳೆಯುವ ಬ್ರಹ್ಮವಿದ್ಯೆಯನ್ನು ಕೊಡುವವನೂ ಆದ ಭಗವಂತನನ್ನು ಸ್ತುತಿಸಲಾಗುವದು.     ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ || 'ಸೋಮನಿಗೂ ರುದ್ರನಿಗೂ ತಾಮ್ರನಿಗೂ ಅರುಣನಿಗೂ ನಮಸ್ಕಾರ!'     ಇಲ್ಲಿ ರುದ್ರನಾದ ಸೋಮನಿಗೆ ನಮಸ್ಕಾರ - ಎಂದು ಅನ್ವಯಮಾಡಿ ಕೊಳ್ಳಬೇಕು. ರುದ್ರನೆಂದರೆ ಸಂಸಾರದುಃಖ(ರೋದನ)ವನ್ನು ಹೋಗಲಾಡಿಸುವವನು ಎಂದಭಿಪ್ರಾಯ. ಭಗವಂತನನ್ನು ಅರಿತುಕೊಳ್ಳದೆ ದುಃಖವನ್ನು ದಾಟುವದು ಸಾಧ್ಯವೇ ಇಲ್ಲ ಆದರೆ ಆ ದೇವನನ್ನು ಅರಿತುಕೊಳ್ಳುವದಾದರೂ ಹೇಗೆ? ಎಂದರೆ ಉಮೆಯ ಕೃಪೆಯಿಂದ - ಎಂದಭಿಪ್ರಾಯ. ಉಮೆಯನ್ನು ನಿತ್ಯವೂ ಹೊಂದಿರುವವನೇ - ಉಮಾಸಹಿತನಾದವನೇ - ಸೋಮನು. ಉಮಾ- ಎಂಬುದು ಓಮ್ ಎಂಬ ಪ್ರಣವಮಂತ್ರದ ಭಾಗವು. ಅ-ಉ-ಮ ಸೇರಿ ಓಂ ಆಗಿರುವದು. ಅದರಲ್ಲಿ ಉಮಾ ಎಂಬಿದೇ ದೇವಿಯ ತತ್ತ್ವವು ಆದ್ದರಿಂದಲೇ ದೇವಿಯನ್ನು "ಓಂಕಾರರೂಪಿಣೀ" ಎಂದು ಕರೆಯುತ್ತಾರೆ. ಈ ದೇವಿಯೇ ಬ್ರಹ್ಮವಿದ್ಯೋಪದೇಶಕಳು. ಈಕೆಯ ಪ್ರಸಾದದಿಂದಲೇ ಸೋಮನಾದ ಪರಮೇಶ್ವರನ ಜ್ಞಾನವು ನಮಗೆ ಪ್ರಾಪ್ತವಾಗುವದು ಅಂತೂ ಬ್ರಹ್ಮವಿದ್ಯಾರೂಪಿಣಿಯಾದ ಉಮಾದೇವೀಸಹಿತನಾದ ಸೋಮನಿಗೆ ನಮಸ್ಕಾರ ಎಂಬಿದು ಮಂತ್ರಾರ್ಥವು. ...