Posts

Showing posts from July, 2018

ಶ್ರೀ ಯದುಗಿರಿನಾಯಿಕಾ ಸುಪ್ರಭಾತಂ

Image
ಶ್ರೀಯಾದವಕ್ಷಿತಿಭೃದೀಶವಿಶಾಲವಕ್ಷಃ ಸೌಢಾಂತರೋಜ್ಜ್ವಲಮನೋಹರದಿವ್ಯಮೂರ್ತೇ | ಕ್ಷೀರಾಂಬುಧಿಪ್ರಿಯಸುತೇ! ಪ್ರಣತೇಷ್ಟದಾತ್ರಿ ! ಯದ್ವದ್ರಿನಾಥದಯಿತೇ ! ತವ ಸುಪ್ರಭಾತಂ ||1|| ಕಲ್ಯಾಣತೀರ್ಥಮವಗಾಹ್ಯ ಸುತೀರ್ಥಪೂರ್ಣ ಸೌವರ್ಣಭದ್ರಕಲಶಾನ್ ಶಿರಸಾ ವಹಂತಃ | ತಿಷ್ಠಂತಿ ವೈದಿಕಶಿಖಾಮಣಯಃ ಪ್ರಹೃಷ್ಟಾ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||2|| ಏತೇಪಿ ನಾರದಮುಖಾಸ್ಸುರವೈಣಿಕಾಶ್ಚ ತ್ವತ್ಪಾದಪಂಕಜವಿಲೀನನಿಜಾಂತರಂಗಾಃ | ಗಾಯಂತಿ ತೇ ಗುಣಗಣಾನ್ನಿಗಮಾಂತಗಮ್ಯಾನ್ ಯದ್ವದ್ರಿನಾಥದಯತೇ! ತವ ಸುಪ್ರಭಾತಂ ||3|| ಇಂದ್ರಾನಲಾಂತಕಮುಖಾಶ್ಚ ದಿಶಾಮಧೀಶಾಃ ಸಂಪ್ರಾಪಿತೋನ್ನತಪದಾಸ್ತ್ವದಪಾಂಗಲೇಶೈಃ | ತ್ವಾಂ ಸಂಸ್ತುವಂತಿ ವಿಹಿತಾಂಜಲಯಃ ಪ್ರಕಾಮಂ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||4|| ದೇವಿ! ತ್ವಯಾ ಸುಚರಿತಸ್ಯ ಸುತೇ ಪ್ರಸಾದಾ- ದ್ಯಾದೃಗ್ವಿಧಾಃ ಪ್ರಕಟಿತಾಃ ಕರುಣಾತರಂಗಾಃ | ತಾದೃಗ್ವಿಧಾನಿಹ ತರಂಗಯ ಮಯ್ಯಪಾಂಗಾನ್ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||5|| ಯೈರುನ್ನತಿಂ ಸಮಗಮನ್ನ ಚ ಶಂಕರಾದ್ಯಾಃ ಯಾನೀಹತೇ ಹರಿರಪಿ ತ್ರಿಜಗದ್ವಿಧಾನೇ | ಮಾತಸ್ತ್ವಮದ್ಯ ಸಮುದಂಚಯ ತಾನಪಾಂಗಾನ್ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||6|| ಸದ್ಯಃ ಪ್ರಫುಲ್ಲಕರಪದ್ಮಗಳನ್ಮಧೂಲ- ಪಾನೋನ್ಮುಖಾ ಮಧುಕರಾಸ್ತವ ಸುಪ್ರಭಾತಂ | ಶಂಸಂತಿ ಝಂಕೃತಿಮಿಷೇಣ ಕಿಲಾದ್ಯ ದೇವಿ! ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||7|| ಕರ್ಣಾವತಂಸಿತಸರೋಜಯುಗೇ ಪ್ರಫುಲ್ಲೇ ಸದ್ಯಸ್ಸಮುನ್ಮಿಷ

ಪ್ರದಕ್ಷಿಣೆಯ ರಹಸ್ಯ

Image
    "ಮರವ ಕಂಡಲ್ಲಿ ಸುತ್ತುವರಯ್ಯಾ" ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಹೇಳಿದ್ದಾರೆ. ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಎಷ್ಟೋ ಜನ ಮಹಿಳೆಯರು, ಮಹನೀಯರು ಯಾವುಯಾವುದೋ ಮಂತ್ರವನ್ನು ಹೇಳಿಕೊಳ್ಳುತ್ತಾ ಮರವನ್ನೋ, ದೇವಾಲಯವನ್ನೋ ಅಥವಾ ಕಲ್ಲನಾಗರಗಳನ್ನೋ ಸುತ್ತುವುದನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿರುತ್ತಾರೆ. ಈ 'ಸುತ್ತುವುದೇ' ಸಂಸ್ಕೃತದಲ್ಲಿ ಪ್ರದಕ್ಷಿಣೆಯಾಗಿದೆ 'ದಕ್ಷಿಣ' ಎಂದರೆ ಬಲಭಾಗ. ಪೂಜ್ಯ ವಸ್ತುಗಳನ್ನು ಅಂದರೆ ಅಶ್ವತ್ಥವೃಕ್ಷ, ದೇವಸ್ಥಾನ, ದೇವಮುರ್ತಿ ಮುಂತಾದವುಗಳನ್ನು ಬಲಗೊಂಡು ಸುತ್ತುವುದಕ್ಕೆ ಪ್ರದಕ್ಷಿಣೆ ಎಂದು ಹೆಸರು. ನವವಿಧ ಭಕ್ತಿಗಳಲ್ಲಿ ಒಂದಾದ 'ವಂದನಾ' ಭಕ್ತಿಯಲ್ಲಿ ಇದೂ ಒಂದು ಪ್ರಭೇದವೆನ್ನಬಹುದು. ಅವರವರ ಉದ್ದೇಶ, ಆರಾಧ್ಯ ದೇವತೆ ಇವುಗಳಿಗೆ ತಕ್ಕಂತೆ ಭಕ್ತರು ಒಂದು ಸಲ, ಮೂರು ಸಲ ಅಥವಾ ನೂರೆಂಟು ಸಲ ಇತ್ಯಾದಿಯಾಗಿ ಪ್ರದಕ್ಷಿಣೆ ಹಾಕುತ್ತಾರೆ. 'ಕರ್ಮಲೋಚನ'ವೆಂಬ ಗ್ರಂಥದಲ್ಲಿ ದೇವಿಗೆ ಒಂದು ಸಲ, ಸೂರ್ಯನಿಗೆ ಏಳು ಸಾರಿ, ವಿನಾಯಕನಿಗೆ ಮೂರು ಸಾರಿ, ವಿಷ್ಣುವಿಗೆ ನಾಲ್ಕುಸಾಲ, ಶಿವನಿಗೆ ಅರ್ಧಸಾರಿ, ಹೀಗೆ ಪ್ರದಕ್ಷಿಣೆ ಹಾಕಬೇಕೆಂದು ಹೇಳಲಾಗಿದೆ. ಒಬ್ಬೊಬ್ಬ ದೇವರಿಗೆ ಇಂತಿಷ್ಟು ಸಾರಿ ಪ್ರದಕ್ಷಿಣ ಹಾಕಬೇಕೆಂಬ ನಿಯಮ. ಇನ್ನು ಈ ಪ್ರದಕ್ಷಿಣೆಯನ್ನು ಹೇಗೆ ಹಾಕಬೇಕೆಂಬುದರ ಬಗ್ಗೆ 'ಕಾಲಿಕಾಪುರಾಣದಲ್ಲಿ' ವರ್ಣನೆಯಿದೆ.     ಬಲಗೈಯನ್ನು ಇಳಿ

ಶ್ರೀಬ್ರಹ್ಮಚೈತನ್ಯಾಷ್ಟಕ (ಕುರ್ತಕೋಟಿಯ ಶ್ರೀಮಹಾಭಗವತರವರ ಅನುಗ್ರಹಿಸಿರುವ ಗ್ರಂಥದಿಂದ )

Image
ಜನ್ಮಾದ್ಯಸ್ಯ ಯತಸ್ತಥಾಪಿ ಯ ಇಹ ಗ್ರಾಮೇ ತು ಗೋನ್ದಾವಲೌ ಸಂಭೂತಃ ಖಲು ಭೂಸುರೀಯಸುಕುಲೇ ಲೋಕೋದ್ದಿಧೀರ್ಷಾ ವಶಾತ್ || ಯಶ್ಚಾನನ್ದಮಯೋಪಿ ಮೂರ್ತಕೃಪಯಾ ದೇಹೀವ ಮೂರ್ತ್ಯಾನಯಾ | ಸಾಷ್ಟಾಂಗಂ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||1|| ಈ ಪ್ರಪಂಚದ ಜನ್ಮಸ್ಥಿತಿಲಯಗಳು ಯಾವಾತನಿಂದಲೇ ಆಗುವವೋ, ಆದರೂ ಯಾವಾತನು ಲೋಕವನ್ನು ಉದ್ಧಾರಮಾಡಬೇಕೆಂಬ ಇಚ್ಛೆಯಿಂದ ಗೋಂದಾವಲಿಯೆಂಬ ಗ್ರಾಮದಲ್ಲಿ ಬ್ರಾಹ್ಮಣಕುಲದಲ್ಲಿ ಹುಟ್ಟಿದನೋ, ಯಾವಾತನು ಆನಂದ ಸ್ವರೂಪನೇ ಆದರೂ ದೇಹಿಗಳ ಮೇಲಿನ ಕೃಪೆಯಿಂದ ಈ ಶರೀರವನ್ನು ತೆಗೆದುಕೊಂಡು ದೇಹಿಯಂತೆ ತೋರಿಕೊಳ್ಳುತ್ತಿರುವನೋ ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಭಜಿಸುತ್ತೇನೆ. ಗತ್ವಾನಿರ್ವಚನೀಯಮೇಕಮಪಿ ಯಂ ಶ್ರೀಬ್ರಹ್ಮಚೈತನ್ಯಸ- ನ್ನಾಮಾಪಾರಮರಪಣ್ಡಿತಾನ್ತಮಮಿತೈಃ ಸಪ್ರೇಮ ಸಂಗೀಯತೇ | ಯಶ್ಚಶ್ರೀ ಪುರುಷೋತ್ತಮೋಪಿ ವಿದಿತಃ ಸತ್ಪೂರುಷಃ ಸಾಂಪ್ರತಂ ಸಾಷ್ಟಾಂಗ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||2|| ಇಂಥ ಸ್ವರೂಪದವನೆಂದು ಹೇಲಲಿಕ್ಕೆ ಬಾರದಿರುವ ಯಾವ ಒಬ್ಬನನ್ನು ಪಾಮರರಿಂದ ಹಿಡಿದು ಪಂಡಿತರವರೆಗೂ ಲೆಕ್ಕವಿಲ್ಲದಷ್ಟು ಜನರು ಸೇರಿ, ಶ್ರೀಬ್ರಹ್ಮ ಚೈತನ್ಯನೆಂಬ ಒಂದು ನಾಮವನ್ನೇ ಪ್ರೇಮದಿಂದೂಡಗೂಡಿ ಗಾನಮಾಡುತ್ತಿರುವರೋ, ಯಾವಾತನು ಶ್ರೀ ಪುರುಷೋತ್ತಮನಾದ ಶ್ರೀಮಹಾವಿಷ್ಣುವೇ ಆದರೂ ಈಗ ಸತ್ಪುರುಷನೆಂಬ ಹೆಸರಿಂದ ಪ್ರಖ್ಯಾತಿಯನ್ನು ಹೊಂದಿರುವನೋ, ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್

ಕಾವ್ಯಸಾಹಿತ್ಯದಲ್ಲಿ ನಿರ್ವಿಘ್ನಕಾರಕ

Image
      ಇಡೀ ಭರತ ಖಂಡದಲ್ಲಿ ಆಚರಣೆಯಲ್ಲಿಟ್ಟುಕೊಂಡು ಭಕ್ತಿಯಿಂದ ಸೇವಾಕೈಂಕರ್ಯಾದಿಗಳನ್ನು ನಡೆಸಿಕೊಂಡು ಬರುತ್ತಿರುವ ಉತ್ಸವಾದಿಗಳಲ್ಲಿ ಶ್ರೀ ಗಣಪತಿಯ ಮಹೋತ್ಸವವು ಬಹು ಪ್ರಸಿದ್ಧಿಗೆ ಬಂದಿರುವ ವಿಚಾರ ಸಕಲರಿಗೂ ವೇದ್ಯವಾಗಿದೆ. ಈ ಜಗತ್ತಿನ ಯಾವ ಭಾಗದಲ್ಲೇ ಇರಲಿ ಸಕಲ ಭಾರತೀಯರೂ ಕಡ್ಡಾಯವಾಗಿ ಶ್ರೀಗಣಪತಿಯನ್ನು ಪೂಜಿಸುತ್ತಲಿರುತ್ತಾರೆ. ಭರತಖಂಡದ ಆಸ್ತೀಕರನ್ನು ಮುಖ್ಯವಾಗಿ ನಾಲ್ಕು ಗುಂಪನ್ನಾಗಿ ಮಾಡಬಹುದು : 1. ವಿಷ್ಣುವಿನ ಆರಾಧಕರು 2. ಶೈವಾರಾಧಕರು 3. ಶಕ್ತಿ ಆರಾಧಕರು 4. ಶೂನ್ಯೋಪಾಸಕರು ಇವರಲ್ಲಿ ಕೆಲವರು ವೇದಗಳನ್ನು ಒಪ್ಪುವವರು, ಕೆಲವರು ಒಪ್ಪರು. ಕೆಲವು ವೈಷ್ಣವರು ಶೈವಾರಾಧನೆಯನ್ನು ಮಾಡುವುದಿಲ್ಲ ಮತ್ತೆ ಕೆಲವು ಶೈವರು ವಿಷ್ಣುವನ್ನು ಪೂಜಿಸುವುದಿಲ್ಲ ಆದರೆ ಪ್ರತಿ ಒಬ್ಬರೂ ಯಾವ ಮತವನ್ನೇ ಅವಲಂಬಿಸಿರಲಿ ಇಂದಿನ ಕಥಾನಾಯಕನಾದ ನಮ್ಮ ಗಣಪತಿಯನ್ನು ಸ್ವಪ್ರೇರಣೆಯಿಂದ ಆರಾಧಿಸುತ್ತಾರೆ ಅಂದಮೇಲೆ ಈ ಗಣಪತಿಯ ಮಹಿಮೆಯನ್ನು ತಿಳಿಯಬೇಕಾದುದು ಆದ್ಯಕರ್ತವ್ಯವಾಗಿದೆ.     ಹಿಂದೆ ನೈಮಿಶಾರಣ್ಯದಲ್ಲಿ ಮಹರ್ಷಿಗಳು ಮಾಡುತ್ತಿದ್ದ ಸಾತ್ವಿಕ ಕರ್ಮಗಳಿಗೆ ಅಡ್ಡಿಬರಲು, ಸೂತರು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಲ್ಲಿ ಈ ಗಣಪತಿಯನ್ನು ಆರಾಧಿಸಿದರೆ ಎಲ್ಲಾ ಕಾರ್ಯಗಳೂ ಸುಗಮವಾಗುವುದೆಂದರು.     ಉತ್ತಮಕಾರ್ಯಾದಿಗಳಲ್ಲಿ ಸುಜನರಿಗೆ ಅನುಕೂಲನಾಗಿ ದುಷ್ಟರಿಗೆ ವಿಘ್ನಕಾರಿಯಾಗಿಯೂ ಇದ್ದು ತನ್ಮುಖಾಂತರ ಭಗವದಾರಾಧನ ಮಾಡುವವನೇ ನಮ್ಮ

ನಕ್ಷತ್ರ ಫಲಂ ಜ್ಯೋತಿಷ್ಯ

Image
ಪ್ರಿಯ ಭೂಷಣಸ್ಸು ರೂಪಃ | ಸುಭಗೋದಕ್ಷೋಶ್ವಿನೀಷು ಮತಿಮಾಂಶ್ಚ || ಕೃತ ನಿಶ್ಚಯ ಸತ್ಯಾರು | ಗ್ದಕ್ಷಸ್ಸುಖಿತಶ್ಚ ಭರಣೀಷು || ಅಶ್ವಿನೀ ನಕ್ಷತ್ರದಲ್ಲಿ ಹುಟ್ಟಿದವನು ಅಲಂಕಾರ ಪ್ರಿಯನೂ ಸುಂದರನೂ ಮನೋಹರನೂ ಸಮರ್ಥನೂ ಬುದ್ಧವಂತನೂ ಆಗುತ್ತಾನೆ. ಭರಣಿ ನಕ್ಷತ್ರದಲ್ಲಿ ಹುಟ್ಟಿದವನು ಧೃಡಸಂಕಲ್ಪವುಳ್ಳವನೂ ಸತ್ಯವಂತನೂ ರೋಗವರ್ಜಿತನೂ ದಕ್ಷನೂ ಚಾತುರ್ಯವುಳ್ಳವನೂ ಸುಖವಂತನೂ ಆಗುತ್ತಾನೆ. ಬಹುಭುಕ್ಪರದಾರರತ | ಸ್ತೇಜಸ್ವೀ ಕೃತ್ತಿಕಾಸು ವಿಖ್ಯಾತಃ || ರೋಹಿಣ್ಯಾಂ ಸತ್ಯಶುಚಿಃ ಪ್ರಿಯಂ ವದಸ್ಥಿರಮತಿಸ್ಸು ರೂಪಶ್ಚ || ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದವನು, ಹೆಚ್ಚು ಊಟ ಮಾಡುವವನೂ ಪರದಾರರತನೂ ತೇಜಸ್ವಿಯೂ ಪ್ರಸಿದ್ಧನೂ ಆಗುತ್ತಾನೆ. ರೋಹಿಣಿಯಲ್ಲಿ ಹುಟ್ಟಿದವನು ಸತ್ಯವಂತನೂ ಶುಚಿಯೂ ಪ್ರಿಯವಾದ ಮಾತುಗಳನ್ನಾಡುವವನೂ ದೃಡಮತಿಯೂ ಸುಂದರನೂ ಆಗುತ್ತಾನೆ. ಚಪಲ ಶ್ಚತುರೋಭೀರುಃ | ಪಟುರುತ್ಸಾಹೀ ಧನೀಮೃಗೇ ಭೋಗೀ || ಶಠಗರ್ವಿತೋ ಕೃತಘ್ನೋ | ಹಿಂಸ್ರಃ ಪಾಪಶ್ಚ ರೌದ್ರರ್ಕ್ಷೇ || ಮೃಗಶಿರ ನಕ್ಷತ್ರದಲ್ಲಿ ಹುಟ್ಟಿದವನು ಚಪಲನೂ ಚತುರನೂ ಭಯಶೀಲನೂ ಚಟುವಟಿಕೆಯುಳ್ಳವನೂ ಉತ್ಸಾಹವುಳ್ಳವನೂ ಧನವಂತನೂ ಭೋಗಿಯು ಆಗುತ್ತಾನೆ. ಆರ್ದ್ರ ನಕ್ಷತ್ರದಲ್ಲಿ ಹುಟ್ಟಿದವನು ಶರನೂ ಗರ್ವಿತನೂ ಮಾಡಿದ ಉಪಕಾರವನ್ನು ಸ್ಮರಿಸದವನೂ ಹಿಂಸಾಶೀಲನೂ ಪಾಪಿಯೂ ಆಗುತ್ತಾನೆ. ದಾಂತಃ ಸುಖೀ ಸುಶೀಲೋ | ದುರ್ಮೇಧಾ ರೋಗಭಾ ಕ್ಪಿಪಾಸುಶ್ಚ || ಅಲ್ಪೇನ ಚ ಸಂತುಷ್ಟಃ ಪುನರ್ವಸೌ | ಜಾಯತೇ ಮನುಜ