ಶ್ರೀಬ್ರಹ್ಮಚೈತನ್ಯಾಷ್ಟಕ (ಕುರ್ತಕೋಟಿಯ ಶ್ರೀಮಹಾಭಗವತರವರ ಅನುಗ್ರಹಿಸಿರುವ ಗ್ರಂಥದಿಂದ )
ಜನ್ಮಾದ್ಯಸ್ಯ ಯತಸ್ತಥಾಪಿ ಯ ಇಹ ಗ್ರಾಮೇ ತು ಗೋನ್ದಾವಲೌ
ಸಂಭೂತಃ ಖಲು ಭೂಸುರೀಯಸುಕುಲೇ ಲೋಕೋದ್ದಿಧೀರ್ಷಾ
ವಶಾತ್ || ಯಶ್ಚಾನನ್ದಮಯೋಪಿ ಮೂರ್ತಕೃಪಯಾ ದೇಹೀವ
ಮೂರ್ತ್ಯಾನಯಾ | ಸಾಷ್ಟಾಂಗಂ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||1||
ಈ ಪ್ರಪಂಚದ ಜನ್ಮಸ್ಥಿತಿಲಯಗಳು ಯಾವಾತನಿಂದಲೇ ಆಗುವವೋ, ಆದರೂ ಯಾವಾತನು ಲೋಕವನ್ನು ಉದ್ಧಾರಮಾಡಬೇಕೆಂಬ ಇಚ್ಛೆಯಿಂದ ಗೋಂದಾವಲಿಯೆಂಬ ಗ್ರಾಮದಲ್ಲಿ ಬ್ರಾಹ್ಮಣಕುಲದಲ್ಲಿ ಹುಟ್ಟಿದನೋ, ಯಾವಾತನು ಆನಂದ ಸ್ವರೂಪನೇ ಆದರೂ ದೇಹಿಗಳ ಮೇಲಿನ ಕೃಪೆಯಿಂದ ಈ ಶರೀರವನ್ನು ತೆಗೆದುಕೊಂಡು ದೇಹಿಯಂತೆ ತೋರಿಕೊಳ್ಳುತ್ತಿರುವನೋ ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಭಜಿಸುತ್ತೇನೆ.
ಗತ್ವಾನಿರ್ವಚನೀಯಮೇಕಮಪಿ ಯಂ ಶ್ರೀಬ್ರಹ್ಮಚೈತನ್ಯಸ-
ನ್ನಾಮಾಪಾರಮರಪಣ್ಡಿತಾನ್ತಮಮಿತೈಃ ಸಪ್ರೇಮ ಸಂಗೀಯತೇ |
ಯಶ್ಚಶ್ರೀ ಪುರುಷೋತ್ತಮೋಪಿ ವಿದಿತಃ ಸತ್ಪೂರುಷಃ ಸಾಂಪ್ರತಂ
ಸಾಷ್ಟಾಂಗ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||2||
ಇಂಥ ಸ್ವರೂಪದವನೆಂದು ಹೇಲಲಿಕ್ಕೆ ಬಾರದಿರುವ ಯಾವ ಒಬ್ಬನನ್ನು ಪಾಮರರಿಂದ ಹಿಡಿದು ಪಂಡಿತರವರೆಗೂ ಲೆಕ್ಕವಿಲ್ಲದಷ್ಟು ಜನರು ಸೇರಿ, ಶ್ರೀಬ್ರಹ್ಮ ಚೈತನ್ಯನೆಂಬ ಒಂದು ನಾಮವನ್ನೇ ಪ್ರೇಮದಿಂದೂಡಗೂಡಿ ಗಾನಮಾಡುತ್ತಿರುವರೋ, ಯಾವಾತನು ಶ್ರೀ ಪುರುಷೋತ್ತಮನಾದ ಶ್ರೀಮಹಾವಿಷ್ಣುವೇ ಆದರೂ ಈಗ ಸತ್ಪುರುಷನೆಂಬ ಹೆಸರಿಂದ ಪ್ರಖ್ಯಾತಿಯನ್ನು ಹೊಂದಿರುವನೋ, ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಭಜಿಸುವೆನು.
ಯೋಧೀನೇನ ಸಮಾಶ್ರಿತಃ ಕಿಲ ಗುಣಾತೀತೋ ಪಿ ಸತ್ತ್ವೇನ ಸಂ-
ಶುದ್ಧೇನೈವ ಗುಣೇನ ತತ್ಸಗುಣತಾ ಯಸ್ಯ ಪ್ರಸಿದ್ಧೇದೃಶೀ |
ನಿಷ್ಕರ್ಮಾಪಿ ಚ ಕರ್ಮಣೀವ ನಿರತೋ ಲೋಕೋಪಕಾರಾಯ ಯಃ
ಸಾಷ್ಟಾಂಗಂ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||3||
ಯಾವಾತನು ನಿಜವಾಗಿ ಮೂರು ಗುಣಗಳನ್ನೂ ಮಿರಿದವನಾದರೂ ತನ್ನ ವಶದಲ್ಲಿರುವ ವಿಶುದ್ಧ ಸತ್ವಗುಣದಿಂದ ಕೂಡಿ ಸಗುಣನೆಂದು ಪ್ರಸಿದ್ಧನಾಗಿರುವನೋ, ಯಾವಾತನು ನಿಜವಾಗಿ ಯಾವ ಕರ್ಮವನ್ನೂ ಮಾಡದವನಾದರೂ ಲೋಕೋಪಕಾರಕ್ಕಾಗಿ ಕರ್ಮದಲ್ಲಿ ನಿರತನಾದಂತೆ ಇರುವನೋ, ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗನಮಸ್ಕಾರವನ್ನು ಮಾಡಿ, ಆತನನ್ನೇ ಭಜಿಸುತ್ತೇನೆ.
ಜ್ಞಾನಕ್ಷೀರಸಮುದ್ರಮನ್ತರಹಿತಂ ದಿವ್ಯಂ ಚ ಯಃ ಶೈಶವೇ
ನಿಶ್ಯೇಷಂ ಚುಲಕೀಚಕಾರ ಸಹಜಂ ಜ್ಞಾನಾತ್ಮಕೋಪಿ ಸ್ವಯಮ್
ಮುಕ್ತಿಂ ಚ ಸ್ವವಶೀಚಕಾರ ಸುಭಗಾಂ ಯೋ ನಿತ್ಯಮುಕ್ತೋಪಿ ಸನ್
ಸಾಷ್ಟಾಂಗಂ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೇ ||4||
ಯಾವಾತನು ಸ್ವಭಾವದಿಂದ ಜ್ಞಾನಸ್ವರೂಪನೇ ಆಗಿದ್ದರೂ ಬಾಲ್ಯದಲ್ಲಿಯೇ ಜ್ಞಾನದ ಹಾಲ್ಗಡಲನ್ನೆಲ್ಲ ಒಂದೇ ಗುಟುಕಿಗೆ ಕುಡಿದುಬಿಟ್ಟನೋ, ಯಾವಾತನು ನಿತ್ಯಮುಕ್ತನೇ ಆಗಿದ್ದರೂ, ಆ ಜ್ಞಾನದಿಂದ ಮುಕ್ತಿಯನ್ನು ತನ್ನ ವಶಪಡಿಸಿಕೊಂಡನೋ ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್ಕಾರಮಾಡಿ, ಆತನನ್ನೇ ಭಜಿಸುತ್ತೇನೆ.
ಶ್ರೀರಾಮೇತಿ ಜಪಃ ಶ್ರುತಃ ಕ್ವಚಿದಹೋ ಯಸ್ಯ ತ್ರಿಮಾಸಾತ್ಮನಃ
ಕಸ್ಮೀಶ್ಚಿತ್ಸಮಯೇ ಚ ಯೇನ ವಿಹಿತಂ ಕಾಶ್ಯಾಂ ಶವೋಜ್ಜೀವನಂ |
ಯಸ್ಯೇದೃಗ್ಬಿರಮಾನುಷತ್ವಮಸಕೃತ್ಕೃತ್ಯೈರಭಿದ್ಯೋತಿತಂ
ಸಾಷ್ಟಾಂಗಂ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೇ ||5||
ಯಾವಾತನು ಇನ್ನೂ ಮೂರು ತಿಂಗಳ ಕೂಸಾಗಿರುವಾಗಲೇ ಶ್ರೀರಾಮ ಶ್ರೀರಾಮ ಎಂಬ ಜಪವನ್ನು ಮಾಡುತ್ತಿದ್ದದ್ದು ಕೇಳಬಂದಿತೋ, ಒಂದಾನೊಂದು ಕಾಲದಲ್ಲಿ ಯಾವಾತನು ಕಾಶಿಯಲ್ಲಿ ಶವಕ್ಕೆ ಕೂಡ ಜೀವವನ್ನು ಕೊಟ್ಟನೋ, ಯಾವಾತನು ಇಂಥ ಲೀಲೇಗಳಿಂದ ತನ್ನ ಅಮಾನುಷತ್ವವನ್ನು ಬಾರಬಾರಿಗೂ ತೋರ್ಪಡಿಸಿದನೋ, ಆ ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಆತನನ್ನೇ ಭಜಿಸುತ್ತೇನೆ.
ಶ್ರೀಸೀತಾರಮಣಾಲಯಾ ಅಭಿನವಾ ಗ್ರಾಮೇ ಪುರೇ ಪತ್ತನೇ
ಸತ್ ಕ್ಷೇತ್ರೇಪಿ ಚ ತತ್ರ ಕತಿ ವಾ ಯೇನ ಪ್ರತಿಷ್ಠಾಪಿತಾಃ |
ಏವಂ ಯೇನ ಚ ರಾಮದಾಸ್ಯಮಯನಂ ಮುಕ್ತೇರ್ವಿಶಾಲೀಕೃತಂ
ಸಾಷ್ಟಾಂಗಂ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೇ ||6||
ಯಾವಾತನು ಹಳ್ಳಿಗಳಲ್ಲಿಯೂ ಪಟ್ಟಣಗಳಲ್ಲಿಯೂ ನಗರಗಳಲ್ಲಿಯೂ ಎಷ್ಟೋ ಹೊಸ ರಾಮ ಮಂದಿರಗಳನ್ನು ಸ್ಥಾಪನೆಮಾಡಿದನೋ ಮತ್ತು ಯಾವಾತನು ಈ ಮೂಲಕ ಮುಕ್ತಿಗೆ ಮಾರ್ಗವಾದ ರಾಮಭಕ್ತಿಯನ್ನು ವಿಸ್ತರಿಸಿದನೋ, ಆ ಸದ್ಗುರುಮಹಾರಾಜನಿಗೆ ನಮಸ್ಕಾರಮಾಡಿ ಆತನನ್ನೇ ಭಜಿಸುವೆನು.
ವೇದಾವೇದ್ಯಮಪಿ ಪ್ರಭೋಧಯತಿ ನನ್ವರ್ಥಂ ತು ಯದ್ಭೋಧನಂ
ಬ್ರಹ್ಮತ್ವೇಪಿ ಚ ಯಃ ಪ್ರಮಾಣಮಚಲಂ ಸಾಕ್ಷಾತ್ಪರಬ್ರಹ್ಮಣಃ
ಯಾಚ್ಛಬ್ದಾಬ್ಧಿಜಮೇವ ನೇತರದತಸ್ತ್ವನ್ವರ್ಥನಾಮಾಮೃತಂ
ಸಾಷ್ಟಾಂಗ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||7||
ಯಾವಾತನ ಬೋಧನೆಯು ವೇದಕ್ಕೂ ನಿಲುಕದ ವಿಷಯವನ್ನು ಕೂಡ ಚೆನ್ನಾಗಿ ತಿಳಿಸಿಕೊಡುವದೋ, ಸಾಕ್ಷಾತ್ ಪರಬ್ರಹ್ಮವು ಬ್ರಹ್ಮವೆಂಬುದಕ್ಕೂ ಯಾವಾತನೇ ನಿಶ್ಚಲವಾದ ಪ್ರಮಾಣವಾಗಿರುವನೋ, ಯಾವಾತನ ವಚನಸಾಗರದಿಂದ ಹುಟ್ಟಿದ್ದೇ ಅನ್ವರ್ಥವಾಗಿಯೂ ನಾಮಾಮೃತವಾಗಿರುವಲ್ಲದೆ ಬೇರೊಂದಲ್ಲವೋ, ಆ ಸದ್ಗುರುಮಹಾರಾಜನಿಗೆ ನಮಸ್ಕರಿಸಿ ಆತನನ್ನೇ ಭಜಿಸುತ್ತೇನೆ.
ರೂಪಂ ಕರ್ಮ ಚ ಭಾಷಣಾದಿ ಸಕಲಂ ನೂನಂ ಯದೀಯಂ ಮಹೋ
ದಾರಂ ಸನ್ತಚನಿಃಸ್ರವತ್ಸುಮಧುರಾಕ್ಷಾದಿಧಿಕ್ಕೃದ್ರಸಮ್ |
ಯಸ್ಯ ಶ್ರೀಚರಣಾಬ್ಜಸಾರಕಣಿಕಾ ಪೃಥ್ವೀಂ ಚ ನಿಃಸಾರಯೇತ್
ಸಾಷ್ಟಾಂಗಂ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೇ ||8||
ಯಾವಾತನ ರೂಪವೂ ಕರ್ಮವೂ ನಡೆನುಡಿಗಳೂ ಎಲ್ಲವೂ ಪರಮೌದಾರ್ಯದಿಂದ ಕೂಡಿರುವದೋ, ದ್ರಾಕ್ಷಿಯೇ ಮುಂತಾದ ಬಲು ಸಿಹಿಯಾದ ವಸ್ತುಗಳ ರಸವನ್ನು ಕಡೆಗಣಿಸುವ ಪ್ರೇಮರಸವನ್ನು ಸೂಸುತ್ತಲಿರುವದೋ, ಯಾವಾತನ ಶ್ರೀಚರಣ ಕಮಲದ ಒಂದು ತೊಟ್ಟು ಕೂಡ ಇಡಿಯ ಪೃಥ್ವಿಯನ್ನೇ ನಿಸ್ಸಾರವೆನಿಸುವದೋ ಆ ಶ್ರೀಗುರುಮಹಾರಾಜನಿಗೆ ಸಾಷ್ಟಾಂಗನಮಸ್ಕಾರವನ್ನು ಮಾಡಿ ಆತನನ್ನೇ ಭಜಿಸುತ್ತೇನೆ.
Comments
Post a Comment