Posts

Showing posts with the label ಲಲಿತಾ ತ್ರಿಶತೀ

ಲಲಿತಾ ತ್ರಿಶತೀ (ಏಕಾರಾದಿನಾಮ) - 4. ಓಂ ಏತತ್ತದಿತ್ಯನಿರ್ದೇಶ್ಯಾಯೈ ನಮಃ

Image
ವರ್ತಮಾನ ಕಾಲದಲ್ಲಿ ಇಯತ್ತೆಯಿಂದ ಪರಿಚ್ಛೆನ್ನ ವಸ್ತುವು ಏತತ್ ಎಂದೂ ಅನಿಶ್ಚಿತವಾದ ಪರೋಕ್ಷ ವಸ್ತುವು ತತ್ ಎಂದೂ ಕರೆಯಲ್ಪಡುವುವು. "ಇತಿ" ಶಬ್ದವು ಈ ರೀತಿಯಾಗಿ ಎಂಬ ಅರ್ಥಕ್ಕೆ ಬೋಧಕವಾಗಿದೆ. ಇಯತ್ತಾ ಪರಿಚ್ಛೇದ ರೂಪದಿಂದಾಗಲಿ ಅನಿಶ್ಚಿತ ಪರೋಕ್ಷರೂಪದಿಂದಾಗಲಿ ದೇವಿಯು ನಿರ್ದೇಶಿಸಲಿ ಅಶಕ್ಯಳಾಗಿರುವಳು. ಲೋಕದಲ್ಲಿ ವಿಶೇಷ ಧರ್ಮಸಹಿತವಾದ ಪದಾರ್ಥವು ಪರೋಕ್ಷ ಅಥವಾ ಪ್ರತ್ಯಕ್ಷ ಎಂಬ ಬಗೆಯಿಂದ ನಿರ್ದೇಶಿಸಲು ಅರ್ಹವಾಗಿದೆ. ಒಂದ ಶಬ್ದವು ಒಂದು ವ್ಯಕ್ತಿಯನ್ನು ಬೋಧಿಸಲು ಪ್ರವರ್ತಿಸಬೇಕಾದರೆ ವ್ಯಕ್ತಿಯಲ್ಲಿ ಜಾತಿ, ಗುಣ, ಕ್ರಿಯಾ ಸಂಬಂಧಗಳ ಪೈಕಿ ಯಾವುದಾದರೊಮದು ಇರುವುದು ಅವಶ್ಯಕವು. ಪರಬ್ರಹ್ಮ ವಸ್ತುವು "ಅಶಬ್ಧಮಸ್ಪರ್ಶಮ್ರೂಪಮವ್ಯಯಂ" ನಿರ್ಗುಣಂ ನಿಷ್ಕಲಂ ಎಂಬ ಶ್ರುತಿಯಿಂದ ಜಾತ್ಯಾದಿ ಧರ್ಮರಹಿತವಾಗಿ ಪ್ರತಿಪಾದಿಸಲ್ಪಟ್ಟಿದೆ. ಅಂತಹ ವಸ್ತುವು ಯಾವ ಸಾಧನದಿಂದ ಯಾವ ವಚನದಿಂದ ನಿರ್ದೇಶಿಸಲು ಅರ್ಹವಾದೀತು? ಶಬ್ದವು ನಿರ್ದೇಶಿಸಲು ಅನರ್ಹವೆಂಬ ಅರ್ಥವನ್ನು "ಯದ್ವಾಚಾನಭ್ಯುದಿತಂ" ಎಂಬ ಶ್ರುತಿಯು ಬೋಧಿಸುತ್ತದೆ. ಆದ್ದರಿಂದ ಏತತ್ ತತ್ ಎಂಬುದಾಗಿ ನಿರ್ದೇಶಿಸಲು ಅನರ್ಹಗಳು ಅಥವಾ ಪ್ರತ್ಯಕ್ಷಾದಿ ಪ್ರಮಾಣಕ್ಕೆ ಗೋಚರವಾಗಿ ಉತ್ತರ ಕಾಲದಲ್ಲಿ ಬರುವ ಕಾರ್ಯವು ಏತತ್ ಎಂದೂ ಪರೋಕ್ಷವಾಗಿ ಪೂರ್ವಕಾಲದಲ್ಲಿರುವ ವ್ಯವಹಿತ ವಸ್ತುವು ತತ್ ಎಂದೂ ಹೇಳಲ್ಪಡುವುದು. ಇತಿ ಶಬ್ದವನ್ನು ಏತತ್ + ತತ್ ಎಂಬ ಎರಡು ಶಬ್ದಗ...

ಲಲಿತಾ ತ್ರಿಶತೀ ( ಏಕಾರಾದಿನಾಮ ) - 3. ಓಂ ಏಕಾನೇಕಾಕ್ಷರಾಕೃತಯೇ ನಮಃ

ಏಕ, ಮತ್ತು ಅನೇಕವಾದ ಅಕ್ಷರಗಳು ಅಜ್ಞಾನವಿಶೇಷಗಳು ಈಶ್ವರ ರೂಪವಾದ ಚೈತನ್ಯ ಪ್ರತಿ ಬಿಂಬಕ್ಕೆ ಉಪಾಧಿಯಾಗಿರುವ ಶುದ್ಧ ಸತ್ತ್ವ ಪ್ರಧಾನವಾದ ಅಜ್ಞಾನವು ಏಕಾಕ್ಷರವು, ಜೀವ ಪ್ರತಿಬಿಂಬೋಪಾಧಿ ರೂಪವಾಗಿರುವ ಮಲಿನ ಸತ್ತ್ವ ಪ್ರಧಾನವಾದ ಅಜ್ಞಾನಗಳು ಅನೇಕಾಕ್ಷ್ರಗಳು. "ಮಾಯಾ ಚಾವಿದ್ಯಾ ಚ ಸ್ವಯಮೇವ ಭವತಿ" ಎಂದು ಶ್ರುತಿಯಿಂದ ಜೀವೇಶ್ವ್ರ ಪ್ರತಿಬಿಂಬೋಪಾಧಿಗಳ ಭೇದವು ವ್ಯಕ್ತವಾಗುವುದು. ಇವು ಮಾಯಾ ಶಬ್ದದಿಂದ ಕರೆಯಲ್ಪಡುವುವೂ ಪ್ರಕೃತಿ ರೂಪಗಳೂ ಆಗಿವೆ. ಮಾಯಾಂತು ಪ್ರಕೃತಿಂ ಎಂಬ ಶ್ರುತಿಯು ಈ ಅರ್ಥದಲ್ಲಿ ಪ್ರಮಾಣವಾಗಿರುವುದು. ಆ ಅಕ್ಷರವೆಂಬ ಅಜ್ಞಾನಗಳಲ್ಲಿ ಚೈತನ್ಯವು ಪ್ರತಿಬಿಂಬ ಅಥವಾ ಅವಚ್ಛಿನ್ನ ರೂಪವನ್ನು ಹೊಂದುವುದು. ಗಡಿಗೆಯಲ್ಲಿರುವ ನೀರಿನಲ್ಲಿ ಆಕಾಶವು ಪ್ರತಿ ಬಿಂಬರೂಪ ಅಥವಾ ಅವಚ್ಛಿನ್ನರೂಪಗಳಿಂದ ಇರುವುದು. ಅದರಂತೆ ಇರುವ ಚೈತನ್ಯವುಳ್ಳವಳು ಅಥವಾ ಪ್ರಣವ ಮುಂತಾದುದು ಏಕಾಕ್ಷರವು. ಅಕಾರ ಮೊದಲುಗೊಂಡು ಕ್ಷಕಾರ ಪರ್ಯಂತವಿರುವ ವರ್ಣಗಳು ಅನೇಕಾಕ್ಷರಗಳು ಅಂತಹ ಎಲ್ಲ ವರ್ಣಗಳು ಸ್ವರೂಪವಾಗಿ ಉಳ್ಳವಳೂ "ಅಕಾರಾದಿ ಕ್ಷಕಾರಾಂತಾ ಮಾತೃಕೇತ್ಯಭಿಧೀಯತೇ" ಎಂಬ ವಚನದಿಂದ ವರ್ಣಗಳೆಲ್ಲವೂ ಮಾತೃಕಾ ರೂಪವಾದ್ದರಿಂದ ಮಾತೃಕಾಕಾರವುಳ್ಳವಳೂ ಎಂದು ಅರ್ಥವು ಅಥವಾ "ಏ" + "ಕ" ಎಂಬ ಎರಡು ವರ್ಣಗಳು, ಮಿಕ್ಕ ಅನೇಕಾಕ್ಷರಗಳು ಸೇರಿ ಹದಿನೈದು ವರ್ಣಸ್ವರೂಪವಾದ ಮಂತ್ರದ ಆಕೃತಿಯುಳ್ಳವಳು. ಅಥವಾ ಏಕಭೂತವಾಗಿ ಅ...

ಲಲಿತಾ ತ್ರಿಶತೀ - 18 ಓಂ ಕರ್ಮಾದಿಸಾಕ್ಷಿಣ್ಯೈ ನಮಃ

Image
ಕರ್ಮವು ಆದಿಯಾಗಿರುವ ಉಪಾಸನಾ, ಯೋಗ, ಶ್ರವಣ, ಮನನ, ನಿದಿಧ್ಯಾಸನ ಮುಂತಾದವುಗಳಿಗೆ ಸಾಕ್ಷಿ ರೂಪಳು. ಈ ಅರ್ಥದಲ್ಲಿ "ಸಾಕ್ಷೀ ಚೇತಾ" ಎಂಬ ಶ್ರುತಿಯು ಪ್ರಮಾಣವು ಅಥವಾ ಸೃಷ್ಟಿ ಮಾಡುವ ಜಗತ್ತಿಗೆ ಕಾರಣವಾದ ಜೀವಾತ್ಮನಲ್ಲಿರುವ ಕರ್ಮಾದಿಗಳು ಅಕರ್ಮಾತ್ಮ ದರ್ಶನಕ್ಕೆ ಸಾಧನಗಳಾದ್ದರಿಂದ ಸಾಕ್ಷಿಗಳುಳ್ಳವಳು. ಕರ್ಮ ಆದಿರ್ಯೇಷಾಂತಾನಿ, ತೇಷಾಂ ಸಾಕ್ಷಿಣೀ, ಕರ್ಮಾದಯಃ ಸಾಕ್ಷಿ ಭೂತಾಃ ಯಸ್ಯಾಸ್ಸಾ ಎಂದು ವಿಗ್ರಹವು.

ಲಲಿತಾ ತ್ರಿಶತೀ - 17 ಓಂ ಕಮ್ರವಿಗ್ರಹಾಯೈ ನಮಃ

Image
ಗಾಂಭೀರ್ಯ, ಧೈರ್ಯ, ಮಾಧುರ್ಯ, ಮುಂತಾದ ಬಹು ಗುಣಗಳಿಂದ ಕೂಡಿ ಅತ್ಯಂತ ಮನೋಹರವಾದ ಮೂರ್ತಿಯುಳ್ಳವಳು. "ಆನಂದ ರೂಪಮಮೃತಂ ಯದ್ವಿಭಾತಿ" ಎಂಬ ಶ್ರುತಿಯು ಬ್ರಹ್ಮ ಸ್ವರೂಪವನ್ನು ಆನಂದ ರೂಪವೆಂದು ಭೋಧಿಸಿ ಅತಿ ಮನೋಹರತ್ವವನ್ನು ಸೂಚಿಸುತ್ತದೆ. ಆದ್ದರಿಂದ ಆನಂದ ರೂಪತ್ವದಿಂದ ಅತಿ ಮನೋಹರವಾದ ಮೂರ್ತಿಯುಳ್ಳವಳು. ಲಲಿತಾ ರೂಪಳು ಎಂದು ತಾತ್ಪರ್ಯವು, ಕಮ್ರಃ ವಿಗ್ರಹಃ ಯಸ್ಯಾಃ ಎಂದು ವಿಗ್ರಹವು (ಮುಂದುವರೆಯುವುದು...)

ಲಲಿತಾ ತ್ರಿಶತೀ -16 ಓಂ ಕಂಜಲೋಚನಾಯೈ ನಮಃ

Image

ಲಲಿತಾ ತ್ರಿಶತೀ - 15 ಓಂ ಕಲಿದೋಷಹರಾಯೈ ನಮಃ

Image

ಲಲಿತಾ ತ್ರಿಶತೀ - 14 ಓಂ ಕರ್ಪೂರವೀಟೀಸೌರಭ್ಯಕಲ್ಲೋಲಿತ ಕಕುಪ್ತಟಾಯೈ ನಮಃ

Image

ಲಲಿತಾ ತ್ರಿಶತೀ -12 ಓಂ ಕಂದರ್ಪವಿದ್ಯಾಯೈ ನಮಃ

    ಕಂದರ್ಪನಲ್ಲಿರುವ ಪ್ರತ್ಯಗಾತ್ಮ ಪರಮಾತ್ಮರ ಐಕ್ಯಜ್ಞಾನ ಸ್ವರೂಪಳು ಅಥವಾ ತತ್ತ್ವಜ್ಞಾನವನ್ನು ಕೊಡುವ ಕಾಮದೇವನಿಂದ ಉಪಾಸನೆ ಮಾಡಲ್ಪಟ್ಟ ಮೂಲಮಂತ್ರ ವರ್ಣ ಸಮುದಾಯವು ವಿದ್ಯಾ ಶಬ್ದದಿಂದ ಕರೆಯಲ್ಪಡುವುದು. ಆ ವಿದ್ಯೆಗೆ ದೇವಿಯು ವಾಚ್ಯಾರ್ಥ ಸ್ವರೂಫಳು. ಉಪನಿಷತ್ ಶಬ್ದಕ್ಕೆ ಬ್ರಹ್ಮ ವಿದ್ಯೆಯು ಮುಖ್ಯಾರ್ಥವಾಗಿದ್ದರೂ ಬ್ರಹ್ಮ ವಿದ್ಯಾ ಸಾಧನವನ್ನು ವಿದ್ಯಾ ಎಂದು ಕರೆಯುವುದು ಸಮಂಜಸವಾಗಿರುವುದು ಕಂದರ್ಪಸ್ಯ + ವಿದ್ಯಾ ಎಂದು ವಿಗ್ರಹವು.

ಲಲಿತಾ ತ್ರಿಶತೀ -11 ಓಂ ಕದಂಬ ಕುಸುಮಪ್ರಿಯಾಯೈ ನಮಃ

    ಕದಂಬವೆಂಬ ಪುಷ್ಪಗಳಲ್ಲಿ ಪ್ರೀತಿಯುಳ್ಳವಳು. ಇಲ್ಲಿ ಅಚೇತನವಾದ ಕದಂಬ ಕುಸುಮಗಳಲ್ಲಿ ಪ್ರೀತಿಯ ಉದಯವು ಇಲ್ಲದ್ದರಿಂದ ಕುಸುಮಗಳ ಪ್ರೀತಿಗೆ ವಿಷಯಳೆಂದು ಪ್ರಿಯ ಶಬ್ದದ ಯಥಾಶ್ರುತಾರ್ಥವನ್ನು ಪರಿ ಗ್ರಹಿಸುವುದು ಉಚಿತವಲ್ಲ. ಕದಂಬಾನಿ ಚ ತಾನಿ + ಕುಸುಮಾನಿ ಚ ತೇಷು ಪ್ರಿಯಾ ಎಂದು ವಿಗ್ರಹವು. (ಮುಂದುವರೆಯುವುದು...)

ಲಲಿತಾ ತ್ರಿಶತೀ - 9. ಓಂ ಕರುಣಾಮೃತಸಾಗರಾಯೈ ನಮಃ

    ಕರುಣಾಮೃತ ಸಾಗರಾ ಕೃಪೆಯಿಂದ ಭಕ್ತರಿಗೆ ದೊರಕುವ ಮೋಕ್ಷವೆಂಬ ಅಮೃತಕ್ಕೆ ಸಮುದ್ರ ರೂಪಳು, ಅಮೃತ ಸಮುದ್ರದಿಂದ ಮೇಘವು ಅಮೃತವನ್ನು ಪಾನಮಾಡಿ ಸಕಾಲದಲ್ಲಿ ವೃಷ್ಟಿಯನ್ನು ಕೊಟ್ಟು ಜಗತ್ತನ್ನು ಸಂಜೀವನ ಗೊಳಿಸುವುದು. ಹೀಗೆ ಮೇಘದ ಮೂಲಕ ಜಗತ್ತಿನ ಸಂಜೀವನಕ್ಕೆ ಅಮೃತ ಸಮುದ್ರವು ಕಾರಣವಾಗುವುದು ಅದರಂತೆ ದೇವಿಯು "ಬ್ರಹ್ಮವಿದಾಪ್ನೋತಿ ಪರಮ್" "ಬ್ರಹ್ಮ ವೇದ ಬ್ರಹ್ಮೈವ ಭವತಿ" ಎಂಬ ಶ್ರುತ್ಯನುಸಾರವಾಗಿ ಅಮೃತ ಬ್ರಹ್ಮ ಸ್ವರೂಪಳಾಗಿರುವಳು ಮತ್ತು ಆಯಾಯ ಅಧಿಕಾರಿಗಳು ಶಾಸ್ತ್ರ ಪ್ರಮಾಣದಿಂದ ಮಾಡುವ ಕರ್ಮ-ಉಪಾಸನೆಗಳಿಂದ ಪ್ರಸನ್ನರಾದ ಆಯಾಯ ದೇವತೆಗಳು ಸ್ವಭಕ್ತರಿಗೆ ಕೊಡುವ ಫಲಗಳೆಂಬ ಅಮೃತಕ್ಕೆ ಸಾಗರ ಸ್ವರೂಪಳಾಗಿರುವಳು ಎಂದು ಸಾಗರದ ಉಪಮೆಯಿಂದ ತಿಳಿಯುವುದು. "ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್" ಎಂಬ ಭಗವದುಕ್ತಿಯಿಂದ ಸಮಸ್ತ ದೇವತಾರಾಧನದಿಂದ ಹೊಂದುವ ಫಲ ಪ್ರಾಪ್ತಿಯು ಭಗವದಾಯತ್ತವಾದುದೆಂದು ತಿಳಿಯುವುದು. ಕರುಣೆಯೆಂದರೆ ಭಕ್ತರ ವಿಷಯದಲ್ಲಿ ರಕ್ಷಣೀಯರೆಂಬ ಬುದ್ಧಿಯು ಇದು ಅಮೃತದಂತೆ ಸರ್ವ ಸಂಜೀವನ್ನುಂಟುಮಾಡುವುದು. ಜಲಕ್ಕೆಲ್ಲ ಸಾಗರವೇ ಗತಿಯಾಗಿರುವಂತೆ ಇಂತಹ ಕರುಣಾಮೃತಕ್ಕೆ ದೇವಿಯು ಒಬ್ಬಳೇ ಆಶ್ರಯವು ಆದ್ದರಿಂದ ಸಾಗರ ಸ್ವರೂಪಳು ಅಥವಾ ತನ್ನ ಕೃಪಾ ವಿಶೇಷದಿಂದ ಅಮೃತರಾಗಿರುವಂತೆ ಶಾಶ್ವತ ಬ್ರಹ್ಮಲೋಕವನ್ನು ಹೊಂದಿ ಕೀರ್ತಿಯನ್ನು ಗಳಿಸಿರುವ ಸಗರ ರಾಜಪುತ್ರರುಳ್ಳವಳು ಅಥವಾ ಕರುಣೆಯಿಂದ ಅ...

ಲಲಿತಾ ತ್ರಿಶತೀ - 8. ಓಂ ಕಲ್ಮಷಘ್ನ್ಯೈ ನಮಃ

    "ಕಲ್ಮಷಾಣಿ ಹಂತಿ" ಪಾಪಗಳನ್ನು ಕಳೆಯುವಳು, ನಾನು ಸಮಸ್ತ ಪಾನಗಳಿಂದ ನಿನ್ನನ್ನು ಬಿಡಿಸುತ್ತೇನೆಂದು "ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ" ಎಂಬ ಭಗವದ್ಗೀತಾ ವಚನವು ಇರುವುದು ಇದರಿಂದ ದೇವಿಯಲ್ಲಿ ಪಾಪ ಮೋಚನ ಶಕ್ತಿಯು ಕಂಡು ಬರುವುದು ಅಥವಾ ವೇದಾಂತ ಮಹಾ ವಾಕ್ಯದಿಂದ ಉಂಟಾದ ತತ್ತ್ವಜ್ಞಾನವೆಂಬ ಬ್ರಹ್ಮವಿದ್ಯೆಯು "ನ ಸ ಪಾಪಂ ಶ್ಲೋಕಂ ಶೃಣೋತಿ ಜ್ಞಾನಾಗ್ನಿಃ ಸರ್ವ ಕರ್ಮಾಣಿ ಭಸ್ಮ ಸಾತ್ಕುರುತೇಂರ್ಜುನ" ಎಂಬ ಶ್ರುತಿಸ್ಮೃತಿಗಳಲ್ಲಿ ಹೇಳಿದಂತೆ ಪಾಪಗಳನ್ನು ಭಸ್ಮಮಾಡುವುದು. ಆದ್ದರಿಂದ ವಿದ್ಯಾಸ್ವರೂಪಿಣೀಯಾದ ದೇವಿಯು ಕಲ್ಮಷಘ್ನಿಯಾಗಿರುವಳು. (ಮುಂದುವರೆಯುವುದು...)

ಲಲಿತಾ ತ್ರಿಶತೀ - 7. ಓಂ ಕಮಲಾಕ್ಷ್ಯೈ ನಮಃ

    ಕಮಲಾಕ್ಷೀ ಶಬ್ದವು "ಕಮಲೆ ಇವ ಅಕ್ಷಿಣೇ ಯಸ್ಯಾಃ ಸಾ" ಎಂದು ವಿಗ್ರಹದಿಂದ ಕಮಲಗಳಂತೆ ನೇತ್ರವುಳ್ಳವಳು ಎಂಬ ಅರ್ಥವನ್ನು ಬೋಧಿಸುವುದು. "ಕಮಲಾಯಾಃ ಅಕ್ಷಿ ಯಸ್ಯಾಂ ಸಾ" ಎಂಬ ಸಮಾಸದಿಂದ ಲಕ್ಷ್ಮೀದೇವಿಯ ಜ್ಞಾನಕ್ಕೆ ಗೋಚರಳು ಎಂಬ ಅರ್ಥವನ್ನು ಸೂಚಿಸುತ್ತಿದೆ. ಇಲ್ಲಿ ಅಕ್ಷಿ ಎಂಬ ಶಬ್ದಕ್ಕೆ ಕಣ್ಣಿಂದ ಹುಟ್ಟುವ ಜ್ಞಾನವೆಂಬ ಅರ್ಥವನ್ನು ಗ್ರಹಿಸಬೇಕು. ಕಮಲಾಯಾ, ಅಕ್ಷಿಣೀ, ಯಸ್ಯಾಃ ಎಂಬ ಸಮಾಸದಿಂದ ಐಹಿಕಾಮುಷ್ಮಿಕ ಭೋಗ ಸಂಪತ್ತಿಗೆ ಕಾರಣವಾದ ದರ್ಶನವುಳ್ಳವಳು ಎಂಬ ಅರ್ಥವನ್ನು ಬೋಧಿಸುವುದು. ದರ್ಶನಮಾತ್ರದಿಂದ ಮಹದೈಶ್ವರ್ಯ ಪ್ರಾಪ್ತಿಯಾಗುವುದೆಂದು ಮೂರನೇ ಅರ್ಥದ ಸಾರವು.  (ಮುಂದುವರೆಯುವುದು...)

ಲಲಿತಾ ತ್ರಿಶತೀ - 6. ಓಂ ಕಲಾವತ್ಯೈ ನಮಃ

    ದೇವಿಯ ಭಕ್ತರ ಧ್ಯಾನಕ್ಕೆ ಗೋಚರವಾಗುವ ದೇವಿಯ ಮೂರ್ತಿಯಲ್ಲಿ ಶಿರಸ್ಸು-ಪಾಣಿ ಮುಂತಾದ ಅವಯವಗಳು, ವಿದ್ಯಾರೂಪವಾದ ಚತುಃ ಷಷ್ಟಿ ಕಲೆಗಳು ಅಥವಾ ಚಂದ್ರಕಲೆ ಇವುಗಳಿರುವುದರಿಂದ ದೇವಿಯು ಕಲಾವತಿ ಎನಿಸಿರುವಳು. (ಮುಂದುವರೆಯುವುದು...)

ಲಲಿತಾ ತ್ರಿಶತೀ - 5. ಓಂ ಕಮನೀಯಾಯೈ ನಮಃ

    "ಕೋ ಹ್ಯೇವಾನ್ಯಾತ್ ಕಃ ಪ್ರಾಣ್ಯಾತ್, ಯದೇಷ ಆಕಾಶ ಆನಂದೋ ನ ಸ್ಯಾತ್" ಎಂಬ ಶ್ರುತಿಯು ಆನಂದ ರೂಪವಾದ ವಸ್ತುವು ಜಗತ್ತಿಗೆ ಪ್ರತಿಷ್ಠಾ ರೂಪವಾಗಿಲ್ಲದಿದ್ದರೆ ಯಾವ ಪ್ರಾಣಿಯು ಚಲನ ಮತ್ತು ನಿಶ್ವಾಸಾದಿ ಕಾರ್ಯವನ್ನು ಆಚರಿಸಬಲ್ಲದು? ಎಂದು ಬೋಧಿಸುತ್ತ ಬ್ರಹ್ಮವನ್ನು ಪರಮಾನಂದ ರೂಪವೆಂದು ತಿಳಿಸಿದೆ. ಆದ್ದರಿಂದ ದೇವಿಯು ಪರಮ ಪ್ರೇಮಾಸ್ಪದಳು ಅಥವಾ ಮನೋಹರವಾದ ಸುಖವನ್ನು ಎಲ್ಲರೂ ಕೋರುತ್ತಿರುವಂತೆ ಮಾಯಾ ಪಾಶಬದ್ಧರಾದ ಜನಗಳು ಸುಖಪ್ರಾಪ್ತಿಗೋಸ್ಕರ ಸ್ವೇಷ್ಟ ದೇವತೆಯ ಪೂಜಾದಿಗಳನ್ನು ಭಕ್ತಿಯಿಂದ ಕೋರುವರು. ಅವರಿಗೆ ಇಷ್ಟ ಫಲವನ್ನು ಕೊಡುವ ದೇವತೆಯಾದ್ದರಿಂದ ಮನೋಹರಳು ಅಥವಾ ತತ್ತ್ವಜ್ಞಾನಿಗಳ ದೃಷ್ಟಿಗೆ ಪರಬ್ರಹ್ಮ ರೂಪಳಾದ ದೇವಿಯು ಆನಂದ ಘನೀಭಾವರೂಪವಾದ ಸುಂದರ ಮೂರ್ತಿಯಿಂದ ಪ್ರತ್ಯಕ್ಷಳಾಗುವುದರಿಂದ ಮನೋಹರಳಾಗಿರುವಳು. (ಮುಂದುವರೆಯುವುದು...)

ಲಲಿತಾ ತ್ರಿಶತೀ - 4. ಓಂ ಕಲ್ಯಾಣಶೈಲನಿಲಯಾಯೈ ನಮಃ

    ಶಿಲೆಗಳ ಘನಾವಸ್ಥಾರೂಪವಾದ ವಿಕಾರವು ಶೈಲವೆನಿಸುವುದು. ದೇವಿಯು ಘನಾಕಾರವನ್ನು ಹೊಂದಿದ ಸುಖವೆಂಬ ಸ್ವಸ್ವರೂಪವಾದ ಕಲ್ಯಾಣ ಶೈಲದಲ್ಲಿ ಇರುವವಳೂ. ಈ ಅರ್ಥವು "ಕಲ್ಯಾಣಶೈಲೇ ಆನಂದಘನೇ ನಿಲತಿ ತಿಷ್ಠತಿ" ಎಂಬ ಸಮಾಸದಿಂದ ಲಭ್ಯವಾಗುವುದು. ಸ್ವಸ್ವರೂಪದಲ್ಲಿ ಪರದೇವತೆಯು ಇರುವಳು ಎಂದು "ಸ ಭಗವಃ ಕಸ್ಮಿನ್ ಪ್ರತಿಷ್ಠಿ ಇತಿ ಸ್ವೇ ಮಹಿಮ್ನಿ" ಎಂಬ ಪ್ರಶ್ನೋತ್ತರ ರೂಪವಾದ ಶ್ರುತಿ ವಾಕ್ಯದಿಂದ ತಿಳಿದುಬರುವುದು. ದೇವ ದತ್ತನು ತನ್ನಲ್ಲಿಯೇ ತಾನು ಇರುವನೆಂಬುದಾಗಿ ಸಾಮಾನ್ಯವಾಗಿ ಲೋಕ ಪ್ರಯೋಗವು ಇರುವಂತೆ ದೇವತೆಯು ಸ್ವಸ್ವರೂಪದಲ್ಲಿ ಇರುವುದೆಂಬುದು ವಿರುದ್ಧವಲ್ಲ ಅಥವಾ ಶಿಲಾವಿಕಾರದಂತೆ ಘನಭಾವ ಹೊಂದಿರುವ ಕಲ್ಯಾಣವು ಕಲ್ಯಾಣಶೈಲವು ಅದು ಆನಂದಮಯ ಕೋಶವು ದೇವಿಯು ಅದನ್ನು ಭವನವನ್ನಾಗಿ ಕಲ್ಪಿಸಿಕೊಂಡಿರುವಳು ಎಂದು ಅರ್ಥವಾಗುವಂತೆ ಕಲ್ಯಾಣ ಶೈಲೋ ನಿಲಯೋ ಯಸ್ಯಾಃ ಎಂದು ಬಹುವ್ರೀಹಿ ಎಂಬ ಸಮಾಸವನ್ನು ಅಂಗೀಕರಿಸುವುದು ವಿರುದ್ಧವಲ್ಲ. ಆನಂದಮಯ ಕೋಶವನ್ನು ಅಧಿಕರಿಸಿ "ಬ್ರಹ್ಮ ಪುಚ್ಫಂ ಪ್ರತಿಷ್ಠಾ" ಎಂಬ ಶ್ರುತಿಯು ಹಿಂದೆ ವಿವರಿಸಿದ ಅರ್ಥವನ್ನು ಸೂಚಿಸುತ್ತಿದೆ ಅಥವಾ ಕಲ್ಯಾಣ ಶೈಲವೆಂದರೆ ಪರ್ವತವು, ಅದು ಗೃಹವಾಗಿರುವವಳು ಈ ಅರ್ಥವು "ಸುಮೇರುಮಧ್ಯಶೃಂಗಸ್ಥಾ" ಎಂಬ ದೇವೀನಾಮದಿಂದ ಪ್ರಸಿದ್ಧವಾಗಿರುವುದು.  (ಮುಂದುವರೆಯುವುದು...)

ಲಲಿತಾ ತ್ರಿಶತೀ - 3. ಓಂ ಕಲ್ಯಾಣಗುಣಶಾಲಿನ್ಯೈ ನಮಃ

    ಕಲ್ಯಾಣ ಶಬ್ದವು ಸುಖಕರ ಎಂಬ ಅರ್ಥವನ್ನು ಬೋಧಿಸುವುದು. ದೇವಿಯ ಸುಖಕರವಾದ ಅಮೋಘಕಾಮ, ಸಂತ್ಯಸಂಕಲ್ಪ, ಸರ್ವಾಆಧಿಪತ್ಯ, ಸರ್ವನಿಯಾಮಕತ್ವ, ಕರ್ಮಫಲದಾತೃತ್ವ, ಸರ್ವಕಾಮಾವಾಪ್ತಿ ಮುಂತಾದ ಸಮಸ್ತ ಗುಣಗಳು ಪ್ರಕಾಶಿಸುವುವು ಅಥವಾ ದೇವಿಯನ್ನು ಆ ಗುಣಗಳು ಪ್ರಕಾಶಪಡಿಸುವುವು ಅಥವಾ ಗುಣಗಳಿಂದ ದೇವಿಯು ಪ್ರಕಾಶಿಸಲ್ಪಡುವಳು ಎಂದು ಕಲ್ಯಾಣ ಗುಣಾಃ ಶಾಲಂತೇ ಅಸ್ಯಾಃ ಇತಿ ಶಾಲಯಂತಿ ಏನಾಮಿತಿ, ಕಲ್ಯಾಣ ಗುಣೈಃ ಶಾಲ್ಯತೇ ಎಂದು ನಾನಾವಿಧದ ವಿಗ್ರಹಗಳಿಂದ ಅರ್ಥವು ತೋರುವುದು. ಇವುಗಳಲ್ಲಿ ಮೊದಲನೆಯ ಎರಡು ಬಗೆಯ ಸಮಾಸಗಳಲ್ಲಿ ದೇವತೆಯು ಸ್ವತಃ ಶುದ್ಧ ಚೈತನ್ಯರೂಪಳೂ ಪರಾಧೀನಗುಣಗಳಿಂದ ಕೂಡಿರುವಳೂ ಎಂದು ಅರ್ಥವಾಗುವುದು, ಮೂರನೆಯ ಎರಡು ಬಗೆಯ ಸಮಾಸಗಳಲ್ಲಿ ದೇವತೆಯು ಸ್ವತಃ ಶುದ್ಧ ಚೈತನ್ಯರೂಪಳೂ ಪರಾಧೀನಗುಣಗಳಿಂದ ಕೂಡಿರುವಳೂ ಎಂದು ಅರ್ಥವಾಗುವುದು, ಮೂರನೆಯ ವಿಗ್ರಹದಲ್ಲಿ ದೇವತೆಯಲ್ಲಿ ಗುಣಗಳ ಸಂಪರ್ಕವು ತೋರುವುದು. ಅದು ಶ್ರುತಿಪ್ರಮಾಣದಿಂದ ಔಪಾಧಿವೆಂದು ಸ್ಥಿರವಾಗಿದ್ದರೂ ಅದನ್ನು ಈ ಸ್ತುತಿಮಾಡುವ ಸಂದರ್ಭದಲ್ಲಿ ಉಲ್ಲೇಖಮಾಡದಿರುವುದು ನ್ಯೂನತಾಕರವಲ್ಲ. ಭೇದ ಬುದ್ಧಿಯಿಂದ ಮಾಡುವ ಸ್ತುತಿಯಲ್ಲಿಯೂ ಗುಣ ಸಂಪರ್ಕವು ಆರೋಪಿತವೆಂದು ಹೇಳುವುದು ದೇವೀಕೃಪಾ ಪ್ರಾಪ್ತಿಗೆ ಹೇತುವಾಗುವುದಾದರೂ ಆ ಗುಣಗಳನ್ನು ಅಪವಾದಮಾಡಿ ಶುದ್ಧ ಚೈತನ್ಯಾಭೇದದ ಅನುಸಂಧಾನವೆಂಬ ಭಜನವು ಮುಖ್ಯವಾದುದು. ಅದನ್ನು ಸದ್ಗುರೂಪದೇಶ ಮಾರ್ಗದಿಂದ ಸಂಪಾದಿಸಲು ಸಾದ್ಯವ...

ಲಲಿತಾ ತ್ರಿಶತೀ - 2. ಓಂ ಕಲ್ಯಾಣ್ಯೈ ನಮಃ

    ಕಲ್ಯಾಣವೆಂದರೆ ಸುಖ ಎಂದು ಅರ್ಥ, ಆ ಸುಖಗಳು ಯುವ ಸಾರ್ವಭೌಮಸುಖ ಮೊದಲುಗೊಂಡು ಬ್ರಹ್ಮಾನಂದ ಪರ್ಯಂತ ವಿವಿಧವಾಗಿ ತೈತ್ತಿರೀಯಾದ ಉಪನಿಷತ್ತುಗಳಲ್ಲಿ ಪ್ರತಿಪಾದಿಸಲ್ಪಟ್ಟಿವೆ. ಅವು "ಏತಸ್ಯೈವಾ ನಂದಸ್ಯ ಅನ್ಯಾನಿ ಭೂತಾನಿ ಮಾತ್ರಾಮುಪ ಜೀವಂತಿ" ಎಂಬ ಶ್ರುತಿ ಪ್ರಮಾಣಾನುಸಾರವಾಗಿ ಉತ್ತಮಾಧಮ ಭಾವವನ್ನು ಹೊಂದಿದ ಆಯಾಯ ಉಪಾಧಿಗಳಿಂದ ಪರಿಚ್ಛಿನ್ನ ರೂಪವನ್ನು ಹೊಂದಿದ ಪರಿಪೂರ್ಣಾನಂದದ ರೂಪಳಾಗಿವೆ. ಅವುಗಳನ್ನು ಕಲ್ಯಾಣ ಶಬ್ದವು ಬೋಧಿಸುವುದು. ಪರಿಪೂರ್ಣ ಬ್ರಹ್ಮಸ್ವರೂಪದಲ್ಲಿ ಉಪಾಧಿಯೋಗದಿಂದ ಸಮಷ್ಟಿವ್ಯಷ್ಟಿ ರೂಪಗಳನ್ನು ಹೊಂದಿದ ಸುಖಗಳ ಆಧಾರತ್ವವು ಸಂಭವಿಸುವುದರಿಂದ ಆಧಾರತ್ವ ಅರ್ಥವನ್ನು ಬೋಧಿಸುವ ಮತುಪ್ ಪ್ರತ್ಯಯಾಂತ ಸಮಾಸವು ಅಬಾಧಿತವಾಗಿರುವುದು. ಆನಂದಸ್ಯ - ಮಾತ್ರಾಂ ಎಂದು ಶ್ರುತಿಯಲ್ಲಿ ಆನಂದದ ಲೇಶವೆಂದು ಒಂದು ಸ್ವರೂಪದಲ್ಲಿ ಭೇದಭಾವನೆಯನ್ನು ಉಂಟುಮಾಡಿರುವುದು ಶಿರೋಮಾತ್ರ ಸ್ವರೂಪನಾದ ರಾಹುವನ್ನು ಕಂಡು ರಾಹುವಿನ ತಲೆ ಎಂದು ಪ್ರಯೋಗದಿಂದ ಭೇದಭಾವನೆಯನ್ನು ತೋರಿಸುವಂತೆ ಔಪಚಾರಿಕವಾದುದು. ಭೇದವನ್ನು ವಾಸ್ತವನಾಗಿ ಪ್ರತಿಪಾದಿಸುವ ತಾತ್ಪರ್ಯವಿಲ್ಲ, ಆದ್ದರಿಂದ ದೇವಿಯು "ವಿಜ್ಞಾನಮಾನಂದಂ ಬ್ರಹ್ಮ" ಎಂಬ ಶ್ರುತಿಯಲ್ಲಿ ಹೇಳಿದ ಪರಬ್ರಹ್ಮಸ್ವರೂಪ ಲಕ್ಷಣವಾದ ಆನಂದರೂಪವಾದ ಆಕಾರವುಳ್ಳವಳು - ಎಂದು ತಾತ್ಪರ್ಯವು.  (ಮುಂದುವರೆಯುವುದು...)

ಲಲಿತಾ ತ್ರಿಶತೀ - 1. ಓಂ ಕಕಾರರೂಪಾಯೈ ನಮಃ

    ಸೂತಮುನಿಯು ಹೀಗೆ ಹೇಳಿದನು :- ಅನೇಕ ಕಾಲ ಪರಭಕ್ತಿಯಿಂದ ಗುರುಪಾದಕಮಲಗಳನ್ನು ಅವಲಂಬಿಸಿದ್ದ ಅಗಸ್ತ್ಯಮುನಿಗೆ ಶಿವದಂಪತಿ ರಚಿತವಾದ ಲಲಿತಾನಾಮತ್ರಿಶತೀ ಸ್ತೋತ್ರವನ್ನು ಉಪದೇಶಿಸಲು ದೇವಿಯಿಂದ ಪ್ರೇರೇಪಿಸಲ್ಪಟ್ಟ ಮುನಿಯು ಅದನ್ನು ಉಪದೇಶಮಾಡಲು ಉಪಕ್ರಮಿಸಿದನು. ದೇವಿಯು "ಕ" ಎಂಬ ವರ್ಣವು ಬೋಧಕ ವಿಶೇಷಣವುಳ್ಳವಳಾಗಿ ಇರುವಳು. ಎಂದರೆ ಕಕಾರವು ಆದಿಯಲ್ಲಿರುವ ಬೀಜಾಕ್ಷರ ಮಯವಾದ ಮಂತ್ರಶರೀರವುಳ್ಳವಳು ಎಂದು ತಾತ್ಪರ್ಯವು ಅಥವಾ ಕ ವರ್ಣ ರೂಪವಾದ ಶಬ್ಧವು ಬ್ರಹ್ಮ, ನೀರು, ಶಿರ ಮತ್ತು ಸುಖವೆಂಬ ಅರ್ಥಗಳಿಗೆ ವಾಚಕವಾಗಿದೆ, ಆದ್ದರಿಂದ ಕಕಾರವು ವಾಚಕವಾಗಿ ಇರುವ ಅರ್ಥಗಳು ಬ್ರಹ್ಮ ಮುಂತಾದುವುಗಳಾಗಿವೆ. ಬ್ರಹ್ಮ ಮುಂತಾದ ಅರ್ಥಗಳಲ್ಲಿರುವ ಅಸಾಧಾರಣ ಗುಣಗಳು ದೇವಿಯಲ್ಲಿರುವುದರಿಂದ ದೇವಿಯು ಬ್ರಹ್ಮಾದಿರೂಪಳಾಗುವಳು. ಹಿರಣ್ಯಗರ್ಭನಲ್ಲಿ ಜಗದ್ಧಾರಕತ್ವ, ಜಗತ್ಕರ್ತೃತ್ವಗಳು ಇರುವಂತೆ ವರ್ಣಮಾಲೆಯಲ್ಲಿ ವ್ಯಂಜನವರ್ಣಗಳಿಗೆ ಆದಿಯಾದ ಕಕಾರದಲ್ಲಿಯೂ ಇರುವುವು. ಜಲದಲ್ಲಿ ಸಸತ್ಯವನ್ನು ಪೋಷಣಮಾಡುವುದರ ಮೂಲಕ ಜಗತ್ಸಂಜೀವನ ಕಾರಿತ್ವವು ಇರುವಂತೆ ಮಂತ್ರದ ಆದ್ಯಕ್ಷರವಾದ ಕಕಾರದಲ್ಲಿಯೂ ಇದೆ. ಸರ್ವಪ್ರಾಣಿಗಳ ಶಿರಸ್ಸಿನಲ್ಲಿ ಅಮೃತವು ಇರುವುದರಿಂದ ಯೋಗಾಭ್ಯಾಸ ಬಲದಿಂದ ಕುಂಡಲಿನೀ ಉತ್ಥಾಪನ ಮೂಲಕ ಶಿರಸ್ಸನ್ನು ಹೊಂದಿ ಅಲ್ಲಿರುವ ಅಮೃತ ಪ್ರವಾಹದಿಂದ ನೆನೆದಿರುವ ಯೋಗಿಗಳ ಜೀವಾತ್ಮಕ್ಕೆ ಈಶ್ವರಸಾಮ್ಯವು ಉಂಟಾಗುವುದೆಂದು ಯೋಗಶಾಸ್ತ್ರದಲ್ಲಿ ಹ...