ಲಲಿತಾ ತ್ರಿಶತೀ - 5. ಓಂ ಕಮನೀಯಾಯೈ ನಮಃ

    "ಕೋ ಹ್ಯೇವಾನ್ಯಾತ್ ಕಃ ಪ್ರಾಣ್ಯಾತ್, ಯದೇಷ ಆಕಾಶ ಆನಂದೋ ನ ಸ್ಯಾತ್" ಎಂಬ ಶ್ರುತಿಯು ಆನಂದ ರೂಪವಾದ ವಸ್ತುವು ಜಗತ್ತಿಗೆ ಪ್ರತಿಷ್ಠಾ ರೂಪವಾಗಿಲ್ಲದಿದ್ದರೆ ಯಾವ ಪ್ರಾಣಿಯು ಚಲನ ಮತ್ತು ನಿಶ್ವಾಸಾದಿ ಕಾರ್ಯವನ್ನು ಆಚರಿಸಬಲ್ಲದು? ಎಂದು ಬೋಧಿಸುತ್ತ ಬ್ರಹ್ಮವನ್ನು ಪರಮಾನಂದ ರೂಪವೆಂದು ತಿಳಿಸಿದೆ. ಆದ್ದರಿಂದ ದೇವಿಯು ಪರಮ ಪ್ರೇಮಾಸ್ಪದಳು ಅಥವಾ ಮನೋಹರವಾದ ಸುಖವನ್ನು ಎಲ್ಲರೂ ಕೋರುತ್ತಿರುವಂತೆ ಮಾಯಾ ಪಾಶಬದ್ಧರಾದ ಜನಗಳು ಸುಖಪ್ರಾಪ್ತಿಗೋಸ್ಕರ ಸ್ವೇಷ್ಟ ದೇವತೆಯ ಪೂಜಾದಿಗಳನ್ನು ಭಕ್ತಿಯಿಂದ ಕೋರುವರು. ಅವರಿಗೆ ಇಷ್ಟ ಫಲವನ್ನು ಕೊಡುವ ದೇವತೆಯಾದ್ದರಿಂದ ಮನೋಹರಳು ಅಥವಾ ತತ್ತ್ವಜ್ಞಾನಿಗಳ ದೃಷ್ಟಿಗೆ ಪರಬ್ರಹ್ಮ ರೂಪಳಾದ ದೇವಿಯು ಆನಂದ ಘನೀಭಾವರೂಪವಾದ ಸುಂದರ ಮೂರ್ತಿಯಿಂದ ಪ್ರತ್ಯಕ್ಷಳಾಗುವುದರಿಂದ ಮನೋಹರಳಾಗಿರುವಳು.

(ಮುಂದುವರೆಯುವುದು...)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ