ದೇವಿಯ ಭಕ್ತರ ಧ್ಯಾನಕ್ಕೆ ಗೋಚರವಾಗುವ ದೇವಿಯ ಮೂರ್ತಿಯಲ್ಲಿ ಶಿರಸ್ಸು-ಪಾಣಿ ಮುಂತಾದ ಅವಯವಗಳು, ವಿದ್ಯಾರೂಪವಾದ ಚತುಃ ಷಷ್ಟಿ ಕಲೆಗಳು ಅಥವಾ ಚಂದ್ರಕಲೆ ಇವುಗಳಿರುವುದರಿಂದ ದೇವಿಯು ಕಲಾವತಿ ಎನಿಸಿರುವಳು.
ಕನಕಧಾರಾ ಸ್ತೋತ್ರದ ವಿಶೇಷ - ಹಿನ್ನೆಲೆ ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅದ್ವೈತಕೇಸರಿ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ವಿರಚಿತವಾದ ಕನಕಧಾರಾ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುವುದರ ಜೊತೆಗೆ ಪ್ರಾಪಂಚಿಕ, ಪಾರಮಾರ್ಥಿಕ ಎರಡೂ ಸಾಧನೆಗಳು ಪೂರ್ಣಗೊಳ್ಳುತ್ತವೆ. ನಮಗೆ ಧನ - ಕನಕ, ಸಿರಿ - ಸಂಪತ್ತು, ಐಶ್ವರ್ಯ, ಯಶಸ್ನು, ಸೌಭಾಗ್ಯ, ವಿಜಯಗಳನ್ನು ದಯಪಾಲಿಸುವ ಮಹಾ ಕಾಮಧೇನು " ಕನಕಧಾರಾ ಸ್ತೋತ್ರ " ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ, ಭಕ್ತರ ಹೃದಯದಲ್ಲಿ ಶ್ರದ್ಧಾ ಸ್ವರೂಪಳಾಗಿ, ಮೋಕ್ಷೇಚ್ಛುಗಳ ಆಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಚಿನ್ನದ ಮಳೆಯನ್ನೇ ಕರೆದ ಮಹಾಸ್ತೋತ್ರವೇ " ಕನಕಧಾರಾ ಸ್ತೋತ್ರ ". ಅದರ ಹಿನ್ನೆಲೆ ಹೀಗೆದೆ. ಪರಮಹಂಸ ಪರಿವ್ರಾಜಕ ಶ್ರೀ ಶಂಕರಭಗವತ್ಪಾದರು ಸನ್ಯಾಸಿಗಳಾದ್ದರಿಂದ ಮಧುಕರ ( ಭಿಕ್ಷೆ ) ವೃತ್ತಿಯನ್ನು ಅನುಸರಿಸುತ್ತಿದ್ದರು. ತಮ್ಮ ದಿಗ್ವಿಜಯ ಸಂಚಾರ ಕಾಲದಲ್ಲಿ ಒಮ್ಮೆ ಕೇರಳದ ಕುಗ್ರಾಮವೋಂದಕ್ಕೆ ಬರುತ್ತಾರೆ. ತಮ್ಮ ಶಿಷ್ಯರೊಡಗೂಡಿ ದೈವಭಕ್ತನಾದ ಒಬ್ಬ ಬಡ ಬ್ರಾಹ್ಮಣನ ಮನ...
Comments
Post a Comment