ಲಲಿತಾ ತ್ರಿಶತೀ - 9. ಓಂ ಕರುಣಾಮೃತಸಾಗರಾಯೈ ನಮಃ

    ಕರುಣಾಮೃತ ಸಾಗರಾ ಕೃಪೆಯಿಂದ ಭಕ್ತರಿಗೆ ದೊರಕುವ ಮೋಕ್ಷವೆಂಬ ಅಮೃತಕ್ಕೆ ಸಮುದ್ರ ರೂಪಳು, ಅಮೃತ ಸಮುದ್ರದಿಂದ ಮೇಘವು ಅಮೃತವನ್ನು ಪಾನಮಾಡಿ ಸಕಾಲದಲ್ಲಿ ವೃಷ್ಟಿಯನ್ನು ಕೊಟ್ಟು ಜಗತ್ತನ್ನು ಸಂಜೀವನ ಗೊಳಿಸುವುದು. ಹೀಗೆ ಮೇಘದ ಮೂಲಕ ಜಗತ್ತಿನ ಸಂಜೀವನಕ್ಕೆ ಅಮೃತ ಸಮುದ್ರವು ಕಾರಣವಾಗುವುದು ಅದರಂತೆ ದೇವಿಯು "ಬ್ರಹ್ಮವಿದಾಪ್ನೋತಿ ಪರಮ್" "ಬ್ರಹ್ಮ ವೇದ ಬ್ರಹ್ಮೈವ ಭವತಿ" ಎಂಬ ಶ್ರುತ್ಯನುಸಾರವಾಗಿ ಅಮೃತ ಬ್ರಹ್ಮ ಸ್ವರೂಪಳಾಗಿರುವಳು ಮತ್ತು ಆಯಾಯ ಅಧಿಕಾರಿಗಳು ಶಾಸ್ತ್ರ ಪ್ರಮಾಣದಿಂದ ಮಾಡುವ ಕರ್ಮ-ಉಪಾಸನೆಗಳಿಂದ ಪ್ರಸನ್ನರಾದ ಆಯಾಯ ದೇವತೆಗಳು ಸ್ವಭಕ್ತರಿಗೆ ಕೊಡುವ ಫಲಗಳೆಂಬ ಅಮೃತಕ್ಕೆ ಸಾಗರ ಸ್ವರೂಪಳಾಗಿರುವಳು ಎಂದು ಸಾಗರದ ಉಪಮೆಯಿಂದ ತಿಳಿಯುವುದು. "ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್" ಎಂಬ ಭಗವದುಕ್ತಿಯಿಂದ ಸಮಸ್ತ ದೇವತಾರಾಧನದಿಂದ ಹೊಂದುವ ಫಲ ಪ್ರಾಪ್ತಿಯು ಭಗವದಾಯತ್ತವಾದುದೆಂದು ತಿಳಿಯುವುದು. ಕರುಣೆಯೆಂದರೆ ಭಕ್ತರ ವಿಷಯದಲ್ಲಿ ರಕ್ಷಣೀಯರೆಂಬ ಬುದ್ಧಿಯು ಇದು ಅಮೃತದಂತೆ ಸರ್ವ ಸಂಜೀವನ್ನುಂಟುಮಾಡುವುದು. ಜಲಕ್ಕೆಲ್ಲ ಸಾಗರವೇ ಗತಿಯಾಗಿರುವಂತೆ ಇಂತಹ ಕರುಣಾಮೃತಕ್ಕೆ ದೇವಿಯು ಒಬ್ಬಳೇ ಆಶ್ರಯವು ಆದ್ದರಿಂದ ಸಾಗರ ಸ್ವರೂಪಳು ಅಥವಾ ತನ್ನ ಕೃಪಾ ವಿಶೇಷದಿಂದ ಅಮೃತರಾಗಿರುವಂತೆ ಶಾಶ್ವತ ಬ್ರಹ್ಮಲೋಕವನ್ನು ಹೊಂದಿ ಕೀರ್ತಿಯನ್ನು ಗಳಿಸಿರುವ ಸಗರ ರಾಜಪುತ್ರರುಳ್ಳವಳು ಅಥವಾ ಕರುಣೆಯಿಂದ ಅಮೃತ ಲಾಭಕ್ಕೋಸ್ಕರ ಸಮುದ್ರವನ್ನು ಹೊಂದಿರುವ ಭಾಗೀರಥೀ ರೂಪಳು. ಇಲ್ಲಿ "ಕರುಣಯಾ ಅಮೃತಂ ತಸ್ಯ ಸಾಗರ ಇವ, ಕರುಣಯಾ ಅಮೃತಾಃ ಸಗರಸ್ಯ ಅಪತ್ಯಾನಿ ಪುಮಾಂಸಃ, ಕರುಣಯಾ ಅಮೃತಾಯ ಪ್ರಾಪ್ತಃ ಸಾಗರೋ ಯಯಾ ಎಂಬುದಾಗಿ ಸಮಾಸ ರೂಪಗಳನ್ನು ತಿಳಿಯಬೇಕು.


(ಮುಂದುವರೆಯುವುದು...)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ