ಲಲಿತಾ ತ್ರಿಶತೀ - 3. ಓಂ ಕಲ್ಯಾಣಗುಣಶಾಲಿನ್ಯೈ ನಮಃ

    ಕಲ್ಯಾಣ ಶಬ್ದವು ಸುಖಕರ ಎಂಬ ಅರ್ಥವನ್ನು ಬೋಧಿಸುವುದು. ದೇವಿಯ ಸುಖಕರವಾದ ಅಮೋಘಕಾಮ, ಸಂತ್ಯಸಂಕಲ್ಪ, ಸರ್ವಾಆಧಿಪತ್ಯ, ಸರ್ವನಿಯಾಮಕತ್ವ, ಕರ್ಮಫಲದಾತೃತ್ವ, ಸರ್ವಕಾಮಾವಾಪ್ತಿ ಮುಂತಾದ ಸಮಸ್ತ ಗುಣಗಳು ಪ್ರಕಾಶಿಸುವುವು ಅಥವಾ ದೇವಿಯನ್ನು ಆ ಗುಣಗಳು ಪ್ರಕಾಶಪಡಿಸುವುವು ಅಥವಾ ಗುಣಗಳಿಂದ ದೇವಿಯು ಪ್ರಕಾಶಿಸಲ್ಪಡುವಳು ಎಂದು ಕಲ್ಯಾಣ ಗುಣಾಃ ಶಾಲಂತೇ ಅಸ್ಯಾಃ ಇತಿ ಶಾಲಯಂತಿ ಏನಾಮಿತಿ, ಕಲ್ಯಾಣ ಗುಣೈಃ ಶಾಲ್ಯತೇ ಎಂದು ನಾನಾವಿಧದ ವಿಗ್ರಹಗಳಿಂದ ಅರ್ಥವು ತೋರುವುದು. ಇವುಗಳಲ್ಲಿ ಮೊದಲನೆಯ ಎರಡು ಬಗೆಯ ಸಮಾಸಗಳಲ್ಲಿ ದೇವತೆಯು ಸ್ವತಃ ಶುದ್ಧ ಚೈತನ್ಯರೂಪಳೂ ಪರಾಧೀನಗುಣಗಳಿಂದ ಕೂಡಿರುವಳೂ ಎಂದು ಅರ್ಥವಾಗುವುದು, ಮೂರನೆಯ ಎರಡು ಬಗೆಯ ಸಮಾಸಗಳಲ್ಲಿ ದೇವತೆಯು ಸ್ವತಃ ಶುದ್ಧ ಚೈತನ್ಯರೂಪಳೂ ಪರಾಧೀನಗುಣಗಳಿಂದ ಕೂಡಿರುವಳೂ ಎಂದು ಅರ್ಥವಾಗುವುದು, ಮೂರನೆಯ ವಿಗ್ರಹದಲ್ಲಿ ದೇವತೆಯಲ್ಲಿ ಗುಣಗಳ ಸಂಪರ್ಕವು ತೋರುವುದು. ಅದು ಶ್ರುತಿಪ್ರಮಾಣದಿಂದ ಔಪಾಧಿವೆಂದು ಸ್ಥಿರವಾಗಿದ್ದರೂ ಅದನ್ನು ಈ ಸ್ತುತಿಮಾಡುವ ಸಂದರ್ಭದಲ್ಲಿ ಉಲ್ಲೇಖಮಾಡದಿರುವುದು ನ್ಯೂನತಾಕರವಲ್ಲ. ಭೇದ ಬುದ್ಧಿಯಿಂದ ಮಾಡುವ ಸ್ತುತಿಯಲ್ಲಿಯೂ ಗುಣ ಸಂಪರ್ಕವು ಆರೋಪಿತವೆಂದು ಹೇಳುವುದು ದೇವೀಕೃಪಾ ಪ್ರಾಪ್ತಿಗೆ ಹೇತುವಾಗುವುದಾದರೂ ಆ ಗುಣಗಳನ್ನು ಅಪವಾದಮಾಡಿ ಶುದ್ಧ ಚೈತನ್ಯಾಭೇದದ ಅನುಸಂಧಾನವೆಂಬ ಭಜನವು ಮುಖ್ಯವಾದುದು. ಅದನ್ನು ಸದ್ಗುರೂಪದೇಶ ಮಾರ್ಗದಿಂದ ಸಂಪಾದಿಸಲು ಸಾದ್ಯವಿರುವುದು.

(ಮುಂದುವರೆಯುವುದು...)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ