ಲಲಿತಾ ತ್ರಿಶತೀ - 7. ಓಂ ಕಮಲಾಕ್ಷ್ಯೈ ನಮಃ

    ಕಮಲಾಕ್ಷೀ ಶಬ್ದವು "ಕಮಲೆ ಇವ ಅಕ್ಷಿಣೇ ಯಸ್ಯಾಃ ಸಾ" ಎಂದು ವಿಗ್ರಹದಿಂದ ಕಮಲಗಳಂತೆ ನೇತ್ರವುಳ್ಳವಳು ಎಂಬ ಅರ್ಥವನ್ನು ಬೋಧಿಸುವುದು. "ಕಮಲಾಯಾಃ ಅಕ್ಷಿ ಯಸ್ಯಾಂ ಸಾ" ಎಂಬ ಸಮಾಸದಿಂದ ಲಕ್ಷ್ಮೀದೇವಿಯ ಜ್ಞಾನಕ್ಕೆ ಗೋಚರಳು ಎಂಬ ಅರ್ಥವನ್ನು ಸೂಚಿಸುತ್ತಿದೆ. ಇಲ್ಲಿ ಅಕ್ಷಿ ಎಂಬ ಶಬ್ದಕ್ಕೆ ಕಣ್ಣಿಂದ ಹುಟ್ಟುವ ಜ್ಞಾನವೆಂಬ ಅರ್ಥವನ್ನು ಗ್ರಹಿಸಬೇಕು. ಕಮಲಾಯಾ, ಅಕ್ಷಿಣೀ, ಯಸ್ಯಾಃ ಎಂಬ ಸಮಾಸದಿಂದ ಐಹಿಕಾಮುಷ್ಮಿಕ ಭೋಗ ಸಂಪತ್ತಿಗೆ ಕಾರಣವಾದ ದರ್ಶನವುಳ್ಳವಳು ಎಂಬ ಅರ್ಥವನ್ನು ಬೋಧಿಸುವುದು. ದರ್ಶನಮಾತ್ರದಿಂದ ಮಹದೈಶ್ವರ್ಯ ಪ್ರಾಪ್ತಿಯಾಗುವುದೆಂದು ಮೂರನೇ ಅರ್ಥದ ಸಾರವು. 

(ಮುಂದುವರೆಯುವುದು...)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ