ನಿರ್ವಾಣಷಟ್ಕಂ - ಶ್ರೀ ಆದಿ ಶಂಕರಾಚಾರ್ಯ

ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ ನ ಕರ್ಣೌ ನ ಜಿಹ್ವಾ ನ ಚ ಘ್ರಾಣ ನೇತ್ರೇ | ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ ಚಿದಾನಂದರೂಪಃ ಶಿವೋಹಂ ಶಿವೋಹಂ ||1|| ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವಾವುವೂ ನಾನಲ್ಲ. ಕಿವಿ, ಕಣ್ಣು ಮುಂತಾದ ಪಂಚೇಂದ್ರಿಯಗಳೂ ನಾನಲ್ಲ. ಆಕಾಶ, ಭೂಮಿ, ಅಗ್ನಿ, ವಾಯು ಮುಂತಾದ ಪಂಚಭೂತಗಳೂ ನಾನಲ್ಲ. ಆನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ. ನ ಚ ಪ್ರಾಣಸಂಜ್ಞೋ ನ ವೈ ಪ್ರಾಣವಾಯುಃ ನ ವಾ ಸಪ್ತಧಾತುರ್ನ ವಾ ಪಂಚಕೋ ಶಃ ನ ವಾಕ್ಪಾಣಿಪಾದೌ ನ ಚೋಪಸ್ಥ ಪಾಯೂ ಚಿದಾನಂದರೂಪಃ ಶಿವೋಹಂ ಶಿವೋಹಂ ||2|| ಪ್ರಾಣವೆಂಬ ಹೆಸರಿನವನು ನಾನಲ್ಲ. ಪ್ರಾಣ, ಅಪಾನ ವ್ಯಾನ, ಉದಾನ, ಸಮಾನ ಈ ಪಂಚಪ್ರಾಣವಾಯುವೂ ನಾನಲ್ಲ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಮುಂತಾದ ಪಂಚಕೋಶಗಳೂ ನಾನಲ್ಲ. ಚರ್ಮ, ಮಾಂಸ, ರಕ್ತ, ಮೇದಸ್ಸು, ಮಜ್ಜಾ, ನರ, ಎಲುಬುಗಳೆಂಬ ಸಪ್ತಧಾತುಗಳೂ ನಾನಲ್ಲ. ವಾಗೀಂದ್ರಿಂಯ, ಕೈ, ಕಾಲು ಮುಂತಾದ ಕರ್ಮೇಂದ್ರಿಯಗಳೂ, ವಿಸರ್ಜನಾಂಗಗಳು ನಾನಲ್ಲ. ಚಿದಾನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ. ನ ಮೇ ದ್ವೇಷರಾಗೌ ನ ಮೇ ಲೋಭಲೋಹೌ ಮದೋನೈವ ಮೇ ನೈವ ಮಾತ್ಸರ್ಯಭಾವಃ | ನ ಧರ್ಮೋ ನ ಚಾರ್ಥೋ ನ ಕಾವೋ ನ ವೋಕ್ಷಃ ಚಿದಾನಂದರೂಪಃ ಶಿವೋsಹಂ ಶಿವೋsಹಂ ||3|| ನನಗೆ ರಾಗದ್ವೇಷಗಳಾಗಲಿ, ಲೋಭಮೋಹಗಳಾಗಲಿ, ಗರ್ವವಾಗಲಿ, ಹಗೆತನವಾಗಲಿ ಇಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳೂ ನನಗಿಲ್ಲ. ಚಿನ...