ನಿರ್ವಾಣಷಟ್ಕಂ - ಶ್ರೀ ಆದಿ ಶಂಕರಾಚಾರ್ಯ

ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ ನ ಕರ್ಣೌ ನ ಜಿಹ್ವಾ ನ ಚ ಘ್ರಾಣ ನೇತ್ರೇ |
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ ಚಿದಾನಂದರೂಪಃ ಶಿವೋಹಂ ಶಿವೋಹಂ ||1||
ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವಾವುವೂ ನಾನಲ್ಲ. ಕಿವಿ, ಕಣ್ಣು ಮುಂತಾದ ಪಂಚೇಂದ್ರಿಯಗಳೂ ನಾನಲ್ಲ. ಆಕಾಶ, ಭೂಮಿ, ಅಗ್ನಿ, ವಾಯು ಮುಂತಾದ ಪಂಚಭೂತಗಳೂ ನಾನಲ್ಲ. ಆನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ.

ನ ಚ ಪ್ರಾಣಸಂಜ್ಞೋ ನ ವೈ ಪ್ರಾಣವಾಯುಃ
ನ ವಾ ಸಪ್ತಧಾತುರ್ನ ವಾ ಪಂಚಕೋ ಶಃ
ನ ವಾಕ್ಪಾಣಿಪಾದೌ ನ ಚೋಪಸ್ಥ ಪಾಯೂ
ಚಿದಾನಂದರೂಪಃ ಶಿವೋಹಂ ಶಿವೋಹಂ ||2||
ಪ್ರಾಣವೆಂಬ ಹೆಸರಿನವನು ನಾನಲ್ಲ. ಪ್ರಾಣ, ಅಪಾನ ವ್ಯಾನ, ಉದಾನ, ಸಮಾನ ಈ ಪಂಚಪ್ರಾಣವಾಯುವೂ ನಾನಲ್ಲ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಮುಂತಾದ ಪಂಚಕೋಶಗಳೂ ನಾನಲ್ಲ. ಚರ್ಮ, ಮಾಂಸ, ರಕ್ತ, ಮೇದಸ್ಸು, ಮಜ್ಜಾ, ನರ, ಎಲುಬುಗಳೆಂಬ ಸಪ್ತಧಾತುಗಳೂ ನಾನಲ್ಲ. ವಾಗೀಂದ್ರಿಂಯ, ಕೈ, ಕಾಲು ಮುಂತಾದ ಕರ್ಮೇಂದ್ರಿಯಗಳೂ, ವಿಸರ್ಜನಾಂಗಗಳು ನಾನಲ್ಲ. ಚಿದಾನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ.

ನ ಮೇ ದ್ವೇಷರಾಗೌ ನ ಮೇ ಲೋಭಲೋಹೌ ಮದೋನೈವ ಮೇ ನೈವ ಮಾತ್ಸರ್ಯಭಾವಃ |
ನ ಧರ್ಮೋ ನ ಚಾರ್ಥೋ ನ ಕಾವೋ ನ ವೋಕ್ಷಃ ಚಿದಾನಂದರೂಪಃ ಶಿವೋsಹಂ ಶಿವೋsಹಂ ||3||
ನನಗೆ ರಾಗದ್ವೇಷಗಳಾಗಲಿ, ಲೋಭಮೋಹಗಳಾಗಲಿ, ಗರ್ವವಾಗಲಿ, ಹಗೆತನವಾಗಲಿ ಇಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳೂ ನನಗಿಲ್ಲ. ಚಿನ್ಮಾತ್ರಸ್ವರೂಪನಾದ ಸದಾಶಿವನೇ ನಾನು.

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ ನಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಾಃ |
ಅಹಂ ಭೋಜನಂ ನೈವ ಭೋಜಂ ನ ಭೋಕ್ತಾ ಚಿದಾನಂದರೂಪಃ ಶಿವೋsಹಂ ಶಿವೋsಹಂ ||4||
ಪುಣ್ಯ-ಪಾಪಗಳೂ, ಸುಖ-ದುಃಖಗಳೂ, ಮಂತ್ರ-ತೀರ್ಥಗಳೂ, ವೇದ-ಯಜ್ಞಗಳೂ ನಾನಲ್ಲ. ಭೋಜನವೂ, ಭೋಜನದ ಪದಾರ್ಥಗಳೂ, ಭೋಜನ ಮಾಡುವವನೂ ನಾನಲ್ಲ. ಚಿತ್ ಸ್ವರೂಪನಾದ ಸದಾಶಿವನೇ ನಾನು.

ನ ಮೃತ್ಯುರ್ನ ಶಂಕಾ ನ ಮೇ ಜಾತಿಬೇಧಃ ಪಿತಾ ನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ ಚಿದಾನಂದರೂಪಃ ಶಿವೋಹಂ ಶಿವೋಹಂ ||5||
ನನಗೆ ಮರಣವಾಗಲಿ, ಸಂಶಯವಾಗಲಿ ಇಲ್ಲ, ಜಾತಿಭೇದವೂ ಇಲ್ಲ. ತಂದೆ-ತಾಯಿಯರೂ, ಬಂಧು-ವಿತ್ರೂ ಇಲ್ಲ. ಜನ್ಮವೂ ಇಲ್ಲ. ಗುರು-ಶಿಷ್ಯರೂ ಇಲ್ಲ. ಅಮರನೂ ಜ್ಞಾನಸ್ವರೂಪನೂ ಆದ ಪರಮಾತ್ಮನೇ ನಾನು.

ಅಹಂ ನಿರ್ವಿಕಲ್ಪೋ ನಿರಾಕಾರರೂಪೋ ವಿಭುತ್ವಾಚ್ಚ ಸರ್ವತ್ರ ಸರ್ವೇಂ ದ್ರಿಯಾಣಾಂ |
ನ ಚಾಸಂಗತಂ ನೈವ ಮುಕ್ತಿರ್ನ ಬಂಧಃ ಚಿದಾನಂದರೂಪಃ ಶಿವೋsಹಂ ಶಿವೋsಹಂ ||6||
ನಾನು ನಾನಾವಿಕಲ್ಪಗಳಿಲ್ಲದವನು. ನಿರಾಕರನೂ ಎಲ್ಲೆಡೆ ಇರುವವನೂ ನಾನಾಗಿದ್ದೇನೆ. ಎಲ್ಲ ಇಂದ್ರಿಯಗಳೊಡನೆ ಸಂಗತನೂ ನಾನಾಗಿದ್ದೇನೆ. ನನಗೆ ಬಂಧವೊ ಇಲ್ಲ ಮುಕ್ತಿಯೂ ಇಲ್ಲ. ಕೇವಲ ಆನಂದಸ್ವರೂಪನಾದ ಸದಾಶಿವನೇ ನಾನು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ