Posts

Showing posts with the label ಉಪನಿಷತ್

ಲಾನ್ಗೂಲೋಪನಿಷತ್

Image
 ಶ್ರೀಗಣೇಶಾಯ ನಮಃ । ಓಂ ಅಸ್ಯ ಶ್ರೀಅನನ್ತಘೋರಪ್ರಲಯಜ್ವಾಲಾಗ್ನಿರೌದ್ರಸ್ಯ ವೀರಹನುಮತ್ಸಾಧ್ಯಸಾಧನಾಘೋರಮೂಲಮನ್ತ್ರಸ್ಯ ಈಶ್ವರ ಋಷಿಃ । ಅನುಷ್ಟುಪ್ ಛನ್ದಃ । ಶ್ರೀರಾಮಲಕ್ಷ್ಮಣೌ ದೇವತಾ । ಸೌಂ ಬೀಜಮ್ । ಅಂಜನಾಸೂನುರಿತಿ ಶಕ್ತಿಃ । ವಾಯುಪುತ್ರ ಇತಿ ಕೀಲಕಮ್ । ಶ್ರೀಹನುಮತ್ಪ್ರಸಾದಸಿದ್ಧ್ಯರ್ಥಂ ಭೂರ್ಭುವಸ್ಸ್ವರ್ಲೋಕಸಮಾಸೀನ- ತತ್ವಮ್ಪದಶೋಧನಾರ್ಥಂ ಜಪೇ ವಿನಿಯೋಗಃ । ಓಂ ಭೂಃ ನಮೋ ಭಗವತೇ ದಾವಾನಲಕಾಲಾಗ್ನಿಹನುಮತೇ ಅಂಗುಷ್ಠಾಭ್ಯಾಂ ನಮಃ । ಓಂ ಭುವಃ ನಮೋ ಭಗವತೇ ಚಂಡಪ್ರತಾಪಹನುಮತೇ ತರ್ಜನೀಭ್ಯಾಂ ನಮಃ । ಓಂ ಸ್ವಃ ನಮೋ ಭಗವತೇ ಚಿನ್ತಾಮಣಿಹನುಮತೇ ಮಧ್ಯಮಾಭ್ಯಾಂ ನಮಃ । ಓಂ ಮಹಃ ನಮೋ ಭಗವತೇ ಪಾತಾಲಗರುಡಹನುಮತೇ ಅನಾಮಿಕಾಭ್ಯಾಂ ನಮಃ । ಓಂ ಜನಃ ನಮೋ ಭಗವತೇ ಕಾಲಾಗ್ನಿರುದ್ರಹನುಮತೇ ಕನಿಷ್ಠಿಕಾಭ್ಯಾಂ ನಮಃ । ಓಂ ತಪಃ ಸತ್ಯಂ ನಮೋ ಭಗವತೇ ಭದ್ರಜಾತಿವಿಕಟರುದ್ರವೀರಹನುಮತೇ ಕರತಲಕರಪೃಷ್ಠಾಭ್ಯಾಂ ನಮಃ । ಓಂ ಭೂಃ ನಮೋ ಭಗವತೇ ದಾವಾನಲಕಾಲಾಗ್ನಿಹನುಮತೇ ಹೃದಯಾಯ ನಮಃ । ಓಂ ಭುವಃ ನಮೋ ಭಗವತೇ ಚಂಡಪ್ರತಾಪಹನುಮತೇ ಶಿರಸೇ ಸ್ವಾಹಾ । ಓಂ ಸ್ವಃ ನಮೋ ಭಗವತೇ ಚಿನ್ತಾಮಣಿಹನುಮತೇ ಶಿಖಾಯೈ ವಷಟ್ । ಓಂ ಮಹಃ ನಮೋ ಭಗವತೇ ಪಾತಾಲಗರುಡಹನುಮತೇ ಕವಚಾಯ ಹುಮ್ । ಓಂ ಜನಃ ನಮೋ ಭಗವತೇ ಕಾಲಾಗ್ನಿರುದ್ರಹನುಮತೇ ನೇತ್ರತ್ರಯಾಯ ವೌಷಟ್ । ಓಂ ತಪಃ ಸತ್ಯಂ ನಮೋ ಭಗವತೇ ಭದ್ರಜಾತಿವಿಕಟರುದ್ರವೀರಹನುಮತೇ ಅಸ್ತ್ರಾಯ ಫಟ್ । ಅಥ ಧ್ಯಾನಮ್ । ...

Kathopanishad Chapter-02 Canto-03 Shloka-01

ಅಧ್ಯಾಯ-೨ ವಲ್ಲೀ-೩ ಊರ್ಧ್ವಮೂಲೋಽವಾಕ್ಶಾಖ ಏಷೋಽಶ್ವತ್ಥಃ ಸನಾತನಃ । ತದೇವ ಶುಕ್ರಂ ತದ್ಬ್ರಹ್ಮ ತದೇವಾಮೃತಮುಚ್ಯತೇ । ತಸ್ಮಿಂಲ್ಲೋಕಾಃ ಶ್ರಿತಾಃ ಸರ್ವೇ ತದು ನಾತ್ಯೇತಿ ಕಶ್ಚನ । ಏತದ್ವೈ ತತ್ ॥೧॥ ನಾವು ಭಗವಂತನನ್ನು ತಿಳಿದುಕೊಳ್ಳಬೇಕಾದರೆ ಮೊದಲು ಅವನು ಸೃಷ್ಟಿ ಮಾಡಿದ ಈ ವಿಶ್ವವನ್ನು ತಿಳಿದುಕೊಳ್ಳಬೇಕು. ಒಮ್ಮೆ ಈ ಸೃಷ್ಟಿ ತಿಳಿದರೆ ಆ ಸೃಷ್ಟಿಯ ಹಿಂದಿರುವ ಸೃಷ್ಟಿಕರ್ತ ತನ್ನಿಂದ ತಾನೇ ತಿಳಿಯುತ್ತಾನೆ. ಇಲ್ಲಿ ಯಮ ಭಗವಂತ ನಿರ್ಮಿಸಿದ ಈ ಸೃಷ್ಟಿಯನ್ನು ಒಂದು ಮರದ ರೂಪದಲ್ಲಿ ವಿವರಿಸಿದ್ದಾನೆ. ಇಲ್ಲಿ ಬಂದಿರುವ ವಿವರಣೆಯನ್ನೇ ಕೃಷ್ಣ ಗೀತೆಯ ಹದಿನೈದನೇ ಅಧ್ಯಾಯದಲ್ಲಿ ವಿವರಿಸಿ ಹೇಳಿರುವುದನ್ನು ಕಾಣುತ್ತೇವೆ. ಇಲ್ಲಿ ಯಮ ಹೇಳುತ್ತಾನೆ: ಈ ಪ್ರಪಂಚ ಒಂದು ಅಶ್ವತ್ಥ ವೃಕ್ಷದಂತೆ ಎಂದು. ‘ಅಶ್ವತ್ಥ’ ಎನ್ನುವ ಪದ ಈ ಪ್ರಪಂಚದ ವಿಶಿಷ್ಠವಾದ ಸ್ವಭಾವವನ್ನು ಅನೇಕ ರೀತಿಯಲ್ಲಿ ಎತ್ತಿ ಹೇಳುತ್ತದೆ. (೧) ‘ಅಶ್ವತ್ಥ’ ಎನ್ನುವುದರ ಸ್ಥೂಲ ಅರ್ಥ ಅರಳಿ ಮರ. ಇದನ್ನು ಪಿಪ್ಪಲ ಎಂದೂ ಕರೆಯುತ್ತಾರೆ. ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದೆ ಎಲ್ಲಾ ಮರಗಳೂ ಸ್ಥಬ್ಧವಾಗಿರುವಾಗ, ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. ಆದರೆ ಅಶ್ವತ್ಥಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ‘ಚಲದಲಃ’ ಎಂದೂ ಕರೆಯುತ್ತಾರೆ. ಅಂದರೆ ಯಾವಾಗ...