ಭಕ್ತಿಯಲ್ಲಿ ಭಾವ
ಭಕ್ತಿಯೋಗದಲ್ಲಿ ಶಾಂತಭಾವ, ಮಧುರಭಾವ, ವಾತ್ಸಲ್ಯಭಾವ, ದಾಸ್ಯಭಾವ ಮತ್ತು ಸಖ್ಯಭಾವ ಎಂದು ಐದು ವಿಧವಾದ ಭಾವಗಳಿವೆ. ಮಧುರ ಭಾವವನ್ನು ಕಾಂತಾಭಾವವೆಂದು ಹೇಳುವರು ಮತ್ತು ಸಖ್ಯಭಾವವು ಮಧುರ ಭಾವದ ಗುಂಪಿಗೆ ಸೇರಿದುದು. ನಿಮ್ಮ ಅಭಿರುಚಿ ಮತ್ತು ಸ್ವಭಾವಕ್ಕೆ ಹೊಂದುವ ಯಾವುದಾದರು ಒಂದು ಭಾವವನ್ನು ಆರಿಸಿಕೊಳ್ಳಿ ಮತ್ತು ಭಕ್ತಿಯನ್ನು ಪರಮಾವಧಿ ಮಟ್ಟಕ್ಕೆ ಬೆಳೆಸಿರಿ.
ಸನ್ಯಾಸಿ ಭಕ್ತರು ಶಾಂತಭಾವವನ್ನು ಹೊಂದಿರುವರು. ಶಾಂತಭಾವದ ಭಕ್ತನು ಉದ್ವಿಗ್ನತೆಗಳಿಗೆ ಒಳಪಡುವುದಿಲ್ಲ ಮತ್ತು ಹೊರಪಡಿಸುವುದಿಲ್ಲ. ಅವನು ನರ್ತಿಸಲಾರ, ಅಳಲಾರ, ಆದರೂ ಅವನ ಹೃದಯವು ಶ್ರದ್ಧಾಭಕ್ತಿ ಪೂರ್ಣವಾಗಿರುವುದು. ಶ್ರೀ ಅರವಿಂದ ಮಹಾರಾಜರು ಈ ವಿಧದ ಭಾವವನ್ನು ಮೆಚ್ಚಿರುವುದಲ್ಲದೆ ನರ್ತನ ಮತ್ತು ರೋದನವನ್ನು ಮಾನಸಿಕ ದೌರ್ಬಲ್ಯದ ಸ್ಥಿತಿಯೆಂದು ಪರಿಗಣಿಸಿದ್ದಾರೆ.
ಮಧುರಭಾವದಲ್ಲಿ ಭಕ್ತನು ಪ್ರೇಮಿ ಮತ್ತು ಪ್ರಿಯತಮ ಎಂಬ ಭಾವನೆಯನ್ನು ಆಹ್ವಾನಿಸುವನು. ತಾನು ರಾಮ ಅಥವ ಕೃಷ್ಣನ ಪತ್ನಿಯೆಂದು ಭಾವಿಸುವನು. ಮಹಮ್ಮದೀಯ ಸೂಫಿಗಳು ಈ ಮನೋ ಧರ್ಮವನ್ನು ಪುರಸ್ಕರಿಸುವರು. ಬೃಂದಾವನ, ಮಥುರಾ ಮತ್ತು ನಾಡಿಯಾದಲ್ಲಿ ಮಧುರ ಭಾವದ ಭಕ್ತರನ್ನು ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು. ಅವರು ಸ್ತ್ರೀಯರಂತೆಯೆ ವೇಷಭೂಷಣಗಳನ್ನು ತೊಡುವುದಲ್ಲದೆ ಅವರಂತೆಯೇ ಸಂಭಾಷಿಸುವರು ಮತ್ತು ವರ್ತಿಸುವರು. ತಮಗೆ ಮೂರ್ಛಾವಸ್ಥೆಯುಂಟಾಗುವವರೆಗೂ (swoon) ಬಹುವಾಗಿ ನರ್ತಿಸಿ ಬಹಳ ಬಳಲಿ ಬೀಳುವರು.
ಸಖೀಭಾವದಲ್ಲಿ ಭಕ್ತನು ತಾನು ಸೀತ ಅಥವ ರಾಧೆಯ ಸಖಿಯೆಂದು ಭಾವಿಸುವನು. ವಾತ್ಸಲ್ಯಭಾವದಲ್ಲಿ ಭಕ್ತನು ಹತ್ತು ವರುಷದ ಬಾಲಕೃಷ್ಣನನ್ನು ತನ್ನ ಮಗನೆಂದು ಭಾವಿಸುವನು. ಈ ಸ್ಥಿತಿಯ ಆಶ್ಚರ್ಯವೆಂದರೆ ತಾನು ಕೃಷ್ಣನ ತಂದೆಯೆಂದು ತಿಳಿದು ಸರ್ವಭಯವರ್ಜಿತನಾಗಿ ಸರ್ವ ಸ್ವಾರ್ಥಭಾವಮುಕ್ತನಾಗಿ ಬಾಲ ಉಪಾಸನೆಯಿಂದ ನಿರಪೇಕ್ಷಿಕನಾಗಿರುವನು. ವಲ್ಲಭಾಚಾರ್ಯರ ಅನುಯಾಯಿಗಳು ವಾತ್ಸಲ್ಯಭಾವವನ್ನು ಮಾನ್ಯಮಾಡುವರು.
ದಾಸ್ಯಭಾವದಲ್ಲಿ ಶ್ರೀರಾಮ ಅಥವ ಶ್ರೀಕೃಷ್ಣನನ್ನು ತನ್ನ ಸ್ವಾಮಿಯೆಂದೂ ತಾನು ಅವನ ಭೃತ್ಯನೆಂದೂ ತಿಳಿಯುವನು. ಶ್ರೀ ಹನುಮಾನ್ ಈ ಭಾವವನ್ನು ಹೊಂದಿದ್ದನು. ಅಯೋಧ್ಯೆಯ ಬಹುಸಂಖ್ಯಾತ ಭಕ್ತರು ದಾಸ್ಯ ಭಾವವನ್ನು ಹೊಂದಿರುವರು. ತಮ್ಮ ಹೆಸರನ್ನು, ರಾಮದಾಸ, ಸೀತಾರಾಮ ದಾಸ ಮುಂತಾಗಿ ಇಟ್ಟುಕೊಳ್ಳುವರು.
ಸಖ್ಯಭಾವದಲ್ಲಿ ಶ್ರೀಕೃಷ್ಣನನ್ನು ತನ್ನ ಮಿತ್ರನೆಂದು ಪರಿಗಣಿಸುವನು. ಈ ಭಾವವು ಪರಿಶುದ್ಧತೆ, ಧೈರ್ಯ, ವಿವೇಕ ಮತ್ತು ಸಾಮರ್ಥ್ಯವನ್ನು ಅಪೇಕ್ಷಿಸುವುದು. ಸಾಮಾನ್ಯರು ಈ ಭಾವವನ್ನು ಹೊಂದಲು ಕಷ್ಟವೆಂದು ಅರಿಯುವರು. ಅರ್ಜುನನಿಗೆ ಈ ಭಾವವಿದ್ದಿತು.
ಈ ಭಾವದಲ್ಲಿ ಪೂಜಿಸುವವನಿಗೂ ಪೂಜಾರ್ಹನಿಗೂ ಸಮಾನತೆಯಿರುವುದು. ಸಖ್ಯಭಾವವು ವೈದಿಕ ಧ್ಯಾನದಲ್ಲಿ ಒಂದು ಶಾಂತರೀತಿಯು. ಅದು ಐಕ್ಯತೆಯಲ್ಲಿ ಪರ್ಯವಸಾನವಾಗುವುದು. ಆಗ ಭಕ್ತನು ಉದ್ಗಾರ ಮಾಡುವನು - "ಗೋಪಾಲೋಹಂ" - ನಾನು ಗೋಪಾಲನು, ಎಂದು.
ಶಾಕ್ತೇಯ ಪಂಥದ ಬಗ್ಗೆ ಹಾ.ವೆಂ ತುಂಬಾ ಚೆನ್ನಾಗಿ ನಿರುಪಿಸಿದ್ದಾರೇ ಸದರಿಯವರ ಫೋನ್ ನಂ ಸಿಗಬಹುದೇ....!!??
ReplyDeleteToo big an article to read in one sitting. Still interesting to read.
ReplyDeletethank you so much for your effort to make non sanskrit person to understand the great vaidik wisdom, hatsoff,kudos
ReplyDelete