ಲಲಿತಾ ತ್ರಿಶತೀ - 8. ಓಂ ಕಲ್ಮಷಘ್ನ್ಯೈ ನಮಃ
"ಕಲ್ಮಷಾಣಿ ಹಂತಿ" ಪಾಪಗಳನ್ನು ಕಳೆಯುವಳು, ನಾನು ಸಮಸ್ತ ಪಾನಗಳಿಂದ ನಿನ್ನನ್ನು ಬಿಡಿಸುತ್ತೇನೆಂದು "ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ" ಎಂಬ ಭಗವದ್ಗೀತಾ ವಚನವು ಇರುವುದು ಇದರಿಂದ ದೇವಿಯಲ್ಲಿ ಪಾಪ ಮೋಚನ ಶಕ್ತಿಯು ಕಂಡು ಬರುವುದು ಅಥವಾ ವೇದಾಂತ ಮಹಾ ವಾಕ್ಯದಿಂದ ಉಂಟಾದ ತತ್ತ್ವಜ್ಞಾನವೆಂಬ ಬ್ರಹ್ಮವಿದ್ಯೆಯು "ನ ಸ ಪಾಪಂ ಶ್ಲೋಕಂ ಶೃಣೋತಿ ಜ್ಞಾನಾಗ್ನಿಃ ಸರ್ವ ಕರ್ಮಾಣಿ ಭಸ್ಮ ಸಾತ್ಕುರುತೇಂರ್ಜುನ" ಎಂಬ ಶ್ರುತಿಸ್ಮೃತಿಗಳಲ್ಲಿ ಹೇಳಿದಂತೆ ಪಾಪಗಳನ್ನು ಭಸ್ಮಮಾಡುವುದು. ಆದ್ದರಿಂದ ವಿದ್ಯಾಸ್ವರೂಪಿಣೀಯಾದ ದೇವಿಯು ಕಲ್ಮಷಘ್ನಿಯಾಗಿರುವಳು.
(ಮುಂದುವರೆಯುವುದು...)
Comments
Post a Comment