ಲಲಿತಾ ತ್ರಿಶತೀ ( ಏಕಾರಾದಿನಾಮ ) - 3. ಓಂ ಏಕಾನೇಕಾಕ್ಷರಾಕೃತಯೇ ನಮಃ
ಏಕ, ಮತ್ತು ಅನೇಕವಾದ ಅಕ್ಷರಗಳು ಅಜ್ಞಾನವಿಶೇಷಗಳು ಈಶ್ವರ ರೂಪವಾದ ಚೈತನ್ಯ ಪ್ರತಿ ಬಿಂಬಕ್ಕೆ ಉಪಾಧಿಯಾಗಿರುವ ಶುದ್ಧ ಸತ್ತ್ವ ಪ್ರಧಾನವಾದ ಅಜ್ಞಾನವು ಏಕಾಕ್ಷರವು, ಜೀವ ಪ್ರತಿಬಿಂಬೋಪಾಧಿ ರೂಪವಾಗಿರುವ ಮಲಿನ ಸತ್ತ್ವ ಪ್ರಧಾನವಾದ ಅಜ್ಞಾನಗಳು ಅನೇಕಾಕ್ಷ್ರಗಳು. "ಮಾಯಾ ಚಾವಿದ್ಯಾ ಚ ಸ್ವಯಮೇವ ಭವತಿ" ಎಂದು ಶ್ರುತಿಯಿಂದ ಜೀವೇಶ್ವ್ರ ಪ್ರತಿಬಿಂಬೋಪಾಧಿಗಳ ಭೇದವು ವ್ಯಕ್ತವಾಗುವುದು. ಇವು ಮಾಯಾ ಶಬ್ದದಿಂದ ಕರೆಯಲ್ಪಡುವುವೂ ಪ್ರಕೃತಿ ರೂಪಗಳೂ ಆಗಿವೆ. ಮಾಯಾಂತು ಪ್ರಕೃತಿಂ ಎಂಬ ಶ್ರುತಿಯು ಈ ಅರ್ಥದಲ್ಲಿ ಪ್ರಮಾಣವಾಗಿರುವುದು. ಆ ಅಕ್ಷರವೆಂಬ ಅಜ್ಞಾನಗಳಲ್ಲಿ ಚೈತನ್ಯವು ಪ್ರತಿಬಿಂಬ ಅಥವಾ ಅವಚ್ಛಿನ್ನ ರೂಪವನ್ನು ಹೊಂದುವುದು. ಗಡಿಗೆಯಲ್ಲಿರುವ ನೀರಿನಲ್ಲಿ ಆಕಾಶವು ಪ್ರತಿ ಬಿಂಬರೂಪ ಅಥವಾ ಅವಚ್ಛಿನ್ನರೂಪಗಳಿಂದ ಇರುವುದು. ಅದರಂತೆ ಇರುವ ಚೈತನ್ಯವುಳ್ಳವಳು ಅಥವಾ ಪ್ರಣವ ಮುಂತಾದುದು ಏಕಾಕ್ಷರವು. ಅಕಾರ ಮೊದಲುಗೊಂಡು ಕ್ಷಕಾರ ಪರ್ಯಂತವಿರುವ ವರ್ಣಗಳು ಅನೇಕಾಕ್ಷರಗಳು ಅಂತಹ ಎಲ್ಲ ವರ್ಣಗಳು ಸ್ವರೂಪವಾಗಿ ಉಳ್ಳವಳೂ "ಅಕಾರಾದಿ ಕ್ಷಕಾರಾಂತಾ ಮಾತೃಕೇತ್ಯಭಿಧೀಯತೇ" ಎಂಬ ವಚನದಿಂದ ವರ್ಣಗಳೆಲ್ಲವೂ ಮಾತೃಕಾ ರೂಪವಾದ್ದರಿಂದ ಮಾತೃಕಾಕಾರವುಳ್ಳವಳೂ ಎಂದು ಅರ್ಥವು ಅಥವಾ "ಏ" + "ಕ" ಎಂಬ ಎರಡು ವರ್ಣಗಳು, ಮಿಕ್ಕ ಅನೇಕಾಕ್ಷರಗಳು ಸೇರಿ ಹದಿನೈದು ವರ್ಣಸ್ವರೂಪವಾದ ಮಂತ್ರದ ಆಕೃತಿಯುಳ್ಳವಳು. ಅಥವಾ ಏಕಭೂತವಾಗಿ ಅನೇಕಜ್ಞಾನಗಳಲ್ಲಿರುವ ಶೋಧಿತತತ್ತ್ವಂ ಪದಾರ್ಥಸಾಮರಸ್ಯವೆಂಬ ಅಕಾರವುಳ್ಳವಳು. ಅಕ್ಷರಂ ಚ + ಅಕ್ಷರಾಣಿ - ಚ ಅಕ್ಷರಾಣಿ ಏಕಂ ಚ + ಅನೇಕಾನಿ ಚ + ಏಕಾನೇಕಾನಿ ತಾನಿ ಅಕ್ಷರಾಣಿ ಚ, ತೇಷು ಆಕೃತಿ ಯಸ್ಯಾಃ, ಏಕಾನಿಚ ಅನೇಕಾನಿಚ, ತಾನಿ ಅಕ್ಷರಾಣಿ ಆಕೃತಿರ್ಯಸ್ಯಾಃ ಏ ಚ + ಕಶ್ಚ - ಏಕೌ, ತೌಚ ಅನೇಕಾಕ್ಷರಾಣಿ ಚ ತಾನಿ ಆಕೃತಿರ್ಯಸ್ಯಾಃ ಸಾ ಎಂದು ವಿಗ್ರಹವಾಕ್ಯವು.
Comments
Post a Comment