ಲಲಿತಾ ತ್ರಿಶತೀ - 17 ಓಂ ಕಮ್ರವಿಗ್ರಹಾಯೈ ನಮಃ
ಗಾಂಭೀರ್ಯ, ಧೈರ್ಯ, ಮಾಧುರ್ಯ, ಮುಂತಾದ ಬಹು ಗುಣಗಳಿಂದ ಕೂಡಿ ಅತ್ಯಂತ ಮನೋಹರವಾದ ಮೂರ್ತಿಯುಳ್ಳವಳು. "ಆನಂದ ರೂಪಮಮೃತಂ ಯದ್ವಿಭಾತಿ" ಎಂಬ ಶ್ರುತಿಯು ಬ್ರಹ್ಮ ಸ್ವರೂಪವನ್ನು ಆನಂದ ರೂಪವೆಂದು ಭೋಧಿಸಿ ಅತಿ ಮನೋಹರತ್ವವನ್ನು ಸೂಚಿಸುತ್ತದೆ. ಆದ್ದರಿಂದ ಆನಂದ ರೂಪತ್ವದಿಂದ ಅತಿ ಮನೋಹರವಾದ ಮೂರ್ತಿಯುಳ್ಳವಳು. ಲಲಿತಾ ರೂಪಳು ಎಂದು ತಾತ್ಪರ್ಯವು, ಕಮ್ರಃ ವಿಗ್ರಹಃ ಯಸ್ಯಾಃ ಎಂದು ವಿಗ್ರಹವು
(ಮುಂದುವರೆಯುವುದು...)
Comments
Post a Comment