ದೇವರಿಗೆ ಅರ್ಪಿಸಬೇಕಾದ ಪುಷ್ಪಗಳು

    ದೇವರಿಗೆ ಪುಷ್ಪಗಳನ್ನು ಅರ್ಪಿಸಿದರೆ ಅನುಗ್ರಹ ಮಾಡುತ್ತಾನೆ, ಆದರೆ ಅದು ಯಾವ ತರಹದ ಪುಷ್ಪಗಳು :
ಅಹಿಂಸಾ ಪ್ರಥಮಂ ಪುಷ್ಪಂ
ಪುಷ್ಪಂ ಇಂದ್ರಿಯ ನಿಗ್ರಹಃ
ಸರ್ವಭೂತದಯಾ ಪುಷ್ಪಂ
ಸತ್ಯಪುಷ್ಪಂ ವಿಶೇಷತಃ
ಜ್ಞಾನ ಪುಷ್ಪಂ ಧ್ಯಾನಪುಷ್ಪಂ
ತಪಃ ಪುಷ್ಪಂ ಕ್ರಿಯಾಪುಷ್ಪಂ
ಆರ್ಚತಿ ತುಷ್ಯತಿ ಕೇಶವ

ಅಹಿಂಸಾ ಪ್ರಥಮಂ ಪುಷ್ಪಂ : ಮೊಟ್ಟ ಮೊದಲನೇ ಪುಷ್ಪ ಅಹಿಂಸೆ. ಅಂದರೆ ಹಿಂಸೆ ಮಾಡದಿರುವುದು. ಯಾರ ಮನಸ್ಸನ್ನೂ ನೋಯಿಸದೆ ಇರುವುದು. ಹಿಂಸಾತ್ಮಕವಾದ ರೀತಿಯಲ್ಲಿ ಚುಚ್ಚು ಮಾತುಗಳನ್ನು ಆಡದೇ ಇರುವುದು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ಇದನ್ನೇ ಎಲ್ಲಾ ಮಹನೀಯರೂ ಹೇಳಿದ್ದಾರೆ. ಗಾಂಧೀಜಿಯವರೂ ಹೇಳಿದ್ದಾರೆ. 'ಮಾತೇ ಮಾಣಿಕ್ಯ', 'ಮಾತು ಬೆಳ್ಳಿ, ಮೌನ ಬಂಗಾರ' ಎನ್ನುವ ಗಾದೆ ಮಾತೂ ಇವೆ ವಿಶೇಷವಾಗಿ ಮಾತನಾಡುವಾಗ ಜಾಗ್ರತೆ ವಹಿಸಬೇಕೆನ್ನುವುದೇ ಆಗಿದೆ.

ಪುಷ್ಪಂ ಇಂದ್ರಿಯ ನಿಗ್ರಹಃ : ಇದು ನಮ್ಮ ಜೀವನದಲ್ಲಿ ತುಂಬಾ ಅವಶ್ಯಕವಾದದ್ದು. ಪರಸ್ತ್ರೀಯರನ್ನು ನೋಡುವ ದೃಷ್ಟಿಯಲ್ಲಿ ಯಾವುದೇ ರೀತಿಯ ಕಲ್ಮಶ ಭಾವನೆಯಿರದೆ ನಮ್ಮ ಮನೆಯವರಂತೆ ಅನ್ನು ಆತ್ಮೀಯತೆ ತುಂಬಿರಬೇಕು ಅಕ್ಕ-ತಂಗಿ, ಹಿರಿಯರನ್ನು ಮಾತಾ-ಪಿತೃಗಳಂತೆ ಗೌರವವಾಗಿ ನೋಡುವುದೇ ಅಲ್ಲದೇ ತಾಯಿಯಲ್ಲಿ, ಅಕ್ಕ-ತಂಗಿಯರುಗಳಲ್ಲಿ ಇರುವ ಪ್ರೇಮವೇ ಬೇರೆ ನಮಗೆ ನಿಯಮಿತವಾದ ಸ್ತ್ರೀಯ ಪ್ರೇಮವೇ ಬೇರೆ. ಹಾಗೆ ಬೇರೆಯವರಲ್ಲಿ ಪ್ರೀತಿ ವಾತ್ಸಲ್ಯಗೌರವದಿಂದ ನಡೆಯುವುದೇ ಇಂದ್ರಿಯ ನಿಗ್ರಹ ಪುಷ್ಪದ ತತ್ವ.

ಸರ್ವಭೂತದಯಾ ಪುಷ್ಪಂ : ಎಲ್ಲರಲ್ಲೂ ದಯೆ, ಕರುಣೆ,, ತೋರಿಸುವುದು. ವಿಶ್ರುತವಾದ ಮಾತುಗಳನ್ನಾಡುವುದು ಇದಕ್ಕೆ ಜಾತಿ - ಮತ ಭೇದವಿಲ್ಲ. ಸರ್ವಜನರ ಭಾಗಿಯಾಗುವುದು. ಇದನ್ನು ಗಾಂಧೀಜಿಯವರೂ, ಎಲ್ಲ ಮಹನೀಯರೂ ಹೇಳಿದ್ದಾರೆ. ಇದೇ ಇದರ ಒಳಗಿನ ತತ್ವ.

ಸತ್ಯ ಪುಷ್ಪಂ ವಿಶೇಷತಃ : ಇದು ವಿಶೇಷವಾದ ಪುಷ್ಪ, ಎಲ್ಲಾ ಕಡೆಯಲ್ಲೂ ಸತ್ಯವನ್ನೇ ಮಾತನಾಡುವುದು ಇದು ವ್ಯಾಪಾರ ವ್ಯವಹಾರದಲ್ಲಿ ಮನೆಯಲ್ಲಿ ವಿಶೇಷವಾಗಿ ನಡೆಸಬೇಕೆನ್ನುವುದೇ ಈ ಪುಷ್ಪದ ಒಳಗಿನ ತತ್ವ.

ಜ್ಞಾನ ಪುಷ್ಪಂ : ಇದು ವ್ಯವಹಾರ ಜ್ಞಾನಕ್ಕಿಂತಲೂ ವಿಶೇಷವಾಗಿ ಆಧ್ಯಾತ್ಮಿಕ ಜ್ಞಾನ. ಭಗವಂತನ ವಿಚಾರದ ಜ್ಞಾನ, ಮಹನೀಯರ ವಿಚಾರದಲ್ಲಿ ಜ್ಞಾನ ತಿಳಿದುಕೊಳ್ಳುವುದೇ ಇದರ ತತ್ವ.

ಧ್ಯಾನ ಪುಷ್ಪಂ : ಇದು ಎಲ್ಲರಿಗೂ ಅಗತ್ಯವಾಗಿ ಬೇಕಾಗಿರುವ ಪುಷ್ಪ, ಕೃತಯುಗ, ತ್ರೇತಾಯುಗ, ದ್ವಾಪರಯುಗಕ್ಕಿಂತಲೂ ವಿಶೇಷವಾಗಿ ಕಲಿಯುಗದಲ್ಲಿ ಧ್ಯಾನವೇ ಮುಖ್ಯ ಸಾಧನವಾಗಿದೆ. ಕೇವಲ ಬೆಳಗ್ಗೆ, ಮಧ್ಯಾಹ್ನ, ಸಂಧ್ಯಾಕಾಲ ದೇವರ ಮುಂದೆ ದೀಪ ಹಚ್ಚಿಟ್ಟು ಭಕ್ತಿಯಿಂದ ಐದು ನಿಮಿಷಗಳ ಕಾಲ ಸ್ಮರಣೆ ಮಾಡಿದರೆ ಸಾಕು ಅಷ್ಟರಿಂದಲೇ ಭಗವಂತನು ತೃಪ್ತನಾಗಿ ಬೇಡಿದ್ದು ಕೊಡುತ್ತಾನೆ, ಅನುಗ್ರಹಿಸುತ್ತಾನೆ ಎನ್ನುವುದೇ ಇದರ ತತ್ವ.

ತಪಃ ಪುಷ್ಪಂ : ಪರಮಾತ್ಮನನ್ನು ಧ್ಯಾನಿಸುತ್ತಾ ಪೂಜಿಸುತ್ತಾ ಕುಳಿತುಕೊಳ್ಳುವುದೇ ದೊಡ್ಡ ತಪಸ್ಸು, ವ್ಯಾಪಾರ ವ್ಯವಹಾರ ಸ್ಥಾನದಲ್ಲೂ ದೇವರ ಭಾವಚಿತ್ರದ ಮುಂದೆ ಬೆಳಗ್ಗೆ ಬಾಗಿಲು ತೆರೆದು ಸ್ಚಚ್ಛ ಮಾಡಿ ಹೂವಿರಿಸಿ ಪ್ರಾತಃಕಾಲ ಸಂಧ್ಯಾಕಾಲಗಳಲ್ಲಿ ದೀಪ ಹಚ್ಚಿಟ್ಟು ಕೈಮುಗಿದು ಎರಡು ನಿಮಿಷಗಳ ಕಾಲ ಯಾರೊಡನೆಯೂ ಮಾತನಾಡದೇ ಧ್ಯಾನಿಸುವುದೇ ದೊಡ್ಡ ತಪಸ್ಸು. ಇದೇ ಈ ಪುಷ್ಪದ ಒಳಗಿನ ತತ್ವ.

ಕ್ರಿಯಾ ಪುಷ್ಪಂ : ನಮ್ಮ ಎಲ್ಲಾ ಕ್ರಿಯೆಯಲ್ಲೂ ಅಂದರೆ ಆಚರಣೆಯಲ್ಲಿ ಕ್ರಮಶಿಕ್ಷಣವಿರಬೇಕು.
1. ದೇವಾಲಯಕ್ಕೆ ಬಂದವರಿಗೆ ಹಿಂಸೆ ಕೊಡಬಾರದು ಹಿಂಸಾತ್ಮಕವಾದ ಮಾತುಗಳನ್ನಾಡಬಾರದು.
2. ಭಯಭರಿತರಾದ ಹೆಣ್ಣು ಹುಡುಗರು, ಹೆಂಗಸರು ದೇವಾಲಯಕ್ಕೆ ಬಂದಾಗ ಅವರನ್ನು ನೋಡುವ ದೃಷ್ಟಿಯಲ್ಲಿ ಹಾಗೂ ಮಾತನಾಡಿಸುವ ರೀತಿಯಲ್ಲಿ ಭಕ್ತಿ ತುಂಬಿರಬೇಕಾಗಲೀ ಬೇರೆ ಯಾವುದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಬಾರದು ಇದು ಇಂದ್ರಿಯ ನಿಗ್ರಹ ತತ್ವ.
3. ಎಲ್ಲಾ ಭಕ್ತಾದಿಗಳಲ್ಲೂ ಒಂದೇ ಭಾವನೆ ಇಡಬೇಕು ಅಂದರೆ ದುಡ್ಡು ನೀಡಿದವರಿಗೆ ಒಂದು ಸಾಲು, ಧರ್ಮ ದರ್ಶನಕ್ಕೆ ಒಂದು ಸಾಲು, ತುಂಬಾ ದಕ್ಷಿಣೆ ಕೊಡವವರು ಸ್ವಲ್ಪ ದಕ್ಷಿಣೆ ಕೊಡುವವರು ಅಂತ ಭೇದಭಾವ ತೋರಿಸಬಾರದು ಎಲ್ಲರಿಗೂ ಸರಿಸಮಾನವಾದ ರೀತಿಯಲ್ಲಿ ತೀರ್ಥಪ್ರಸಾದ ಕೊಡುವುದನ್ನು ರೂಢಿಯಲ್ಲಿರಿಸಿಕೊಳ್ಳಬೇಕು ಇದೇ ಸರ್ವಭೂತದಯಾ ಪುಷ್ಪದ ತತ್ವ
4. ಸತ್ಯವಾದ ಮಾತು ಸತ್ಯವಾದ ಆಚರಣೆ ಪೂಜೆ ನಡೆಸುವುದೇ ಸತ್ಯಪುಷ್ಪದ ತತ್ವ
5. ಭಗವಂತನ ವಿಚಾರದಲ್ಲಿ ಜ್ಞಾನ ತಿಳಿದುಕೊಂಡು ಬೇರೆಯವರಿಗೂ ಬೋಧಿಸುವುದು ಹಾಗೂ ಜ್ಞಾನ ಪುಷ್ಪ ಪ್ರಸಾದ ಕೊಡುವುದೇ ಜ್ಞಾನ ಪುಷ್ಪ.
6. ತನ್ನ ಬಗ್ಗೆ ಭಕ್ತರ ಬಗ್ಗೆ ಧ್ಯಾನಮಾಡಿ ಅವರಿಗೆ ದೇವರು ಅನುಗ್ರಹಿಸುವಂತೆ ಮಾಡುವುದೇ ಧ್ಯಾನ ಪುಷ್ಪ.
7. ಸಮಯಕ್ಕೆ ಸರಿಯಾಗಿ ಬಾಗಿಲನ್ನು ತೆರೆದು ದೇವರ ದರ್ಶನವನ್ನು ಮಾಡಲು ಭಕ್ತರಿಗೆ ಅವಕಾಶ ಮಾಡಿಕೊಡುವುದು.
8. ಈ ಮೇಲಿನ ಎಲ್ಲಾ ವಿಚಾರಗಳನ್ನು ಸರಿಯಾದ ಮಾರ್ಗದಲ್ಲಿ ಆಚರಿಸಿ ತಮ್ಮ ಆಚಾರ ವಿಚಾರಗಳನ್ನು ಕ್ರಮಬದ್ಧವಾಗಿ ಇರಿಸಿಕೊಳ್ಳುವುದೇ ಕ್ರಿಯಾಪುಷ್ಪದ ತತ್ವ.
 ಈ ಎಂಟು ಪುಷ್ಪಗಳನ್ನು ದೇವಾಲಯದ ಪರಮಾತ್ಮನಿಗೆ ಅರ್ಪಿಸಲು ಗೊತ್ತಿದ್ದರೆ ಮಾತ್ರ ಅವನು ಅರ್ಚನೆ ಮಾಡಲು ಅರ್ಹನಾಗಿರುತ್ತಾನೆ.

Comments

  1. ಅದ್ಭುತ, ಅತ್ಯುತ್ತಮ ವಿಷಯ, ಪ್ರಸ್ತುತಿ, ಪ್ರಕಾಶನ....

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ