ಭಾರತಮಾತೆಯ ಉದರದಲ್ಲಿ ಜನಿಸಿ, ಸರ್ವಶ್ರೇಷ್ಠ ಯತಿಗಳಾಗಿ, ವೈರಾಗ್ಯ ಚಕ್ರವರ್ತಿಗಳಾಗಿ, ಜಗದ್ಗುರುಗಳಾಗಿ, ಜಗದ್ವಂದ್ಯರಾಗಿ, ಜಗನ್ಮಾನ್ಯರಾಗಿ, ಮಹಾಕವಿಗಳಾಗಿ, ಮಹಾದಾರ್ಶನಿಕರಾಗಿ, ಯುಗಪುರುಷರಾಗಿ, ಧರ್ಮೋಪದೇಶಕರಾಗಿ ಬೆಳಗಿದ ಅಸಾಮಾನ್ಯ ಚೇತನ ಶ್ರೀ ಶಂಕರಾಚಾರ್ಯರು ಅವರಂತೆ ತಮ್ಮ ಅಲ್ಪಾಯುಷ್ಯದಲ್ಲಿ ಕಲ್ಪವನ್ನು ಸಾಧಿಸಿದ ಇನ್ನೊಬ್ಬ ಯೋಗಿಯಿಲ್ಲ ನಿರ್ಗುಣ ಬ್ರಹ್ಮವನ್ನು ಪ್ರತಿಪಾದಿಸಿದರೂ ಅವರಷ್ಟು ಸಗುಣ ದೇವತಾ ಸ್ತೋತ್ರಗಳನ್ನು ರಚಿಸಿದ ಇನ್ನೊಬ್ಬ ಋಷಿ ಕವಿಯಿಲ್ಲ. "ನಾನೃಷಿಃ ಕುರುತೇ ಕಾವ್ಯಂ ಋಷಿಶ್ಚ ಕಿಲ ದರ್ಶನಾತ್, ದರ್ಶನಾತ್ ವರ್ಣನಾಚ್ಛೈವ ರೂಢಾ ಲೋಕೇ ಕವಿಶ್ರುತಿಃ" ಎಂಬತೆ, ದಾರ್ಶನಿಕ ಪ್ರಜ್ಞೆಯುಳ್ಳವನೇ ಋಷಿ. ತಾನು ಕಂಡ ದರ್ಶನವನ್ನು ಬೇರೆಯವರಿಗೂ ಕಣ್ಣಿಗೆ ಕಟ್ಟುವಂತೆ ವರ್ಣಿಸಬಲ್ಲವನೇ ಋಷಿಕವಿಯೆನಿಸುತ್ತಾನೆ. ಇಂತಹ ಋಷಿಕವಿಗಳಾದ ಆಚಾರ್ಯ ಶಂಕರರು ಕಾವ್ಯ ರಚನೆಯನ್ನೇ ಮುಖ್ಯ ಗುರಿಯಾಗಿ ಇಟ್ಟುಕೊಂಡಿದ್ದರೆ ವಾಲ್ಮೀಕಿ, ಕಾಳಿದಾಸಾದಿಗಳ ಸ್ಥಾನದಲ್ಲೇ ನಿಲ್ಲುತ್ತಿದ್ದರು ಎಂಬಲ್ಲಿ ಸಂಶಯವಿಲ್ಲ ಅವರೊಬ್ಬ ವರಕವಿಗಳೇ ಹೊರತು ನರಕವಿಗಳಲ್ಲ ಅವರ ಕಾವ್ಯಲಹರಿಯ ಸವಿಯುಂಡಾಗ "ನಿನ್ನಾಂಗ ಆಡಾಕ, ನಿನ್ನಾಂಗ ಹಾಡಾಕ ಪಡೆದು ಬಂದಿರಬೇಕೋ ಗುರುದೇವ" ಎಂಬ ಬೇಂದ್ರೆಯವರ ವಾಕ್ಯ ನೆನಪಾಗುತ್ತದೆ. ನಿರ್ಗುಣ ಬ್ರಹ್ಮೋಪಾಸನೆಗೆ ಸಗುಣ ಬ್ರಹ್ಮೋಪಾಸನೆಯೂ ಸಾದನ. ಇದನ್ನರಿತೇ ಶಂಕರರು ಅದ್ವೈತಿಗಳಾದರೂ ನ...
Comments
Post a Comment