ಗೋದಾಸ್ತುತಿಃ (ಸಂಗ್ರಹ) - 13
ತ್ವದ್ಭುಕ್ತ ಮಾಲ್ಯಸುರಭೀಕೃತಚರುಮೌಳೇಃ
ಹಿತ್ವಾ ಭುಜಾಂತರಗತಾಮಪಿ ವೈಜಯಂತೀಮ್ |
ಪತ್ಯುಸ್ತವೇಶ್ವರಿ ಮಿಥಃ ಪ್ರತಿಘಾತಲೋಲಾಃ
ಬರ್ಹಾತಪತ್ರರುಚಿಮಾರಚಯಂತಿ ಭೃಂಗಾಃ ||14||
ಈಶ್ವರಿ = ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಗೋದಾ ದೇವಿಯೇ!,
ತ್ವದ್ಭುಕ್ತಮಾಲ್ಯ = ನೀನು ಮುಡಿದುಕೊಟ್ಟ ಮಾಲಿಕೆಗಳಿಂದ,
ಸುರಭೀಕೃತ = ಪರಿಮಳಗೊಂಡು,
ಚಾರು = ಸುಂದರವಾದ,
ಮೌಳೇಃ = ಶಿರಸ್ಸಿನಿಂದ ಕೂಡಿದ,
ತವ = ನಿನ್ನ,
ಪಶ್ಯುಃ = ಪತಿಯ,
ಭುಜಾಂತರಗತಾಂ = ಎರಡು ಭುಜಗಳ ಮಧ್ಯದಲ್ಲಿರುವ ವಕ್ಷಸ್ಥಲದಲ್ಲಿರುವ,
ವೈಜಯಂತೀ ಅಪಿ = 'ವೈಜಯಂತಿ' - ಎಂಬ ವನಮಾಲೆಯನ್ನೂ ಕೂಡ,
ಹಿತ್ವಾ = ತ್ಯಾಗಮಾಡಿ,
ಭೃಂಗಾಃ = ದುಂಬಿಗಳಾದರೋ (ನಿನ್ನ ಪತಿಯ ತಲೆಯಮೇಲೆ),
ಮಿಥಃ = ಪರಸ್ಪರ,
ಪ್ರತಿಘಾತಲೋಲಾಃ = ಒಂದಕ್ಕೊಂದು ತಗಲುತ್ತಾ ಆಟವಾಡುತ್ತಾ,
ಬರ್ಹಾ = ನವಿಲುಗರಿಯ,
ಆತಪತ್ರಂ = ಕೊಡೆಯ ರೂಪವನ್ನು,
ಅರಚಯಂತಿ = ಉಂಟುಮಾಡುತ್ತಿವೆ.
ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಎಲೈ! ಗೋದಾ ದೇವಿಯೇ!, ನೀನು ಮುಡಿದುಕೊಟ್ಟ ಮಾಲಿಕೆಗಳನ್ನು ತನ್ನ ತಲೆಯಲ್ಲಿ ಮುಡಿದಿರುವುದರಿಂದಲೇ ಪರಿಮಳಗೊಂಡು ಸುಂದರವಾದ ಶಿರಸ್ಸಿನಿಂದ ಕೂಡಿದ, ನಿನ್ನ ಪತಿಯ ವಕ್ಷಸ್ಥಲದಲ್ಲಿರುವ, 'ಸರ್ವಗಂಧಃ'- ಎಂದು ಉಪನಿಷತ್ಪ್ರತಿಪಾದ್ಯನಾದ ಸರ್ವೇಶ್ವರನ ಸಂಸರ್ಗದಿಂದ ನಿರಂತರವಾದ ಪರಿಮಳಭರಿತವಾದ, 'ವೈಜಯಂತೀ' - ಎಂಬ ವನಮಾಲೆಯನ್ನೂ ತ್ಯಾಗ ಮಾಡಿದ, ದುಂಬಿಗಳಾದರೋ ನಿನ್ನ ಪತಿಯ ಶಿರಸ್ಸಿನ ಮೇಲೆ, ನೀನು ಮುಡಿದು ಕೊಟ್ಟ ಪುಷ್ಪದ ಮಧುವನ್ನು ಪಾನಮಾಡಲು, 'ತಾನು ಮೊದಲು, ತಾನು ಮೊದಲು' - ಎಂದು ಪರಸ್ಪರ ಘರ್ಷಣೆ ಮಾಡುತ್ತಾ ಅಲೆಯುತ್ತಲೇ ನಿನ್ನ ಪ್ರಿಯನಿಗೆ ಸಪ್ತವರ್ಣಗಳಿಂದ ಕೂಡಿದ ನವಿಲುಗರಿಯ ಕೊಡೆಯೊಂದನ್ನು ಹಿಡಿದಿರುವಂತೆ ಮಾಡುತ್ತಿವೆ. (ಇದಾದರೋ ವಿವಾಹದ ಕಾಶಿಯಾತ್ರೆಯ ಸಮಯದಲ್ಲಿ ನಿನ್ನ ಪತಿ ಹಿಡಿದಿರುವ ಕೊಡೆಯಂತೆ ಕಾಣುತ್ತದೆ.)

Comments
Post a Comment