ಶಿವವೇದಪಾದಸ್ತವಃ (ಜೈಮಿನಿ ಮಹರ್ಷಿಗಳು)

ನಮಾಮಿ ನಿತ್ಯಂ ತ್ರಿಪುರಾರಿಮೇನಂ
ಯಮಾನ್ತಕಂ ಷಣ್ಮುಖತಾತಮಿಶಮ್ |
ಲಲಾಟನೇತ್ರಾರ್ದಿತಪುಷ್ಪಚಾಪಂ
ವಿಶ್ವಂ ಪುರಾಣಂ ತಮಸಃ ಪರಸ್ತಾತ್ ||1||

    ತ್ರಿಪುರರೆಂಬ ದಾನವರ ಶತ್ರುವೂ ಯಮನಿಗೂ ಯಮನೂ ಷಣ್ಮುಖನ ತಂದೆಯೂ ಎಲ್ಲಕ್ಕೂ ಒಡೆಯನೂ ಆದ, ಹಣೆಗಣ್ಣಿನ (ಅಗ್ನಿಯಿಂದ) ನಾಶಗೊಳಿಸಲ್ಪಟ್ಟ ಮನ್ಮಥನುಳ್ಳವನೂ ವ್ಯಾಪಕನೂ ಪುರಾಣನೂ ಕತ್ತಲೆಯ ಅಚೆಯಿರುವವನೂ ಆದ ಪರಮೇಶ್ವರನನ್ನು ನಾನು ಯಾವಾಗಲೂ ನಮಸ್ಕರಿಸುವೆನು.

ಅನನ್ತಮವ್ಯಕ್ತಮಚಿನ್ತ್ಯಮೇಕಂ
ಹರಂ ತಮಾಶಾಂಬರಮಂಬರಾಭಮ್ |
ಅಜಂ ಪುರಾಣಂ ಪ್ರಣಮಾಮಿ ಯೋಯಮ್
ಅಣೋರಣೀಯಾನ್ ಮಹತೋ ಮಹೀಯಾನ್ ||2||

    ತುದಿಯಿಲ್ಲದವನೂ ಅವ್ಯಕ್ತನೂ, ಚಿಂತಿಸಲು ಬಾರದವನೂ ಪಾಪಹರನೂ ದಿಗಂಬರನೂ ಆಕಾಶದ ಹೋಲಿಕೆಯುಳ್ಳವನೂ ಆದ ಅವನನ್ನು - (ಎಂದರೆ) ಯಾವ ಆತನು ಚಿಕ್ಕದರಲ್ಲೆಲ್ಲ ಚಿಕ್ಕವನೂ ದೊಡ್ಡದರಲ್ಲೆಲ್ಲ ದೊಡ್ಡವನೂ ಆಗಿರುವನೋ ಆ ಜನ್ಮರಹಿತನಾದ ಪುರಾಣನಾದ ದೇವನನ್ನು ನಮಸ್ಕರಿಸುವೆನು.

ಅನ್ತಸ್ಥಮಾತ್ಮಾನಮಜಂ ನ ದೃಷ್ಟ್ವಾ
ಭ್ರಮನ್ತಿ ಮೂಢಾ ಗಿರಿಗಹ್ವರೇಷು |
ಪಶ್ಚಾದುದಗ್ ದಕ್ಷಿಣತಃ ಪುರಸ್ತಾತ್
ಅಧಸ್ವಿದಾಸೀದುಪರಿಸ್ವಿದಾಸೀತ್ ||3||

    ಹೃದಯಾಂತರಾಳದಲ್ಲಿರುವ ಜನ್ಮರಹಿತನಾದ ಆತ್ಮನಾದ (ಶಿವನನ್ನು) ಕಾಣದೆ ಮೂಢರು ಕಾಡು ಮತ್ತು ಗುಹೆಗಳಲ್ಲಿ ಹಿಂದಕ್ಕೂ ಮುಂದಕ್ಕೂ ಬಲಕ್ಕೂ ಎಡಕ್ಕೂ ಮೇಲಕ್ಕೂ ಕೆಳಕ್ಕೂ ತಿರುಗುತ್ತಾ ಎಲ್ಲಿದಾನೆಂದು (ಹುಡುಕುತ್ತಿರುವರು.)

ಇಮಂ ನಮಾಮಿಶ್ವರಮಿನ್ದುಮೌಳಿಂ
ಶಿವಂ ಮಹಾನನ್ದಮಶೋಕದುಃಖಮ್ |
ಹೃದಂಬುಜೇ ತಿಷ್ಠತಿ ಯಃ ಪರಾತ್ಮಾ
ಪರೀತ್ಯ ಸರ್ವಾಃ ಪ್ರದಿಶೋ ದಿಶಶ್ಚ ||4||

    ಈಶ್ವರನೂ ಚಂದ್ರಶೇಖರನೂ ಮಂಗಳಸ್ವರೂಪನೂ ಆನಂದಮಯನೂ ದುಃಖಶೋಕಗಳಿಲ್ಲದವನೂ ಆದ, ಯಾವ ಈ ಪರಮಾತ್ಮನು ದಿಕ್ಕುದಿಕ್ಕುಗಳನ್ನೆಲ್ಲ ವ್ಯಾಪಿಸಿಕೊಂಡು ಹೃದಯಕಮಲದಲ್ಲಿಯೇ ಇದ್ದುಕೊಂಡಿರುವನೋ, ಇವನನ್ನು ನಮಸ್ಕರಿಸುವೆನು.

ರಾಗಾದಿಕಾಪಥ್ಯಸಮುದ್ಭವೇನ
ಭಗ್ನಂ ಭವಾಖ್ಯೇನ ಮಹಾಭಯೇನ |
ವಿಲೋಕ್ಯ ಮಾಂ ಪಾಲಯ ಚಂದ್ರಮೌಳೇ
ಭಿಷಕ್ತಮಂ ತ್ವಾ ಭಿಷಜಾಂ ಶೃಣೋಮಿ ||5||

    ಕಾಮನೇ ಮುಂತಾದ ಅಪಥ್ಯಗಳಿಂದ ಉಂಟಾದ ಸಂಸಾರವೆಂಬ ಮಹಾ ಭಯದಿಂದ ಹೊಡೆಯಲ್ಪಟ್ಟು (ಅರ್ತನಾಗಿರುವ) ನನ್ನನ್ನು ಎಲೈ ಚಂದ್ರಮೌಳಿಯೆ, ನೋಡಿ ಕಾಪಾಡು! ನೀನು ವೈದ್ಯರುಗಳಲ್ಲೆಲ್ಲ ಉತ್ತಮವೈದ್ಯನೆಂತ ಕೇಳಿದ್ದೇನೆ.

ದುಃಖಾಂಬುರಾಶಿಂ ಸುಖಲೇಶಹೀನ
ಮಸ್ಪೃಷ್ಟಪುಣ್ಯಂ ಬಹುಪಾತಕಂ ಮಾಮ್ |
ಮೃತ್ಯೋಃ ಕರಸ್ಥಂ ಭವಸರ್ಪಭೀತಂ
ಪಶ್ಚಾತ್ ಪುರಸ್ತಾದಧರಾದುದಕ್ ಸ್ಥಾತ್ ||6||

    ದುಃಖವೆಂಬ ನೀರಿನ ಸಮುದ್ರದಂತಿರುವ, ಸುಖದ ಲೇಶವು ಇಲ್ಲದ, ಪುಣ್ಯವನ್ನೇ ಮಾಡದಿರುವ ಬಹಳ ಪಾಪಿಯಾದ, ಮೃತ್ಯುವಿಗೆ ವಶನಾಗಿರುವ, ಸಂಸಾರವೆಂಬ ಹಾವಿನಿಂದ ಭಯಗೊಂಡಿರುವ ನನ್ನನ್ನು ಹಿಂದಕ್ಕೂ ಮುಂದಕ್ಕೂ ಕೆಳಕ್ಕೂ ಪಕ್ಕಕ್ಕೂ (ಎಲ್ಲೆಲ್ಲೂ ಕಾಪಾಡು)

ಆಗಚ್ಛತಾತ್ರಾಂಶು ಮುಮುಕ್ಷವೋ ಯೇ
ಯೂಯಂ ಶಿವಂ ಚಿನ್ತಯತೋನ್ತರಾಬ್ಜೇ |
ಧ್ಯಾಯನ್ತಿ ಮುಕ್ತ್ಯರ್ಥಮಿಮಂ ಹಿ ನಿತ್ಯಂ
ವೇದಾನ್ತವಿಜ್ಞಾನಸುನಿಶ್ಚಿತಾರ್ಥಾಃ ||7||

    ಮುಮುಕ್ಷುಗಳು ಯಾರು ಇದ್ದೀರೋ ಇಲ್ಲಿ ಬನ್ನಿರಿ; ನೀವು ಹೃದಯ ಕಮಲದಲ್ಲಿ ಶಿವನ್ನು ಧ್ಯಾನಿಸಿರಿ. ವೇದಾಂತವಿಜ್ಞಾನದಲ್ಲಿ ಚೆನ್ನಾಗಿ ಪಳಗಿದ ಜ್ಞಾನಿಗಳು ಮುಕ್ತಿಗಾಗಿ ಇವನನ್ನೇ ಧ್ಯಾನಮಾಡುತ್ತಾರಲ್ಲವೆ?

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ