ಅನ್ನಪೂರ್ಣ ಸ್ತೋತ್ರಮ್

ನಿತ್ಯಾನಂದಕರೀ ವವರಾಭಯಕರೀ ಸೌಂದರ್ಯರತ್ನಾಕರೀ |
ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ ||
ಪ್ರಾಲೇಯಾಚಲವಂಶ ಪಾವನಕರೀ ಕಾಶೀ ಪುರಾಧೀಶ್ವರೀ |
ಬಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರೀ ||1||

    ಶಾಶ್ವತವಾದ ಆನಂದವನ್ನು ನೀಡುವವಳು, ಭಕ್ತರಿಗೆ ವರ ಮತ್ತು ಅಭಯವನ್ನು ನೀಡುವವಳು, ಸೌಂದರ್ಯವಂತಳು, ಭಕ್ತರ ಪಾಪಗಳನ್ನು ನಾಶಮಾಡಿ ಪವಿತ್ರಗೊಳಿಸುವವಳು, ಮಹೇಶ್ವರನ ಪ್ರತ್ಯಕ್ಷ ಪ್ರಾಣವಲ್ಲಭೆ, ಪರ್ವತ ರಾಜನ ವಂಶ ಪಾವನಗೊಳಿಸಿದವಳು, ಕಾಶೀ ಪಟ್ಟಣದ ಅಧಿದೇವತೆ, ಭಕ್ತರಿಗೆ ಕೃಪೆ ನೀಡುವ ಅನ್ನಪೂರ್ಣೇಶ್ವರೀ ಮಾತೆಯೇ ಭಿಕ್ಷೆಯನ್ನು ನೀಡು ||1||

ನಾನಾರತ್ನ ವಿಚಿತ್ರ ಭೂಷಣಕರೀ ಹೇಮಾಂಬರಾಡಂಬರೀ |
ಮುಕ್ತಾಹಾರ ವಿಡಂಬ ಮಾನವಿಲಸದ್ವಕ್ಷೋಜಕುಂಭಾಂತರೀ |
ಕಾಶ್ಮೀರಾಗುರುವಾಸಿತಾಂಗುರುಚಿರೇ ಕಾಶೀ ಪುರಾಧೀಶ್ವರೀ |
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||2||

    ವಿವಿಧ ಪ್ರಕಾರದ ಆಶ್ಚರ್ಯಕರ ಬಂಗಾರದ ರತ್ನಾಭರಣಗಳನ್ನು ಧರಿಸಿರುವಳು, ಸಂತೋಷದಿಂದಿರುವ, ವಕ್ಷಃಸ್ಥಳದಲ್ಲಿ ಮುತ್ತಿನಹಾರ ತೂಗಾಡುತ್ತಿರುವ, ಕೇಶರ ಕಸ್ತೂರಿಗಳಿಂದ ಸುವಾಸಿತಳೂ, ಕಾಂತಿಯುಕ್ತದೇಹವುಳ್ಳವಳು, ಕಾಶೀಪಟ್ಟಣದ ಅಧಿದೇವತೆ, ಭಕ್ತರಿಗೆ ಕೃಪೆ ನೀಡುವ ಮಾತೆ ಅನ್ನಪೂರ್ಣೇಶ್ವರೀ ಭಿಕ್ಷೆಯನ್ನು ನೀಡು ||2||

ಯೋಗಾನಂದಕರೀ ರಿಪುಕ್ಷಯಕರೀ ಧರ್ಮೈಕನಿಷ್ಠಾಕರೀ |
ಚಂದ್ರಾರ್ಕಾನಲಭಾಸಮಾನಲಹರೀ ತ್ರೈಲೋಕ್ಯರಕ್ಷಾಕರೀ ||
ಸರ್ವೈಶ್ವರ್ಯಕರೀ ತಪಃ ಫಲಕರೀ ಕಾಶೀಪುರಾಧೀಶ್ವರೀ |
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರೀ ||3||

    ಯೋಗಾನಂದವನ್ನೀಯುವವಳು, ಶತ್ರುನಾಶಮಾಡುವಾಕೆ, ಧರ್ಮದಲ್ಲಿ ಏಕೈಕ ನಿಷ್ಠೆವುಂಟುಮಾಡುವವಳು, ಚಂದ್ರ, ಸೂರ್ಯ, ಅಗ್ನಿಯರಂತೆ ದೇಹಕಾಂತಿಯುಳ್ಳವಳು, ತ್ರಿಲೋಕಗಳನ್ನು ರಕ್ಷಿಸುವವಳು, ಭಕ್ತರಿಗೆ ಸಕಲ ಐಶ್ವರ್ಯ ನೀಡುವವಳು, ಭಕ್ತರ ತಪಸ್ಸಿಗೆ ಫಲನೀಡುವವಳು, ಕಾಶೀಕ್ಷೇತ್ರದ ಪುರವಾಸಿನೀ ಅಂಬಾ ಅನ್ನಪೂರ್ಣೇಶ್ವರೀ, ಭಕ್ತರಿಗೆ ಕೃಪ ನೀಡುವ ಮಾತೆ ಅನ್ನಪೂರ್ಣೇಶ್ವರೀ ಭಿಕ್ಷೆಯನ್ನು ನೀಡು ||3||

ಕೈಲಾಸಾಚಲ ಕಂದರಾಲಯಕರೀ ಗೌರೀಹ್ಯುಮಾ ಶಾಂಕರೀ |
ಕೌಮಾರೀ ನಿಗಮಾರ್ಥಗೋಚರಕರೀ ಹೂಂಕಾರ ಬೀಜಾಕ್ಷರೀ ||
ವೋಕ್ಷಾದ್ವಾರಕಪಟ ಪಾಟನಕರೀ ಕಾಶೀಪುರಾಧೀಶ್ವರೀ |
ಬಿಕ್ಷಾಂದೇಹಿ ಕೃಪಾವಲಂಬನಕರೀ ಮಾತನ್ನ ಪೂರ್ಣೇಶ್ವರೀ  ||4||

    ಹಿಮಾಚಲಪರ್ವತ ಗುಹೆಯಲ್ಲಿ ವಾಸಿಸುವ, ಗೌರೀ, ಉಮಾ, ಶಂಕರಿ, ಕೌಮಾರೀ, ವೇದಗಳ ಅರ್ಥ ಪ್ರಕಟಿಸುವವಳೇ, ಓಂಕಾರದ ಮೂಲಳು, ಅವಿನಾಶಿ, ಮೋಕ್ಷದ್ವಾರದ ಬಾಗಿಲು ತೆರೆಯುವ, ಕಾಶಿಪಟ್ಟಣದ ಮುಖ್ಯದೇವತೆ, ಭಕ್ತರ ಕೃಪೆಯ ಆದಾರ ಮಾತೆ ಅನ್ನಪೂರ್ಣೇಶ್ವರೀ ಭಿಕ್ಷೆಯನ್ನು ನೀಡು ||4||

ದೃಶ್ಯಾದೃಶ್ಯ ವಿಭೂತಿ ವಾಹನಕರೀ ಬ್ರಹ್ಮಾಂಡಭಾಂಡೋದರೀ |
ಲೋಲಾನಾಟಕಸೂತ್ರ ಖೇಲನಕರೀ ವಿಜ್ಞಾನದೀಪಾಂಕುರೀ ||
ಶ್ರೀವಿಶ್ವೇಶಮನಃ ಪ್ರಸಾದನಕರೀ ಕಾಶೀಪುರಾಧೀಶ್ವರೀ |
ಬಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರೀ ||5||

    ದೃಶ್ಯ ಮತ್ತು ಅದೃಶ್ಯ ಸಂಪತ್ತುಗಳನ್ನು ವಹಿಸಿರುವವಳು, ಬ್ರಹ್ಮಾಂಡ ರೂಪದ ಪಾತ್ರೆಯನ್ನು ತನ್ನ ಉದರದಲ್ಲಿರಿಸಿಕೊಂಡವಳು, ಲೀಲಾ ನಾಟಕ ಸೂತ್ರ ಆಡಿಸುವವಳು, ವಿಜ್ಞಾನವೆಂಬ ದೀಪ ಪ್ರಕಾಶಿಸಲು ಕಾರಣಗಳು, ಶ್ರೀ ವಿಶ್ವೇಶ್ವರನ ಮನಸ್ಸು ಪ್ರಸನ್ನಗೊಳಿಸುವವಳು, ಕಾಶೀ ಪಟ್ಟಣದ ಮುಖ್ಯದೇವತೆ, ಭಕ್ತರಿಗೆ ಕೃಪೆ ನೀಡುವ ಮಾತೆ ಅನ್ನಪೂರ್ಣೇಶ್ವರೀ ಭಿಕ್ಷೆಯನ್ನು ನೀಡು ||5||

ಆದಿಕ್ಷಾಂತಸಮಸ್ತ ವರ್ಣನಕರೀ ಶಂಭುಪ್ರಿಯಾ ಶಾಂಕರೀ |
ಕಾಶ್ಮೀರತ್ರಿಪುರೇಶ್ವರೀ ತ್ರಿನಯನೀ ವಿಶ್ವೇಶ್ವರೀ ಶರ್ವರೀ ||
ಸ್ವರ್ಗದ್ವಾರಕಪಾಟಪಾಟನಕರೀ ಕಾಶೀಪುರಾಧೀಶ್ವರೀ |
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರಿ ||6||

    'ಅ' ಕಾರದಿಂದ 'ಕ್ಷ' ಕಾರದ ವರೆವಿಗೆ ಇರುವ ಎಲ್ಲ ವರ್ಣ ಸಮೂಹಕ್ಕೆ ಅಧಿಷ್ಠಾನಳು, ಶಂಭುಪ್ರಿಯಳು, ಶಂಕರಿ, ಕಾಶ್ಮೀರವಾಸಿ, ತ್ರಿಪುರೇಶ್ವರಿ, ತ್ರಿನಯನೆ, ವಿಶ್ವೇಶ್ವರನ ಅರ್ಧಾಂಗಿ, ಅಂಧಕಾರ ನಿವಾರಿಣಿ, ಸ್ವರ್ಗದ ಬಾಗಿಲಿನ ಚಿಲಕ ತೆಗೆಯುವವಳು, ಕಾಶೀ ಪಟ್ಟಣದ ಅಧಿದೇವತೆ, ಭಕ್ತರಿಗೆ ಕೃಪೆ ನೀಡುವ ಮಾತೆ ಅನ್ನಪೂರ್ಣೇಶ್ವರಿ ಭಿಕ್ಷೆಯನ್ನು ನೀಡು ||6||

ಉರ್ವೀಸರ್ವಜನೇಶ್ವರೀ ಜಯಕರೀ ಮಾತಾ ಕೃಪಾಸಾಗರೀ |
ವೇಣೀನೀಲಸಮಾನ ಕುಂತಲಧರೀ ನಿತ್ಯಾನ್ನದಾನೇಶ್ವರೀ ||
ಸಾಕ್ಷಾನ್ಮೋಕ್ಷಕರೀ ಸದಾ ಶುಭಕರೀ ಕಾಶೀ ಪುರಾಧೀಶ್ವರೀ ||
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರೀ ||7||

    ಪೃಥ್ವಿಯ ಸಮಸ್ತಜನರಿಗೂ ಈಶ್ವರಿಯು, ಜಯನೀಡುವಾಕೆ, ಭಕ್ತರಿಗೂ ಯಶಸ್ಸನ್ನು ಕೊಡುವವಳು, ದಯಾಸಾಗರಿ, ಕಪ್ಪಾದ ಜಡೆ ಇರುವವಳು, ನಿತ್ಯವೂ ಅನ್ನದಾನ ನೀಡುವವಳು, ಪ್ರತ್ಯಕ್ಷ ಮೋಕ್ಷ ಪ್ರದಾಯಕಳು, ಸದಾ ಶುಭ ಕೋರುವವಳು, ಕಾಶೀ ಪಟ್ಟಣದ ಮುಖ್ಯದೇವತೆ, ಭಕ್ತರಿಗೆ ಕೃಪೆ ನೀಡುವವಳು ಮಾತೆ ಅನ್ನಪೂರ್ಣೇಶ್ವರೀ ಭಿಕ್ಷೆಯನ್ನು ನೀಡು ||7||

ದೇವೀ ಸರ್ವವಿಚಿತ್ರ ರತ್ನರುಚಿರಾ ದಾಕ್ಷಾಯಣೀ ಸುಂದರೀ |
ವಾಮಾ ಸ್ವಾದುಪಯೋಧರಾಪ್ರಿಯಕರೀ ಸೌಭಾಗ್ಯ ಮಾಹೇಶ್ವರೀ ||
ಭಕ್ತಾ ಭೀಷ್ಟ ಕರೀ ದಶಾಶುಭ ಹರೀ ಕಾಶೀ ಪುರಾಧೀಶ್ವರೀ |
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರೀ ||8||

    ತೇಜಸ್ವಿನಿ, ಎಲ್ಲವಿಶೇಷ ರತ್ನಗಳಿಂದ ಅಲಂಕೃತಳಾಗಿರುವ ಸುಂದರೀ, ದಕ್ಷನ ಪುತ್ರಿ ದಾಕ್ಷಾಯಣಿ, ಗೌರಿ, ಮಧುರ ಅಮೃತ ಪಾತ್ರೆ ಪಿಡಿದವಳು, ಭಕ್ತರ ಪ್ರಿಯಳು, ಸೌಭಾಗ್ಯದಿಂದ ಕೂಡಿದ ಮಹೇಶ್ವರನ ಅರ್ಧಾಂಗಿಯು, ಭಕ್ತರ ಅಭೀಷ್ಠಗಳನ್ನು ಈಡೇರಿಸುವವಳು, ಹತ್ತು ಬಗೆಯ ಅಶುಭಗಳನ್ನೂ ನಿವಾರಿಸುವವಳು, ಕಾಶಿ ಪಟ್ಟಣದ ಮುಖ್ಯದೇವತೆ ಮಾತೆ ಅನ್ನಪೂರ್ಣೇಶ್ವರೀ ಭಿಕ್ಷೆಯನ್ನು ನೀಡು ||8||

ಚಂದ್ರಾರ್ಕಾನಲ ಕೋಟಿ ಕೋಟಿ ಸದೃಶೀ ಚಂದ್ರಾಂಶು ಬಿಂಬಾಧರೀ |
ಚಂದ್ರಾರ್ಕಾಗ್ನಿಸಮಾನ ಕುಂಡಲಧರೀ ಚಂದ್ರಾರ್ಕ ವರ್ಣೇಶ್ವರೀ ||
ಮಾಲಾಪುಸ್ತಕಪಾಶಸಾಂಕುಶಧರೀ ಕಾಶೀಪುರಾಧೀಶ್ವರೀ |
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರೀ ||9||

    ಕೋಟಿಕೋಟಿ ಸೂರ್ಯ-ಚಂದ್ರ-ಅಗ್ನಿಗಳ ತೇಜದ ಸಮಾನ ತೇಜೋಮಯಿ, ಚಂದ್ರನ ಕಿರಣಗಳಂತೆ ಪ್ರಕಾಶಿತಳು, ಕೆಂಪುತುಟಿಯುಳ್ಳವಳು, ಚಂದ್ರಸೂರ್ಯರಂತೆ ಉಜ್ವಲ ಕುಂಡಲಗಳನ್ನು ಧರಿಸಿದವಳು, ಸೂರ್ಯಕಾಂತಿಯುಕ್ತಳು, ಶಂಕರನ ಅರ್ಧಾಂಗಿ, ಕೈಯಲ್ಲಿ ಮಾಲೆ, ಪಾಶ, ಅಂಕುಶ ಪಿಡಿದವಳು, ಕಾಶೀಪಟ್ಟಣದ ಮುಖ್ಯದೇವತೆ, ಭಕ್ತರಿಗೆ ಕೃಪೆ ನೀಡುವ ಮಾತೆ ಅನ್ನಪೂರ್ಣೇಶ್ವರೀ ಭಿಕ್ಷೆಯನ್ನು ನೀಡು ||9||

ಕ್ಷತ್ರತ್ರಾಣಕರೀ ಮಹಾಭಯಹರೀ ಮಾತಾ ಕೃಪಾಸಾಗರೀ |
ಸರ್ವಾನಂದಕರೀ ಸದಾಶಿವಕರೀ ವಿಶ್ವೇಶ್ವರೀ ಶ್ರೀಧರೀ ||
ದಕ್ಷಾಕ್ರಂದಕರೀ ನಿರಾಮಯಕರೀ ಕಾಶೀಪುರಾಧೀಶ್ವರೀ |
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರೀ ||10||

    ಕ್ಷತ್ರಿಯರನ್ನು ರಕ್ಷಿಸುವವಳು, ಭಯಂಕರ ಸಂಕಟಗಳನ್ನು ನಿವಾರಿಸುವವಳು, ತಾಯಿ ಮಾತೆ, ಕರುಣಾಸಾಗರಳು, ಎಲ್ಲ ರೀತಿ ಆನಂದ ನೀಡುವವಳು, ಭಕ್ತರಿಗೆ ಸದಾ ಮಂಗಳದಾಯಕಳು, ವಿಶ್ವೇಶ್ವರಿ, ಐಶ್ವರ್ಯಧಾರಣಳೂ, ದಕ್ಷನ ಆಕ್ರಂದನಕಾರಕಳು, ಭಕ್ತರ ವ್ಯಾಧಿನಿವಾರಕಳು, ಕಾಶೀ ಪಟ್ಟಣದ ಮುಖ್ಯದೇವತೆ, ಭಕ್ತರಿಗೆ ಕೃಪೆ ನೀಡುವ ಮಾತೆ ಅನ್ನಪೂರ್ಣೇಶ್ವರೀ ಭಿಕ್ಷೆಯನ್ನು ನೀಡು. ||10||

ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣ ವಲ್ಲಭೇ |
ಜ್ಞಾನ ವೈರಾಗ್ಯಸಿಧ್ಯರ್ಥಂ ಭಿಕ್ಷಾಂ ದೇಹಿ ಪಾರ್ವತಿ ||11||

    ಸದಾ ಪರಿಪೂರ್ಣಳಾದ ಅನ್ನಪೂರ್ಣೇಶ್ವರೀ, ಶಂಕರನಿಗೆ ಪ್ರಾಣ ವಲ್ಲಭೆಮಾತೆ, ಪಾರ್ವತೀ, ಜ್ಞಾನ-ವೈರಾಗ್ಯಗಳು ಸಿದ್ಧಿಸುವಂತೆ ನನಗೆ ಭಿಕ್ಷೆಯನ್ನು ನೀಡು ||11||

ಮಾತಾ ಚ ಪಾರ್ವತೀ ದೇವೀ ಪಿತಾ ದೇವೋ ಮಹೇಶ್ವರಃ |
ಬಾಂಧವಾಃ ಶಿಭಕ್ತಾಶ್ಚ ಸ್ವದೇಶೋ ಭವನತ್ರಯಮ್ ||12||

    ನನ್ನ ತಾಯಿ ಪಾರ್ವತಿದೇವಿ, ನನ್ನ ತಂದೆ ಮಹೇಶ್ವರನು, ಶಿವಭಕ್ತರು ನನ್ನ ಬಂಧುಗಳು, ತ್ರಿಲೋಕವೂ ನನ್ನೂರು, ದೇಶ ಈ ಭಾವನೆಯೇ ಇರಬೇಕಾದ್ದು ||12||

Comments

  1. The Annapurna Stotra with meaning is very informative and useful. Thanks for posting.

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ