ಕಲಿಗಾಲ ಕಂಡ್ಯಾ
ಕೃಷ್ಣ ಕೃಷ್ಣಯೆಂದು ಕಾಮಿನಿ ಕರೆಯಲು
ಅಕ್ಷಯ ವಸನಾಗಿ ಒದಗಿಯೊ ಅಂದು ||ಪ||
ದುಷ್ಟ ದುಶ್ಯಾಸನರ ಹಿಂಡುಹಿಂಡೇ ಇಂದು
ಶಿಷ್ಟ ಮಾನಿನಿಯರ ಮಾನಗಳೆಯುತಿಹುದು ||ಅ.ಪ||
ಕಣ್ಮುಚ್ಚಿ ಬಾಯ್ಬಿಗಿದು ಹಾವಿನ್ಹಾಸಿನಲಿ
ತಣ್ಣಗೆ ಕೈಕಟ್ಟಿ ಕುಳಿತಿಹೆಯಲ್ಲೋ
ಬಣ್ಣನೆಯ ಮಾತಾಯೋ ಕಾಮಿಕೀಚಕರ ನಿಜ
ಬಣ್ಣವನು ಬಯಲು ಮಾಡದೆ ನೀನು ||1||
ಗದ್ದೆ ಬಯಲು ಶಾಲೆ ಕಾಲೇಜುಗಳು
ಶುದ್ಧ ಹಸುಮಗುವಿನ ಮೊದಲ ಶಾಲೆ
ಹದ್ದುಮೀರಿದೆ ಅಲ್ಲೂ ಕಾಮುಕರ ಕಾಟ
ನಿದ್ದೆ ಬಂದಿದೆಯೆ ನಿನಗೆ ಎದ್ದು ಬಾರದಷ್ಟು ||2||
ಬೇಡಿದರೆ ಕಾಡಿದರೆ ಬರುವನಲ್ಲ ನೀನು
ನೋಡುತಿರು ಎಬ್ಬಟ್ಟಿ ಎಳೆತರುವೆ ನಾನು
ಆಡುವೆಯ ಆಟಗಳ ನರಸಿಂಹಾವತಾರಿ
ಮಾಡುವೆನು ತಕ್ಕುದು ಕಲಿಗಾಲ ಕಂಡ್ಯಾ ||3||
ಅಕ್ಷಯ ವಸನಾಗಿ ಒದಗಿಯೊ ಅಂದು ||ಪ||
ದುಷ್ಟ ದುಶ್ಯಾಸನರ ಹಿಂಡುಹಿಂಡೇ ಇಂದು
ಶಿಷ್ಟ ಮಾನಿನಿಯರ ಮಾನಗಳೆಯುತಿಹುದು ||ಅ.ಪ||
ಕಣ್ಮುಚ್ಚಿ ಬಾಯ್ಬಿಗಿದು ಹಾವಿನ್ಹಾಸಿನಲಿ
ತಣ್ಣಗೆ ಕೈಕಟ್ಟಿ ಕುಳಿತಿಹೆಯಲ್ಲೋ
ಬಣ್ಣನೆಯ ಮಾತಾಯೋ ಕಾಮಿಕೀಚಕರ ನಿಜ
ಬಣ್ಣವನು ಬಯಲು ಮಾಡದೆ ನೀನು ||1||
ಗದ್ದೆ ಬಯಲು ಶಾಲೆ ಕಾಲೇಜುಗಳು
ಶುದ್ಧ ಹಸುಮಗುವಿನ ಮೊದಲ ಶಾಲೆ
ಹದ್ದುಮೀರಿದೆ ಅಲ್ಲೂ ಕಾಮುಕರ ಕಾಟ
ನಿದ್ದೆ ಬಂದಿದೆಯೆ ನಿನಗೆ ಎದ್ದು ಬಾರದಷ್ಟು ||2||
ಬೇಡಿದರೆ ಕಾಡಿದರೆ ಬರುವನಲ್ಲ ನೀನು
ನೋಡುತಿರು ಎಬ್ಬಟ್ಟಿ ಎಳೆತರುವೆ ನಾನು
ಆಡುವೆಯ ಆಟಗಳ ನರಸಿಂಹಾವತಾರಿ
ಮಾಡುವೆನು ತಕ್ಕುದು ಕಲಿಗಾಲ ಕಂಡ್ಯಾ ||3||
Comments
Post a Comment