'ಓಂ' ಕಾರ ಮಹಿಮೆ


ಓಂ ಕಾರವ ಜಪಿಸೋ ಮನುಜಾ
ಓಂಕಾರವ ಜಪಿಸೋ... ||ಪಲ್ಲವಿ||
ಓಂಕಾರವೆಂದರೆ ಶಬ್ದಬ್ರಹ್ಮನು |
ಶುದ್ಧಬ್ರಹ್ಮನು ಜ್ಞಾನಸ್ವರೂಪನು ||1||
ಓಂಕಾರ ಮಂತ್ರವೆ ವೇದದ ಸಾರಾ |
ಪ್ರಣವಸ್ವರೂಪಾ ಜಗದಾಧಾರಾ ||2||
ಅಮೃತಸ್ವರೂಪನು ಭಲೆ ಓಂಕಾರಾ |
ತ್ರಿಗುಣಾತೀತಾ ನಿರ್ವಿಕಾರಾ ||3||
ಚಿತ್ತದಿ ನೆಲೆಗೊಳ್ಳಲು ಓಂಕಾರಾ |
ಥಳಥಳಿಸುವದೈ ನಿನ್ನಾ ಕಾರಾ ||4||
ಓಂ ಎಂದೆನ್ನಲು ಮನಸಿಗೆ ಶಾಂತಿ |
ಅದು ಕಳೆವುದು ಸಂಸಾರದ ಭ್ರಾಂತಿ ||5||
ಪರಮಪುರುಷನಾತನು ಓಂಕಾರಾ |
ಧ್ಯಾನಿಸಿ ಪಡೆಯೋ ಸಾಕ್ಷಾತ್ಕಾರಾ ||6||
ಓಂಕಾರವೆ ನಾನೆಂಬುವ ರೂಪಾ |
ಹೃದಯದಿ ರಾಜಿಪ ಸತ್ಯಸ್ವರೂಪಾ ||7||
ಹೃದಯದಿ ಝೇಂಕರಿಸಲು 'ಓಂ' ನಾದ |
ದೊರೆವುದು ಆತ್ಮಾನಂದದ ಸ್ವಾದಾ ||8||
ಓಂಕಾರ ಬಿಲ್ಲಿಗೆ ಆತ್ಮವೆ ಬಾಣವು |
ಗುರಿಯನು ಸೇರಲು ಬ್ರಹ್ಮಾಕಾರವು ||9||
ನಾರಸಿಂಹ ಮೆಚ್ಚಿದ ಓಂಕಾರವು |
ಜೀವನ್ಮುಕ್ತಿಗು ಘನಸಾಧನವು ||10||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ