ಶ್ರೀ ವೆಂಕಟೇಶ ಭುಜಂಗ ಪ್ರಯಾತ ಸ್ತೋತ್ರ

ಶ್ರೀ ವೆಂಕಟೇಶ ಭುಜಂಗ ಪ್ರಯಾತ ಸ್ತೋತ್ರ
(ಶ್ರೀ ಶಂಕರಾಚಾರ್ಯರಿಂದ ವಿರಚಿತವಾಗಿರುವ)

ಮುಖೇ ಚಾರುಹಾಸಂ ಕರೇ ಶಂಖಚಕ್ರಂ
ಗಲೇ ರತ್ನಮಾಲಾಂ ಸ್ವಯಂ ಮೇಘವರ್ಣಮ್
ತಥಾ ದಿವ್ಯಶಸ್ತ್ರಂ ಪ್ರಿಯಂ ಪೀತವಸ್ತ್ರಂ
ಧರಂತಂ ಮುರಾರಿಂ ಭಜೇ ವೇಂಟೇಶಮ್ ||1||

ಸದಾಭೀತಿಹಸ್ತಂ ಮುದಾಜಾನುಪಾಣಿಂ
ಲಸನ್ಮೇಖಲಂ ರತ್ನಶೋಭಾ ಪ್ರಕಾಶಮ್
ಜಗತ್ಪಾದಪದ್ಮಂ ಮಹತ್ಪದ್ಮನಾಭಂ
ಧರತಂ ಮುರಾರಿ ಭಜೇ ವೇಂಕಟೇಶಮ್ ||2||

ಅಜಂ ನಿರ್ಮಲಂ ನಿತ್ಯಮಾಕಾಶರೂಪಂ
ಜಗತ್ಕಾರಣಂ ಸರ್ವವೇದಾಂತ ವೇದ್ಯಮ್
ವಿಭುಂ ತಾಪಸಂ ಸಚ್ಚಿದಾನಂದರೂಪಂ
ಧರಂತಂ ಮುರಾರಿಂ ಭಜೇ ವೇಕಮಟೇಶಮ್ ||3||

ಶ್ರಿಯಾವಿಷ್ಟಿತಂ ವಾಮವಕ್ಷಪ್ರಕಾಂತಂ
ಸುರೈರ್ವಂದಿತಂ ಬ್ರಹ್ಮರುದ್ರಸ್ತುತಂ ತಮ್
ಶಿವಂ ಶಂಕರಂ ಸ್ವಸ್ತಿನಿರ್ವಾಣರೂಪಂ
ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||4||

ಮಹಾಯೋಗಸಾಧ್ಯಂ ಪರಿಭ್ರಾಜಮಾನಂ
ಚಿರಂ ವಿಶ್ವರೂಪಂ ಸುರೇಶಂ ಮಹೇಶಮ್
ಅಹೋ! ಶಾಂತರೂಪಂ ಸದಾ ಧ್ಯಾನಗಮ್ಯಂ
ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||5||

ಅಹೋ! ಮತ್ಸ್ಯರೂಪಂ ತಥಾ ಕೂರ್ಮರೂಪಂ
ಮಹಾ ಕ್ರೋಡರೂಪಂ ತಥಾ ನಾರಸಿಂಹಮ್
ಭಜೇ ಕುಬ್ಜರೂಪಂ ವಿಭುಂ ಜಾಮದಗ್ನ್ಯಂ
ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||6||

ಅಹೋ ಬುದ್ಧರೂಪಂ ತಥಾ ಕಲ್ಕಿರೂಪಂ
ಪ್ರಭುಂ ಶಾಶ್ವತಂ ಲೋಕರಕ್ಷಾವಹಂತಮ್
ಪೃಥಕ್ಕಾಲಲಬ್ದಾತ್ಮ ಲೀಲಾವತಾರಂ
ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||7||

ಇತಿ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀಮಚ್ಚಂಕರಾಚಾರ್ಯ ವಿರಚಿತಂ ವೇಂಕಟೇಶ್ವರ (ಭುಜಂಗ ಪ್ರಯಾತ) ಸ್ತೋತ್ರಮ್ ಸಂಪೂರ್ಣಂ


ಈ ಕೃತಿಯು ಕೆಳದಿ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿರುವ ತಾಳೆಯೋಲೆ ಹಸ್ತಪ್ರತಿಯ ಕಟ್ಟೊಂದರಲ್ಲಿ ಲಭಿಸಿದೆ. ಲಿಪಿಕಾರನ ಸಂಗತಿಯೂ ಹಾಗೂ ಕಾಲನಿರ್ದೇಶನಾದಿಗಳು ಕಂಡು ಬಾರದಿದ್ದರೂ ಇದೊಂದು ಅಪೂರ್ವ ಕೃತಿಯೆನಿಸಿದೆ. ಶ್ರೀ ಆದ್ಯ ಶಂಕರಾಚಾರ್ಯರ ಈ ಕೃತಿಯು ಈವರೆಗೂ ಉಪಲಬ್ಧವಾಗಿಲ್ಲದಿರುವುದು ವಿದ್ವಾಂಸರ ಕುತೂಹಲಕ್ಕೆ ಕಾರಣವಾಗಿದೆ. ಅನ್ಯತ್ರ ದೊರೆತಲ್ಲಿ ಪಾಠಾಂತರ ಪರಿಷ್ಕರಣಕ್ಕೆ ಮೂಲ ಸಾಮಾಗ್ರಿಗೆ ಸಾಧಿಕವಾಗುವುದರಿಂದ ಇದನ್ನು ಸಂಪಾದಿಸಲಾಗಿದೆ. ಕಟ್ಟಿನ ಮಧ್ಯೆ ಕೇವಲ ಎರಡೇ ಓಲೆಗಳಲ್ಲಿ ದೊರೆತ ತಾಳೆಗರಿಯ ಪ್ರಮಾಣ ಈ ರೀತಿ ಇವೆ. (ಉ 14ಸೆ.ಮಿ) (ಅ 5ಸೆ.ಮಿ). ಪ್ರತಿಸಾಲಿನಲ್ಲಿ ಸರಿ ಸುಮಾರಾಗಿ 18 ಅಕ್ಷರಗಳಿದ್ದು 10 ಸಾಲುಗಳಿವೆ. ಕನ್ನಡ ಲಿಪಿಯಲ್ಲಿರುವ ಈ ಕೃತಿಯನ್ನು ಓದಲು ಸುಲಭಗ್ರಾಹ್ಯವಾಗಿದೆ. ರಾಗ ಸಂಯೋಜನಾಬದ್ಧವಾಗಿ ಹಾಗೂ ಸುಶ್ರಾವ್ಯವಾಗಿ ಭಗವಾನ್ ಶ್ರೀ ವೆಂಕಟರಮಣಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಲು ಯೋಗ್ಯವಾದ ಈ ರಚನೆಯು ಭಕ್ತರಿಗೆ ಒಂದು ವರದಾನವಾಗಿದೆ, ಸುಪ್ರಭಾತಕ್ಕೆ ಅಳವಡಿಸಲು ಎಲ್ಲ ರೀತಿಯಿಂದಲೂ ಸೂಕ್ತವಾದ ಈ ಕೃತಿಯು ಶ್ರೀ ಶಂಕರಾಚಾರ್ಯರಿಂದ ವಿರಚಿತವಾಗಿರಿರುವುದು ಗಮನಾರ್ಹವಾದುದು.

ಸಂಪಾದಕರು - ಕೆಳದಿ ಗುಂಡಾಜೋಯಿಸ್
ಪರಿಶೋಧಕರು - ಗುರುಪಾದ ಹೆಗಡೆ


Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ