ಶಂಖ

    ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜನೀಯ ವಸ್ತು ಶಂಖ ಮಹಾತ್ಮರು ರಾಜರು ದೇವದೇವತೆಗಳ ಜನನವನ್ನು ಹಿಂದೆ ಶಂಖನಾದದ ಮೂಲಕವೇ ಷೋಷಿಸುತ್ತಿದ್ದರು ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮವನ್ನು ಸೂಚಿಸಲೂ ಶಂಖವನ್ನು ಬಳಸಲಾಗುತ್ತಿತ್ತು ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮಯಾತ್ರೆಯ ಸಮಯದಲ್ಲೂ ಶಂಖನಾದ ಮಾಡುವ ಪದ್ದತಿಯುಂಟು.
    ತಂತಿವಾದ್ಯ, ಶಂಖ, ನಾದಸ್ವರ, ಕೊಂಬು ಹಾಗೂ ತಾಳ ಇವುಗಳಿಂದ ಹೊರಡುವ ಶಬ್ಧಗಳನ್ನು ಪಂಚಮಹಾಶಬ್ಧಗಳೆನ್ನುತ್ತಾರೆ ಮೂರರಿಂದ ಆರನೇ ಶತಮಾನದವರೆವಿಗೂ ಕೆಲವು ಚಕ್ರವರ್ತಿಗಳು ಪಂಚಮಹಾಶಬ್ದ ಎಂಬ ಬಿರುದುಗಳನ್ನುಗಳಿಸುತ್ತಿದ್ದರು ಕೆಲವು ರಾಜ್ರು ತಮ್ಮ ಕೈಕೆಳಗಿನ ಮಹಾವೀರರೂ ಅನುಯಾಯಿಗಳೂ ಆದವರಿಗೆ ಈ ಹೆಸರಿನ ಬಿರುದುಗಳನ್ನು ಕೊಡುತ್ತಿದ್ದರೆಂದು ಪ್ರಾಚೀನ ಬರಹಗಳಿಂದ ತಿಳಿದುಬರುತ್ತದೆ ಹಿಂದೂ ಪುರಾಣಗಳ ಪ್ರಕಾರ ಹದಿನೆಂಟುವಾದ್ಯಗಳಲ್ಲಿ ಶಂಖವಾದ್ಯವೂ ಒಂದು ಆದ್ದರಿಮದಲೇ ಇದನ್ನು ಊದುವುದಲ್ಲದೆ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ.
ಶಂಖಂ ಚಂದ್ರಾರ್ಕ ದೈವತ್ವಂ
ಮಧ್ಯೇ ವರುಣದೈವತವೃಷ್ಟೇ ಪ್ರಜಾವತೆ ನತ್ಪಂ
ಏತತ್ ಶಂಖಂ ವ್ರವೂಜಯೇತ್
ಎಂಬ ಶಂಖವನ್ನು ಪೂಜಿಸುವ ಶ್ಲೋಕ ಪೂಜೆಯಲ್ಲಿ ಶಂಖದ ಮಹತ್ವವನ್ನು ಸಾರುತ್ತದೆ.
    ಶಂಖಗಳಲ್ಲಿ ವಾಲಂಪುರಿ, ಇದಾಂಪುರಿ, ಚಾಲಂಕಾಲಮ್ ಹಾಗೂ ಪಾಂಚಜನ್ಯಂ ಎಂಬುದಾಗಿ ನಾಲ್ಕು ವಿಧಗಳಿವೆ ತಮಿಳುನಾಡಿದನ ಕೆಲವು ದೇವಸ್ಥಾನಗಳಲ್ಲಿ ಒಂದು ಸಾವಿರದೆಂಟು ಶಂಖಗಳಿದ್ದು ವಿಶೇಷ ಸಂಧರ್ಭಗಳಲ್ಲಿ ಈ ಎಲ್ಲ ಶಂಖಗಳಲ್ಲೂ ಪವಿತ್ರಗಂಗೆಯನ್ನಿಟ್ಟು ಮಹಾಶಂಖಾಭಿಷೇಕವನ್ನು ಮಾಡುತ್ತಾರೆ.
    ರಾಮಾಯಣ, ಮಹಾಭಾರತಗಳಲ್ಲೂ ಶಂಖದ ಪಾತ್ರ ಬಹಳ ಮುಖ್ಯವಾದುದು ಆಗಿನ ಕಾಲದಲ್ಲಿ ಪ್ರತಿಯೊಬ್ಬ ಪ್ರಮುಖನ ಬಳಿಯೂ ಒಂದೊಂದು ಶಂಖವಿದ್ದು ಅದಕ್ಕೆ ಪ್ರತ್ಯೇಕ ಹೆಸರಿರುತ್ತಿತ್ತು ಶ್ರೀಕೃಷ್ಣನ ಶಂಖದ ಹೆಸರು ಪಾಂಚಜನ್ಯ, ಅರ್ಜುನನದು ದೇವದತ್ತ, ಭೀಮನದು ಪೌಂಢ್ರ, ಯುಧಿಷ್ಠಿರನದು ಅನಂತವಿಜಯ, ನಕುಲನದು ಸುಘೋಶ, ಸಹದೇವನದು ಮಣೀಪುಷ್ಪಕ - ಹೀಗೆ
    ಮಹಾವಿಷ್ಣುವಿನ ಎಡಹಸ್ತದಲ್ಲಿ ಸದಾ ಶಂಖ ಶೋಭಿಸುತ್ತಿರುತ್ತದೆ ಶ್ರೀ ವಿಷ್ಣುವನ್ನು ಶಂಖ ಚಕ್ರ ಗದಾ ಹಸ್ತ ಎಂದೇ ಶ್ಲೋಕಗಳು ವರ್ಣಿಸುತ್ತವೆ ಕುಬೇರನ ಬಳಿಯಿದ್ದ ನವನಿಧಿಗಳಲ್ಲಿ ಅಕ್ಷಯವಾಗುತ್ತಿದ್ದ ನಿಧಿಯನ್ನು ಶಂಖನಿಧಿ ಎಂದೆನ್ನುತ್ತಾರೆ.
    ಕೆಲವು ಪ್ರಮುಖ ದೇವಾಯಲಗಳಲ್ಲಿ ಅವರದ್ದೇ ಪ್ರತ್ಯೇಕವಾದ ವಾದ್ಯ ವೃಂದವಿದ್ದು ಅವರಲ್ಲಿ ಶಂಖವಾದ್ಯಕ್ಕೆ ಪ್ರಮುಖ ಸ್ಥಾನವಿರುತ್ತದೆ ಅಂತಹ ಶಂಖಗಳನ್ನು ವಿಶೇಷರೀತಿಯಲ್ಲಿ ಅಲಂಕರಿಸುತ್ತಾರೆ ಊದುವ ಭಾಗಕ್ಕೆ ಸಾಮಾನ್ಯವಾಗಿ ಬೆಳ್ಳಿಯ ತಗಡಿನ ನವಿಲುಗರಿಯ ರೂಪದ ಕೆತ್ತನೆಕೆಲಸವಿರುತ್ತದೆ ಶಂಖವನ್ನು ಎರಡೂ ಕಡೆಯಿಂದ ಊದಬಹುದು. ಇದು ಬಹಳ ಪುರಾತನ ವಾದ್ಯವೇ ಆದರೂ ಕಲಿಯುವುದು ಬಹಳ ಕಷ್ಟ ಹಾಗೂ ಕಲಿಯಲು ಬಹಳ ಬಲವಿರಬೇಕೆಂಬ ಕಾರಣದಿಂದಲೋ ಏನೋ ಇದು ಜನಪ್ರಿಯವಾಗಿಲ್ಲ.
    ಇನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಶಂಖ ವಿಜ್ಞಾನಿಗಳ ಗಮನವನ್ನು ಬಹಳವಾಗಿ ಸೆಳೆದಿದೆ ಶಂಖವನ್ನು ಊದುವಾಗ ಅದೊರೊಳಗೆ ಪ್ರವೇಶಿಸುವ ಉಸಿರು ಶಂಖದೊಳಗಿನ ವಕ್ರದಾರಿಯನ್ನು ದಾಟಿ ಹೊರಬರುವಾಗ ತೀವ್ರವೇಗವುಳ್ಳದ್ದೂ ಹೆಚ್ಚು ಉಷ್ಣತೆಯುಳ್ಳದ್ದೂ ಆಗುವದೆಂದು ಪ್ರಯೋಗಗಳಿಂದ ಸಿದ್ಧವಾಗಿದೆ ಹೀಗೆ ಶಂಖದಿಂದ ಹೊರಬರುವ ಗಾಳಿಯ ಉಷ್ಣಾಂಶವು ನೂರಕ್ಕೆ ಎಂಟ್ರಷ್ಟಿದ್ದರೆ ಅದರ ಪ್ರಭಾವದಿಂದ ಹೊರಗಿನ ಗಾಳಿಯು ಒಂದು ಸೆಕೆಂಡಿಗೆ 8708ಅಡಿ ವೇಗದಿಂದ ಚಲಿಸುವುದೆಂದು ಪ್ರಯೋಗ ಫಲಿತಾಂಶಗಳು ತಿಳಿಸುತ್ತವೆ ತತ್ಪರಿಣಾಮವಾಗಿ ವಾತಾವರಣದಲ್ಲಿನ ರೋಗಜನಕ ಕೀಟಾಣಿಗಳು ನಾಶವಾಗುವುದಲ್ಲದೆ ವಾತಾವರಣದಲ್ಲಿನ ತೇಜಸ್ಸತ್ಪದ ಪ್ರಮಾಣವೂ ಹೆಚ್ಚುವುದು ಇಂತಹ ವಾತಾವರಣದಲ್ಲಿನ ವಾಯುವನ್ನು ಉಸಿರಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆಯುವುದು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಧನ್ವಂತರೀ ನಿಘಂಟಿನಲ್ಲೂ ಶಂಖದ ಗುಣವರ್ಣನೆ ಹೀಗಿದೆ.
ಶಂಖ ನಾದು ಕಟು ವಾಕೇ
ವಿಯೋಷ್ಣ ವ್ರಕೀರ್ತಿತ
ಪರಿಣಾಮ ಜಯೇತ್ ಶೂಲಂ
ಚಕ್ಷುಷಂ ರಕ್ತಪಿತ್ತಜಿತ
    ಶಂಖವು ರುಚಿಗೆ ಕಾರವೆನಿಸಿದರೂ ಜೀರ್ಣವಾದ ಮೇಲೆ ಮಧುರವಾಗಿರುವುದು ಅದು ಸಮುದ್ರದಲ್ಲಿ ಹುಟ್ಟಿದರೂ ಜೀರ್ಣಾಗ್ನಿಯನ್ನು ಪ್ರಜ್ವಲಿಸುವುದರಿಂದ ವಿಷ್ಣುವೀರ್ಯವೆಂದು ಹೇಳುತ್ತಾರೆ ಅದು ಹೊಟ್ಟೆ ನೋವು ಕಣ್ಣಿನ ರೋಗ ಹಾಗೂ ರಕ್ತಸ್ರಾವದ ಬೇನೆಯನ್ನು ಗುಣಪಡಿಸುತ್ತದೆ.
    ಶಂಖವನ್ನು ನೀರು ಜೇನುತುಪ್ಪ, ನಿಂಬೇರಸದಲ್ಲಿ ತೇಯ್ದು ತಿಂದರೆ ಅಮ್ಲಪಿತ್ತ ತಲೆತಿರುಗುವಿಕೆ ಮೊಡವೆ ಕುರು ಮುಂತಾದ ದೋಷಗಳ ನಿವಾರಣೆಯಾಗುವುದೆಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ.
    ವೇಗ ಮಾತುಬಾರದ ಮಕ್ಕಳಿಗೆ ಶಂಖದಲ್ಲಿಟ್ಟ ನೀರನ್ನು ಕುಡುಸುವುದುಂಟು, ಸ್ವರಮಂತ್ರ ದೋಷದಿಂದುಂಟಾದ ಮೂಕತನಕ್ಕೆ ರೋಗಿಯು ದಿನಾಲೂ ಕೆಲವು ಸಮಯದವರೆವಿಗೆ ಶಂಖವನ್ನು ಊದಬೇಕು ಇದರಿಂದ ಕಿವಿಡುತನವನ್ನು ಸಹ ನಿವಾರಿಸಬಹುದು ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ಮಾತು ಸರಿಯಾಗಿ ಬಾರದ ಮಕ್ಕಳಿಗೆ ಚಿಕ್ಕ ಶಂಖದ ಮಾಲೆಯನ್ನು ತೊಡಿಸುತ್ತಾರೆ.
    ಹೀಗೆ, ಶಂಖ ಪುರಾಣಗಳ ಕಾಲದಿಂದ ಇಂದಿನ ಕಾಲದವರೆವಿಗೂ ಪ್ರಸಿದ್ದವೂ ಉಪಯುಕ್ತವೂ ಪೂಜನೀಯವೂ ಆಗಿರುವ ಕೆಲವೇ ವಸ್ತುಗಳಲ್ಲೊಂದಾಗಿದೆ.


Deepak H V
Mysuru
9886312013

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ