Posts

Showing posts from March, 2018

ಲಲಿತಾ ತ್ರಿಶತೀ (ಏಕಾರಾದಿನಾಮ) - 4. ಓಂ ಏತತ್ತದಿತ್ಯನಿರ್ದೇಶ್ಯಾಯೈ ನಮಃ

Image
ವರ್ತಮಾನ ಕಾಲದಲ್ಲಿ ಇಯತ್ತೆಯಿಂದ ಪರಿಚ್ಛೆನ್ನ ವಸ್ತುವು ಏತತ್ ಎಂದೂ ಅನಿಶ್ಚಿತವಾದ ಪರೋಕ್ಷ ವಸ್ತುವು ತತ್ ಎಂದೂ ಕರೆಯಲ್ಪಡುವುವು. "ಇತಿ" ಶಬ್ದವು ಈ ರೀತಿಯಾಗಿ ಎಂಬ ಅರ್ಥಕ್ಕೆ ಬೋಧಕವಾಗಿದೆ. ಇಯತ್ತಾ ಪರಿಚ್ಛೇದ ರೂಪದಿಂದಾಗಲಿ ಅನಿಶ್ಚಿತ ಪರೋಕ್ಷರೂಪದಿಂದಾಗಲಿ ದೇವಿಯು ನಿರ್ದೇಶಿಸಲಿ ಅಶಕ್ಯಳಾಗಿರುವಳು. ಲೋಕದಲ್ಲಿ ವಿಶೇಷ ಧರ್ಮಸಹಿತವಾದ ಪದಾರ್ಥವು ಪರೋಕ್ಷ ಅಥವಾ ಪ್ರತ್ಯಕ್ಷ ಎಂಬ ಬಗೆಯಿಂದ ನಿರ್ದೇಶಿಸಲು ಅರ್ಹವಾಗಿದೆ. ಒಂದ ಶಬ್ದವು ಒಂದು ವ್ಯಕ್ತಿಯನ್ನು ಬೋಧಿಸಲು ಪ್ರವರ್ತಿಸಬೇಕಾದರೆ ವ್ಯಕ್ತಿಯಲ್ಲಿ ಜಾತಿ, ಗುಣ, ಕ್ರಿಯಾ ಸಂಬಂಧಗಳ ಪೈಕಿ ಯಾವುದಾದರೊಮದು ಇರುವುದು ಅವಶ್ಯಕವು. ಪರಬ್ರಹ್ಮ ವಸ್ತುವು "ಅಶಬ್ಧಮಸ್ಪರ್ಶಮ್ರೂಪಮವ್ಯಯಂ" ನಿರ್ಗುಣಂ ನಿಷ್ಕಲಂ ಎಂಬ ಶ್ರುತಿಯಿಂದ ಜಾತ್ಯಾದಿ ಧರ್ಮರಹಿತವಾಗಿ ಪ್ರತಿಪಾದಿಸಲ್ಪಟ್ಟಿದೆ. ಅಂತಹ ವಸ್ತುವು ಯಾವ ಸಾಧನದಿಂದ ಯಾವ ವಚನದಿಂದ ನಿರ್ದೇಶಿಸಲು ಅರ್ಹವಾದೀತು? ಶಬ್ದವು ನಿರ್ದೇಶಿಸಲು ಅನರ್ಹವೆಂಬ ಅರ್ಥವನ್ನು "ಯದ್ವಾಚಾನಭ್ಯುದಿತಂ" ಎಂಬ ಶ್ರುತಿಯು ಬೋಧಿಸುತ್ತದೆ. ಆದ್ದರಿಂದ ಏತತ್ ತತ್ ಎಂಬುದಾಗಿ ನಿರ್ದೇಶಿಸಲು ಅನರ್ಹಗಳು ಅಥವಾ ಪ್ರತ್ಯಕ್ಷಾದಿ ಪ್ರಮಾಣಕ್ಕೆ ಗೋಚರವಾಗಿ ಉತ್ತರ ಕಾಲದಲ್ಲಿ ಬರುವ ಕಾರ್ಯವು ಏತತ್ ಎಂದೂ ಪರೋಕ್ಷವಾಗಿ ಪೂರ್ವಕಾಲದಲ್ಲಿರುವ ವ್ಯವಹಿತ ವಸ್ತುವು ತತ್ ಎಂದೂ ಹೇಳಲ್ಪಡುವುದು. ಇತಿ ಶಬ್ದವನ್ನು ಏತತ್ + ತತ್ ಎಂಬ ಎರಡು ಶಬ್ದಗ...