ಸೆರಗಿನಲ್ಲಿ ಗಂಟುಹಾಕಿ
ಒಮ್ಮೆ ಸಾತ್ಯಕಿ, ಅರ್ಜುನ, ಕೃಷ್ಣ ಈ ಮೂವರೂ ಸೇರಿ ಒಂದು ಕಾಡಿನಲ್ಲಿ ಸಂಚರಿಸುತ್ತಿರುವಲ್ಲಿ ದಾರಿ ತಪ್ಪಿದರೂ. ಕಗ್ಗತ್ತಲೆಯಲ್ಲಿ ತಂಗುವದಕ್ಕೆ ಮತ್ತೆಯಾವ ಸ್ಥಲವೂ ಸಿಕ್ಕದೆ ಒಮದು ಮರದ ಮೇಲೆಯೇ ಮಲಗಿರಬೇಕಾಯಿತು. ಹಿಂಸ್ರಮೃಗಗಳ ಭೀತಿಯಿರುವದೆಂಬ ಕಾರಣದಿಂದ ತಮ್ಮೊಳಗೆ ಇಬ್ಬರು ನಿದ್ರಿಸುತ್ತಿರುವಲ್ಲಿ ಮೂರನೆಯವನೊಬ್ಬನು ಎಚ್ಚರವಾಗಿರಬೇಕೆಂದು ಏರ್ಪಡಿಸಿಕೊಂಡರು. ಸಾತ್ಯಕಿಉ ಮೊದಲನೆಯ ಕಾವಲುಗಾರನಾದನು. ಅವನು ತನ್ನ ಸರದಿಯು ಮುಗಿದಕೂಡಲೆ ಅರ್ಜುನನ್ನು ದಡಕ್ಕನೆ ಎಬ್ಬಿಸಿದನು "ಯಾವದಾದರೂ ಪ್ರಾಣಿಯು ಬಂದಿತ್ತೇನು?" ಎಂದು ಅರ್ಜುನನು ಕೇಳಿದ್ದಕ್ಕೆ ಸಾತ್ಯಕಿಯು ಪಿಸುಮಾತಿನಲ್ಲಿ "ದೆವ್ವ ದೆವ್ವ! " ಎಂದನು. ಅರ್ಜುನನು " ಛೇ! ಹುಚ್ಚ, ಎಂಥ ಮಾತಿದು!" ಎನ್ನಲು, "ಹಾಸ್ಯದ ಮಾತಲ್ಲವಯ್ಯ, ನಾನು ಎಷ್ಟೇ ಪ್ರಯತ್ನಮಾಡಿದರೂ ಅದನ್ನು ಓಡಿಸುವದಾಗಲಿಲ್ಲ. ಹೇಗಾದರೂ ಆಗಲಿ, ಈಗ ನೀನೇ ನೋಡುವೆಯಲ್ಲ!" ಎಂದು ಸಾತ್ಯಕಿಯು ಮಲಗಿಕೊಂಡುಬಿಟ್ಟನು. ಅರ್ಜುನನು ಧನುರ್ಧಾರಿಯಾಗಿ ಕಾವಲಿಗೆ ನಿಂತನು. ಸ್ವಲ್ಪ ಹೊತ್ತಿನಲ್ಲಿಯೇ ಒಂದು ಭಯಂಕರವಾದ ಕುಳ್ಳ ಆಕೃತಿಯು ಕಾಣಿಸಿಕೊಂಡಿತು, ಅರ್ಜುನನನ್ನು ಕೆಳಗೆ ಇಳಿಯುವಂತೆ ಸನ್ನೆಮಾಡಿತು. "ಎಲಾ, ಯಾರೋ ನೀನು? ಏನಾಗಬೇಕು ನಿನಗೆ ?" ಎಂದು ಅರ್ಜುನನು ಗರ್ಜಿಸಿದನು. "ನಾನು ಈ ಮರದಲ್ಲಿರುವ ದೆವ್ವವು, ಇಲ್ಲಿ ನೀವಿರಬಾರದು. ಕೂಡಲೆ ಹೊರಡಿರಿ...