Posts

Showing posts from October, 2018

ಮಾನವ ಜನಾಂಗದ ಮೊಟ್ಟಮೊದಲ ತಾಯಿ "ಶತರೂಪ"

Image
    ಶತರೂಪಾಳು ಮಾನವ ಜನಾಂಗದ ಮೊಟ್ಟಮೊದಲ ತಾಯಿಯಾಗಿ, ಆದಿಮಾತೆಯಾಗಿದ್ದಾಳೆ. ಈಕೆಯು ಸ್ವಯಂಭು ಮನುವಿನ ಪತ್ನಿ. ಮನು ಮತ್ತು ಶತರೂಪಾರವರುಗಳಿಂದಲೆ ಮಾನವ ಸೃಷ್ಟಿಯ ಆರಂಭವಾಯಿತು. 'ತತೋ ಮನುಷ್ಯಾ ಅಜಾಯಂ ತಾಃ' ಎಂದ ಶ್ರುತಿಯು ಹೇಳುತ್ತದೆ.     ಮನು ಮತ್ತು ಶತರೂಪಾ ಇವರಿಬ್ಬರು ಬ್ರಹ್ಮನ ಶರೀರದಿಂದ ಹುಟ್ಟಿದವರು. ಅವನ ಎಡಭಾಗದಿಂದ ಮನು ಮತ್ತು ಬಲ ಭಾಗದಿಂದ ಶತರೂಪಾರವರುಗಳು ಪ್ರಾದುರ್ಭಾವಗೊಂಡರು. ಕೇವಲ ಮಾನವನೇ ಅಲ್ಲ, ನೂರಾರು ಸಾವಿರಾರು ಪ್ರಾಣಿಗಳೂ ಕೂಡ ಇವರಿಬ್ಬರುಗಳ ಸಂತಾನವಾಗಿದೆ - ಎಂದು ಬೃಹದಾರಣ್ಯಕ ಉಪನಿಷತ್ತು ಹೇಳುತ್ತದೆ.     ಶತರೂಪಾಳು ಬಹಳ ಮುಗ್ಧ ಸ್ವಭಾವದ, ಲಜ್ಜೆಯನ್ನು ಹೊಂದಿದ್ದ ಹೆಣ್ಣಾಗಿದ್ದಳು, ಮುಂದೆ ಜಗತ್ತಿನಲ್ಲಿ ಹೆಣ್ಣು ಎಂಬುವಳು ಹೀಗೆಯೇ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಳು.     ಶತರೂಪಾಳು ತನ್ನ ಇಷ್ಟದಂತೆ ಯಾವ ರೂಪವನ್ನು ಬೇಕಾದರೂ ಪಡೆಯುವವಳಾಗಿದ್ದಳು. ಮನುವನ್ನು ಸಂಧಿಸಬೇಕಾದ ಪ್ರಥಮ ಸಮಾಗಮದ ಸಮಯದಲ್ಲಿ ಆಕೆಯು ನೂರಾರು ರೂಪಗಳನ್ನು ಧರಿಸಿದಳು. ಈ ರೀತಿಯಲ್ಲಿ ಆಕೆ ಮನುವಿನ ದೃಷ್ಟಿಯಿಂದ ಬಚ್ಚಿಟ್ಟಕೊಳ್ಳಲು ಪ್ರಯತ್ನಿಸಿದಳು ಆದರೆ ಮನುವು ಅವಳನ್ನು ಎಲ್ಲ ರೂಪಗಳಲ್ಲಿಯೂ ಕಂಡುಹಿಡಿದು, ಅವಳು ಯಾವ ರೂಪವನ್ನು ಪಡೆಯುವಳೋ ಅದೇ ರೂಪವನ್ನು ತಾನೂ ಪಡೆದು ಅವಳನ್ನು ಸಂಧಿಸಿದನು.     ಈ ರೀತಿಯಲ್ಲಿ ನೂರಾರು ರೂ...

ಪರಶುರಾಮನ 41 ಅಸ್ತ್ರಗಳು

ವಿಷ್ಣುಧರ್ಮೋತ್ತರ ಪುರಾಣದಲ್ಲಿ ಹೇಳಿರುವಂತೆ ಪರಶುರಾಮನ 41 ಅಸ್ತ್ರಗಳು. 1) ಬ್ರಹ್ಮಾಸ್ತ್ರ 2) ವೈಷ್ಣವಾಸ್ತ್ರ 3) ರೌದ್ರಾಸ್ತ್ರ 4) ಆಗ್ನೇಯಾಸ್ತ್ರ 5) ವಾಸವಾಸ್ತ್ರ 6) ನೈಋತ್ಯಾಸ್ತ್ರ 7) ಯಾಮ್ಯಾಸ್ತ್ರ 8) ಕೌಬೇರಾಸ್ತ್ರ 9) ವಾರುಣಾಸ್ತ್ರ 10) ವಾಯವ್ಯಾಸ್ತ್ರ 11) ಸೌಮ್ಯಾಸ್ತ್ರ 12) ಸೌರಾಸ್ತ್ರ 13) ಪಾರ್ವತಾಸ್ತ್ರ 14) ಚಕ್ರ 15) ವಜ್ರ 16) ಪಾಶ 17) ಸರ್ಪಾಸ್ತ್ರ 18) ಗಾಂಧರ್ವಾಸ್ತ್ರ 19) ಸ್ವಾಪನಾಸ್ತ್ರ 20) ಭೌತಾಸ್ತ್ರ 21) ಪಾಶುಪತಾಸ್ತ್ರ 22) ಐಶಿಕಾಸ್ತ್ರ 23) ತರ್ಜನಾಸ್ತ್ರ 24) ಪ್ರಾಸಾಸ್ತ್ರ 25) ಗಾರುಡಾಸ್ತ್ರ 26) ನರ್ತನಾಸ್ತ್ರ 27) ಅಸ್ರರೋಧನ 28) ಆದಿತ್ಯಾಸ್ತ್ರ 29) ರೈವತಾಸ್ತ್ರ 30) ಮಾನವಾಸ್ತ್ರ 31) ಅಕ್ಷಿಸಂತರ್ಜನಾಸ್ತ್ರ 32) ಭೀಮಾಸ್ತ್ರ 33) ಜುಂಭ್ರಣಾಸ್ತ್ರ 34) ರೋಧನಾಸ್ತ್ರ 35) ಸೌಪರ್ಣಾಸ್ತ್ರ 36) ಪರ್ಜನ್ಯಾಸ್ತ್ರ 37) ರಾಕ್ಷಸಾಸ್ತ್ರ 38) ಮೋಹನಾಸ್ತ್ರ 39) ಕಾಲಾಸ್ತ್ರ 40) ದಾನವಾಸ್ತ್ರ 41) ಬ್ರಹ್ಮಶಿರಸಾಸ್ತ್ರ