ನೃಸಿಂಹ ದೇವ ನಿನ್ನ ಮರೆತಿದ್ದಕ್ಕೆ
ನೃಸಿಂಹ ದೇವ ನಿನ್ನ ಮರೆತಿದ್ದಕ್ಕೆ, ನಾನು
ಸರಿಯಾದ ಶಿಕ್ಷೆಗೆ
ಗುರಿಯಾದೆ ದೊರೆಯೇ ||ಪ||
ಕಾಮವೆಂಬ ಮಾಯೆಯು ನನಗೆ, ನಿನ್ನ
ಕಾಣುವ ಕಣ್ಣನ್ನು
ಕೆಡಿಸಿತು ಪ್ರಭುವೇ |
ಮಣ್ಣೆಂಬ ಮಾಯೆಯು ನನಗೆ, ನಿನ್ನ
ತಿಳಿಯುವ ತಿಳಿವನ್ನು
ಅಳಿಸಿತು ತಂದೇ |
ಸಿರಿಯೆಂಬ ಮಾಯೆಯು ನನಗೆ, ನಿನ್ನ
ಅರಿಯುವ ಅರಿವಿಗೆ
ಉರಿಯಾಯ್ತು ಹರಿಯೇ |
ಮೂಜಗದೊಡೆಯ ನೃಸಿಂಹನೇ ನಿನ್ನ
ಸರಿಸರಿ ಬೇಡುವೆ
ಕಡೆ ಹಾಯಿಸೋ ದೊರೆಯೇ ||
Comments
Post a Comment