ನರಸಿಂಹ ದೇವಾ...



ಶ್ರೀ ನರಸಿಂಹದೇವ ಶರಣರಕ್ಷಕ ದಾನವಾರಿ ಸುಭಕ್ತಾಧೀನ ಮೂರುತಿಯನೆ
ಹರಿ ತನ್ನ ಗುರುವೆಂದು ಸ್ಮರಿಸುತಿರಲು ಬಾಲ
ನಿರವಕಾಣದೆ ದುಷ್ಟ ಹಿರಣ್ಯಕಾಸುರನನು
ಪರಿಯ ಭಂಜಿಸುತಿರೆ ಮೊರೆದು ಕೋಪದಳೆದ್ದು
ತರಳಗೊಲಿದೆ ಬಹು ಕರುಣಾನಿಧಿಯೆ

ಛಿಟಿ ಛಿಟಿಲ್ ಭುಗಿ ಭುಗಿಲ್ ಆರ್ಭಟಿಸಿ
ಗರ್ಜಿಸಿ ಕಂಭ ಕಿಡಿಯು ಉಗ್ರದಿ ನಿಸ್ಫುಟದಿಯುಬ್ಬಿಸಿದಡೆ
ಕಟಿಕಟಿಮಸದಗ್ನಿ ಕಿಟ ಅಗಿವುತ  ನಿಂದ ಕಠಿಣ ಮೂರುತಿಯೇ

ಕೊಬ್ಬಿದ ಹಿರಣ್ಯಕನುಬ್ಬಮುರಿವೆನೆಂದು
ಹೆಬ್ಬಾಗಿಲೊಳು ಸಂಜೆ ಮಬ್ಬಿಲಿ ದನುಜನ
ಗರ್ಭವ ನಖದಿಂದ ಇಬ್ಬಾಗವನ್ನು ಮಾಡಿ
ಹಬ್ಬಿದ ಕರುಳನು ಹರುಷದಿ ಧರಿಸಿದೆ

ಬೀತನಾಗಿ ತನ್ನ ತಾತನ ತೊಡೆದಾ
ಘಾತಕ ಹರಿಯು ಮಾತನು ಮನ್ನಿಸಿ
ಅತಿ ಶಾಂತನಾಗಿ ಪ್ರೀತಿಲಿ ಶಿಷ್ಯನ ಸಲಹಿದ ಅನಾಥ ರಕ್ಷಕನೆ

ಖಳನ ಮರ್ದಿಸಿ ಬಹು ಇಳೆಯಿಂದ ಅಜನಿಗೆ ಬಲು ಹರುಷನಿತ್ತ
ಅಕ್ಕಿಹೆಬ್ಬಾಳು ನೆಲವಾಸ ಲಕ್ಷ್ಮೀನರಸಿಂಹ ದೇವಾ...

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ