ರಂಗೇ ತಟತ್ ಗುಣವತೋರಮಯೈವ ಗೋದೇ ಕೃಷ್ಣಾಂಬುದಸ್ಯ ಘಟಿಕಾಂ ಕೃಪಯಾ ಸುವೃಷ್ಟ್ಯಾ | ದೌರ್ಗತ್ಯದುರ್ವಿಷವಿನಾಶ ಸುಧಾನದೀಂ ತ್ವಾಂ ಸನ್ತಃ ಪ್ರಪದ್ಯ ಶಮಯನ್ತ್ಯಚಿರೇಣ ತಾಪಾನ್ ||26|| ಗೋದೇ = ಎಲೈ! ಗೋದಾದೇವಿಯೇ, ರಂಗೇ = ಶ್ರೀರಂಗದಲ್ಲಿ, ತಟಿತ್ ಗುಣವತಃ = ಮಿಂಚಿನ ಬಳ್ಳಿಯ ಗುಣದಿಂದ ಕೂಡಿದ, ರಮಯಾ = ಮಹಾಲಕ್ಷ್ಮಿಯಿಂದ ಕೂಡಿದ, ಕೃಷ್ಣಾಂಬುದಸ್ಯ = (ನೀಲಮೇಘಶ್ಯಾಮನಾದ) ಕೃಷ್ಣವಾದ ಮೋಡದಿಂದ, ಕೃಪಯಾ = ದಯೆಯಿಂದ, ಸುವೃಷ್ಟ್ಯಾ = ಚೆನ್ನಾಗಿ ಮಳೆಯಾದುದಿರಿಂದ, ಘಟಿತಾಂ = ಉಂಟಾದ, ದೌರ್ಗತ್ಯ=ದುರ್ಗತಿಯಿಂದ ಉಂಟಾದ, ದುರ್ವಿಷ=ಕೆಟ್ಟ ವಿಷವನ್ನು, ವಿನಾಶ=ನಾಶಪಡಿಸುವ, ಸುಧಾನದೀಂ = ಅಮೃತದ ನದಿಯಂತಿರುವ, ತ್ವಾಂ=ನಿನ್ನನ್ನು, ನಸ್ತಃ = ಸತ್ಪುರುಷರು, ಪ್ರಪದ್ಯ= ಆಶ್ರಯಿಸಿ, ಅಚಿರೇಣ=ಕೆಲವೇ ಸಮಯದಲ್ಲಿ, ತಾಪಾನ್ = ಆಧಿಭೌತಿಕ, ಆಧಿದೈವಿಕ ಆಧ್ಯಾತ್ಮಿಕ ತಾಪಗಳನ್ನು, ಶಮಯಂತಿ = ಶಮನಮಾಡಿಕೊಳ್ಳುತ್ತಾರೆ. ಎಲೈ! ಗೋದಾದೇವಿಯೇ ರಂಗನಾಥನು ನೀರುಂಡ ಮೇಘದಂತೆ ನೀಲಮೇಘಶ್ಯಾಮನಾಗಿದ್ದಾನೆ. ಅವನ ವಕ್ಷಸ್ಥಲದಲ್ಲಿರುವ ಲಕ್ಷ್ಮಿಯು "ನೀಲತೋಯದ ಮಧ್ಯಸ್ಥಾವಿದ್ಯುಲ್ಲೇಖೇವ ಭಾಸ್ಪರಾ" ಎಂದು ಹೇಳುವಂತೆ ಮಿಂಚಿನ ಬಳ್ಳಿಯಂತಿದ್ದಾಳೆ ಅವನ ಕೃಪೆಯೆಂಬ ಮಳೆಯಿಂದಾದ ಅಮೃತ ರಸನದಿಯ ಪ್ರವಾಹದಂತೆ ನೀನಿದ್ದೀಯೇ, ಆದುದರಿಂದಲೇ, ಸತ್ಪುರುಷರು, ದುರ್ಗತಿಯಿಂದುಂಟಾದ ಕೆಟ್ಟ ವಿಷದಂತಿರುವ ಜನ್ಮ ಮರಣ ಚಕ್ರದಿಂದ ಕೂಡಿದ ಸಂಸಾರವನ್ನು ನಾಶಪಡಿಸುವ, ಅಮೃತರಸ...