ಗೋದಾಸ್ತುತಿಃ (ಸಂಗ್ರಹ) - 27

ಜಾತಾಮಪರಾಧಮಪಿ ಮಾಮನುಕಂಪ್ಯ ಗೋದೇ
ಗೋಪ್ತ್ರೀಯದಿ ತ್ವಮಸಿ ಯುಕ್ತಮಿದಂ ಭವತ್ಯಾಃ |
ವಾತ್ಸಲ್ಯನಿರ್ಭರತಯಾ ಜನನೀ ಕುಮಾರಂ
ಸ್ತನ್ಯೇನ ವರ್ಧಯತಿ ದಷ್ಟಪಯೋಧರಾಪಿ ||27||

ಗೋದೇ = ಎಲೈ ಗೋದಾದೇವಿಯೇ,
ಜಾತಾಪರಾಧಂ = ಅಪರಾಧವನ್ನೇ ಎಸಗುತ್ತಿರುವ,
ಮಾಂ ಅಪಿ = ನನ್ನನ್ನೂ ಕೂಡ,
ಯದಿ = ಒಂದು ವೇಳೆ,
ಅನುಕಂಪ್ಯ = ದಯತೋರಿ,
ಗೋಪ್ತ್ರೀ = ರಕ್ಷಿಸುವವಳಾಗಿರುವ,
ಇದಂ = ಈ ನಿನ್ನ ಗುಣವು,
ಭವತ್ಯಾಃ - ನಮಗೆ,
ಯುಕ್ತಂ = ಯೋಗ್ಯವಾಗಿಯೇ ಇದೆ. (ಏಕೆಂದರೆ),
ಜನನೀ = ತಾಯಿಯಾದರೋ,
ದಷ್ಟಪಯೋಧರಾಪಿ = ಕಚ್ಚಲ್ಪಟ್ಟ ಮೊಲೆಯುಳ್ಳವಳಾದರೂ,
ಕುಮಾರಂ = (ಕಚ್ಚಿದ) ತನ್ನ ಶಿಶುವನ್ನು,
ವಾತ್ಸಲ್ಯನಿರ್ಭರತಯಾ = ಅತ್ಯಧಿಕವಾದ ವಾತ್ಸಲ್ಯ ಗುಣದಿಂದ,
ಸ್ತನ್ಯೇನ = ತನ್ನ ಮೊಲೆಹಾಲನ್ನುಣಿಸಿಯೇ,
ವರ್ಧಯತಿ - ಪೋಷಿಸುತ್ತಾಳೆ.

    ಎಲೈ! ಗೋದಾದೇವಿಯೇ, ಅಪರಾಧವನ್ನೇ ಎಸಗುತ್ತಿರುವ, ನನ್ನನ್ನೂ ಒಂದು ವೇಳೆ ನೀನು ಕೃಪೆತೋರಿ ರಕ್ಷಿಸುವವಳಾದರೆ, ಈ ನಿನ್ನ ಗುಣವಾದರೋ ನಿನಗೆ ಉಚಿತವಾದುದೇ ಆಗಿದೆ. ಏಕೆಂದರೆ, ತಾಯಿಯಾದವಳು ತನ್ನ ಶಿಶುವು ಸ್ತನ್ನಪಾನ ಮಾಡುವಲ್ಲಿ ಕೆಲವೇಳೆಯ್ಲಲ್ಲಿ ಸ್ತನಗಳನ್ನು ಕಚ್ಚಿದರೂ, ತನ್ನ ಸ್ತನವನ್ನು ಅದು ಕಚ್ಚಿತೆಂದು ಅದರ ದೋಷವನ್ನು ಗ್ರಹಿಸಿ ಅದರ ಮೇಲೆ ಕೋಪತೋರದೆ, 'ದೋಷ ಅದರ್ಶಿತ್ವಂ ವಾತ್ಸಲ್ಯಂ' - ಎಂದು ಹೇಳುವಂತೆ, ಆ ಶಿಶುವಿನ ದೋಷವನ್ನು ಲೆಕ್ಕಿಸದೆ ವಾತ್ಸಲ್ಯಪೂರ್ಣಳಾಗಿ ಮತ್ತೆ ಅದಕ್ಕೆ ತನ್ನ ಸ್ತನ್ಯಪಾನ ಮಾಡಿಸಿ ಅದನ್ನು ಪೋಷಿಸುತ್ತಾಳೆಯಲ್ಲವೇ ?

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ