ಲಲಿತಾ ತ್ರಿಶತೀ ( ಏಕಾರಾದಿನಾಮ ) - 2. ಓಂ ಏಕಾಕ್ಷರ್ಯೈ ನಮಃ

ಮುಖ್ಯವಾದ ಅಕ್ಷರ ಅಥವಾ ಮಾಯೆಯೆಂಬ ಉಪಾಧಿಯುಳ್ಳವಳು. ಮಾಯೆಯು ಈಶ್ವ್ರನಿಗೆ ಉಪಾಧಿಯಾಗಿ ಪ್ರತಿಬಿಂಬದಲ್ಲಿ ಸರ್ವಜ್ಞತ್ವ ಮುಂತಾದ ವಿಶೇಷಗಳನ್ನು ಉಂಟುಮಾಡುವುದು. ಅಂತಹ ಮಾಯೆಯು ಆತ್ಮ ಜ್ಞಾನದಿಂದ ಮುಕ್ತಿಯು ಲಭಿಸುವವರೆಗೂ ನಾಶವಾಗದಿರುವುದರಿಂದ ಕೂಟಸ್ಥವೆಂಬ ಅರ್ಥವನ್ನು ಬೋಧಿಸುವ ಅಕ್ಷ್ರ ಶಬ್ದದಿಂದ ಕರೆಯಲ್ಪಡುವುದು ಅಥವಾ ಓಂಕಾರವೆಂಬ ಏಕಾಕ್ಷರವುಳ್ಳವಳು ಸಕಲ ಶಬ್ದಗಳಿಗೂ ಶಬ್ದಗಳ ಮೂಲಕ ಅರ್ಥಗಳಿಗೂ ಪ್ರಕೃತಿಯು ಓಂಕಾರವು ಇದನ್ನು ಪ್ರತ್ಯೇಕವಾಗಿ ಅವಲಂಬಿಸಿ ಪರ-ಅಪರ ಬ್ರಹ್ಮವಸ್ತುವನ್ನು ಉಪಾಸನೆ ಮಾಡಿ ಪರಾಪರ ಬ್ರಹ್ಮತಾದಾತ್ಮ್ಯವನ್ನು ಹೊಂದಬಹುದು. ಆದ್ದರಿಂದ ದೇವಿಯು ಶಬ್ದಬ್ರಹ್ಮರೂಪವಾದ ಪ್ರಣವಾಕ್ಷರವುಳ್ಳವಳು ಅಥವಾ, ಅಖಂಡಾನಂದ ಚೈತನ್ಯರೂಪನಾದ, ಅನಶ್ವರನಾದ ಪರಮೇಶ್ವ್ರನು ಅರ್ಧ ಶರೀರ ಭಾಗದಲ್ಲಿರುವಳು ಅಥವಾ ಮಾಯಾಬೀಜ ಮುಂತಾದ ವರ್ಣಗಳನ್ನು ಉಪಾಸನಾ ಪ್ರತೀಕವನ್ನಾಗಿ ಹೊಂದಿರುವವಳು ಅಥವಾ ಅಖಂಡಾಕಾರವಾದ ವೃತ್ತಿಯಲ್ಲಿ ಚೈತನ್ಯವು ಪ್ರತಿಬಿಂಬಿಸುವುದರಿಂದ ಅಂತಹ ವೃತ್ತಿವ್ಯಾಪ್ತಿ ಮಾತ್ರ ವಿವಕ್ಷೆಯಿಂದ ಅಕ್ಷರ ಪದದ ಅರ್ಥವಾದ ಚೈತನ್ಯಕ್ಕೆ ವಿಷಯಳಾಗುವವಳು. "ಅಥಪರಾ ಯಯಾ ತದಕ್ಷ್ರಮಧಿಗಮ್ಯತೇ" ಎಂಬ ಶ್ರುತಿಯು ವೃತ್ತಿ ವ್ಯಾಪ್ತಿಯನ್ನು ಅಕ್ಷರ ರೂಪ ಪರಬ್ರಹ್ಮ ವಸ್ತುವಿನಲ್ಲಿ ವರ್ಣಿಸುವುದು. ಸುಗುಣ ಬ್ರಹ್ಮ ವಸ್ತುವಿನಲ್ಲಿರುವ ವಿಶೇಷಣ ಧರ್ಮಗಳು ನಿರ್ಗುಣ ಬ್ರಹ್ಮ ವಸ್ತುವಿನಲ್ಲಿಯೂ ಕಲ್ಪಿತವಾಗಿ ಸಂಸಕ್ತವಾಗುವುವು ಎಂಬುದನ್ನು ಚಕಾರವು ಬೋಧಿಸುತ್ತದೆ. ನಿರ್ಧರ್ಮಕವಸ್ತುವಿನಲ್ಲಿ ಔಷಧಿಕ ಧರ್ಮಸಂಬಂಧಗಳು ಸಂಭವಿಸುವುದರಲ್ಲಿ " ಸಚ್ಚಿನ್ಮಯಃ ಶಿವಃ ಸಾಕ್ಷಾತ್ ತಸ್ಯಾನಂದಮಯಿ ಶಿವಾ, ಸ್ತ್ರೀರೂಪಾಂ ಚಿಂತಯೇದ್ದೇವೀಂ ಪುಂರೂಪಾಮಥವೇಶ್ವರೀಮ್ ಅಥವಾ ನಿಷ್ಕಲಂ ಧ್ಯಾಯೇತ್ ಸಚ್ಚಿದಾನಂದ ವಿಗ್ರಹಾಮ್," "ತ್ವಂ ಸ್ತ್ರೀ ತ್ವಂಪುಮಾನಸಿ" ಮುಂತಾದ ಶ್ರುತಿಸ್ಮೃತಿ ವಚನಗಳು ಪ್ರಮಾಣ ಭೂತಗಳಾಗಿವೆ. ಔಷಾಧಿಕ ಧರ್ಮಗಳು ನಿರ್ಧರ್ಮಕ ವಸ್ತುವಿನಲ್ಲಿ ಬರುವುದರಿಂದ "ಸೇಯಂ ದೇವತೈಕ್ಷತ, ತತ್ ಸತ್ಯಂ ಸ ಆತ್ಮಾ" ಎಂಬ ಶ್ರುತಿ ಭಾಗದಲ್ಲಿ ಸ್ತ್ರೀಲಿಂಗಾಂತವಾದ ದೇವತಾ ಶಬ್ದ, ನಪುಂಸಕಲಿಂಗಾಂತವಾದ ತತ್ಸತ್ಯಂ ಎಂಬ ಶಬ್ದ ಸ ಆತ್ಮಾ ಎಂಬ ಪುಲ್ಲಿಂಗಾಂತ ಶಬ್ದಗಳು ಉಪಾಧಿ ವಿವಕ್ಷೆಯಿಲ್ಲದಿರುವುದರಿಂದ ತತ್ತ್ವಂಪದಲಕ್ಷ್ಯವಾದ ಚೈತನ್ಯವೆಂಬ ಏಕಾರ್ಥವನ್ನು ಬೋಧಿಸುವುವು. ಆದ್ದರಿಂದ ತತ್ತ್ವಂಪದ ಲಕ್ಷ್ಯಾರ್ಥದಲ್ಲಿ ಸರ್ವ ಗುಣಗಳನ್ನೂ ವರ್ಣಿಸಲು ಅವಕಾಶ ವಿದೆಯೆಂದು ಸೂಚಿಸಲು ಈ ನಾಮ ತ್ರಿಶತೀ ವಿದ್ಯೆಯಲ್ಲಿ ಹಯಗ್ರೀವ ಮುನಿಯು ಅನೇಕ ಚಕಾರಗಳನ್ನು ಸಮುಚ್ಚಯವೆಂಬ ಅರ್ಥಲಾಭಕ್ಕೋಸ್ಕ್ರ ಪ್ರಯೋಗಿಸಿರುವನು, ಆದುದರಿಂದ ಅಲ್ಲಲ್ಲಿರುವವೆಂಬ ಅರ್ಥಲಾಭಕ್ಕೋಸ್ಕ್ರ ಪ್ರಯೋಗಿಸಿರುವನು, ಆದುದರಿಂದ ಅಲ್ಲಲ್ಲಿರುವ ಚಕಾರಗಳಿಗೆ ಬೇರೆ ಪ್ರಯೋಜನವನ್ನು ಅನ್ವೇಷಣ ಮಾಡಬೇಕಾಗಿಲ್ಲ. ಏಕಂ + ಅಕ್ಷರಂ=ಯಸ್ಯಾಃ, ಏಕಃ + ಅಕ್ಷರಃ = ಯಸ್ಯಾ ಎಂದು ವಿಗ್ರಹವು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ