ನಮಸ್ತೇ ರುದ್ರ
ರುದ್ರಾಧ್ಯಾಯದಲ್ಲಿ ಹನ್ನೊಂದು ಅನುವಾಕಗಳಿವೆ. ಅನುವಾಕಗಳೆಂದರೆ ಒಂದೊಂದು ಪ್ರಘಟ್ಟ (Para)ಗಳೆಂದು ಭಾವಿಸಬಹುದು. ಇಲ್ಲಿ ಮೊದಲನೆಯ ಅನುವಾಕದಲ್ಲಿ ಭಗವಂತನು ಪ್ರಸನ್ನನಾಗುವಂತೆ ಮಾಡಿಕೊಳ್ಳುವಿಕೆ, ಎರಡರಿಂದ ಒಂಬತ್ತರ ಪೂರ ಅನುವಾಕಗಳಲ್ಲಿ ಭಗವಂತನ ಸರ್ವೇಶ್ವರತ್ವ, ಸರ್ವಾತ್ಮಕತ್ವ, ಸರ್ವಾಮತರ್ಯಾಮಿತ್ವ - ಮುಂತಾದವುಗಳನ್ನು ತಿಳಿಸಿ ನಮಸ್ಕರಿಸುವಿಕೆ, ಹತ್ತನೆಯದರಲ್ಲಿ ಭಗವಂತನ ಪ್ರಾರ್ಥನೆ, ಹನ್ನೊಂದನೆಯದರಲ್ಲಿ ಭಗವದಂಶಸಂಭೂತರಾದ ರುದ್ರರುಗಳ ಸ್ತುತಿ - ಹೀಗೆ ಈ ರುದ್ರಾಧ್ಯಾಯವು ಹನ್ನೊಂದು ಅನುವಾಕಗಳಿಂದ ಕೂಡಿರುತ್ತದೆ. ವಿದ್ಯೆಗಳಲ್ಲೆಲ್ಲ 'ಶ್ರುತಿ' (ವೇದ)ಯು ಹೆಚ್ಚಿನದು. ಶ್ರುತಿಯಲ್ಲಿ ರುದ್ರೈಕಾದಶಿನೀ ಎಂಬ ಭಾಗ. ಅದರಲ್ಲಿ 'ನಮಃ ಶಿವಾಯ' ಎಂಬ ಪಂಚಾಕ್ಷರೀ ಮಂತ್ರವು. ಅದರಲ್ಲಿಯೂ 'ಶಿವ' ಎಂಬೆರಡು ಅಕ್ಷರಗಳು ಹೆಚ್ಚಿನ ಸಾರವಾದದ್ದು - ಎಂದು ಒಂದು ಸ್ಮೃತಿವಾಕ್ಯವಿದೆ. 'ವಶ ಕಾನ್ತೌ' ಎಂಬ ಧಾತು ವಿನಿಂದಾದ 'ಶಿವ' ಎಂಬ ಶಬ್ದರೂಪವು 'ಲೋಕಾನಾಂ ಶಿವಂ (ಮಂಗಳಂ) ವಷ್ವೀತಿ ಶಿವಃ' - ಎಂಬ ವ್ಯುತ್ಪತ್ತಿಯಂತೆ ವರ್ಣವ್ಯತ್ಯಯವನ್ನು ಹೊಂದಿ 'ಶಿವ' ಎಂಬ ಭಗವಂತನ ದಿವ್ಯನಾಮವಾಗಿ ಹೊರಬಂದಿದೆ. ಶಿವ - ಎಂಬ ಶಬ್ದಕ್ಕೆ ಮಂಗಳವೆಂದೇ ಅರ್ಥವಿದೆ. ಅಮರಕೋಶದಲ್ಲಿ ಶ್ರೇಯಸಮ್, ಶಿವಮ್, ಭದ್ರಮ್, ಕಲ್ಯಾಣಮ್, ಮಂಗಳಮ್, ಶುಭಮ್ - ಎಂದು ಶಿವಶಬ್ದಕ್ಕೆ ಪರ್ಯಾಯವಾಗಿಯೇ ಉ...