Sharada Bhujanga Prayata Stotram - By Adi Guru Sri Adi Shankara Bhagavatpada

ಶಾರದಾಭುಜಂಗ ಪ್ರಯಾತಾಷ್ಟಕಮ್

ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ |
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್ ||
ಸದಾಸ್ಯೇಂದು ಬಿಂಬಾಂ ಸದಾನೋಷ್ಠಬಿಂಬಾಂ |
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||1||
ವಕ್ಷಸ್ಥಳದಲ್ಲಿ ತುಂಬಿದ ಅಮೃತ ಕಳಶವನ್ನು ಹೊಂದಿರುವ, ಪ್ರಸಾದ ಪುಣ್ಯಗಳಿಗೆ ಅವಲಂಬಿತಳಾದ ಸದಾ ಚಂದ್ರನಂತೆ ಅರಳಿದ ತುಟಿಯಿಂದ ಹಸನ್ಮಖಿಯಾದ, ನನ್ನ ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ.

ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನ ಮುದ್ರಾಂ |
ಕಲಾಭಿರ್ವಿನಿದ್ರಾಂ ಕಲಾಪೈಃ ಸುಭದ್ರಾಮ್ ||
ಪುರಸ್ತ್ರೀಂ ವಿನಿದ್ರಾಂ ಪುರಸ್ತುಂಗ ಭದ್ರಾಂ |
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||2||
ದಯಾಮಯ ನೋಟವುಳ್ಳ, ಕೈಯಲ್ಲಿ ಜ್ಞಾನಮುದ್ರೆ ಇರುವ, ಕಲಾಸಕ್ತಳಾದ, ಸುಭದ್ರವಾಗಿ ಕಾರ್ಯ ನಿರ್ವಹಿಸುವ, ಸದಾ ಜಾಗರೂಕಳಾದ, ತುಂಗಾ ತೀರದ ಶೃಂಗೇರಿ ಪುರದಲ್ಲಿ ವಾಸಿಸುವ, ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ.

ಲಲಾಮಾಂಕಘಾಲಾಂ ಲಸದ್ಗಾನಲೋಲಾಂ |
ಸ್ವಭಕ್ತೈಕ ಪಾಲಾಂ ಯಶಃ ಶ್ರೀಕಪೋಲಾಂ ||
ಕರೇತ್ವಕ್ಷಮಾಲಾಂ ಕನತ್ಪ್ರತ್ನಲೋಲಾಂ |
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||3||
ಹಣೆಯಲ್ಲಿ ಕುಂಕುಮ ಧರಿಸಿರುವ, ಒಳ್ಳೆಯ ಗಾನದಲ್ಲಿ ಆಸಕ್ತಳಾದ, ಭಕ್ತರನ್ನು ಪಾಲಿಸುವವಳಾದ, ಯಶಸ್ಸು ಮತ್ತು ಲಕ್ಷ್ಮಿ ಎಂಬ ಕಪೋಲಗಳುಳ್ಳ ಕೈಯಲ್ಲಿ ಅಕ್ಷರಮಾಲೆಯನ್ನು ಪಿಡಿದಿರುವ, ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ.

ಸುಸೀಮಂತವೇಣೀಂ ದೃಶಾ ನಿರ್ಜಿತೈಣೀಂ |
ರಮತ್ಕೀರವಾಣೀಂ ನಮದ್ವಜ್ರಪಾಣಿಮ್ ||
ಸುಧಾಮಂಥರಾಸ್ಯಾಂ ಮುದಾಚಿಂತ್ಯ ವೇಣೀಂ |
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||4||
ನೀಲವೇಣಿಯೂ, ದೂರದೃಷ್ಟಿವುಳ್ಳ, ಕೋಮಲ ಕಂಠವುಳ್ಳ, ವಜ್ರಖಚಿತ ಕೈಗಳುಳ್ಳ, ಚಂದ್ರನಂತೆ ಮುಖವುಳ್ಳ, ಸಂತೋಷಚಿತ್ತಳಾದ ತಾಯಿ ಶಾರದೆಯನ್ನು ಭಜಿಸುತ್ತೇನೆ.

ಸುಶಾಂತಾಂ ಸುದೇಹಾಂ ದೃಗಂತೇ ಕಚಾಂತಾಂ |
ಲಸತ್ಸಲ್ಲತಾಂಗೀ ಮನಂತಾಮ ಚಿಂತ್ಯಾಮ್ ||
ಸ್ಮೃತಾಂತಾಪಸೈಃ ಸಂಗಪೂರ್ವಸ್ಥಿತಾಂ ತ್ವಾಂ |
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||5||
ಶಾಂತಳೂ, ಸೌಂದರ್ಯವತಿಯೂ, ಬಳ್ಳಿಯಂತೆ ದೇಹವುಳ್ಳವಳೂ, ಅನಂತಳೂ, ಅಚಿಂತ್ಯಳೂ, ಸ್ಮರಿಸುವ ತಪಸ್ವಿಗಳ ಮನಸ್ಸಿನಲ್ಲಿರುವ ತಾಯಿ ಶಾರದೆಯನ್ನು ಭಜಿಸುತ್ತೇನೆ.

ಕುರಂಗೇ ತುರಂಗೇ ಮೃಗೇಂದ್ರೇ ಖಗೇಂದ್ರೇ |
ಮರಾಲೇ ಮದೇಭೇ ಮಹೋಕ್ಷೇsಧಿರೂಢಾಮ್ ||
ಮಹತ್ಯಾಂ ನವಮ್ಯಾಂ ಸದಾ ಸಾಮರೂಪಾಂ
ಭಜೇ ಶಾರದಾಂಬಮಜಸ್ರಂ ಮದಂಬಾಮ್ ||6||
ಜಲಕರ ಪಕ್ಷಿ ಮೃಗ ಹಂಸವಾಹಿನಿಯಾದ, ಮಹತ್ತಾದಳೂ, ನವಗುಣ ಸಂಪನ್ನಳೂ, ಸದಾ ಸೌಮ್ಯರೂಪಳೂ ಆದ ತಾಯಿ ಶಾರದೆಯನ್ನು ಭಜಿಸುತ್ತೇನೆ.

ಜ್ವಲತ್ಕಾಂತಿಮಹ್ನಿಂ ಜಗನ್ಮೋಹನಾಂಗೀಂ |
ಭಜೇ ಮಾನಸಾಂಭೋಜಸುಭ್ರಾಂತಭೃಂಗೀಮ್ ||
ನಿಜಸ್ತೋತ್ರ ಸಂಗೀತ ನೃತ್ಯ ಪ್ರಭಾಂಗೀಂ |
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||7||
ಪ್ರಜ್ವಲಿಸುವ ಅಗ್ನಿಯಂತೆ ಕಾಂತಿಯುತಳಾದ, ಜಗತ್ತಿಗೆ ಮೋಹನ ರೂಪಳಾದ ಮನಸ್ಸಿನ ಸರೋವರದಲ್ಲಿ ದುಂಬಿಯಂತೆ ವಿಹರಿಸುತ್ತಿರುವ, ಸ್ತೋತ್ರಸಂಗೀತ ನೃತ್ಯಗಳಿಗೆ ಒಡೆಯಳಾದ ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ.

ಭವಾಂಭೋಜನೇತ್ರಾಜಸಂಪೂಜ್ಯಮಾನಾಂ |
ಲಸನ್ಮಂದಹಾಸ ಪ್ರಭಾವಕ್ತ್ರಚಿಹ್ನಾಮ್ ||
ಚಲಚ್ಚಂಚಲಾಚಾರುತಾಟಂಕಕರ್ಣಾಂ |
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||8||
ಮಾನಸಿಕವಾಗಿ ಪೂಜಿಸಲ್ಪಡುವ ಮಂದಹಾಸದ ಪ್ರಭೆಯಿಂದ ಕೂಡಿದ ಮುಖ ಮುದ್ರೆಯುಳ್ಳ, ಕಿವಿಗಳಲ್ಲಿ ತೂಗಾಡುವ ಸುಂದರ ಜುಮುಕಿ ಕಿವಿಗಳಲ್ಲಿ ಧರಿಸಿರುವ ನನ್ನ ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ.




Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ