Ganesha Pancharatnam

ಮುದಾಕರಾತ್ತಮೋದಕಂ ಸದಾ ವಿಮುಕ್ತಿ ಸಾಧಕಂ |
ಕಲಾಧರಾವತಂಸಕಂ ವಿಲಾಸಿ ಲೋಕರಕ್ಷಕಮ್ ||
ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ |
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಂ ||1||
ಸಂತೋಷದಿಂದ ಕಡುಬನ್ನು ಕೈಯಲ್ಲಿ ಹಿಡಿದಿರುವವನೂ, ಮೋಕ್ಷಸಾಧಕನೂ, ಶಿರಸ್ಸಿನಲ್ಲಿ ಚಂದ್ರನನ್ನು ಧರಿಸಿದವನೂ, ಲೀಲೆಯೆಂದು ತಿಳಿದು ಲೋಕವನ್ನು ರಕ್ಷಿಸುವವನೂ, ಅನಾಥರನ್ನು ಕಾಪಾಡುವವನೂ, ಗಜಾಸುರನನ್ನು ಸಂಹರಿಸಿದವನೂ, ನಮಿಸಿದ ಭಕ್ತರ ಸಂಕಷ್ಟಗಳನ್ನು ಪರಿಹರಿಸುವವನೂ ಆದ ಆ ವಿನಾಯಕನನ್ನು (ನಾನು) ನಮಿಸುತ್ತೇನೆ.


ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ |
ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ ||
ಸುರೇಶ್ವರಂನಿಧೀಶ್ವರಂ ಗಜೇಶ್ವರಂ ಗಣೇಶ್ವರಂ |
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಂ ||2||
ವಿನಯದಿಂದ ಶರಣಾಗದವರಿಗೆ ಅತಿ ಭಯಾಕರನೂ, ಉದಯಿಸುವ ಸೂರ್ಯನಂತೆ ವಿರಾಜಿಸುವವನೂ, ದೈತ್ಯರು ಮತ್ತು ದೇವತೆಗಳಿಂದ ವಂದಿತನೂ, ಭಕ್ತರ ಎಲ್ಲ ವಿಪತ್ತುಗಳನ್ನೂ ಪರಿಹರಿಸುವವನೂ, ದೇವತೆಗಳ ಅಧಿಪತಿಯೂ ಎಲ್ಲ ನಿಧಿಗಳ ಒಡೆಯನೂ, ಗಜರಾಜನೂ, ಗಣೇಶ್ವರನೂ, ಪರಾತ್ಪರನೂ ಆದ ಗಣಪತಿಯನ್ನು ಸದಾ (ನಾನು) ಆಶ್ರಯಿಸುತ್ತೇನೆ.

ಸಮಸ್ತ ಲೋಕ ಶಂಕರಂ ನಿರಸ್ತದೈತ್ಯ ಕುಂಜರಂ |
ದರೇತರೋದರಂ ವರಂ ವರೇಭವಕ್ತ್ರ ಮಕ್ಷರಮ್ ||
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ |
ಮನಸ್ಕರಂ ನಮಸ್ಕೃರೋಮಿ ಭಾಸ್ವರಮ್ ||3||
ಎಲ್ಲ ಲೋಕಗಳಿಗೂ ಕಲ್ಯಾಣ ಮಾಡುವವನೂ, ಗಜಾಸುರನನ್ನು ಸಂಹರಿಸಿದವನೂ, ವಿಶಾಲ ಹೊಟ್ಟೆಯುಳ್ಳವನೂ, ಶ್ರೇಷ್ಠವಾದಗಜಮುಖವುಳ್ಳವನೂ, ಅವಿನಾಶಿಯೂ, ದಯಾನಿಧಿಯೂ, ಕ್ಷಮಾಶೀಲನೂ, ಆನಂದ ಸಾಗರನೂ, ನಮಸ್ಕರಿಸಿದ ಭಕ್ತರಿಗೆ ಕೀರ್ತಿ ಶ್ರೇಯಸ್ಸನ್ನುಂಟು ಮಾಡುವವನೂ, ತೇಜೋಮಯಿಯೂ ಆದ ಗಜಾನನನ್ನು ನಮಸ್ಕರಿಸುತ್ತೇನೆ.

ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿ ಭಾಜನಂ |
ಪುರಾರಿಪೂರ್ವನಂದನಂ ಸುರಾರಿಗರ್ವ ಚರ್ವಣಮ್ ||
ಪ್ರಪಂಚನಾಶಭೀಷಣಂ ಧನಂಜಯಾದಿ ಭೂಷಣಂ |
ಕಪೋಲದಾನ ವಾರಣಂ ಭಜೇ ಪುರಾಣವಾರಣಮ್ ||4||
ಭಕ್ತರ ಕಷ್ಟವನ್ನು ಬಡಿದೋಡಿಸುವವನೂ, ಅನಾದಿ ವೇದಗಳಿಂದ ಸ್ತುತಿಸಲ್ಪಡುವವನೂ, ಈಶ್ವರನ ಜ್ಯೇಷ್ಠಪುತ್ರನೂ, ರಾಕ್ಷಸರ ಗರ್ವವನ್ನು ನಿರ್ಮೂಲ ಮಾಡಿದವನೂ, ಲೋಕ ಕಂಟಕರಿಗೆ ಭೀಷಣನೂ, ಅಗ್ನಿವಾಯು ದೇವತೆಗಳಿಗೆ ಭೂಷಣ ಪ್ರಾಯನಾದ, ಗಂಡಸ್ಥಳದಲ್ಲಿ ಸುರಿಯುತ್ತಿರುವ ಮದೋದಕವನ್ನು ಒರೆಸಿ ಕೊಳ್ಳುತ್ತಿರುವವನೂ ಆದ ಅನಾದಿ ಗಣಪತಿಯನ್ನು ಭಜಿಸುತ್ತೇನೆ.

ನಿತಾಂತಕಾಂತದಂತಕಾಂತಿಮಂತಕಾಂತಕಾತ್ಮಜಂ |
ಅಚಿಂತ್ಯ ರೂಪಮಂತಹೀನಮಂತರಾಯಕೃಂತನಮ್ ||
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ |
ತಮೇಕದಂತ ಮೇವ ತಂವಿಚಿಂತಯಾಮಿ ಸಂತತಮ್ ||5||
ಅತ್ಯಂತ ಮನೋಹರವಾದ ಹಲ್ಲುಗಳ ಕಾಂತಿಯುಳ್ಳವನೂ, ಕಾಲನಕಾಲನಾದ ಶಿವನ ಪುತ್ರನೂ, ಚಿಂತನೆಗೆ ನಿಲುಕದ ಸ್ವರೂಪವುಳ್ಳವನೂ, ನಾಶರಹಿತನೂ, ವಿಘ್ನನಿವಾರಕನೂ, ಯೋಗಿಗಳ ಹೃದಯದಲ್ಲಿ ಸದಾ ನೆಲೆಸಿರುವವನೂ, ಏಕದಂತನನ್ನು ಸತತವಾಗಿ ಧ್ಯಾನಿಸುತ್ತೇನೆ.

ಮಹಾಗಣೇಶ ಪಂಚರತ್ನ ಮಾದರೇಣ ಯೋನ್ವಹಂ |
ಪ್ರಗಾಯತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಮ್ ||
ಅರೋಗ ತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ |
ಸಮಾಹಿತಾಯುರಷ್ಟ ಭೂತಿಮಭ್ಯುಪೇತಿ ಸೋಚಿರಾತ್ ||6||
ಪ್ರತಿದಿನ ಪ್ರಾತಃಕಾಲದಲ್ಲಿ ಗಣೇಶನನ್ನು ಹೃದಯದಲ್ಲಿ ಸ್ಮರಿಸುತ್ತಾ ಈ ಮಹಾಗಣೇಶ ಪಂಚರತ್ನ ಸ್ತೋತ್ರವನ್ನು ಯಾರು ಹಾಡುತ್ತಾರೋ ಅವರು ಆರೋಗ್ಯವನ್ನು, ನಿರ್ದೋಷತ್ವವನ್ನು, ಸನ್ಮಿತ್ರರನ್ನು, ಸುಪುತ್ರರನ್ನು, ಪೂರ್ಣ ಆಯುಷ್ಯವನ್ನು, ಆಷ್ಟೈಶ್ವರ್ಯವನ್ನು ಶೀಘ್ರವಾಗಿ ಹೊಂದುವರು.




Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ