Posts

Showing posts from August, 2016

|| ಶ್ರೀ ಶಂಕರನಾರಾಯಣ ಸ್ತುತಿ ಸ್ತೋತ್ರಮ್ ||

ಧ್ಯಾಯೇನ್ಮಾಣಿಕ್ಯ ಪೀಠೇ ಸಕಲ ಸುರಗಣೈ:ಸೇವ್ಯಮಾನಂ ಸಮಂತಾತ್ ಬಿಭ್ರಾಣಂ ಪಾಣಿಪದ್ಮೈ: ಪರಶುದರವರಂ ಮಧ್ಯರಾಜತ್ ಕರಾಬ್ಜಂ | ವ್ಯಾಘ್ರ ಶ್ರೀ ಕೃತ್ತಿ ಪೀತಾಂಬರಧರ ಮಹಿರಾಟ್ ಕೌಸ್ತುಭಾ ಕಲ್ಪಮೀಶಂ ಗೌರೀ ಲಕ್ಷ್ಮೀ ಸಮೇತಂ ಸ್ಫಟಿಕ ಮರಕತೋದ್ಭಾಸಿತಾಂಗಂ ಶುಭಾಂಗಂ ||೧|| ಭಾವಾರ್ಥ:-ಸುತ್ತಲೂ ನೆರೆದಿರುವ ಸಮಸ್ತ ದೇವತಾ ಸಮೂಹದಿಂದ ಮಾಣಿಕ್ಯಪೀಠಾರೂಢಳಾಗಿ ಸೇವೆಯನ್ನು ಸ್ವೀಕರಿಸುತ್ತಾ,ಕೈಗಳಲ್ಲಿ ಪರಶುವನ್ನು ಮತ್ತು ಶಂಖವನ್ನು ಹಿಡಿದುಕೊಂಡು,ವ್ಯಾಘ್ರಚರ್ಮ ಹಾಗೂ ಹಳದಿ ವಸನಧಾರಿಯಾಗಿ,ನಾಗರಾಜನೊಡನೆ ಕೌಸ್ತುಭಮಣಿಯನ್ನು ಧರಿಸಿಕೊಂಡು ಒಂದೆಡೆ ಗೌರಿಯನ್ನೂ ಮಗದೊಂದೆಡೆ ಲಕ್ಷ್ಮಿಯನ್ನೂ ಒಡಗೂಡಿ ಸ್ಪಟಿಕದಂತೆ ಸ್ವಚ್ಛವಾಗಿಯೂ,ಪಚ್ಚೆಮಣಿಯ ತೆರದಲ್ಲಿಯೂ ಬೆಳಗುವ ಶರೀರವನ್ನು ಹೊಂದಿರುವ ಶಂಕರನಾರಾಯಣ ಸ್ವಾಮಿಯನ್ನು ಧ್ಯಾನಿಸುತ್ತೇನೆ. ಶೀರ್ಷಸ್ಯಾರ್ಧ ಜಟಂ ತದರ್ದ ಕಬರಿ ಶ್ರೀಮತ್ಕಿರೀಟಾನ್ವಿತಂ ರಾಕಾ ಬಿಂಬಯುತಂ ಕುಠಾರಮಮಲಂ ಶಂಖಂ ದಧಾನಂ ಕರೇ | ಬಾಹ್ವೋರ್ದಕ್ಷಿಣ ವಾಮಯೋರಧರಯೋರಿಷ್ಟ ಪ್ರದಾನಂಕಟಿ ನ್ಯಸ್ತಾಭೀಂ ಗಜಚರ್ಮ ಹೇಮವಸನಂ ಶಂಭ್ವಚ್ಯುತಾಂಗಂ ಭಜೇ ||೨|| ಭಾವಾರ್ಥ:-ತಲೆಯ ಅರ್ಧಭಾಗದಲ್ಲಿ ಜಟೆ,ಉಳಿದರ್ಧ ಭಾಗದಲ್ಲಿ ತುರುಬುನಿಂದ ಕೂಡಿದವನಾಗಿ,ಚಂದ್ರನ ಕಲೆಯಿಂದ ಹೊಳೆವ ಕಿರೀಟವನ್ನು ಧರಿಸಿ,ಹಸ್ತಗಳಲ್ಲಿ ಕೊಡಲಿ ಹಾಗೂ ನಿರ್ಮಲವಾಗಿರುವ ಶಂಖವನ್ನು ಹಿಡಿದುಕೊಂಡು,ಕೆಳಬದಿಯ ಬಲಗೈಯಲ್ಲಿ ವರದ ಮುದ್ರೆಯನ್ನೂ,ಸೊಂಟದ ಮೇಲಿರಿಸಿರುವ ಕೈಯಲ್ಲಿ ಅಭಯಮುದ್ರೆಯನ...

ಶ್ರೀಕೃಷ್ಣ ಜನ್ಮಾಷ್ಟಮಿ

ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಾಯ ಚ | ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ||     ಶ್ರೀಕೃಷ್ಣಜನ್ಮಾಷ್ಟಮಿ ಈ ದಿವಸವು ಶ್ರೀಕೃಷ್ಣನು ವಸುದೇವ ದೇವಕಿಯರ ಕೈಕಾಲ ಬೇಡಿಯನ್ನು ಕಳಚಿ ಅವರಿದ್ದ ಸೆರೆಮನೆಯಲ್ಲಿ ಅವರು ಎಂದೆಂದಿಗೂ ಕಾಣದೆ ಇದ್ದ ಒಂದು ವಿಚಿತ್ರವಾದ ಪುಣ್ಯಜ್ಯೋತಿಯನ್ನು ಬೆಳಗಿಸಿದ ಪರಮಮಂಗಳದಿನವಾಗಿರುತ್ತದೆ. ಈ ದಿನದಿಂದ ಮೊದಲಾಗಿ ಮುಂದೆ ಮುಂದೆ ಹೋಗುತ್ತಾ ಕಂಸನ ಕಡೆಯ ಅಸುರರಿಗೆ ಸೋಲು ಆಗುತ್ತಾ ಬಂದಿತು. ಭೂದೇವಿಯು ಇನ್ನು ಮೇಲೆ ತಾನು ದುಷ್ಟರ ಭಾರವನ್ನು ಹೊರತಕ್ಕ ದುಃಖವು ಇರುವದಿಲ್ಲವೆಂಬ ನಿರೀಕ್ಷೆಯಿಂದ ನಲಿಯಲು ಆರಂಭಿಸಿದಳು. ಶ್ರೀಕೃಷ್ಣನು ಅವತರಿಸಿ ಒಂದು ಯುಗವೇ ಆಗಿಹೋಗಿದ್ದರೂ ಭರತಖಂಡದ ಎಲ್ಲಾ ಪ್ರಾಂತದವರೂ ಈ ದಿನವನ್ನು ತಪ್ಪದೇ ಪ್ರತಿವರ್ಷವೂ ಉತ್ಸವ ದಿನವಾಗಿ ಎಣಿಸುತ್ತಾ ಬರುತ್ತಿದ್ದಾರೆ.     ಕೃಷ್ಣಜನ್ಮವನ್ನು ಉಪವಾಸದಿನವಾಗಿ ಎಣಿಸುವವರೇ ಬಹುಮಂದಿ; ಎಲ್ಲಿಯೋ ಕೆಲವರು ಇದನ್ನು ಊಟದ ಹಬ್ಬವಾಗಿ ಆಚರಿಸುವವರು ಇದು ಹೇಗಾದರೂ ಈ ಎರಡು ಪಂಗಡದವರೂ ಈ ದಿನ ಕೃಷ್ಣನ ಆರಾಧನೆಯನ್ನು ಮಾಡುವದೂ, ಅವನು ಮಾಡಿದ ಲೋಕೋಪಕಾರವನ್ನೂ ಧರ್ಮೊದ್ಧಾರವನ್ನೂ ನೆನೆಸಿಕೊಂಡು ಸಂತೋಷಪಡುವದೂ, ಪೂಜೆ, ದಾನ, ಧರ್ಮ - ಮುಂತಾದವುಗಳಿಂದ ಸತ್ಕಾಲಕ್ಷೇಪವನ್ನು ಮಾಡುವದೂ ತಮಗೆಲ್ಲರಿಊ ಶ್ರೇಯಸ್ಕರವೆಂದು ನಂಬಿರುತ್ತಾರೆ. ಈ ಶುಭದಿವಸದ ಮುಹೂರ್ತವನ್ನು ಗೊತ್ತುಮಾಡುವರಲ್ಲಿ ಸ್ವಲ್ಪ ಮತಭೇದವುಂಟು...

॥ ಅಘನಾಶಕಗಾಯತ್ರೀಸ್ತೋತ್ರ ॥

ಆದಿಶಕ್ತೇ ಜಗನ್ಮಾತರ್ಭಕ್ತಾನುಗ್ರಹಕಾರಿಣಿ । ಸರ್ವತ್ರ ವ್ಯಾಪಿಕೇಽನಂತೇ ಶ್ರೀಸಂಧ್ಯೇ ತೇ ನಮೋಽಸ್ತು ತೇ ॥ ತ್ವಮೇವ ಸಂಧ್ಯಾ ಗಾಯತ್ರೀ ಸಾವಿತ್ರಿ ಚ ಸರಸ್ವತೀ । ಬ್ರಾಹ್ಮೀ ಚ ವೈಷ್ಣವೀ ರೌದ್ರೀ ರಕ್ತಾ ಶ್ವೇತಾ ಸಿತೇತರಾ ॥ ಪ್ರಾತರ್ಬಾಲಾ ಚ ಮಧ್ಯಾಹ್ನೇ ಯೌವನಸ್ಥಾ ಭವೇತ್ಪುನಃ । ವೃದ್ಧಾ ಸಾಯಂ ಭಗವತೀ ಚಿಂತ್ಯತೇ ಮುನಿಭಿಃ ಸದಾ ॥ ಹಂಸಸ್ಥಾ ಗರುಡಾರೂಢಾ ತಥಾ ವೃಷಭವಾಹಿನೀ । ಋಗ್ವೇದಾಧ್ಯಾಯಿನೀ ಭೂಮೌ ದೃಶ್ಯತೇ ಯಾ ತಪಸ್ವಿಭಿಃ ॥ ಯಜುರ್ವೇದಂ ಪಠಂತೀ ಚ ಅಂತರಿಕ್ಷೇ ವಿರಾಜತೇ । ಸಾ ಸಾಮಗಾಪಿ ಸರ್ವೇಷು ಭ್ರಾಮ್ಯಮಾಣಾ ತಥಾ ಭು ವಿ ॥ ರುದ್ರಲೋಕಂ ಗತಾ ತ್ವಂ ಹಿ ವಿಷ್ಣುಲೋಕನಿವಾಸಿನೀ । ತ್ವಮೇವ ಬ್ರಹ್ಮಣೋ ಲೋಕೇಽಮರ್ತ್ಯಾನುಗ್ರಹಕಾರಿಣೀ ॥ ಸಪ್ತರ್ಷಿಪ್ರೀತಿಜನನೀ ಮಾಯಾ ಬಹುವರಪ್ರದಾ । ಶಿವಯೋಃ ಕರನೇತ್ರೋತ್ಥಾ ಹ್ಯಶ್ರುಸ್ವೇದಸಮುದ್ಭವಾ ॥ ಆನಂದಜನನೀ ದುರ್ಗಾ ದಶಧಾ ಪರಿಪಠ್ಯತೇ । ವರೇಣ್ಯಾ ವರದಾ ಚೈವ ವರಿಷ್ಠಾ ವರರ್ವ್ಣಿನೀ ॥ ಗರಿಷ್ಠಾ ಚ ವರಾಹೀ ಚ ವರಾರೋಹಾ ಚ ಸಪ್ತಮೀ । ನೀಲಗಂಗಾ ತಥಾ ಸಂಧ್ಯಾ ಸರ್ವದಾ ಭೋಗಮೋಕ್ಷದಾ ॥ ಭಾಗೀರಥೀ ಮರ್ತ್ಯಲೋಕೇ ಪಾತಾಲೇ ಭೋಗವತ್ಯಪಿ ॥ ತ್ರಿಲೋಕವಾಹಿನೀ ದೇವೀ ಸ್ಥಾನತ್ರಯನಿವಾಸಿನೀ ॥ ಭೂರ್ಲೋಕಸ್ಥಾ ತ್ವಮೇವಾಸಿ ಧರಿತ್ರೀ ಶೋಕಧಾರಿಣೀ । ಭುವೋ ಲೋಕೇ ವಾಯುಶಕ್ತಿಃ ಸ್ವರ್ಲೋಕೇ ತೇಜಸಾಂ ನಿಧಿಃ ॥ ಮಹರ್ಲೋಕೇ ಮಹಾಸಿದ್ಧಿರ್ಜನಲೋಕೇ ಜನೇತ್ಯಪಿ । ತಪಸ್ವಿನೀ ತಪೋಲೋಕೇ ಸತ್ಯಲೋಕೇ ತು ಸತ್ಯವಾಕ್ ॥ ಕಮ...

ಋಣಮೋಚಕ ಮಂಗಲ ಸ್ತೋತ್ರಮ್

#‎ ಅಂಗಾರಕ_ಜಯಂತಿ‬ ‪#‎ ಶುಭಾಶಯಗಳು‬ || ಋಣಮೋಚಕ ಮಂಗಲ ಸ್ತೋತ್ರಮ್ || ಮಂಗಲೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದ: | ಸ್ಥಿರಾಸನೋ ಮಹಾಕಾಯ: ಸರ್ವ ಕರ್ಮಾವರೋಧಕ: ||೧|| ಭಾವಾರ್ಥ:-ಮಂಗಳ,ಭೂಮಿಪುತ್ರ,ಋಣನಾಶಕ,ಧನದಾಯಿ,ಸ್ಥಿರಾಸನ, ಮಹಾಕಾಯ, ಸರ್ವಕರ್ಮಗಳಿಗೆ ತಡೆಯನ್ನುಂಟುಮಾಡುವವ,... ಲೋಹಿತೋ ಲೋಹಿತಾಕ್ಷಶ್ಚ ಸಾಮಗಾನಾಂ ಕೃಪಾಕರ: | ಧರಾತ್ಮಜ: ಕುಜೋ ಭೌಮೋ ಭೂತಿದೋ ಭೂಮಿ ನಂದನ: ||೨|| ಭಾವಾರ್ಥ:-ಲೋಹಿತ,ಲೋಹಿತಾಕ್ಷ,ಸಾಮವೇದ ಗಾಯಕರಿಗೆ ಕರುಣೆಯನ್ನು ತೋರುವವ,ಭೂಮಿತನಯ,ಕುಜ,ಭೌಮ,ಅಭ್ಯುದಯಕಾರಕ,ಭೂಮಿಗೆ ಸಂತಸವನ್ನು ದಯಪಾಲಿಸುವವ.... ಅಂಗಾರಕೋ ಯಮಶ್ಚೈವ ಸರ್ವರೋಗಾಪಹಾರಕ: | ವೃಷ್ಟೇ ಕರ್ತಾsಪಹರ್ತಾಚ ಸರ್ವಕಾಮ ಫಲಪ್ರದ: ||೩|| ಅಂಗಾರಕ,ಯಮ,ಸರ್ವರೋಗವಿನಾಶಕ,ವೃಷ್ಟಿ[ಮಳೆ]ಕಾರಕ,ವೃಷ್ಟ್ಯಾಪ ಹಾರಕ, ಸಮಸ್ತ ಕಾಮನೆಗಳ ಫಲದಾಯಕ... ಏತಾನಿ ಕುಜನಾಮಾನಿ ನಿತ್ಯಮ್ ಯ: ಶ್ರದ್ಧಯಾ ಪಠೇತ್ | ಋಣಂ ನ ಜಾಯತೇ ತಸ್ಯ ಧನಂ ಶೀಘ್ರ ಮವಾಪ್ನುಯಾತ್ ||೪|| ಭಾವಾರ್ಥ:-ಕುಜನ ಕುರಿತಾದ ಈ ಹೆಸರುಗಳನ್ನು ಅನುದಿನವೂ ಶ್ರದ್ಧಾಯುಕ್ತನಾಗಿ ಯಾವಾತನು ಪಠಿಸುವನೋ ಅವನಿಗೆ ಸಾಲಾದಿ ಋಣಗಳು ಬಾಧಿಸುವುದಿಲ್ಲ. ಅಂತಹವನು ಶೀಘ್ರವಾಗಿ ಧನವಂತನಾಗುವನು. ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ | ಕುಮಾರಂ ಶಕ್ತಿ ಹಸ್ತಂಚ ಮಂಗಲಂ ಪ್ರಣಮಾಮ್ಯಹಂ ||೫|| ಭಾವಾರ್ಥ:-ಭೂದೇವಿಯ ಗರ್ಭದಿಂದುದಿಸಿದವನೂ,ವಿದ್ಯುತ್ತಿನ ಪ್ರಕಾಶದಂತೆ ಬೆಳಗ...

ಮಹಾ ಮೃತ್ಯುಂಜಯ ಸ್ತೋತ್ರಮ್

ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಂ ಉಮಾಪತಿಂ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೧|| ಭಾವಾರ್ಥ:-ರುದ್ರನನ್ನನು,ಪಶುಪತಿಯನ್ನು,ಸ್ಥಿರರೂಪೀಶಿವನನ್ನು,ನೀಲಕಂಠನನ್ನು, ಉಮಾಪತಿಯನ್ನು,ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ಕಾಲಕಂಠಂ ಕಾಲಮೂರ್ತಿಂ ಕಾಲಾಗ್ನಿಂ ಕಾಲನಾಶನಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೨|| ಭಾವಾರ್ಥ:-ಕಾಲಕಂಠನನ್ನು,ಕಾಲಮೂರ್ತಿಯನ್ನು,ಕಾಲಾಗ್ನಿಯನ್ನು,ಕಾಲನಾಶಕನನ್ನು ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೩|| ಭಾವಾರ್ಥ:-ವಾಮದೇವನನ್ನು,ಲೋಕನಾಥನನ್ನು,ಜಗದ್ಗುರುವನ್ನು,ದೇವದೇವನಾದ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ದೇವದೇವಂ ಜಗನ್ನಾಥಂ ದೇವೇಶಂ ವೃಷಭಧ್ವಜಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೪|| ಭಾವಾರ್ಥ:-ದೇವದೇವನಾದಜಗನ್ನಾಥನನ್ನುದೇವೇಶನಾದ ಪರಮಶಿವನನ್ನು,ವೃಷಭಧ್ವಜನನ್ನು,ಮಹಾದೇವನನ್ನುನಾನುಶಿರಸಾನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ಗಂಗಾಧರಂ ಮಹಾದೇವಂ ಶಂಕರಂ ಶೂಲಪಾಣಿನಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೫|| ಭಾವಾರ್ಥ:-ಗಂಗಾಧರನನ್ನು,ಶಂಕರನನ್ನು, ಶೂಲಪಾಣಿಯನ್ನು ಮಹಾದೇವನನ್ನು ನಾನು ಶಿರಸ...

ನಾಗರ ಪಂಚಮಿ

#ನಾಗರಪಂಚಮಿ #ಶುಭಾಶಯಗಳು  ಹಿಂದೂ ಧರ್ಮವು ಸತ್ಯವನ್ನು ಹುಡುಕುವುದರ ಸುತ್ತ ನೆಲೆಗೊಂಡಿರುವ ಒಂದು ನಂಬಿಕೆಯಾಗಿದೆ. ಹಿಂದೂಗಳಿಗೆ ಇದು ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲು ನಡೆದು ಬಂದಿದೆ. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ.  ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನು ಕಾಳಿಯ ಎಂಬ ಹಾವಿನ ಉಪಟಳದಿಂದ ಜನರನ್ನು ರಕ್ಷಿಸಿದನು. ಆ ಕತೆ ಹೀಗಿದೆ;- ಒಂದು ದಿನ ಬಾಲಕ ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದನು. ಆಗ ಅವನು ಆಟವಾಡುತ್ತಿದ್ದ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು. ಆಗ ಕಾಳಿಯ ಎಂಬ ಹಾವು ಅವನ ಮೇಲೆ ಆಕ್ರಮಣ ಮಾಡಿತು. ಆಗ ಕೃಷ್ಣನು ಆ ಹಾವಿನ ವಿರುದ್ಧ ಹೋರಾಟ ಮಾಡಿದನು. ...

ನಿರ್ವಾಣಷಟ್ಕಂ Nirvana Shatakam - Sri Adi Shankaracharya

ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ ನ ಕರ್ಣೌ ನ ಜಿಹ್ವಾ ನ ಚ ಘ್ರಾಣ ನೇತ್ರೇ | ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ ಚಿದಾನಂದರೂಪಃ ಶಿವೋಹಂ ಶಿವೋಹಂ ||1|| ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವಾವುವೂ ನಾನಲ್ಲ. ಕಿವಿ, ಕಣ್ಣು ಮುಂತಾದ ಪಂಚೇಂದ್ರಿಯಗಳೂ ನಾನಲ್ಲ. ಆಕಾಶ, ಭೂಮಿ, ಅಗ್ನಿ, ವಾಯು ಮುಂತಾದ ಪಂಚಭೂತಗಳೂ ನಾನಲ್ಲ. ಆನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ. Mano-Buddhy-Ahangkaara Cittaani Naaham Na Ca Shrotra-Jihve Na Ca Ghraanna-Netre | Na Ca Vyoma Bhuumir-Na Tejo Na Vaayuh Cid-Aananda-Ruupah Shivo[a-A]ham Shivo[a-A]ham ||1|| Meaning: 1.1: Neither am I the Mind nor Intelligence or Ego, 1.2: Neither am I the organs of Hearing (Ears), nor that of Tasting (Tongue), Smelling (Nose) or Seeing (Eyes), 1.3: Neither am I the Sky, nor the Earth, Neither the Fire nor the Air, 1.4: I am the Ever Pure Blissful Consciousness; I am Shiva, I am Shiva, The Ever Pure Blissful Consciousness. ನ ಚ ಪ್ರಾಣಸಂಜ್ಞೋ ನ ವೈ ಪ್ರಾಣವಾಯುಃ ನ ವಾ ಸಪ್ತಧಾತುರ್ನ ವಾ ಪಂಚಕೋ ಶಃ ನ ವಾಕ್ಪಾಣಿಪಾದೌ ನ ಚೋಪಸ್ಥ ಪಾಯೂ ಚಿದಾನಂದರೂಪಃ ಶಿವೋಹಂ ಶಿವೋಹಂ ||2|| ಪ್ರಾಣವೆಂಬ ಹೆಸರಿನವನು ನಾನಲ್ಲ. ಪ್ರಾಣ, ಅಪಾನ ವ್ಯಾನ, ...

ಶ್ರಾವಣ ಮಾಸ

ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ. ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವ್ರತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳು 1) ಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ 2) ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ. 3) ಆ ತತ್ವ ಸಿದ್ದಿಗಾಗಿ ಕಲ್ಪ ಅಂದರೆ ವಿಧಿ=ನಿಷೇಧಗಳನ್ನೊಳಗೊಂಡ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆ. ವ್ರತಗಳು ಉತ್ಸವಗಳು ಎಂಬ ಉಭಯ ಅಂಗಗಳನ್ನೊಳಗೊಂಡ ಹಿಂದೂ ಹಬ್ಬಗಳ ಮತ್ತು ಪವಿತ್ರ ದಿನಗಳ ಆಚರಣೆಯನ್ನು ವಿಧಿಸಿರುವುದು ಮಾನವ ಚೇತನ ಅನಿತ್ಯವಾದ ಲೌಕಿಕ ಸ್ತರದಿಂದ ನಿತ್ಯವಾದ ಪಾರಮಾರ್ಥಿಕ ಸ್ತರಕ್ಕೆ ಏರುವುದಕ್ಕಾಗಿಯೇ. ನಮ್ಮ ಪ್ರಾಚೀನ ಮಹರ್ಷಿಗಳು ನಮ್ಮ ಪ್ರತಿಯೊಂದು ಹಬ್ಬಕ್ಕೂ ಖಗೋಳಿಕ ನಿತ್ಯ ಸತ್ಯಗಳ ಪ್ರೇರಕಾಂಶಗಳನ್ನು ಸಮ್ಮಿಲಿತಗೊಳಿಸಿದ್ದಾರೆ ಇದರಿಂದ ಚರಾಚರ ಜಗತ್ತಿನ ಸೂತ್ರದ ಕೊಂಡಿಯನ್ನು ಸುಂದರವಾಗಿ ಹೆಣೆದಿದ್ದಾರೆ ಎನ್ನಬಹುದು. ಕನ್ನಡದ ಕಾವ್ಯಾನಂದರು ತಮ್ಮ ವಚನೋದ್ಯಾನದಲ್ಲಿ ಹೀಗೆ ಹೇಳಿರುವರು. ತಂತಿಗಳಲ್ಲಿ ಸುನಾದವಿದೆ ಸೋರೆ ದಂಡಿಗಳಿಗೆ ಬಿಗಿದಾಗ ಮಾತ್ರ ಚರ್ಮದಲ್ಲಿ ಸುನಾದವಿದೆ ವಾದ್ಯಗಳ ಮೈಗಳಿಗೆ ಬಿಗಿದಾಗ ಮಾತ್ರ ಬಿಲ್ಲಿನಲ್ಲಿ ಬಾಣ ಬಿಡುವ ಶಕ್ತಿಯಿದೆ ನಾರಿನಿಂದ ಬಿಗಿದಾಗ ಮಾತ್ರ ನನ್ನಲ್ಲಿಯೂ ನಿನ್ನರಿವ ಶಕ್ತಿಯಿದೆ ನಿನ್ನಡಿಗಳಿಗೆ ನನ್ನ ಬಿಗಿದಾ...

ಭ್ರಷ್ಟಾಷ್ಟಕಮ್ - ಶ್ರೀಕೃಷ್ಣಾನಂದಸರಸ್ವತೀಕೃತ

ವಿಶ್ವಂ ಸತ್ಯಂ ಮನತೇ ಕರ್ಮಾಣಿ ಲೋಕಸಂಸಿದ್ಧ್ಯೈ | ವಾಚಾ ಮಿಥ್ಯಾ ಜಗದಿತಿ ಜಲ್ಪತಿ ನೋ ವೇತ್ತಿ ಯೋ ಮಹಾಭ್ರಷ್ಟಃ ||1||     ಎಲ್ಲರಿಗಿಂತ ಹೆಚ್ಚಿನ ಭ್ರಷ್ಟನಾಗಿರುವವನು ಜಗತ್ತು ಸತ್ಯವೆಂದೇ ತಿಳಿದಿರುತ್ತಾನೆ; 'ಕರ್ಮಗಳು ವ್ಯವಹಾರಸಿದ್ಧಿಗೆ ಬೇಕು' ಎಂದು ಅರಿತಿರುತ್ತಾನೆ, ಆದರೆ ಮಾತಿನಲ್ಲಿ 'ಜಗತ್ತು ಮಿಥ್ಯೆ' ಎಂದು ಹರಟುತ್ತಿರುತ್ತಾನೆ ಅವನ ಅನುಭವಕ್ಕೆ ಮಾತ್ರ ಅದು ಬಂದಿರುವದಿಲ್ಲ. ಬ್ರಹ್ಮೈವೇದಂ ಜಲ್ಪತಿ ದೋಷಾದೋಷೋತ್ತಮಾಧಮಾನ್ ಪಶ್ಯನ್ | ನಗ್ನೋ ಭೂತ್ವಾ ವಿಚರತ್ಯವಧೂತತ್ವಂ ಪ್ರದರ್ಶಯನ್ ಭ್ರಷ್ಟಃ ||2||     ಭ್ರಷ್ಟನಾದವನು-ದೋಷ, ಗುಣ; ಉತ್ತಮ, ಅಧಮ - ಎಂಬ ತಾರತಮ್ಯಗಳನ್ನು ಕಾಣುತ್ತಲೇಇದ್ದರೂ 'ಇದೆಲ್ಲವೂ ಬ್ರಹ್ಮವೇ' ಎಂದು ಗಳಹುತ್ತಿರುತ್ತಾನೆ. ತಾನು ಅವಧೂತನೆಂದು ಪ್ರಕಟಿಸಿಕೊಳ್ಳುವದಕ್ಕಾಗಿ ಬೆತ್ತಲೆ ತಿರುಗುತ್ತಾನೆ ! ಕೃತ್ಯಾಕೃತ್ಯಮಶೇಷಂ ತ್ಯಕ್ತುಮಶಕ್ತಃ ಶ್ರುತೇರಗೋಚರತಾಮ್ | ಆತ್ಮನಿ ಜಲ್ಪನ್ ಹಾಸ್ಯಾಸ್ಪದತಾಮೇತ್ಯೇಷ ಮಾನವೋ ಭ್ರಷ್ಟಃ ||3||     ಮಾಡತಕ್ಕದ್ದು, ಮಾಡಬಾರದ್ದು - ಎಂಬಿವನ್ನು ಪೂರ್ಣವಾಗಿ ಬಿಡುವದಕ್ಕೆ ಕೈಯಲ್ಲಾಗದೆ ಇದ್ದರೂ ತಾನು ಶ್ರುತಿಗೆ ವಿಷಯನಲ್ಲವೆಂದು ಹರಟುತ್ತಾ ಹಾಸ್ಯಾಸ್ಪದನಾಗುತ್ತಿರುವನಲ್ಲ, ಈ ಭ್ರಷ್ಟನಾದ ಮಾನವನು! ಪಾಶಾಷ್ಟಕಸಂಕಷ್ಟಾಶ್ಲಿಷ್ಟತನುರ್ಮೃಷ್ಟಭೋಜನಪ್ರೀತಃ | ಶಿಷ್ಟೋಹಂ ಮನ್ವಾನಃ ಕಷ್ಟಮಹೋ ದುಷ್ಟಮಾನವೋ ಭ್ರಷ್ಟಃ ||4|| ...