|| ಶ್ರೀ ಶಂಕರನಾರಾಯಣ ಸ್ತುತಿ ಸ್ತೋತ್ರಮ್ ||
ಧ್ಯಾಯೇನ್ಮಾಣಿಕ್ಯ ಪೀಠೇ ಸಕಲ ಸುರಗಣೈ:ಸೇವ್ಯಮಾನಂ ಸಮಂತಾತ್
ಬಿಭ್ರಾಣಂ ಪಾಣಿಪದ್ಮೈ: ಪರಶುದರವರಂ ಮಧ್ಯರಾಜತ್ ಕರಾಬ್ಜಂ |
ವ್ಯಾಘ್ರ ಶ್ರೀ ಕೃತ್ತಿ ಪೀತಾಂಬರಧರ ಮಹಿರಾಟ್ ಕೌಸ್ತುಭಾ ಕಲ್ಪಮೀಶಂ
ಗೌರೀ ಲಕ್ಷ್ಮೀ ಸಮೇತಂ ಸ್ಫಟಿಕ ಮರಕತೋದ್ಭಾಸಿತಾಂಗಂ ಶುಭಾಂಗಂ ||೧||
ಭಾವಾರ್ಥ:-ಸುತ್ತಲೂ ನೆರೆದಿರುವ ಸಮಸ್ತ ದೇವತಾ ಸಮೂಹದಿಂದ ಮಾಣಿಕ್ಯಪೀಠಾರೂಢಳಾಗಿ ಸೇವೆಯನ್ನು ಸ್ವೀಕರಿಸುತ್ತಾ,ಕೈಗಳಲ್ಲಿ ಪರಶುವನ್ನು ಮತ್ತು ಶಂಖವನ್ನು ಹಿಡಿದುಕೊಂಡು,ವ್ಯಾಘ್ರಚರ್ಮ ಹಾಗೂ ಹಳದಿ ವಸನಧಾರಿಯಾಗಿ,ನಾಗರಾಜನೊಡನೆ ಕೌಸ್ತುಭಮಣಿಯನ್ನು ಧರಿಸಿಕೊಂಡು ಒಂದೆಡೆ ಗೌರಿಯನ್ನೂ ಮಗದೊಂದೆಡೆ ಲಕ್ಷ್ಮಿಯನ್ನೂ ಒಡಗೂಡಿ ಸ್ಪಟಿಕದಂತೆ ಸ್ವಚ್ಛವಾಗಿಯೂ,ಪಚ್ಚೆಮಣಿಯ ತೆರದಲ್ಲಿಯೂ ಬೆಳಗುವ ಶರೀರವನ್ನು ಹೊಂದಿರುವ ಶಂಕರನಾರಾಯಣ ಸ್ವಾಮಿಯನ್ನು ಧ್ಯಾನಿಸುತ್ತೇನೆ.
ಶೀರ್ಷಸ್ಯಾರ್ಧ ಜಟಂ ತದರ್ದ ಕಬರಿ ಶ್ರೀಮತ್ಕಿರೀಟಾನ್ವಿತಂ
ರಾಕಾ ಬಿಂಬಯುತಂ ಕುಠಾರಮಮಲಂ ಶಂಖಂ ದಧಾನಂ ಕರೇ |
ಬಾಹ್ವೋರ್ದಕ್ಷಿಣ ವಾಮಯೋರಧರಯೋರಿಷ್ಟ ಪ್ರದಾನಂಕಟಿ
ನ್ಯಸ್ತಾಭೀಂ ಗಜಚರ್ಮ ಹೇಮವಸನಂ ಶಂಭ್ವಚ್ಯುತಾಂಗಂ ಭಜೇ ||೨||
ಭಾವಾರ್ಥ:-ತಲೆಯ ಅರ್ಧಭಾಗದಲ್ಲಿ ಜಟೆ,ಉಳಿದರ್ಧ ಭಾಗದಲ್ಲಿ ತುರುಬುನಿಂದ ಕೂಡಿದವನಾಗಿ,ಚಂದ್ರನ ಕಲೆಯಿಂದ ಹೊಳೆವ ಕಿರೀಟವನ್ನು ಧರಿಸಿ,ಹಸ್ತಗಳಲ್ಲಿ ಕೊಡಲಿ ಹಾಗೂ ನಿರ್ಮಲವಾಗಿರುವ ಶಂಖವನ್ನು ಹಿಡಿದುಕೊಂಡು,ಕೆಳಬದಿಯ ಬಲಗೈಯಲ್ಲಿ ವರದ ಮುದ್ರೆಯನ್ನೂ,ಸೊಂಟದ ಮೇಲಿರಿಸಿರುವ ಕೈಯಲ್ಲಿ ಅಭಯಮುದ್ರೆಯನ್ನೂ ಧರಿಸಿದವನಾಗಿ ಗಜಚರ್ಮಧಾರಿಯಾಗಿ ಪೀತಾಂಬರಾಲಂಕೃತನಾಗಿರುವ ಶಂಕರನಾರಾಯಣ ಸ್ವಾಮಿಯನ್ನು ನಾನು ಭಜಿಸುತ್ತೇನೆ.
ಯೌ ತೌ ಶಂಖ ಕಪಾಲ ಭೂಷಣಧರೌ ಹಾರಾಸ್ಥಿ ಮಾಲಾಧರೌ
ದೇವೌ ದ್ವಾರವತೀ ಸ್ಮಶಾನ ನಿಲಯೌ ನಾಗಾರಿ ಗೋವಾಹನೌ |
ದ್ವಿತ್ರ್ಯಕ್ಷೌ ಬಲಿ ದಕ್ಷಯಜ್ಞಮಥನೌ ಶ್ರೀಪಾರ್ವತೀ ವಲ್ಲಭೌ
ಪಾಪಂ ಮೇ ಹರತಾಂ ಜನಾರ್ಧನ ಹರೌ ಶ್ರೀವತ್ಸ ಗಂಗಾಧರೌ ||೩||
ಭಾವಾರ್ಥ:-ಶಂಖ ಹಾಗೂ ಕಪಾಲವನ್ನು ಅಲಂಕಾರವಾಗಿ ಧರಿಸಿಕೊಂಡು,ಪುಷ್ಪ ಮಾಲೆ ಮತ್ತು ಎಲುಬಿನ ಮಾಲೆಗಳನ್ನು ಧರಿಸಿಕೊಂಡು,ದ್ವಾರಕೆ ಮತ್ತು ಸ್ಮಶಾನದಲ್ಲಿ ನೆಲೆಯಾಗಿರುವ,ದ್ವಿನೇತ್ರನೂ ತ್ರಿನೇತ್ರನೂ ಆಗಿ,ಗರುಢ ಮತ್ತು ನಂದಿಯನ್ನು ವಾಹನವನ್ನಾಗಿಸಿ,ಬಲಿಯ ಯಜ್ಞ ಅಂತೆಯೇ ದಕ್ಷನ ಯಜ್ಞವನ್ನೂ ಭಂಗಗೊಳಿಸಿದ ,ಶ್ರೀವತ್ಸ ಲಾಂಛನನೂ ಮತ್ತು ಭಾಗೀರಥಿಯನ್ನು ಧರಿಸಿದವರಾಗಿ ಲಕ್ಷ್ಮೀ ಪತಿಯೂ ಪಾರ್ವತೀಪತಿಯೂ ಆಗಿರುವ ದೇವರುಗಳಾದ ಶಂಕರ-ನಾರಾಯಣರು ನನ್ನ ಪಾಪಗಳನ್ನೆಲ್ಲಾ ಪರಿಹರಿಸಲಿ.

Comments
Post a Comment